ಸಿನಿಮಾ

ಪಡ್ಡೆ ಹುಡುಗರ ನಿದ್ದೆ ಕದ್ದಿರೋ, ಕಣ್ ಸನ್ನೆ ನೋಟದ ಈ ಹುಡುಗಿಯ ಕತೆ ಏನು ಗೊತ್ತಾ..?ತಿಳಿಯಲು ಮುಂದೆ ನೋಡಿ…

1140

ಮಲಯಾಳಂ ಸಿನಿ ಲೋಕವು ಈಗಂತೂ ಹೆಚ್ಚು ಸದ್ದು ಮಾಡುತ್ತಿದ್ದು, ಎಲ್ಲಾ ಭಾಷಿಗರನ್ನು ತನ್ನಡೆಗೆ ಸೆಳೆಯುತ್ತಿದೆ. ಹೊಸ ಮಾದರಿಯ ಸಿನಿಮಾಗಳು ಮತ್ತು ಸಂಗತಿಗಳು ಮಲಯಾಳಂ ಸಿನಿ ಲೋಕವನ್ನು ಶ್ರೀಮಂತಗೊಳಿಸುತ್ತಿವೆ.ಇದಕ್ಕೆ ಕಾರಣಗಳು ಇವೆ…

ಹೌದು, ಒಂದೇ ಒಂದು ವಿಡಿಯೋ ಕ್ಲಿಪ್‌ ನಿಂದ ಇಡೀ ದೇಶದಲ್ಲಿ ಸುದ್ದಿಯಾದ ಪ್ರಿಯಾ ಪ್ರಕಾಶ್ ವಾರಿಯರ್ ಕಣ್ ನೋಟ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇದು ಯಾವ ಮಟ್ಟಿಗೆ ಎಂದರೆ, ಕಣ್ ಸನ್ನೆ ಹುಡುಗಿ ಪ್ರಿಯಾ,ರಾತ್ರೋ ರಾತ್ರಿ ಸ್ಟಾರ್ ಆಗಿಬಿಟ್ಟಿದ್ದಾರೆ.ಈಗಂತೂ ಎಲ್ಲಿ ನೋಡಿದರೂ ಅದೊಂದೆ ವಿಡಿಯೋ. ಸಾಮಾಜಿಕ ಜಾಲತಾಣಗಳಲ್ಲಿ ಇದು ಪಡ್ಡೆ ಹುಡುಗರ ಫೇವರಿಟ್. ವಿಡಿಯೋದಲ್ಲಿ ಹಾಡಿಗಿಂತಲೂ ಹೆಚ್ಚು ಗಮನ ಸೆಳೆಯುತ್ತಿರೋದು ಅಭಿನಯಿಸಿರೋ ನಟರು ಹಾಗೂ ಈ ಹುಡುಗಿಯ ಕಣ್ ಸನ್ನೆಯ ನೋಟ.

ಈ ವಿಡಿಯೋ ಮಲಯಾಳಂನ ‘ಒರು ಆಡಾರ್ ಲವ್’ ಸಿನಿಮಾದ ಹಾಡೊಂದರ ಝಲಕ್. ಈ ಹಾಡು ಬಿಡುಗಡೆಗೊಂಡ ಕೆಲವೇ ದಿನಗಳಲ್ಲಿ ಫೇಮಸ್ ಆಗ್ಬಿಡ್ತು.ಇದಕ್ಕೆ ಕಾರಣ ಈ ಹಾಡಿನಲ್ಲಿ ನಟಿಸಿರುವ ನಟಿ ಪ್ರಿಯಾ ಪ್ರಕಾಶ್‌ ವಾರಿಯರ್‌ ಕಣ್ಣುಗಳು ನೋಟ ಎಂಥವರನ್ನು ಮಗ್ನಗೊಳಿಸುವಂತೆ ಮಾಡುತ್ತಿದೆ.  ಕಣ್ಣು ಹೊಡೆದು ಹುಡುಗರ ಹೃದಯಕ್ಕೆ ಲಗ್ಗೆ ಇಡುವ ಅವಳ ಮಾದಕತೆ ಪಡ್ಡೆಗಳ ನಿದ್ದೆ ಕೆಡಿಸಿದೆ.

