ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನೆಲ್ಲಿಕಾಯಿ ಹೆಸರು ಕೇಳಿದ ಕೂಡಲೆ ನಿಮ್ಮ ಬಾಯಲ್ಲಿ ನೀರೂರಲು ಆರಂಭವಾಗದಿದ್ದರೆ ನಿಮ್ಮ ನಾಲಿಗೆಯಲ್ಲಿರುವ ಸ್ವಾದ ಗ್ರಂಥಿಗಳು ಸತ್ತಿವೆ ಎಂದೇ ಅರ್ಥ. ಉಪ್ಪು ಖಾರ ಮಿಶ್ರಣವನ್ನು ಹಚ್ಚಿ ಚುರಕ್ ಅಂತ ಕಚ್ಚಿದಾಗ ಲಾವಾರಸದ ಬುಗ್ಗೆಯುಕ್ಕಿಸುವ ಮತ್ತು ಹಲ್ಲನ್ನು ಚುಳ್ ಎನ್ನಿಸುವ ನಾಡಿನ ನೆಲ್ಲಿಕಾಯಿ ಒಂದು ಬಗೆಯದಾದರೆ.

ಔಷಧೀಯ ಗುಣಗಳನ್ನು ತನ್ನ ಒಡಲಲ್ಲಿ ತುಂಬಿಕೊಂಡಿರುವ ಒಗರು ಒಗರು ಬೆಟ್ಟದ ನೆಲ್ಲಿಕಾಯಿ ಮಹಿಮೆ ಹೇಳಬೇಕೆಂದರೆ ಒಂದು ಥೀಸಸ್ ಬರೆಯಬೇಕಾಗುತ್ತದೆ. ಶತಮಾನಗಳಿಂದ ಬಳಸಿಕೊಂಡು ಬರಲಾಗುತ್ತಿರುವ, ಆಯುರ್ವೇದದಲ್ಲಿ ಪ್ರಧಾನ ಗಿಡ ಮೂಲಿಕೆಯಾಗಿರುವ ಬೆಟ್ಟದ ನೆಲ್ಲಿಕಾಯಿ ಅಥವಾ ಆಮ್ಲ ಎಂದು ಕರೆಯಲ್ಪಡುವ ರಾಮ ಬಾಣವನ್ನು ಪ್ರಯೋಗಿಸಿ.
ನೆಲ್ಲಿಕಾಯಿ ಪೇಸ್ಟ್ :-
ನೆಲ್ಲಿಕಾಯಿಯನ್ನು ನೀರಿನಲ್ಲಿ ಬೆರೆಸಿ ಪೇಸ್ಟ್ ಮಾಡಿಕೊಂಡು ತಲೆ ಕೂದಲ ಬುಡಕ್ಕೆ ಲೇಪಿಸಿ. ಇದನ್ನು ಲೇಪಿಸಿ, 30 ನಿಮಿಷಗಳ ಕಾಲ ಬಿಡಿ, ನಂತರ ನೀರಿನಿಂದ ತೊಳೆಯಿರಿ. ಇದು ತಲೆ ಹೊಟ್ಟನ್ನು ನಿವಾರಿಸಿಕೊಳ್ಳಲು ಅದ್ಭುತವಾದ ಪರಿಹಾರವಾಗಿರುತ್ತದೆ.

ನೆಲ್ಲಿಕಾಯಿ-ಲಿಂಬೆಹಣ್ಣಿನ ಪ್ಯಾಕ್:-
ನೆಲ್ಲಿಕಾಯಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿಕೊಂಡು ಅದನ್ನು ಚೆನ್ನಾಗಿ ಒಣಗಿಸಿ. ನಂತರ ಅದನ್ನು ಚೆನ್ನಾಗಿ ಪುಡಿ ಮಾಡಿಕೊಂಡು, ಕಂಟೇನರ್‌ನಲ್ಲಿ ಹಾಕಿಟ್ಟುಕೊಳ್ಳಿ.

