ಸುದ್ದಿ

ನೆಲ್ಲಿಕಾಯಿಯಲ್ಲಿದೆ ಇಷ್ಟೆಲ್ಲಾ ಪರಿಹಾರ ಗೊತ್ತಾದರೆ ಶಾಕ್ ಆಗ್ತೀರಾ,..!!

58

ಸಹಜವಾಗಿ ಎಲ್ಲರಲ್ಲೂ  ಕಾಣಿಸಿಕೊಳ್ಳುವ ಹಲವಾರು ಸೌಂದರ್ಯ ಸಮಸ್ಯೆಗಳಿಗೆ ಬೆಟ್ಟದ ನೆಲ್ಲಿಕಾಯಿ ರಾಮಬಾಣ ಎಂದರೆ ಹೇಳಿದರೆ  ತಪ್ಪಾಗಲಾರದು. ವಿಟಮಿನ್ ಸಿ ಸಮೃದ್ಧವಾಗಿರುವ ನೆಲ್ಲಿಕಾಯಿಯನ್ನು ನೈಸರ್ಗಿಕ ಸೌಂದರ್ಯ ವರ್ಧಕ ಎನ್ನಬಹುದು. ಚರ್ಮ ಮತ್ತು ಕೂದಲಿನ ಸಮಸ್ಯೆಗಳಿಗೆ  ನೆಲ್ಲಿಕಾಯಿ ಮನೆಮದ್ದು ಎಂದರೆ ತಪ್ಪಾಗಲಾರದು . ಹೀಗೆ ಹಲವಾರು ಗುಣಗಳಿರುವ  ಬೆಟ್ಟದ  ನೆಲ್ಲಿಕಾಯಿಂದ ಸಿಗುವ ಇನ್ನಷ್ಟು  ಪ್ರಯೋಜನಗಳು ಯಾವುವು ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

ತ್ವಚೆಯ ಸೌಂದರ್ಯವನ್ನು ಸಹ  ಹೆಚ್ಚಿಸುತ್ತದೆ: ವಾರದಲ್ಲಿ ಮೂರರಿಂದ ನಾಲ್ಕು ಬಾರಿ ನೆಲ್ಲಿಕಾಯಿಯ ನೀರಿನಿಂದ ತ್ವಚೆಯನ್ನು ಆರೈಕೆ ಮಾಡಿಕೊಳ್ಳುವುದರಿಂದ ಚರ್ಮವು ಹೊಳಪಿನಿಂದ ಕೂಡಿರುತ್ತದೆ. ಇದರಿಂದ ಚರ್ಮದಲ್ಲಿರುವ ನಿರ್ಜೀವ ಕೋಶಗಳು ನಿರ್ನಾಮವಾಗುತ್ತದೆ.

ಸೋಂಕು ನಿವಾರಕ: ತ್ವಚೆಯ ಮೇಲೆ ಉಂಟಾಗುವ ತುರಿಕೆ, ಉರಿ, ಗಾಯ ಮತ್ತು ಅಲರ್ಜಿಗಳ ವಿರುದ್ಧ ನೆಲ್ಲಿಕಾಯಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ. ಈ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದ್ದರೆ ನೆಲ್ಲಿಕಾಯಿಯ ನೀರನ್ನು ಹಚ್ಚಿದರೆ ಸಮಸ್ಯೆಗೆ ಪರಿಹಾರ ಕಾಣಬಹುದು.

ಬ್ಲಾಕ್ ಹೆಡ್ ಮತ್ತು ವೈಟ್ ಹೆಡ್ ನಿವಾರಣೆ: ತ್ವಚೆಯನ್ನು ಕಾಂತಿಯುತವನ್ನಾಗಿಸಲು  ನೆಲ್ಲಿಕಾಯಿ ಮುಖ್ಯ ಪಾತ್ರವಹಿಸುತ್ತದೆ. ಇದರ ನೀರಿನಿಂದ ದಿನನಿತ್ಯ ತ್ವಚೆಯನ್ನು ಸ್ವಚ್ಚ್ಚಗೊಳಿಸುತ್ತಿದ್ದರೆ  ತ್ವಚೆಯ ರಂಧ್ರಗಳಲ್ಲಿರುವ ಬ್ಲಾಕ್ ಹೆಡ್(ಕೊಳೆ) ಅಥವಾ ವೈಡ್ ಹೆಡ್​ಗಳನ್ನು ತುಂಬಾ ಸುಲಭವಾಗಿ ಹೋಗಲಾಡಿಸಬಹುದು.

