ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಭಾರಿ ಚರ್ಚೆಗೆ ಕಾರಣವಾಗಿರುವ ದೀಪಿಕಾ ಪಡುಕೋಣೆ ಅಭಿನಯದ ಪದ್ಮಾವತಿ ಚಿತ್ರದ ಬಿಡುಗಡೆ ತಡೆ ನೀಡುವಂತೆ ಆಗ್ರಹಿಸಿ ಉದಯ್ ಪುರ ರಾಜವಂಶಸ್ಥರು ಪ್ರಧಾನಿ ಮೋದಿ ಅವರಿಗೆ ಮನವಿ ಮಾಡಿ ಪತ್ರ ಬರೆದಿದ್ದಾರೆ.
ಪದ್ಮಾವತಿ ಚಿತ್ರದಲ್ಲಿ ರಾಣಿ ಪದ್ಮಾವತಿ ಅವರ ಚಾರಿತ್ರ್ಯಕ್ಕೆ ಧಕ್ಕೆ ತರುವ ಪ್ರಯತ್ನ ಮಾಡಲಾಗಿದ್ದು, ದೇಶದ ಹೆಮ್ಮೆಯ ಇತಿಹಾಸವನ್ನು ರಕ್ಷಿಸುವ ಮತ್ತು ದೇಶದ ನಾಗರಿಕರ ಘನತೆ ಕಾಪಾಡುವ ಹೊಣೆಗಾರಿಕೆ ಕೇಂದ್ರ ಸರ್ಕಾರಕ್ಕಿದೆ. ಹೀಗಾಗಿ ಚಿತ್ರ ಬಿಡುಗಡೆಗೆ ತಡೆ ನೀಡಬೇಕು ಎಂದು ಉದಯ್ ಪುರ ರಾಜವಂಶಸ್ಥರು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರು, ಸಿಬಿಎಫ್ ಸಿ ಮುಖ್ಯಸ್ಥ ಪ್ರಸೂನ್ ಜೋಷಿ ಅವರಿಗೆ ಪತ್ರ ಬರೆದಿದ್ದಾರೆ.
ಕೇಂದ್ರ ಸಚಿವೆ ಸ್ಮೃತಿ ಇರಾನಿ, ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ, ರಾಜಸ್ಥಾನ ಡಿಜಿಪಿ ಅವರಿಗೂ ಪತ್ರ ರವಾನೆ ಮಾಡಿದ್ದಾರೆ. ಅಂತೆಯೇ ಪತ್ರದಲ್ಲಿ .ಯಾವುದೇ ಕಾರಣಕ್ಕೂ ಚಿತ್ರಕ್ಕೆ ಪ್ರಮಾಣ ಪತ್ರ ನೀಡದಂತೆ ಮನವಿ ಮಾಡಲಾಗಿದ್ದು, ದೇಶದ ಹೆಮ್ಮೆಯ ಇತಿಹಾಸವನ್ನು ರಕ್ಷಿಸುವ ಮತ್ತು ದೇಶದ ನಾಗರಿಕರ ಘನತೆ ಕಾಪಾಡುವ ಹೊಣೆಗಾರಿಕೆ ಕೇಂದ್ರ ಸರ್ಕಾರಕ್ಕಿದೆ. ಪದ್ಮಾವತಿ ಚಿತ್ರದಲ್ಲಿ ಇತಿಹಾಸವನ್ನು ತಿರುಚಲಾಗಿದ್ದು, ಚಿತ್ರ ನಿರ್ಮಾಣ ಸಂದರ್ಭದಲ್ಲಿ ರಾಣಿ ಪದ್ಮಾವತಿ ಅವರ ಇತಿಹಾಸಕ್ಕೆ ಸಂಬಂಧಿಸಿದವರನ್ನು ಸಂಪರ್ಕಿಸಿಲ್ಲ. ಇದೀಗ ಏಕಾಏಕಿ ಚಿತ್ರವನ್ನು ತೆರೆಗೆ ತರಲಾಗುತ್ತಿದೆ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಎಂಕೆ ವಿಶ್ವರಾಜ್ ಸಿಂಗ್ ಅವರು, ಪ್ರಸ್ತುತ ಚಿತ್ರದ ಹಾಡುಗಳು ಬಿಡುಗಡೆಯಾಗಿದೆ. ಇದರಲ್ಲೇ ರಾಣಿ ಪದ್ಮಾವತಿ ಅವರಿಗೆ ಸಂಬಂಧಿಸಿದ ಕೆಲ ಸನ್ನಿವೇಶಗಳನ್ನು ತೋರಿಸಲಾಗಿದೆ. ಐತಿಹಾಸಿಕ ಕಥೆಗಳನ್ನು ಚಿತ್ರ ಮಾಡುವಾಗ ಇತಿಹಾಸವನ್ನು ತಿರುಚಬಾರದು ಎಂದು ವಿಶ್ವರಾಜ್ ಸಿಂಗ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಉತ್ತರ ಕನ್ನಡ ಜಿಲ್ಲೆಯ ಯೆಲ್ಲಾಪುರ ಗ್ರಾಮದ ಸಹಕಾರ ಸೊಸೈಟಿ ಶಾದಿಭಾಗ್ಯ ಯೋಜನೆಯಡಿ ಬಂಪರ್ ಬಹುಮಾನ ಘೋಷಿಸಿದೆ.ಆನಗೋಡು ಗ್ರಾಮದ ರೈತನನ್ನು ವಿವಾಹವಾದ ಯಾವುದೇ ಯುವತಿಯ ಅಕೌಂಟ್ ಗೆ 1 ಲಕ್ಷ ರು ಹಣ ಡೆಪಾಸಿಟ್ ಮಾಡಲಾಗುವುದು. ಈ ಆಫರ್ ಆನಗೋಡು ಗ್ರಾಮಸ್ಥರಿಗೆ ಹಾಗೂ ಆನಗೋಡು ಸೇವಾ ಸಹಕಾರಿ ಸಂಘದ ಸದಸ್ಯರಿಗೆ ಮಾತ್ರ ಅನ್ವಯಿಸುತ್ತಿದೆ.ಈ ಯೋಜನೆ 2019ರ ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ, ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಅಸಹಾಯಕರಾಗಿರುವ ಕುಟುಂಬಗಳಿಗೆ ಧನ ಸಹಾಯವಾಗಲಿದೆ, ಭವಿಷ್ಯದಲ್ಲಿ ಅವರಿಗೆ ಸಹಾಯವಾಗಲಿ ಎಂಬ…
ಅಪನಗದೀಕರಣದಿಂದ ಚೇತರಿಸಿಕೊಳ್ಳುವಾಗಲೇ ಮತ್ತೊಂದು ಶಾಕ್ ನೀಡಲು, ಮೋದಿ ಸರಕಾರ ಮುಂದಾಗುವ ಸಾಧ್ಯತೆ ಇದೆ, ಎಂದು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ವರದಿಯಾಗಿದೆ.
ಬದುಕಿನಲ್ಲಿ ಮನಸಿದ್ದರೆ ಏನಾದರೂ ಸಾಧಿಸಬಹುದು ಎಂಬುದಕ್ಕೆ ಎಂತಹ ಒಳ್ಳೆಯ ಉದಾಹರಣೆಯಾಗಿರುವ ಈ ಯುವತಿ ಕುರಿ ಕಾಯುವವಳು. ವಲಸೆಗಾರರಾಗಿ ಬಂದು, ಬಡತನದಲ್ಲಿ ಬೆಳೆದು, ಆ ದೇಶ – ಭಾಷೆಯನ್ನು ಕಲಿತು, ಸಮಾಜವನ್ನು ತನ್ನದಾಗಿಸಿಕೊಂಡು ಅದೇ ದೇಶದಲ್ಲಿ ಮಂತ್ರಿಯಾಗುವುದು ಸಹಜ ಸಾಧನೆಯಲ್ಲ. ಬದುಕಿನಲ್ಲಿ ಮನಸಿದ್ದರೆ ಏನಾದರೂ ಸಾಧಿಸಬಹುದು ಎಂಬುದಕ್ಕೆ ಇಂತಹ ಒಳ್ಳೆಯ ಉದಾಹರಣೆ. ಇವಳ ಹೆಸರು ನಜತ್ ವಲ್ಲದ್-ಬೆಲ್ಕಾಸೆಮ್. ಇಂದು ಇವಳು ಫ್ರಾನ್ಸ್ ದೇಶದ ಶಿಕ್ಷಣ ಮಂತ್ರಿ. ಶಿಕ್ಷಣ ಇಲಾಖೆಗೆ ಮಂತ್ರಿಯಾಗಿ ಬಂದ ಮೊದಲ ಮಹಿಳೆಯಂತೆ. ನಜತ್ ವಲ್ಲದ್-ಬೆಲ್ಕಾಸೆಮ್(4…
ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾ ಅಂಬರೀಶ್ ಅವರಿಗೆ ನಟರಾದ ದರ್ಶನ್ ಮತ್ತು ಯಶ್ ಸಾಥ್ ನೀಡಿದ್ದಾರೆ. ರಾಜ್ಯದ ಹೈ ವೋಲ್ಟೇಜ್ ಕ್ಷೇತ್ರವಾಗಿರುವ ಮಂಡ್ಯದಲ್ಲಿ ಸುಮಲತಾ ಅಂಬರೀಶ್ ನಾಮಪತ್ರ ಸಲ್ಲಿಕೆಯ ವೇಳೆ ಜನಸಾಗರವೇ ಹರಿದು ಬಂದಿದ್ದು, ಶಕ್ತಿ ಪ್ರದರ್ಶನದ ಮೂಲಕ ಸುಮಲತಾ ಚುನಾವಣಾ ರಣಕಹಳೆ ಮೊಳಗಿಸಿದ್ದಾರೆ. ನಾಮಪತ್ರ ಸಲ್ಲಿಕೆ ಬಳಿಕ ನಡೆದ ಸಮಾವೇಶದಲ್ಲಿ ಮಾತನಾಡಿದ ದರ್ಶನ್, ನಾನು ಇಲ್ಲಿ ನಿಂತಿದ್ದಕ್ಕೆ ಹಳೆ ಮ್ಯಾಟರ್ ಓಪನ್ ಆಗುತ್ತಿದೆ. ಅದಕ್ಕೆಲ್ಲ ತಲೆಕೆಡಿಸಿಕೊಳ್ಳಲ್ಲ, ಅದೂ ಆಗಲಿ, ಅದರಿಂದ ಖುಷಿ,…
ಈರುಳ್ಳಿ ದೋಸೆಯನ್ನು ನಿಮ್ಮ ಮನೆಯಲ್ಲೇ ರುಚಿಯಾಗಿ ಈ ಸರಳ ವಿಧಾನದ ಮೂಲಕ ತಯಾರಿಸಿ ಸವಿಯಿರಿ. ದೋಸೆಯನ್ನು ಹೇಗೆ ಮಾಡುವುದು ಅನ್ನೋ ಚಿಂತೆ ಬಿಡಿ ಈ ವಿಧಾನ ಅನುಸರಿಸಿ… ತಯಾರಿಸಲು ಬೇಕಾಗುವ ಸಾಮಗ್ರಿಗಳುಎರಡು ಕಪ್ ಹುಳಿ ಬಂದ ದೋಸೆ ಹಿಟ್ಟು2-3 ಈರುಳ್ಳಿ3-4 ಹಸಿಮೆಣಸಿನ ಕಾಯಿಸ್ವಲ್ಪ ಕರಿಬೇವು ಸ್ವಲ್ಪ ಕೊತ್ತಂಬರಿ ಸೊಪ್ಪುಎರಡು ಚಮಚ ತುರಿದ ಕ್ಯಾರೇಟ್ರುಚಿಗೆ ತಕ್ಕಷ್ಟು ಉಪ್ಪುಎರಡು ಚಮಚ ಎಣ್ಣೆ ತಯಾರಿಸುವ ವಿಧಾನ: ಮೊದಲನೆಯದಾಗಿ ಹುಳಿ ಬಂದ ದೋಸೆ ಹಿಟ್ಟಿಗೆ ಈರುಳ್ಳಿ, ಹಸಿಮೆಣಸು, ಕರಿಬೇವು, ಕೊತ್ತಂಬರಿ ಸೊಪ್ಪು, ತುರಿದ…
ಸಾವಿರಾರು ಕೋಟಿ ಹಣ ಗಳಿಕೆಯ ಜೊತೆ ವಿಶ್ವದಾದ್ಯಂತ ಅದ್ಭುತ ಯಶಸ್ಸು ಗಳಿಸಿದ ಬಾಹುಬಲಿ-2 ಚಿತ್ರದ ನಿರ್ದೆಶಕ ಎಸ್.ಎಸ್.ರಾಜಮೌಳಿ ತಮ್ಮ ಮುಂದಿನ ಚಿತ್ರಕ್ಕೆ ಸ್ಯಾಂಡಲ್’ವುಡ್ ಪವರ್ ಸ್ಟಾರ್ ಪುನೀತ್ ರಾಜ್’ಕುಮಾರ್ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿಕೊಳ್ಳಲಿದ್ದಾರೆ ಎಂಬ ಸುದ್ದಿ ಎಲ್ಲಡೆ ಹರಿದಾಡುತ್ತಿದೆ.