ಉಪಯುಕ್ತ ಮಾಹಿತಿ

ನೀವು ರಸ್ತೆ ಪಕ್ಕದ ಈ ಕಲ್ಲುಗಳನ್ನು ದಿನಾಲು ನೋಡುತ್ತೀರಿ..!ಆದ್ರೆ ಆ ಕಲ್ಲುಗಳ ಬಣ್ಣಗಳು ಹೇಳುವ ಮಾಹಿತಿ ನಿಮ್ಗೆ ಗೊತ್ತೇ ಇರಲ್ಲ…ತಿಳಿಯಲು ಈ ಲೇಖನ ಓದಿ…

2834

ನಾವೆಲ್ಲರೂ ರಸ್ತೆಯಲ್ಲಿ ಹೋಗುವಾಗ ಕಿಲೋಮೀಟರ್ ಸೂಚಕಗಳನ್ನು ಕಾಣುವುದು ಸಾಮಾನ್ಯ. ಈ ಮೈಲಿಗಲ್ಲುಗಳನ್ನು ಕೇವಲ ಕಿಲೋಮೀಟರ್ ಬಗ್ಗೆ ಅರಿತುಕೊಳ್ಳಲು ಮಾತ್ರ ಉಪಯೋಗಿಸುತ್ತೇವೆ ಎನ್ನವುದು ಸತ್ಯ ಸಂಗತಿ.  ರಸ್ತೆಯ ಪಕ್ಕದಲ್ಲಿ ಇರುವ ಕಿಲೋಮೀಟರ್ ಬಣ್ಣದ ಕಲ್ಲಿನ ಬಣ್ಣದ ಬಗ್ಗೆ ನೀವು ತಿಳಿದರೆ ಒಳಿತು ಯಾಕೆ ಅಂದ್ರೆ ಈ ಕಲ್ಲಿನ ಬಣ್ಣಗಳು ಅಂದರೆ ಕೆಲವೊಂದು ಕಲ್ಲಿನಲ್ಲಿ ಹಸಿರು ಬಣ್ಣ ಇನ್ನೂ ಕೆಲವು ಕಲ್ಲಿನ ಮೇಲೆ ಹಳದಿ ಬಣ್ಣ ಮತ್ತು ಕಪ್ಪು ಬಣ್ಣ ಇರುವುದನ್ನು ನೀವು ನೋಡಿದ್ದೀರಾ ಆದ್ರೆ ಈ ಬಣ್ಣಗಳು ಏನನ್ನು ಸೂಚಿಸುತ್ತವೆ ಅನ್ನೋದು ಇಲ್ಲಿದೆ ನೋಡಿ.

ಬಿಳಿ ಮತ್ತು ಹಸಿರು ಬಣ್ಣವನ್ನು ಹೊಂದಿರುವ ಕಲ್ಲುಗಳು:

ರಸ್ತೆ ಬದಿ ಹಸಿರು ಬಿಳಿ ಬಣ್ಣದ ಕಲ್ಲು ಕಂಡರೆ, ನೀವು ರಾಜ್ಯ ಹೆದ್ದಾರಿಯಲ್ಲಿದ್ದೀರಿ ಎಂದು ಅರ್ಥ.ನಾವು ಮೇಲೆ ಹೇಳಿದಂತೆ ಬಿಳಿಯ ಬಣ್ಣವು ಕಿಲೋಮೀಟರ್ ಸೂಚಿಸುವ ಬಣ್ಣವಾಗಿರುತ್ತೆ. ಇದರ ಜೊತೆ ಹಸಿರು ಬಣ್ಣ ಹೊಂದಿದ್ದರೆ  ಅದು ರಾಜ್ಯ ಹೆದ್ದಾರಿ ಎಂದು ಅರ್ಥ. ಆಗ ನೀವು ತಿಳಿದುಕೊಳ್ಳಬೇಕು ನಾವು ರಾಜ್ಯ ಹೆದ್ದಾರಿಯಲ್ಲಿವೆ ಅಂತ.

