ವಿಚಿತ್ರ ಆದರೂ ಸತ್ಯ

ನೆರೆಹೊರೆಯ ಜಗಳದಲ್ಲಿ ಜೈಲು ಪಾರಾದ ನಾಯಿ..!ತಿಳಿಯಲು ಈ ಲೇಖನ ಓದಿ…

137

ಈ ಸುದ್ದಿಯ ಶೀರ್ಷಿಕೆ ಓದುವಾಗಲೇ ಓದುಗರಿಗೆ ಗೊಂದಲವಾಗಿರಬಹುದು. ಹೌದು ಇಂತಹದ್ದೊಂದು ಘಟನೆಯು ಉತ್ತರಪ್ರದೇಶ ರಾಜ್ಯದ ಬದೌನ್ ಎಂಬ ನಗರದಲ್ಲಿ ನಡೆದಿದೆ. ಆದರೆ ನೆರೆಮನೆಯ ವ್ಯಕ್ತಿಗಳು ಜಗಳವಾಡಿದರೆ ನಾಯಿ ಹೇಗೆ ಜೈಲು ಸೇರುತ್ತದೆ ಎಂಬುವುದರ ಕುರಿತು ಕುತೂಹಲವಿರಬಹುದು.

ಅದಕ್ಕೆಲ್ಲ ಉತ್ತರ ಈ ಸುದ್ದಿಯಲ್ಲಿದೆ. ಇವರು ಜಗಳವಾಡಿದ್ದು ಆ ನಾಯಿಯ ಕಾರಣಕ್ಕೇ. ನಡೆದಿದ್ದು ಏನೆಂದರೆ, ಇಲ್ಲಿಯ ಸಿವಿಲ್‌ ಲೈನ್ಸ್‌ ಪ್ರದೇಶದಲ್ಲಿ ವ್ಯಕ್ತಿಯೊಬ್ಬರ ನಾಯಿ 2 ತಿಂಗಳುಗಳಿಂದ ನಾಪತ್ತೆಯಾಗಿತ್ತು.

ನಾಯಿಯನ್ನು ಹುಡುಕಿ ಕಂಗಾಲಾಗಿದ್ದ ಇವರಿಗೆ ಪಕ್ಕದ ಮನೆಯ ಟೆರೆಸ್‌ ಮೇಲೆ ತನ್ನ ನಾಯಿ ಕಂಡಿತು. ಇದು ನನ್ನದೇ ನಾಯಿ. ನನಗೆಹಿಂದಿರುಗಿಸಬೇಕು ಎಂದು ಪಕ್ಕದ ಮನೆಯವನ ಜೊತೆಜಗಳಕ್ಕೆ ನಿಂತರು.

ಆದರೆ ಆತ ಈ ನಾಯಿ ನನ್ನದು, ನಾನು ಇದನ್ನು ದೀಪಾವಳಿ ದಿನ ಬರೇಲಿಯಿಂದ ತಂದೆ ಎಂದು ಪ್ರತಿವಾದ ಮಾಡಲಾರಂಭಿಸಿದ. ಈಗ ಇವರಿಬ್ಬರ ಜಗಳ ಪೊಲೀಸ್‌ ಠಾಣೆಗೆ ಬಂದು ನಿಂತಿದೆ. ನಾಯಿಯನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು, ಈ ಕುರಿತು ಸಂಪೂರ್ಣ ತನಿಖೆ ನಡೆಸಿ ನಿಜವಾದ ಮಾಲೀಕರಿಗೇ ನಾಯಿಯನ್ನು ಒಪ್ಪಿಸುತ್ತೇವೆ ಎಂದಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • inspirational

    ಶೈನ್, ಭೂಮಿ ಮಧ್ಯೆ ಫೈಟ್, ಭೂಮಿಗೆ ವಾರ್ನಿಂಗ್ ಕೊಟ್ಟ ಶೈನ್.

    ಬಿಗ್‍ಬಾಸ್ ಫಿನಾಲೆಗೆ ಉಳಿದಿರುವುದು ಇನ್ನೂ ಎರಡು ದಿನ ಮಾತ್ರ. ಈ ಸಂದರ್ಭದಲ್ಲಿ ಶೈನ್ ಮತ್ತು ಭೂಮಿ ನಡುವೆ ಮನಸ್ತಾಪ ಉಂಟಾಗಿದೆ. ಭೂಮಿ ಶೆಟ್ಟಿ ಮತ್ತು ಶೈನ್ ಶೆಟ್ಟಿ ಇಬ್ಬರೂ ಕುಂದಾಪುರದವರು. ಇವರಿಬ್ಬರು ಯಾವಾಗಲೂ ತಮಾಷೆಮಾಡಿಕೊಂಡು, ಹೊಡೆದಾಡಿಕೊಳ್ಳುತ್ತಾ, ತರ್ಲೆ ಮಾಡಿಕೊಳ್ಳುತ್ತಿರುತ್ತಾರೆ. ಆದರೆ ಇವರಿಬ್ಬರ ಮಧ್ಯೆ ಒಳ್ಳೆಯ ಸ್ನೇಹ-ಬಾಂಧವ್ಯವಿದೆ. ಈ ವಿಚಾರ ಬಿಗ್‍ಬಾಸ್ ಮನೆಯ ಸದಸ್ಯರಿಗೂ ತಿಳಿದಿದೆ. ಆದರೆ ಬಿಗ್‍ಬಾಸ್ ಮುಗಿಯುತ್ತಿರುವ ಸಂದರ್ಭದಲ್ಲಿ ಶೈನ್ ಮತ್ತು ಭೂಮಿ ನಡುವೆ ಮನಸ್ತಾಪ ಉಂಟಾಗಿದೆ. ಶೈನ್, ದೀಪಿಕಾ, ಭೂಮಿ, ವಾಸುಕಿ, ಮತ್ತು ಕುರಿ…

