ತಂತ್ರಜ್ಞಾನ

ನೆಲದ ಮೇಲೆ ಹಾಗೊ ಆಕಾಶದಲ್ಲಿ ಹಾರುವ ಕಾರು..!ನಿಮ್ಗೆ ಗೊತ್ತಾ ..?ತಿಳಿಯಲು ಈ ಲೇಖನ ಓದಿ …

238

ಒಂದೆಡೆ ಹಲವಾರು  ರೋಗಗಳಿಗೆ ಹೊಸ ಹೊಸ ಮದ್ದುಗಳನ್ನು ಕಂಡುಹಿಡಿಯಲಾಗುತ್ತಿದ್ದರೆ ಮತ್ತೊಂದೆಡೆ ನೆಲದಲ್ಲಿ ಎದುರಾಗಲಿರುವ ಜಾಗದ ಕೊರತೆಯನ್ನು ನೀಗಿಸಲು  ಬಾನಂಚಿನಲ್ಲಿ ಬೇರೆ ನೆಲೆಗಳನ್ನು ಹುಡುಕುವಂತ ಕೆಲಸಗಳು ನಡೆಯುತ್ತಿವೆ.

ನೀವು ಈ ಮುಂಚೆ ಕೇಳಿರಬಹುದು. ರೋಡಿನಲ್ಲೂ ಚಲಿಸುವ, ಗಾಳಿಯಲ್ಲೂ ಹಾರುವ ವಾಹನ ಅನ್ವೇಷಣೆಯ ಹಂತದಲ್ಲಿದೆ ಎಂದು. ಹೌದು ಈಗ ಆ ಹಾರುವ ಕಾರಿನ ಅಭಿವೃದ್ಧಿ ಕಾರ್ಯ ಮುಗಿದಿದ್ದು, 2018 ರಲ್ಲಿ ಹಾರುವ ಕಾರು ರೋಡಿಗಿಳಿಯಲಿದೆ. ಅಲ್ಲಾ, ಗಾಳಿಯಲ್ಲಿ ಹಾರಲಿದೆ.

ಹಾರುವ ಕಾರು:-

ತಂತಾನೇ ಓಡಬಲ್ಲ ಕಾರಿದ್ದರೆ ಅಪಗಾತಗಳನ್ನು ತಡೆಗಟ್ಟಬಹುದು ಆದರೆ ರಸ್ತೆಯ ದಟ್ಟಣೆಗೆ ಏನು ಮಾಡುವುದು ? ಹಾರುವ ಕಾರು ಇಂತದೊಂದು ಕೇಳ್ವಿಗೆ ಉತ್ತರವಾಗಬಲ್ಲದು. ರಸ್ತೆಯಲ್ಲಿ ಓಡುವ ಕಾರು ಮತ್ತು ಬಾನಲ್ಲಿ ಹಾರುವ ವಿಮಾನದ ನಡುವಿನ ನಡೆ ಇದು.

ಕಾರು ಮೇಲೆ ಹಾರಬೇಕೆಂದರೆ ಅದು ನೆಲಸೆಳೆತವನ್ನು (earth’s gravity) ಮೀರಬೇಕು ಅಂದರೆ ಅದಕ್ಕೆ ಇದಿರು-ನೆಲಸೆಳೆತ (anti-gravity) ಒದಗಿಸುವಂತ ಚಳಕಗಳು ಎಟುಕಬೇಕು, ಅದೂ ಕಡಿಮೆ ಬೆಲೆಯಲ್ಲಿ.

ಸ್ಯಾಮ್ ಸನ್ ಎಂಬ ಕಂಪನಿ ಅಭಿವೃದ್ಧಿ ಪಡಿಸಿರುವ ಹಾರುವ ಕಾರಿನ ಹೆಸರು ‘ಸ್ಯಾಮ್ ಸನ್ ಸ್ವಿಚ್ ಬ್ಲೇಡ್’ ಇದಕ್ಕೆ ಮೂರು ಚಕ್ರಗಳಿದ್ದು, ಎರಡು ಆಸನಗಳನ್ನು ಜೋಡಿಸಲಾಗಿದೆ. ರಸ್ತೆಯಲ್ಲೂ ಹಾಗೂ ಗಾಳಿಯಲ್ಲೂ ಹಾರುವ ಜಗತ್ತಿನ ಮೊದಲ ವಿಶಿಷ್ಟ ಕಾರು ಇದಾಗಿದೆ.