 

ಪ್ರಿಯಾ ಪ್ರಕಾಶ್‌ ವಾರಿಯರ್‌’ನ ಕಣ್ ಸನ್ನೆಯ ನೋಟ ಫೇಸ್​ಬುಕ್​, ವಾಟ್ಸ್​ಆ್ಯಪ್​, ಇನ್​ಸ್ಟಾಗ್ರಾಮ್ ಸೇರಿದಂತೆ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಇದು ಯ್ಯೂಟ್ಯೂಬ್ ನಲ್ಲಿ ನಂ.1 ಟ್ರೆಂಡಿಂಗ್ ನಲ್ಲಿದ್ದು ಕೇವಲ 20 ಗಂಟೆಗಳಲ್ಲಿ 1 ಮಿಲಿಯನ್ ಗೂ ಅಧಿಕ ಜನರು ವೀಕ್ಷಿಸಿದ್ದು 50,000 ಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ.

ಸೆನ್ಸೇಷನ್ ಕ್ರಿಯೇಟ್ ಮಾಡಿ ಒಂದೇ ರಾತ್ರಿಲಿ ಇಷ್ಟೆಲ್ಲ ಫೇಮಸ್​ ಆಗಿರೋ ಈ ಹುಡುಗಿ ಹೆಸರು ಪ್ರಿಯಾ ಪ್ರಕಾಶ್ ವಾರಿಯರ್. ಇನ್ನೂ ಹದಿನೆಂಟು ವರ್ಷ ಹರೆಯದ ಸುರಸುಂದರಿ. ‘ಒರು ಆಡಾರ್ ಲವ್’ ಸಿನಿಮಾ ಮೂಲಕ ಮಲೆಯಾಳಂ  ಚಿತ್ರ ರಂಗಕ್ಕೆ ಪರಿಚಯವಾಗುತ್ತಿರೋ ಉದಯೋನ್ಮುಖ ನಟಿ.

ಅಂತೂ ಇನ್ನೂ ಚಿತ್ರರಂಗದಲ್ಲಿ ತನ್ನ ಮೊದಲ ಹೆಜ್ಜೆ ಇಡುತ್ತಿರುವ ಈಕೆ ಸಾಮಾಜಿಕ ಜಾಲತಾಣಗಳಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ. ಹದಿನೆಂಟು ವರ್ಷ ಹರೆಯದ ಸುರಸುಂದರಿ ಪ್ರಿಯಾ ಪ್ರಕಾಶ್‌ ವಾರಿಯರ್‌  ಕೇರಳದ ತ್ರಿಸೂರ್ ನಲ್ಲಿ ವಾಸವಾಗಿದ್ದು ಮೊದಲ ವರ್ಷದ ಬಿ.ಕಾಮ್ ವಿದ್ಯಾರ್ಥಿಯಾಗಿ ಓದುತ್ತಿದ್ದಾರೆ.

ನ್ಯಾಷನಲ್ ಕ್ರಶ್ ಆಗಿರೋ, ಕಣ್ ಸನ್ನೆ ಹುಡುಗಿಯ ಕಣ್ ನೋಟದ ವಿಡಿಯೋ ನಿಮಗಾಗಿ…

‘ಒರು ಆಡಾರ್ ಲವ್’ ಸಿನಿಮಾವನ್ನು ಮಲಯಾಳಂನ ನಿರ್ದೇಶಕ ಒಮರ್ ಲಾಲು ನಿರ್ದೇಶನ ಮಾಡುತ್ತಿದ್ದು ಮಾರ್ಚ್ 20ರಂದು ಬಿಡುಗಡೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