  • Law

    ಡೇರಾ ಸಚ್ಛಾ ಸೌಧ ಮುಖ್ಯಸ್ಥ ಬಾಬಾ ರಾಮ್ ರಹೀಂಗೆ 10 ವರ್ಷ ಜೈಲು ಶಿಕ್ಷೆ..!

    ಅತ್ಯಾಚಾರ ಪ್ರಕರಣದಲ್ಲಿ ದೋಷಿಯಾಗಿರುವ ರೇಪಿಸ್ಟ್, ಡೇರಾ ಸಚ್ಛಾ ಸೌಧ ಮುಖ್ಯಸ್ಥ ಬಾಬಾ ರಾಮ್ ರಹೀಂಗೆ ಸಿಬಿಐ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆಯಾಗಿದೆ.

  • ಸಿನಿಮಾ, ಸುದ್ದಿ

    ಅಪಘಾತವಾಗಿ 40 ನಿಮಿಷಗಳ ಕಾಲ ವಿಲವಿಲ ಎಂದು ಒದ್ದಾಡಿ ನಿಧನ ಹೊಂದಿದ ನಟ ಸುನಿಲ್.!

    ಹುಡುಗಿಯರ ಎದೆಗೆ ಕನ್ನ ಹಾಕಿದ ಚಾಕ್ಲೇಟ್ ಹೀರೋ. ತನ್ನ ಮುದ್ದು ಮುಖದ ಚೆಲುವಿನಿಂದ ಹುಡುಗಿಯರ ನಿದ್ದೆ ಕದ್ದ ಚೋರನೀತ. ಹುಡುಗ ಅಂದ್ರೆ ಇವನ ತರ ಸುಂದರವಾಗಿರಬೇಕು ಅಂತ ಹುಡುಗಿಯರ ಮನದಲ್ಲಿ ಆಸೆ ಹುಟ್ಟಿಸಿದವ. ಅವನೇ ಸುನಿಲ್. ಬೆಳ್ಳಿಕಾಲುಂಗುರ ಸುನಿಲ್ ಅಂತಾನೆ ಇವತ್ತಿಗೂ ಫೇಮಸ್. ಮಂಗಳೂರು ಮೂಲದವರಾದ ಸುನೀಲ್ 1991 ರಲ್ಲಿ ಚಿತ್ರರಂಗಕ್ಕೆ ದ್ವಾರಕೀಶ್ ಅವರ ನಿರ್ದೇಶನದ ಶ್ರುತಿ ಚಿತ್ರದ ಮೂಲಕ ಎಂಟ್ರಿ ಕೊಡ್ತಾರೆ. ನಂತರ ಕನಸಿನ ರಾಣಿ ಮಾಲಾಶ್ರಿ ಜೊತೆ ಅನೇಕ ಚಿತ್ರಗಳಲ್ಲಿ ನಟಿಸುತ್ತಾರೆ. ತೊಂಬತ್ತರ ದಶಕದಲ್ಲಿ…

  • ಕರ್ನಾಟಕದ ಸಾಧಕರು

    ಸಾಧನೆ ಮಾಡುವವನಿಗೆ ಬಡವ ಎನ್ನುವ ಬವಣೆ ಇರಲೇ ಬಾರದು ಅಂತ ಒಂದು ಸಾಧಕರಲ್ಲಿ ಒಬ್ಬರು ದ.ರಾ.ಬೇಂದ್ರೆ

    “ಕುಣಿಯೋಣು ಬಾರಾ ಕುಣಿಯೋಣು ಬಾ”, “ಇಳಿದು ಬಾ ತಾಯಿ ಇಳಿದು ಬಾ”, “ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು”, ಎಂದು ಆರಂಭವಾಗುವ ಕವಿತೆಗಳನ್ನು ಕೇಳದ ಕನ್ನಡಿಗನಿಲ್ಲ. ಉತ್ಸಾಹದ ಚಿಲುಮೆಯನ್ನುಕ್ಕಿಸಬಲ್ಲ, ನೊಂದ ಜೀವಕ್ಕೆ ಸಾಂತ್ವನ ನೀಡಬಲ್ಲ, ಪ್ರೀತಿ ಪ್ರೇಮಗಳನ್ನು ಮೂಡಿಸಬಲ್ಲ ಕವಿತೆಗಳನ್ನು ರಚಿಸಿಕೊಟ್ಟ ವರಕವಿ ಬೇಂದ್ರೆ. ರಸವೆ ಜನನ, ವಿರಸವೆ ಮರಣ, ಸಮರಸವೆ ಜೀವನ ಎಂದು ಜೀವನವನ್ನು ಕುರಿತು ಪರಿಣಾಮಕಾರಿಯಾಗಿ ಹೇಳಿದ ಧೀಮಂತ ಕವಿ. ಬೇಂದ್ರೆಯವರ ಕುರಿತೊಂದು ಸಾಕ್ಷ್ಯಚಿತ್ರ ತಯಾರಾಗಿತ್ತು.