ನಿಮಗೆ ಅಗತ್ಯವಾದಾಗ ಇದನ್ನು ನೀರು ಮತ್ತು ಲಿಂಬೆರಸದಲ್ಲಿ ಬೆರೆಸಿಕೊಂಡು ತೆಳುವಾದ ಪೇಸ್ಟ್ ಮಾಡಿಕೊಂಡು, ಕೂದಲಿನ ಬುಡಕ್ಕೆ ಲೇಪಿಸಿಕೊಳ್ಳಿ. ಇದನ್ನು 30 ನಿಮಿಷಗಳ ಕಾಲ ಬಿಡಿ, ನಂತರ ತೊಳೆಯಿರಿ. ಹೆಚ್ಚಿನ ಪ್ರಯೋಜನವನ್ನು ನಿಮ್ಮದಾಗಿಸಿಕೊಳ್ಳಲು, ಕೂದಲನ್ನು ತೊಳೆಯುವಾಗ ಸೀಗೆಕಾಯಿಯನ್ನು ಬಳಸಬಹುದು.
ನೆಲ್ಲಿಕಾಯಿ-ತುಳಸಿ ಪ್ಯಾಕ್:-
ನೆಲ್ಲಿಕಾಯಿಯನ್ನು ತುಳಸಿ ಮತ್ತು ನೀರಿನೊಂದಿಗೆ ಬೆರೆಸಿಕೊಂಡು ಮೃದುವಾದ ಪೇಸ್ಟ್ ಮಾಡಿ ಮಾಡಿಕೊಳ್ಳಿ. ಒಂದು ವೇಳೆ ನಿಮ್ಮ ಬಳಿ ನೆಲ್ಲಿಕಾಯಿ ಇಲ್ಲವಾದಲ್ಲಿ, ನೆಲ್ಲಿ ಕಾಯಿ ಪುಡಿಯನ್ನು ಸಹ ಬಳಸಬಹುದು. ಈ ಪ್ಯಾಕನ್ನು ನಿಮ್ಮ ಕೂದಲಿನ ಬುಡಕ್ಕೆ ಲೇಪಿಸಿ 30 ನಿಮಿಷಗಳ ಕಾಲ ಬಿಡಿ, ನಂತರ ಇದನ್ನು ತೊಳೆಯಿರಿ.

ಈ ಬಗೆಯಲ್ಲಿ ನೆಲ್ಲಿಕಾಯಿ ರಸವನ್ನು ಲೇಪಿಸಿಕೊಳ್ಳುವುದರಿಂದ, ತಲೆಹೊಟ್ಟನ್ನು ನಿವಾರಿಸಿಕೊಳ್ಳಬಹುದು. ಈ ವಿಧಾನವನ್ನು ವಾರಕ್ಕೆ ಎರಡು ಬಾರಿ ಮಾಡಿ, ತ್ವರಿತಗತಿಯಲ್ಲಿ ಫಲಿತಾಂಶವನ್ನು ಪಡೆಯಬಹುದು. ಇದು ನಿಮಗೆ ತಲೆಹೊಟ್ಟನ್ನು ಮಾತ್ರ ನಿವಾರಿಸುವುದಿಲ್ಲ, ಜೊತೆಗೆ ನಿಮ್ಮ ಕೂದಲಿಗೆ ಕಂಡೀಶನರನ್ನು ಸಹ ನೀಡಿ, ಸ್ವಾಭಾವಿಕವಾಗಿ ಕೂದಲು ಹೊಳೆಯುವಂತೆ ಮಾಡುತ್ತದೆ.
1.ಬೆಟ್ಟದ ನಲ್ಲಿಕಾಯಿ ಜ್ಯೂಸ್ ತಯಾರಿಸಿ ಸ್ನಾನದ ನೀರಲ್ಲಿ ಬೆರೆಸಿ ಸ್ನಾನ ಮಾಡುವುದರಿಂದ ಬೆವರು ವಾಸನೆಗೆ ಕಡಿವಾಣ.