ಬಿಳಿ ಹಾಗು ಹಳದಿ ಬಣ್ಣದ ಕಲ್ಲು :-

ಕಿಲೊಮೀಟರನ್ನು ತಿಳಿಸುವ ಕಲ್ಲಿನ ಬಣ್ಣ ಬಿಳಿ ಮತ್ತು ಹಳದಿ ಆಗಿದ್ದು, ಅದು ರಾಷ್ಟ್ರೀಯ ಹೆದ್ದಾರಿಯನ್ನು ಸೂಚಿಸುತ್ತದೆ. ಈ ಎರಡು ಬಣ್ಣಗಳನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾತ್ರ ಬಳಸುತ್ತಾರೆ.ನಾವು ರಸ್ತೆಯಲ್ಲಿನ ಮೈಲು ಕಲ್ಲುಗಳ ಬಗ್ಗೆ ಹೆಚ್ಚಾಗಿ ತಿಳಿದುಕೊಂಡಿರುವುದಿಲ್ಲ ಅದನ್ನು ಯಾಕೆ ಹಾಕಲಾಗಿರುತ್ತೆ ಅಂದ್ರೆ ಕೇವಲ ಕಿಲೋಮೀಟರ್ ತೋರಿಸಲು ಅನ್ನೋದು ಮಾತ್ರ ತಪ್ಪು ಆ ಕಲ್ಲಿನಲ್ಲಿ ಇರುವ ಬಣ್ಣದ ಆಧಾರದ ಮೇಲೆ ಅದು ಏನನ್ನು ಸೂಚಿಸುತ್ತದೆ ಅನ್ನೋದನ್ನ ಸರ್ಕಾರ ಅಧಿಕೃತವಾಗಿ ತಿಳಿಸಿರುತ್ತದೆ.

ಕಿತ್ತಳೆ ಮತ್ತು ಬಿಳಿ ಬಣ್ಣದ ಮೈಲಿಗಲ್ಲು :

ಆರೆಂಜ್ ಬಣ್ಣದ ಮೈಲಿಗಲ್ಲು ನಾವು ಒಂದು ಗ್ರಾಮದ ಕಡೆ ಸಾಗುತ್ತಿದ್ದಿರಿ ಎಂಬ ಮಾಹಿತಿಯನ್ನು ನೀಡುತ್ತದೆ ಅಥವಾ ಮುಂದೆ ಒಂದು ಗ್ರಾಮವಿದೆ ಎಂದು ಇದು ಸೂಚಿಸುತ್ತದೆ.

ಬಿಳಿ ಬಣ್ಣ ಮತ್ತು ನೀಲಿ ಹಾಗು ಇದರ ಜೊತೆ ಕಪ್ಪು ಬಣ್ಣದ ಕಲ್ಲು ಇದ್ರೆ:

ನೀವು ಪರಿಚಿಯವಿಲ್ಲದ ದೂರದೂರಿಗೆ ಪ್ರಯಾಣ ಹೋದಾಗ, ಕೆಲವು ಸಂದರ್ಭಗಳಲ್ಲಿ ನೀವು ಎಲ್ಲಿದ್ದೀರಿ, ಎತ್ತ ಸಾಗುತ್ತಿದ್ದೀರಿ ಎಂದು ತಿಳಿಯದೆ ಪಜೀತಿಗೆ ಬಿದ್ದಾಗ, ಅದೇ ರಸ್ತೆಯಲ್ಲಿ ನಿಮಗೆ ಬಿಳಿ ನೀಲಿ ಕಪ್ಪು ಬಣ್ಣದ ಕಲ್ಲು ಕಂಡರೆ ನೀವು ನಗರಕ್ಕೆ ಹತ್ತಿರದಲ್ಲಿರಿ ಎಂದು ತಿಳಿಯಬೇಕು. ಇದು ಜಿಲ್ಲಾಡಳಿತದ ಅಧೀನದ ರಸ್ತೆಯಾಗಿರುತ್ತದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಉಪಯುಕ್ತ ಮಾಹಿತಿ

    ಲೈಫಲ್ಲಿ ಗೆಲ್ಲಲೇಬೇಕು ಅನ್ನೋರು, ಇದನ್ನ ಮಿಸ್ ಮಾಡದೇ ಓದಿ..!

    ಸೋಲು.. ಯಾರಿಗಾಗಿಲ್ಲ..? ಎಷ್ಟು ಜನ ಎದುರಿಸಿಲ್ಲ..? ಸೋಲದೇ ಇದ್ದವನು ಗೆದ್ದ ಉದಾಹರಣೇನೇ ಇಲ್ಲ..! ಸೋತಾಗ ಸತ್ತೆ ಅನ್ಕೊಂಡ್ರೆ ನೀವು ಶಾಶ್ವತವಾಗಿ ಸೋತಹಾಗೆ..! ಸೋತಾಗ, ಇದ್ಯಾವ ಸೋಲು, ನಾನು ಗೆದ್ದೇ ಗೆಲ್ತೀನಿ ಅನ್ಕೊಂಡ್ರೆ ಮಾತ್ರ ಲೈಫ್ ಜಿಂಗಾಲಾಲ..! ತುಂಬಾ ಸೋತವನನ್ನು ಕೇಳಿನೋಡಿ…