  • ಆಧ್ಯಾತ್ಮ, ಜ್ಯೋತಿಷ್ಯ

    ದೇವಸ್ಥಾನದಲ್ಲಿ ಪ್ರಸಾದದ ರೂಪದಲ್ಲಿ ಸಿಕ್ಕ ಹೂವನ್ನು ಇಟ್ಟುಕೊಳ್ಳಬೇಕಾ?ಬಿಸಾಡಬೇಕಾ?

    ದೇವಸ್ಥಾನಗಳಿಗೆ ಹೋದಾಗ ದೇವರಿಗೆ ಪೂಜೆ ಆದ ನಂತರ ಸಾಮಾನ್ಯವಾಗಿ ಪ್ರಸಾದವನ್ನು ಕೊಡುತ್ತಾರೆ. ಜೊತೆಗೆ ಹೂ ಅಥವಾ ಹೂವಿನ ಮಾಲೆಯನ್ನು ಸಹ ಕೊಡುತ್ತಾರೆ. ಪೂಜಾರಿಗಳು ಪ್ರಸಾದದ ರೂಪದಲ್ಲಿ ಕೊಟ್ಟ ಹೂವನ್ನು ಭಕ್ತರು ಸ್ವಿಕಾರ ಮಾಡುತ್ತಾರೆ. ಆದರೆ ಹೀಗೆ ಕೊಟ್ಟ ಹೂವನ್ನು ಏನು ಮಾಡಬೇಕೆಂದು ಎಷ್ಟೋ ಮಂದಿಗೆ ಗೊತ್ತಿಲ್ಲ. ಹಾಗಾದ್ರೆ ಪ್ರಸಾದದ ರೂಪದಲ್ಲಿ ಸಿಕ್ಕ ಹೂವನ್ನು ಏನು ಮಾಡಬೇಕು..? ದೂರದ ಊರುಗಳಿಗೆ ಹೋಗಿದ್ದರೆ, ಅಲ್ಲಿನ ದೇವಸ್ಥಾನದಲ್ಲಿ ಸಿಕ್ಕ ಹೂಗಳು ಮನೆಗೆ ಬರುವ ಮೊದಲೇ ಬಾಡಿರುತ್ತದೆ. ಸಾಮಾನ್ಯವಾಗಿ ಬಾಡಿದ ಹೂಗಳನ್ನು ಮನೆಯಲ್ಲಿ…

  • ಸುದ್ದಿ

    ಬಿಹಾರದ ರಣಬಿಸಿಲಿಗೆ 117 ಜನ ಬಲಿ- ಗಯಾದಲ್ಲಿ ಸೆಕ್ಷನ್ 144 ಜಾರಿ……!

    ಬಿಹಾರ ರಾಜ್ಯದಲ್ಲಿ ರೌದ್ರಾವತಾರ ತೋರುತ್ತಿರುವ ರಣಬಿಸಿಲ ತಾಪಕ್ಕೆ ಬಲಿಯಾದವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದ್ದು, ಈವರೆಗೆ ಬಿಸಿಲ ಝಳಕ್ಕೆ 117 ಮಂದಿ ಮೃತಪಟ್ಟಿದ್ದಾರೆ.ಕಳೆದ 48 ಗಂಟೆಗಳಲ್ಲಿ ಮುಂಗರ್‍ನಲ್ಲಿ ಕನಿಷ್ಠ 5 ಮಂದಿ ಸಾವನ್ನಪ್ಪಿದ್ದು, ಔರಂಗಾಬಾದ್ ನಲ್ಲಿ 60, ಗಯಾದಲ್ಲಿ 35, ನವಾಡಾದಲ್ಲಿ 7, ಕೈಮುರ್ ನಲ್ಲಿ 2, ಅರ್ರಾ, ಸಮಸ್ತಿಪುರ್ ನಲ್ಲಿ ತಲಾ 1 ಮತ್ತು ನಳಂದದಲ್ಲಿ 6 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ರಣ ಬಿಸಿಲಿಗೆ ಸಾರ್ವಜನಿಕರು ಮೃತಪಡುತ್ತಿರುವ ಹಿನ್ನೆಲೆಯಲ್ಲಿ ಗಯಾ ಜಿಲ್ಲಾಧಿಕಾರಿ ಅಭಿಷೇಕ್…