2.ಎರಡು ಚಮಚ ಅಂಟುವಾಳದ ಪುಡಿಗೆ ಎರಡು ಚಮಚ ಬೆಟ್ಟದ ನೆಲ್ಲಿಕಾಯಿ ಪುಡಿ ಹಾಕಿ ತಲೆಕೂದಲಿಗೆ ಹಚ್ಚಿ ತೊಳೆದು ನೋಡಿ ಕೂದಲು ಕಾಂತಿಯುತವಾಗುವುದು.

3.ಹೇನಿನ ಕಾಟ ಹೆಚ್ಚಾಗಿದ್ದರೆ ಬೆಟ್ಟದ ನೆಲ್ಲಿಕಾಯಿ ಬೀಜವನ್ನು ಕುಟ್ಟಿ ಪುಡಿ ಮಾಡಿ ಅದಕ್ಕೆ ನಿಂಬೆರಸ ಸೇರಿಸಿ ಕೂದಲ ಬುಡಕ್ಕೆ ಹಚ್ಚಿ ಒಂದೆರೆಡು ತಾಸು ಬಿಟ್ಟು ತೊಳೆಯಿರಿ.
4.ಕಪ್ಪು ಕೂದಲಿಗಾಗಿ ಬೆಟ್ಟದ ನೆಲ್ಲಿಕಾಯಿಯನ್ನು ಒಣಗಿಸಿ ಕೊಬ್ಬರಿ ಎಣ್ಣೆಯಲ್ಲಿ ಹಾಕಿ ಕುದಿಸಿ ಇಟ್ಟುಕೊಳ್ಳಿ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಟ ಪ್ರಜ್ವಲ್ ದೇವರಾಜ್ ಇಂದು (ಜುಲೈ 4) ತಮ್ಮ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಅದ್ಧೂರಿ ಆಚರಣೆಗೆ ಬ್ರೇಕ್ ಹಾಕಿರುವ ಅವರು ಸಾಮಾಜಿಕ ಕೆಲಸಕ್ಕೆ ಮುಂದಾಗಿದ್ದಾರೆ. ಒಂದು ಸಂಸ್ಥೆಯ ಜೊತೆಗೆ ಕೈ ಜೋಡಿಸಿ ಒಂದು ಸರ್ಕಾರಿ ಶಾಲೆಯನ್ನು ಪ್ರಜ್ವಲ್ ದತ್ತು ಪಡೆದಿದ್ದಾರೆ. ಹೀಗಾಗಿ ಬರ್ತ್ ಡೇ ಗೆ ಗಿಫ್ಟ್ ಬದಲು ಶಾಲಾ ಮಕ್ಕಳಿಗೆ ಸಹಾಯ ಆಗುವಂತೆ ನೋಟ್ ಬುಕ್, ಪೆನ್ಸಿಲ್ ನೀಡಿ ಎಂದು ಮನವಿ ಮಾಡಿದ್ದರು. ಪ್ರಜ್ವಲ್ ಅವರ ಈ ಕೆಲಸಕ್ಕೆ ನಟ ದರ್ಶನ್ ಖುಷಿಯಾಗಿದ್ದಾರೆ. “ನಮ್ಮ ಹುಡ್ಗ…
ವಾರ್ಟ್ ಅಥವಾ ನರುಲಿಗಳು ವೈರಲ್ ಸೋಂಕುಗಳಿಂದ ಉಂಟಾಗುತ್ತವೆ. ಈ ಗಂಟುಗಳು ದೇಹದ ಯಾವುದೇ ಭಾಗದ ಚರ್ಮದ ಹೊರಪದರದ ಮೇಲೆ ಕಾಣಿಸಿಕೊಳ್ಳುತ್ತವೆ.