ಸ್ವಿಚ್ ಬ್ಲೇಡ್ ಕಾರನ್ನು ಎಲ್ಲೆಂದರಲ್ಲಿ ಹಾರಿಸುವಂತಿಲ್ಲ. ಬದಲಾಗಿ ಮೊದಲು ವಿಮಾನ ಹಾರುವಂತಹ ರನ್ ವೇ ಸ್ಥಳಕ್ಕೆ ಕಾರನ್ನು ರಸ್ತೆಯಲ್ಲಿ ಚಲಾಯಿಸಿಕೊಂಡು ಹೋಗಿ ಅಲ್ಲಿಂದ ಹಾರಿಸಬೇಕು. ಕಾರನ್ನು ಗಾಳಿಯಿಂದ ಕೆಳಗಿಳಿಸುವಾಗಲು ರನ್ ವೇ ಇರುವಂತಹ ಸ್ಥಳದಲ್ಲೆ ಇಳಿಸಬೇಕು. ಬಳಿಕ ತಲುಪಬೇಕಾದ ಜಾಗಕ್ಕೆ ಸಾಮಾನ್ಯ ಕಾರಿನಂತೆ ಚಲಾಯಿಸಿಕೊಂಡು ಹೋಗಬಹುದು.

ಗಂಟೆಗೆ 305 ಕಿ.ಮೀ ಓಡುವ,13,000 ಅಡಿ ಮೇಲಕ್ಕೆ ಹಾರುವ ಸಾಮರ್ಥ್ಯ ಈ ಕಾರಿಗಿದೆ. 6.3 ಅಡಿ ಉದ್ದದ,8.2 ಅಡಿ ಅಗಲದ ರೆಕ್ಕೆಗಳನ್ನು ಬೇಕೆಂದಾಗ ಮಡಿಚುವ, ಬಿಚ್ಚುವ ವ್ಯವಸ್ಥೆ ಮಾಡಲಾಗಿದೆ. ಇದರ ಬೆಲೆ 77 ಲಕ್ಷ ರೂಪಾಯಿಯಾಗಿದ್ದು, ಅದರ ಬಿಡಿಭಾಗಗಳನ್ನು ಜೋಡಿಸಲು ಮತ್ತೆ 13 ಲಕ್ಷಕೊಡಬೇಕಾಗಿದೆ. 2018ರ ವರ್ಷದಲ್ಲಿ ಸ್ವಿಚ್ ಬ್ಲೇಡ್ ಕಾರ್ ಮಾರುಕಟ್ಟೆಗೆ ಲಗ್ಗೆ ಇಡಲಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಭಾರಿ ಮಳೆಗೆ ಒಡೆದ ಸೇತುವೆ : 6 ಬಲಿ,17 ಮಂದಿ ನಾಪತ್ತೆಯಾಗಿದ್ದಾರೆ……!

