ಕರ್ನಾಟಕ

ನೋಡಿ, ನಮ್ಮ ರೈತರು ಮನಸ್ಸು ಮಾಡಿದ್ರೆ, ತೋಟದಿಂದ ಹೀಗೂ ಹಣ ಮಾಡಬಹುದು! ಹೇಗಂತೀರಾ?ಈ ಲೇಖನಿ ಓದಿ…

581

ಸೆಲ್ಫಿ ಫೋಟೋ, ಇದರ ಬಗ್ಗೆ ನಿಮಗೆ ಹೇಳೋ ಅವಶ್ಯಕತೆಯಿಲ್ಲ. ಇವತ್ತಿನ ದಿನಗಳಲ್ಲಿ ಅಸ್ಟೊಂದು ಕ್ರೇಜ್ ಆಗಿದೆ ಈ ಸೆಲ್ಫಿ.                    ಅದರಲ್ಲೂ ಈ ನಮ್ಮ ಯುವ ಸುಮೂಹದಲ್ಲಿ ಹೆಚ್ಚಾಗಿದೆ. ಎಲ್ಲಿ ಚೆಂದ ಕಾಣುತ್ತೋ ಅಲ್ಲಿ ಸೆಲ್ಫಿ ಫೋಟೋ ತೆಗೆದುಕೊಳ್ಳತಾರೆ.
ಎಲ್ಲಿ ನೋಡಿದರು ಸೆಲ್ಫಿ ಸೆಲ್ಫಿ ಅದರಲ್ಲೂ ಚಂದ ಚಿಹ್ನದ ಕಾಣುವ ಹೊಲದಲ್ಲಿ ಗಿಡ ಮರಗಳ ಮದ್ಯೆ ಹೀಗೆ ಎಲ್ಲಿ ಅಂದರೆ ಅಲ್ಲಿ ಸೆಲ್ಫಿ ಕ್ರೇಜ್.

ಆದರಲ್ಲೂ ಈ ಸೆಲ್ಫೀ ಯುಗದಲ್ಲಿ  ಆಕರ್ಷಣೆಯ ಹೂ ತೋಟಗಳು ಕಂಡ್ರೆ ಮುಗಿದೇ ಹೋಯಿತು. ಯುವಕ ಯುವತಿಯರು ಹುಚ್ಚೆದ್ದು ಹೂವಿನ ಮುಂದೆ ಸೆಲ್ಫಿಗಳ ಸುರಿಮಳೆಯನ್ನೆ ಸುರಿಸಿ ಬಿಡುತ್ತಾರೆ. ಇಂತಹ ಸೆಲ್ಫಿಯಿಂದ ತನ್ನ ಹೊಲದಲ್ಲಿ ಬೆಳೆದಿದ್ದ ಸೂರ್ಯಕಾಂತಿ ಹೊಲದಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಸೂರ್ಯಕಾಂತಿ ಹೂ ಗಿಡವನ್ನು ಹಾಳುಮಾಡುತ್ತಿದ್ದರು.

ಆದರೆ ಯುವ ಜನಾಂಗದ ಈ ಸೆಲ್ಫೀ ಕ್ರೇಜ್ ಬಳಸಿಕೊಂಡು ರೈತರೊಬ್ಬರು ಮಳೆ ಇಲ್ಲದಿದ್ದರೂ ಸಹ ಕೃಷಿಯಲ್ಲಿ ಸಾಕಷ್ಟು ಹಣ ಗಳಿಕೆ ಮಾಡ್ತಾ ಇದ್ದಾರೆ. ಹೇಗೆ ಗೊತ್ತಾ? ಮುಂದೆ ಓದಿ…

ಇದು ನಡೆಯುವುತ್ತಿರುವುದಾದರು ಎಲ್ಲಿ ಗೊತ್ತಾ?

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಕುಮಾರ್ ಎಂಬ ರೈತ ಬೆಳೆದಿರುವ ಸೂರ್ಯಕಾಂತಿ ಬೆಳೆಯಿಂದ ದಿನನಿತ್ಯ 3 ರಿಂದ 4 ಸಾವಿರ ರೂ. ಹಣ ಸಂಪಾದನೆಯಾಗುತ್ತಿದೆ. ಅದು ಯುವ ಜನಾಂಗದ ಸೆಲ್ಫೀ ಕ್ರೇಜ್ ಬಳಕೆ ಮಾಡಿಕೊಂಡು. ದೃಶ್ಯದಲ್ಲಿ ಸೂರ್ಯಕಾಂತಿ ಹೂವಿನ ಜೊತೆ ಸೆಲ್ಫೀ ಕ್ಲಿಕ್ಕಿಸಿಕೊಳ್ಳುತ್ತಾ ಇರುವ ಯುವಕರಿಗೆ ತಲಾ ಒಬ್ಬರಿಗೆ ಹತ್ತರಿಂದ ಇಪ್ಪತ್ತು ರೂಪಾಯಿ ಹಣವನ್ನು ನಿಗದಿ ಮಾಡಲಾಗಿದೆ.

ಈ ರಸ್ತೆಯಲ್ಲಿ ಅತಿಯಾಗಿ ಕೇರಳ ಭಾಗದವರು ಸಂಚರಿಸುವುದರಿಂದ ಅವರು ಸೂರ್ಯಕಾಂತಿಗೆ ಮಾರು ಹೋಗಿ ಪ್ರತಿನಿತ್ಯ ಯಾರೂ ಇಲ್ಲದ ವೇಳೆ ಫೋಟೋ ತೆಗೆದುಕೊಳ್ಳಲು ಬಂದು ಬೆಳೆಯನ್ನು ಮುರಿದು ಹಾಕುತ್ತಿದ್ದರು. ಹೀಗಾಗಿ ಕುಮಾರ್ ಇದನ್ನು ತಡೆಯಬೇಕು ಎಂದು ಇಲ್ಲಿ ಫೋಟೋ ತೆಗೆದುಕೊಳ್ಳುವವರು ಹಣ ನೀಡಬೇಕು ಎಂದು ಬೋರ್ಡ್ ಹಾಕಿದ್ದಾರೆ.

ಇನ್ನು ಈ ದಾರಿಯಲ್ಲಿ ಸುಮಾರು ನೂರಾರು ಮಂದಿ ಓಡಾಡುತ್ತಿದ್ದು. ಈ ಸೂರ್ಯಕಾಂತಿಯ ಹೊಲದಲ್ಲಿ ಸಿಕ್ಕಾಪಟ್ಟೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದರೆ. ಇದರಿಂದ ಈ ರೈತನಿಗೆ ತುಂಬಾ ಆದಾಯ ಬರುತ್ತಿದೆ.

 

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