ಡಿಜಿಟಲ್ ಭಾಷಾತಂತ್ರಜ್ಞಾನ ಪರಿಹಾರಗಳ ಮುಂಚೂಣಿಯ ರೆವೆರೀ ಲಾಂಗ್ವೇಜ್ ಟೆಕ್ನಾಲಜೀಸ್ ಇಂಡಿಕ್ ಕ್ಯಾಲೆಂಡರ್ ಎಂಬ ಸುಲಭ ಬಳಕೆಯ ಕ್ಯಾಲೆಂಡರ್ಆಪ್ ಬಿಡುಗಡೆ ಮಾಡಿದೆ. ರೆವೆರೀಯ ಇಂಡಿಕ್ ಕ್ಯಾಲೆಂಡರ್ಆಪ್ ಪ್ರಸ್ತುತ ಗೂಗಲ್ ಪ್ಲೇಸ್ಟೋರ್ನಲ್ಲಿ ಲಭ್ಯವಿದ್ದು ಅವರ ಭಾಷೆ, ಸಂಸ್ಕೃತಿ, ಧಾರ್ಮಿಕತೆಗಳನ್ನು ಮೀರಿ ಭಾರತೀಯರಿಗೆಂದೇ ರೂಪಿಸಲಾಗಿದೆ.
ಭಾರತದಲ್ಲಿ ಬಹುಮಟ್ಟಿನ ಜನರು ರಕ್ತದಾನ ಮಾಡಲು ಹೆದರುತ್ತಾರೆ. ಈ ಕುರಿತು ಜಾಗೃತಿ ಮೂಡಿಸಲು ಸರ್ಕಾರ ಕಾಲದಿಂದ ಕಾಲಕ್ಕೆ ಅನೇಕ ಅಭಿಯಾನಗಳನ್ನು ನಡೆಸಿದೆ. ಜನ ಸಾಮಾನ್ಯರಲ್ಲಿ ರಕ್ತದಾನದ ಬಗ್ಗೆ ಅರಿವು ಮೂಡಿಸುವುದು ಮತ್ತು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವವರಿಗೆ ಮನಸ್ಥೈರ್ಯ ಮೂಡಿಸುವುದು, ಪ್ರೇರೆಪಿಸುವುದು ಅಗತ್ಯವಾಗಿ ಆಗಬೇಕಿದೆ. ಮನುಷ್ಯನ ಜೀವಕ್ಕಿರುವಷ್ಟೇ ಮಹತ್ವ ರಕ್ತದಾನಕ್ಕೂ ಇದೆ.
*ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ಜಾರಿಗೊಳಿಸುತ್ತಿರುತ್ತವೆ. ಸರ್ಕಾರಗಳು ಜಾರಿಗೊಳಿಸುವ ಎಷ್ಟೋ ಯೋಜನೆಗಳ ಬಗ್ಗೆ ಜನ ಸಾಮಾನ್ಯರಿಗೆ ಗೊತ್ತಿರುವುದಿಲ್ಲ. ಇಂತಹ ಯೋಜನೆಗಳಲ್ಲಿ ಒಂದಾಗಿದೆ ‘ಉದ್ಯೋಗಿನಿ’ ಯೋಜನೆ. ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ಉದ್ಯೋಗಿನಿ ಯೋಜನೆಯಡಿ ಮಹಿಳೆಯರಿಗೆ ಸಾಲ ಸೌಲಭ್ಯ ನೀಡುತ್ತಿದೆ. ಏನಿದು ‘ಉದ್ಯೋಗಿನಿ’ ಯೋಜನೆ.. ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಇಲಾಖೆ ವತಿಯಿಂದ ಮಹಿಳೆಯರು ಸ್ವಯಂ ಉದ್ಯೋಗ ಕೈಗೊಂಡು ಆರ್ಥಿಕವಾಗಿ ಸಬಲರಾಗಲು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ…
ಲಾರಿಯಲ್ಲಿ ಲೋಡುಗಟ್ಟಲೆ ಸಿಗುತ್ತಿದ್ದ ಮರಳು ಈಗ ಅಕ್ಕಿಯಂತೆ ಮೂಟೆಯಲ್ಲಿಯೂ ಸಿಗುತ್ತೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಸರ್ಕಾರದಿಂದ ಮರಳು ಭಾಗ್ಯ ಯೋಜನೆ ರೂಪಿಸಲಾಗಿದೆ.