  • ಜ್ಯೋತಿಷ್ಯ

    ಸೋಮವಾರದ ದಿನ ಭವಿಷ್ಯ..?ಹೇಗಿದೆ ನೋಡಿ ನಿಮ್ಮ ರಾಶಿ ಭವಿಷ್ಯ…

    ಇಂದು ಸೋಮವಾರ , 19/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ… ಮೇಷ:– ದುಡುಕು ತನದಿಂದಾಗಿ ಕಾರ್ಯ ವೈಫಲ್ಯ ತಪ್ಪಿಸಲು ತಾಳ್ಮೆ ಅವಶ್ಯ. ಸಂಶೋಧನೆಯಲ್ಲಿ ಅಪಾರ ಶ್ರಮ ವಹಿಸಲಿದ್ದೀರಿ. ಹೊಸ ಉತ್ಸಾಹದಿಂದ ಆರಂಭಿಸಿದ ಕಾರ್ಯಗಳಲ್ಲಿ ಹೆಚ್ಚಿನ ಸಿದ್ಧಿಯಾಗಲಿದೆ. ಅನಿರೀಕ್ಷಿತವಾಗಿ ಸಂಚಾರ ಒದಗಿ ಬಂದೀತು. ಶುಭಮಂಗಲ ಕಾರ್ಯಗಳಿಗಾಗಿ ಓಡಾಟ. ವಿದ್ಯಾರ್ಥಿಗಳಿಗೆ, ನಿರುದ್ಯೋಗಿಗಳಿಗೆ ಸದ್ಯದಲ್ಲೇ ಶುಭವಾರ್ತೆ ಇದೆ. ಅತಿಥಿಗಳ ಆಗಮನವಿದೆ. ವೃಷಭ:- ಗಳು ಮನೆಯಲ್ಲಿ ನಡೆಯಲಿವೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ. ಪ್ರಯತ್ನಬಲಕ್ಕೆ ಒತ್ತು ನೀಡಿರಿ. ಆಗಾಗ ಕಿರಿಕಿರಿ ತೋರಿ…

  • ಸುದ್ದಿ

    ನಾಯಿ ಸಾಕಾಣಿಕೆ ಇಂದ ಹೃದಯ ಆರೋಗ್ಯವಾಗಿ ಇರುತ್ತಂತೆ!

    ಕೆಲವರಿಗೆ ನಾಯಿ ಎಂದರೆ ಅಪಾರ ಪ್ರೀತಿ. ಅವರು ಹೋದಲ್ಲಿ ಬಂದಲ್ಲಿ ಎಲ್ಲಾ ಕಡೆ ನಾಯಿ ಜೊತೆಗಿರಬೇಕು. ಇನ್ನು ಕೆಲವರು ನಾಯಿ ಎಂದರೆ ಮೂಗು ಮುರಿಯುತ್ತಾರೆ. ಆದರೆ ನಾಯಿ ಸಾಕುವುದರಿಂದ ಹೃದಯದ ಆರೋಗ್ಯ ಚೆನ್ನಾಗಿರುತ್ತದೆ. ಹಾಗೂ ಅವರಲ್ಲಿ ಹೃದಯ ಸಂಬಂಧಿ ರೋಗಗಳೂ ಕಡಿಮೆ ಎಂದು ಸಮೀಕ್ಷೆಯೊಂದು ಹೇಳುತ್ತಿದೆ. ಅದರಲ್ಲೂ ನಗರಗಳಲ್ಲಿ ನಾಯಿ ಸಾಕುವುದರಿಂದ ಆ ಮನೆಯವರಿಗೆ ಪ್ರಯೋಜನ ಹೆಚ್ಚು ಎಂದು ವಿಜ್ಞಾನಿಗಳ ತಂಡವೊಂದು ಹೇಳಿದೆ. ಹಲವಾರು ಸಮೀಕ್ಷೆಗಳ ಪ್ರಕಾರ ನಾಯಿ ಮಾಲಿಕರಿಗೆ ರಕ್ತದೊತ್ತಡ ಕಡಿಮೆ ಇರುತ್ತದೆ. ಕಾರಣ ಸಾಕಿದ…

  • ಸುದ್ದಿ

    ಶುರುವಾಗಿದೆ ನಿಖಿಲ್ ಕುಮಾರ್‌ಸ್ವಾಮಿಗಾಗಿ ಹುಡುಗಿಯ ಹುಡುಕಾಟ,ಹೇಗಿರಬೇಕಂತೆ ಗೊತ್ತಾ,.?