    ಮಹಾರಾಷ್ಟ್ರದಲ್ಲಿ ವರುಣನ ಅಬ್ಬರ ಜೋರಾಗಿದೆ. ಭಾರೀ ಮಳೆಗೆ ರತ್ನಗಿರಿ ತಾವ್ರೆ ಆಣೆಕಟ್ಟು ಮುರಿದು ಬಿದ್ದಿದೆ. ಆಣೆಕಟ್ಟಿನ ಕೆಳಗಿರುವ 7 ಹಳ್ಳಿಗಳು ಪ್ರವಾಹಕ್ಕೆ ಕೊಚ್ಚಿ ಹೋಗಿವೆ. ಈವರೆಗೆ 6 ಶವವನ್ನು ಹೊರ ತೆಗೆಯಲಾಗಿದೆ. 17 ಮಂದಿ ನಾಪತ್ತೆಯಾಗಿದ್ದಾರೆ. ಎನ್‌ಡಿಆರ್‌ಎಫ್‌ ತಂಡ ಪರಿಹಾರ ಕಾರ್ಯದಲ್ಲಿ ನಿರತವಾಗಿದೆ. ಆಣೆಕಟ್ಟೆಯ ಪಕ್ಕದಲ್ಲಿಯೇ ಇದ್ದ 12 ಮನೆಗಳು ಸಂಪೂರ್ಣ ನೆಲಸಮಗೊಂಡಿವೆ. 12 ಮನೆಗಳಲ್ಲಿ ಎಷ್ಟು ಮಂದಿ ವಾಸವಾಗಿದ್ದರು ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿ ಸಿಗ್ತಿಲ್ಲ. ಘಟನೆ ಬಗ್ಗೆ ಮಾಹಿತಿ ಸಿಗ್ತಿದ್ದಂತೆ ಜಿಲ್ಲಾಡಳಿತ ರಕ್ಷಣಾ ಕಾರ್ಯ…

  • inspirational, ಸಿನಿಮಾ

    ಕನ್ನಡ ಸುಪ್ರಸಿದ್ಧ ನಟ ಶ್ರೀಧರ್ ಅವರ ಹೆಂಡತಿ ಪುತ್ರಿ ಯಾರು ಗೊತ್ತಾ! ಇವರು ಕೂಡ ತುಂಬಾ ಫೇಮಸ್.

    ಕನ್ನಡ ಚಿತ್ರರಂಗದಲ್ಲಿ 80 ರ ದಶಕದಲ್ಲಿ ಹಲವಾರು ನಟರು ಕನ್ನಡ ಚಲನಚಿತ್ರ ರಂಗಕ್ಕೆ ಪಾದರ್ಪಣೆ ಮಾಡಿದ್ದರು ಆ ವೇಳೆಯಲ್ಲಿ ಶ್ರೀಧರ್ ಕೂಡ ಕನ್ನಡ ಚಲನ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು ಹಲವಾರು ಸಿನಿಮಾಗಳಲ್ಲಿ ನಟಿಸಿದರು ಇವರು ನಟ ಮಾತ್ರವಲ್ಲ ಒಬ್ಬ ಒಳ್ಳೆಯ ಅದ್ಭುತ ನೃತ್ಯಗಾರ ನಟನೆ ಜೊತೆ ನೃತ್ಯ ಮಾಡುವುದರಲ್ಲಿಯೂ ಕೂಡ ಸುಪ್ರಸಿದ್ಧ ಎಲ್ಲಾ ವಿದ್ಯೆಗಳನ್ನು ಕರಗತ ಮಾಡಿಕೊಂಡಿದ್ದರು ಕನ್ನಡ ಚಲನಚಿತ್ರಗಳಲ್ಲಿ ಮಾತ್ರವಲ್ಲದೆ ಬಹುಭಾಷೆಗಳಲ್ಲಿ ಸಿನಿಮಾವನ್ನು ಮಾಡಿದ್ದಾರೆ. ಇವರ ವೈಯಕ್ತಿಕ ಜೀವನಕ್ಕೆ ಬರುವುದಾದರೆ ಇವರಿಗೆ ಒಬ್ಬಳು ಹೆಂಡತಿ ಮತ್ತು…