ಕಾಂತಿಯುತ ತ್ವಚೆ: ಸೂರ್ಯನ ಯುವಿ ಕಿರಣ ಮತ್ತು ಧೂಳಿನಿಂದ ಕೂಡಿದ ಗಾಳಿ ಮತ್ತು ಇನ್ನಿತರ ಕಾರಣಗಳಿಂದ ತ್ವಚೆಯ ಆರೋಗ್ಯವು ಹಾಳಾಗುತ್ತದೆ. ಇಂತಹ ಸಮಸ್ಯೆಗಳಿಗೆ ನೆಲ್ಲಿಕಾಯಿ ನೀರಿನಿಂದ ಪರಿಹಾರ ಕಾಣಬಹುದು. ತ್ವಚೆಯನ್ನು ನೆಲ್ಲಿಕಾಯಿ ನೀರಿನಿಂದ ಶುದ್ಧಗೊಳಿಸುವುದರಿಂದ ತ್ವಚೆಯ ತೇವಾಂಶ ಹೆಚ್ಚಾಗಿ ಕಾಂತಿಯುತವಾಗುತ್ತದೆ.

ತಲೆ ಹೊಟ್ಟು ನಿವಾರಕ: ಸ್ನಾನ ಮಾಡುವ ಅರ್ಧ ಗಂಟೆ ಮುಂಚಿತವಾಗಿ ನೆಲ್ಲಿಕಾಯಿ ನೀರನ್ನು ತಲೆಗೆ ಹಚ್ಚಿಕೊಳ್ಳಬೇಕು. ಇದಾದ ಬಳಿಕ ಸ್ನಾನ ಮಾಡುವುದರಿಂದ ತಲೆ ಹೊಟ್ಟಿನ ಸಮಸ್ಯೆಯನ್ನು ಹೋಗಲಾಡಿಸಬಹುದು.

ಸುಕ್ಕು ಗಟ್ಟುವಿಕೆ ತಡೆಯುವುದು:  ನೆಲ್ಲಿಕಾಯಿ ನೀರಿನಿಂದ ತ್ವಚೆಯನ್ನು ಆರೈಕೆ ಮಾಡುತ್ತಿದ್ದರೆ ಚರ್ಮದಲ್ಲಿ ಪೋಷಕಾಂಶಗಳು ವೃದ್ಧಿಸುತ್ತದೆ. ಇದರಿಂದ ತ್ವಚೆಯು ಹೊಳಪಿನಿಂದ ಕೂಡಿರುವುದಲ್ಲದೇ ಚರ್ಮ ಸುಕ್ಕುಗಟ್ಟುವನ್ನು ತಡೆಯಬಹುದು. ಇದರಿಂದ ವಯಸ್ಸಾಗಿರುವಂತೆ ಕಾಣುವುದನ್ನು ಸಾಧ್ಯವಾದಷ್ಟು ವಿಳಂಬಗೊಳಿಸಬಹುದು.

ಉತ್ತಮ ಕೇಶರಾಶಿ:  ಕೂದಲಿಗೆ ನೆಲ್ಲಿಕಾಯಿ ನೀರನ್ನು ಲೇಪನ ಮಾಡುವುದರಿಂದ ಕೂದಲು ದಟ್ಟವಾಗಿ ಬೆಳೆಯುತ್ತದೆ. ಹೀಗೆ ಪ್ರತಿನಿತ್ಯ ಮಾಡುವುದರಿಂದ ಕೂದಲು ಬಲಿಷ್ಠಗೊಂಡು ಕೂದಲು ಉದುರುವಿಕೆಯ ಸಮಸ್ಯೆಗೆ ಪರಿಹಾರ ಕಾಣಬಹುದು. ಹಾಗೆಯೇ ಕಾಂತಿಯುತ ಕೇಶರಾಶಿಯನ್ನು ತಮ್ಮದಾಗಿಸಿಕೊಳ್ಳಬಹದು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