ಸುದ್ದಿ

ಪಂಜಾಬ್‍ನಲ್ಲಿ ಮತ್ತೆರಡು ಪಾಕ್ ಡ್ರೋಣ್‍ಗಳ ಹಾರಾಟ..! ಇಷ್ಟಕ್ಕೂ ಏನಿದು ಗೊತ್ತಾ,.!!

26

ಚಂಡೀಗಢ, ಅ.9-ಚೀನಾ ಡ್ರೋಣ್‍ಗಳ ಮೂಲಕ ಪಾಕಿಸ್ತಾನದ ಉಗ್ರಗಾಮಿಗಳು ಪಂಜಾಬ್ ಮತ್ತು ಕಾಶ್ಮೀರದಲ್ಲಿ ವಿಧ್ವಂಸಕ ಕೃತ್ಯಕ್ಕಾಗಿ ಸ್ಫೋಟಕಗಳು ಮತ್ತು ಶಸ್ತ್ರಾಸ್ತ್ರಗಳನ್ನು ಗಡಿ ಭಾಗದಲ್ಲಿ ಎಸೆದ ಘಟನೆ ಬೆನ್ನಲ್ಲೇ ಮತ್ತೊಂದು ಆಘಾತಕಾರಿ ಪ್ರಕರಣ ವರದಿಯಾಗಿದೆ. ಪಂಜಾಬ್‍ನಲ್ಲಿ ಮತ್ತೆ ಪಾಕಿಸ್ತಾನ ಮೂಲದ ಎರಡು ಡ್ರೋಣ್‍ಗಳು ಹಾರಾಟ ನಡೆಸಿವೆ.ಪಂಜಾಬ್‍ನ ಫಿರೋಜ್‍ಪುರ ಜಿಲ್ಲೆಯ ಹುಸೇನಿವಾಲಾ ಗಡಿಯ ಮೂಲಕ ಡ್ರೋಣ್ ಭಾರತ ಪ್ರವೇಶಿಸುತ್ತಿರುವುದನ್ನು ಪತ್ತೆ ಮಾಡಲಾಗಿದ್ದು, ಪೊಲೀಸರು ಶೋಧ ಕಾರ್ಯಾಚರಣೆ ಮುಂದುವರೆಸಿದ್ದಾರೆ.

ಫೀರೋಜïಪುರ ಹುಸೇನಿವಾಲಾ ಪೋಸ್ಟ್ ನಲ್ಲಿರುವ ಗಡಿ ಭದ್ರತಾ ಪಡೆ(ಬಿಎಸ್‍ಎಫ್) ಸಿಬ್ಬಂದಿ ಪಾಕಿಸ್ತಾನದ ಕಡೆಯಿಂದ ಭಾರತೀಯ ಭೂಪ್ರದೇಶಕ್ಕೆ ಪ್ರವೇಶಿಸುವ ಡ್ರೋಣ್ ಅನ್ನು ಗುರುತಿಸಿದ್ದಾರೆ. ಈ ಕುರಿತು ಬಿಎಸ್‍ಎಫ್ ಪಂಜಾಬ್ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಮಧ್ಯರಾತ್ರಿಯ ಹೊತ್ತಿಗೆ ವೀಕ್ಷಣೆಯಿಂದ ಕಣ್ಮರೆಯಾಗುವ ಮೊದಲು ಡ್ರೋಣ್ ಭಾರತದ ಭೂಪ್ರದೇಶಕ್ಕೆ ಆಗಮಿಸಿದ್ದು, ಗಡಿ ಹೊರ ಠಾಣೆಯ ಒಂದು ಕಿ.ಮೀ. ಹತ್ತಿರಕ್ಕೆ ಬಂದಿದೆ ಎಂದು ವರದಿಯಾಗಿದೆ.

ಇದಕ್ಕೂ ಮುನ್ನ ಅಲ್ಲಿನ ಬಿಎಸ್‍ಎಫ್ ಸಿಬ್ಬಂದಿ ಪಾಕಿಸ್ತಾನದ ಡ್ರೋಣ್‍ಗಳು ರಾತ್ರಿ 10ರಿಂದ 10.40ರ ನಡುವೆ ಅಂತರಾಷ್ಟ್ರೀಯ ಗಡಿ ಭಾಗದಲ್ಲಿ ನಾಲ್ಕು ಬಾರಿ ಅನುಮಾನಾಸ್ಪದವಾಗಿ ಹಾರುತ್ತಿರುವುದನ್ನು ನೋಡಿದ್ದರು. ಕೆಲವು ವಾರಗಳ ಹಿಂದೆ ರಾಜ್ಯದ ಟಾರ್ನ್‍ತರಣ್ ಜಿಲ್ಲೆಯಲ್ಲಿ ಮಾನವರ ರಹಿತ ವೈಮಾನಿಕ ವಾಹನಗಳು ಕಾರ್ಯಾಚರಣೆ ನಡೆಸಿದ್ದವು.

ಅಲ್ಲದೆ, ಹೆಚ್ಚಿನ ಸಂಖ್ಯೆಯ ಎಕೆ-47 ರೈಫಲ್  ಗಳು, ಉಪಗ್ರಹ ಫೋನ್‍ಗಳು ಹಾಗೂ ಗ್ರಾನೇಡ್‍ಗಳು ಪತ್ತೆಯಾಗಿದ್ದ ಹಿನ್ನೆಲೆ ಈ ಬೆಳವಣಿಗೆ ಭಾರೀ ಮಹತ್ವವನ್ನು ಪಡೆದುಕೊಂಡಿದೆ. ಕಳೆದ ತಿಂಗಳು ಪಂಜಾಬ್ ಪೊಲೀಸರು ಅಮೃತಸರದ ತರಣ್ ನಲ್ಲಿ ಪಾಕಿಸ್ತಾನದ ಡ್ರೋಣ್‍ಗಳನ್ನು ಪತ್ತೆ ಹಚ್ಚಿದ್ದರು. ಈ ಡ್ರೋಣ್‍ಗಳು ಎಂಟು ಎಕರೆ ಪ್ರದೇಶದಲ್ಲಿ ಎಕೆ-47 ಬಂದೂಕುಗಳು, ಗ್ರೆನೇಡ್‍ಗಳು ಹಾಗೂ ಉಪಗ್ರಹ ಆಧಾರಿತ ಫೋನ್‍ಗಳನ್ನು ಕೆಳಗಡೆ ಉದುರಿಸಿತ್ತು. ಈ ಡ್ರೋಣ್‍ಗಳು 5 ಕೆ.ಜಿ. ತೂಕವನ್ನು ಹೊತ್ತೊಯ್ಯುವ ಸಾಮಥ್ರ್ಯ ಹೊಂದಿದ್ದವು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