  • India, Place

    ಕೈಲಾಸ ಪರ್ವತ

    ಕೈಲಾಸ ಪರ್ವತವು ಟಿಬೆಟ್ ನ ಹಿಮಾಲಯ  ಶ್ರೇಣಿಯ ಗಾಂಗ್ ಡೈಸ್ ಸರಣಿಯ ಒಂದು ಶಿಖರ. ಈ ಪರ್ವತಪ್ರದೇಶವು ಏಷ್ಯಾದ ಹಲವು ಮಹಾನದಿಗಳಿಗೆ ಮೂಲಸ್ಥಾನವಾಗಿದೆ. ಸಿಂಧೂ ನದಿ , ಸಟ್ಲೆಜ್ ನದಿ ಮತ್ತು ಬ್ರಹ್ಮಪುತ್ರ ಈ ಆಸುಪಾಸಿನಲ್ಲಿಯೇ ಉಗಮಿಸುತ್ತವೆ. ಕೈಲಾಸಪರ್ವತವು ಹಿಂದೂ ಬೌದ್ಧ, ಜೈನ ಮತ್ತು ಬಾನ್ಧರ್ಮೀಯರಿಗೆ ಪವಿತ್ರ ತಾಣವಾಗಿದೆ. ಹಿಂದೂ ನಂಬಿಕೆಗಳ ಪ್ರಕಾರ ಕೈಲಾಸಪರ್ವತವು ಪರಶಿವನ ನೆಲೆ. ಕೈಲಾಸಪರ್ವತವು ಟಿಬೆಟ್ ನಲ್ಲಿ ಮಾನಸಸರೋವರ ಮತ್ತು ರಾಕ್ಷಸ್ ತಾಲ್ ಗಳ ಮಗ್ಗುಲಲ್ಲಿದೆ. ಕೈಲಾಸಪರ್ವತದ ಆರೋಹಣವನ್ನು ಮಾಡಿದುದರ ಬಗೆಗೆ ಯಾವುದೇ ದಾಖಲೆಗಳಿಲ್ಲ. ಹಿಂದೂ ಮತ್ತು ಬೌದ್ಧ ಧರ್ಮೀಯರು ಕೈಲಾಸಪರ್ವತವನ್ನು ಅತಿ ಪವಿತ್ರ ತಾಣವಾಗಿ ಪರಿಗಣಿಸುವುದರಿಂದಾಗಿ ಈ…

  • inspirational, ಸುದ್ದಿ

    ಬಿಗ್ ಶಾಕ್..!ಅಡುಗೆ ಅನಿಲ ಬಳಕೆದಾರರ ಜೇಬಿಗೆ ಬೀಳಲಿದೆ ಕತ್ತರಿ…ತಿಳಿಯಲು ಈ ಲೇಖನ ಓದಿ…

    ಏಪ್ರಿಲ್ 1ರಿಂದ ವಾಹನ ಚಲಾಯಿಸಲು ನೈಸರ್ಗಿಕ ಅನಿಲ ಬಳಸುತ್ತಿರುವವರು ಹಾಗೂ ಅಡುಗೆ ಅನಿಲ ಬಳಕೆದಾರರ ಜೇಬಿಗೆ ಕತ್ತರಿ ಬೀಳಲಿದೆ. ಏಪ್ರಿಲ್ 1ರಂದು ಸ್ಥಳೀಯವಾಗಿ ಉತ್ಪಾದನೆಯಾಗುವ ನೈಸರ್ಗಿಕ ಅನಿಲದ ದರ ಪರಿಷ್ಕರಣೆಯಾಗಲಿದೆ. 2 ವರ್ಷಗಳಲ್ಲೇ ಅತಿ ಹೆಚ್ಚಿನ ಪ್ರಮಾಣದ ಏರಿಕೆ ಮಾಡುವ ಸಾಧ್ಯತೆ ಇದೆ. ಬೆಲೆ ಏರಿಕೆ ಕಾರಣ:- ಬೆಲೆ ಏರಿಕೆಯಿಂದ ಗ್ರಾಹಕರಿಗೆ ಹೊಡೆತ ಬೀಳಲಿದೆ. ಆದ್ರೆ ಅನಿಲ ಕ್ಷೇತ್ರಗಳಲ್ಲಿ 10 ಬಿಲಿಯನ್ ಡಾಲರ್ ನಷ್ಟು ಭಾರೀ ಮೊತ್ತ ಹೂಡಿಕೆ ಮಾಡಲು ಮುಂದಾಗಿರುವ ಖಾಸಗಿ ಕಂಪನಿ ರಿಲಯೆನ್ಸ್ ಇಂಡಸ್ಟ್ರೀಸ್…