ಸುದ್ದಿ

ಪರಿಸರ ದಿನಾಚರಣೆಗೆಂದು 20 ಲಕ್ಷ ವೆಚ್ಚ…..!

43

ಪರಿಸರ ದಿನಾಚರಣೆಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ವಿಶ್ವ ಪರಿಸರ ದಿನಾಚರಣೆ ಆಚರಿಸಲು ಲಕ್ಷ ಲಕ್ಷ ದುಡ್ಡು ವೆಚ್ಚ ಮಾಡಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.

ಪರಿಸರ ದಿನಾಚರಣೆಗಾಗಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಬರೋಬ್ಬರಿ 20 ಲಕ್ಷ ರೂಪಾಯಿ ಖರ್ಚು ಮಾಡಿದೆ ಎಂದು ತಿಳಿದು ಬಂದಿದೆ. ಜೂನ್ 5 ರಂದು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಮಾಡಲಾಗಿತ್ತು.ಸರಳವಾಗಿ ಆಚರಿಸಬೇಕಿದ್ದ ಪರಿಸರ ದಿನಾಚರಣೆಗೆ 20.45 ಲಕ್ಷ ರೂ. ಹಣ ಖರ್ಚಾಗಿದೆ. ಮಲ್ಲೇಶ್ವರದ ಚೌಡಯ್ಯ ಮೆಮೋರಿಯಲ್ ಹಾಲ್‍ನಲ್ಲಿ ಪರಿಸರ ದಿನಾಚರಣೆಯನ್ನು ಆಚರಣೆ ಮಾಡಲಾಗಿದೆ.

ಯಾವ್ಯಾವುದಕ್ಕೆ ಎಷ್ಟೆಷ್ಟು ವೆಚ್ಚ?

  • ತಿಂಡಿ – 1,77,975 ರೂ.
  • ಊಟ – 4,44,000 ರೂ.
  • ಸೌಂಡ್ ಮಿಕ್ಸರ್ ವ್ಯವಸ್ಥೆ – 1,10,250 ರೂ.
  • ತ್ಯಾಜ್ಯ ನಿರ್ವಹಣೆ ತಂಡ – 1,05,000 ರೂ.
  • ಸ್ಟೇಜ್ – 1,01,250 ರೂ.
  • ವೀಡಿಯೋಗ್ರಾಫರ್ – 94,920 ರೂ.
  • ಫೋಟೋಗ್ರಾಫರ್ – 47,460 ರೂ.
  • ಹೂಗುಚ್ಛ + ಹಣ್ಣಿನ ಬುಟ್ಟಿ – 94,500 ರೂ.
  • ಪ್ರೆಸ್ ಕಿಟ್ – 20,000 ರೂ.
  • ಫ್ಲವರ್ ಪಾಟ್ – 30,000 ರೂ.
  • ಹಣ್ಣು + ಡ್ರೈ ಫ್ರೂಟ್ಸ್ – 15,750 ರೂ.

ಈ ರೀತಿಯಾ ಒಟ್ಟಾಗಿ 20.45 ಲಕ್ಷ ರೂ. ಹಣ ಖರ್ಚಾಗಿದೆ. ಇದರಿಂದ ಸಾರ್ವಜನಿಕರು ಸರಳವಾಗಿ ಮಾಡಬೇಕಿದ್ದ ಪರಿಸರ ದಿನಾಚರಣೆಯನ್ನು ಈ ರೀತಿಯಾಗಿ ಅದ್ಧೂರಿಯಾಗಿ ಮಾಡಿ ಸುಮ್ಮನೆ ಲಕ್ಷ ಲಕ್ಷ ಹಣವನ್ನು ದುಂದು ವೆಚ್ಚ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