    ನಿಖಿಲ್ ಕುಮಾರ ಸ್ವಾಮಿ  ಮತ್ತು ಕೃಷ್ಣ ನಿರ್ದೇಶನದ ಸಿನಿಮಾ ಜನವರಿಯಲ್ಲಿ ಸೆಟ್ಟೇರಲಿದೆ.ಈಗಾಗಲೇ ಪ್ರಿ-ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ಬಿಜಿಯಾಗಿದೆ ಇನ್ನು ಒಂದು ವಾರದೊಳಗೆ ಸ್ಕ್ರಿಫ್ಟ್ ಕೆಲಸ ಮುಗಿಯುತ್ತದೆ, ಆಮೇಲೆ ಅಧಿಕೃತವಾಗಿ ಸಿನಿಮಾ ಬಗ್ಗೆ ಮಾಹಿತಿ ನೀಡುತ್ತೇವೆ”ಎಂದು ಮಾಹಿತಿ ನೀಡಿದ ನಿರ್ದೇಶಕ ಕೃಷ್ಣ. “ಇದೊಂದು ನೈಜಕಥೆ ಆಧಾರಿತ ಸಿನಿಮಾ. ಈಗ ಚಿತ್ರಕಥೆ ಕೆಲಸದಲ್ಲಿ ನಿರತನಾಗಿದ್ದೇನೆ, ಹೀರೋಯಿನ್ ಹುಡುಕಾಟ ಶುರುವಾಗಿದೆ. ಸಾಂಪ್ರದಾಯಿಕ ಲುಕ್‌ ಹೊಂದಿರುವ ಅದ್ಭುತ ನಟಿಗಾಗಿ ಶೋಧ ಮಾಡುತ್ತಿದ್ದೇವೆ,  ನಿರ್ದೇಶಕ ಕೃಷ್ಣ ಇದೂವರೆಗೂ ಮಾಡಿರದ ಸಿನಿಮಾ ಇದು. ನಿಖಿಲ್ ಗೆಟಪ್…

  • Animals

    ಯಾವುದೀ ಮುಧೋಳ ನಾಯಿ? ಏನೀದರ ಸ್ಪೆಷಾಲಿಟಿ? ಇಲ್ಲಿದೆ ನೋಡಿ ಮಾಹಿತಿ

    ಮುಧೋಳ ಹೌಂಡ್ / ಮುಧೋಲ್ ಹೌಂಡ್, ಇದನ್ನು ಮರಾಠಾ ಹೌಂಡ್, ಪಾಶ್ಮಿ ಹೌಂಡ್ ಮತ್ತು ಕ್ಯಾಥೆವಾರ್ ಡಾಗ್ ಎಂದೂ ಕರೆಯುತ್ತಾರೆ, ಇದು ಭಾರತದಿಂದ ದೃಷ್ಟಿಗೋಚರ ತಳಿಯಾಗಿದೆ. ಕೆನಲ್ ಕ್ಲಬ್ ಆಫ್ ಇಂಡಿಯಾ (ಕೆಸಿಐ) ಮತ್ತು ಇಂಡಿಯನ್ ನ್ಯಾಷನಲ್ ಕೆನಲ್ ಕ್ಲಬ್ (ಐಎನ್‌ಕೆಸಿ) ಈ ತಳಿಯನ್ನು ವಿವಿಧ ತಳಿಗಳ ಹೆಸರಿನಲ್ಲಿ ಗುರುತಿಸುತ್ತವೆ. ಕೆಸಿಐ ಇದನ್ನು ಕಾರವಾನ್ ಹೌಂಡ್ ಎಂದು ನೋಂದಾಯಿಸಿದರೆ, ಐಎನ್‌ಕೆಸಿ ಮುಧೋಲ್ ಹೌಂಡ್ ಹೆಸರನ್ನು ಬಳಸುತ್ತದೆ ರಾಜ್ಯದ ಬಾಗಲಕೋಟೆ ಜಿಲ್ಲೆಯ ಸಣ್ಣ ಪಟ್ಟಣ ಮುಧೋಳ ಎಂಬ ಊರಿನ ಹೆಸರನ್ನು…

  • inspirational

    ಮೆದುಳಿನ ಕ್ಯಾನ್ಸರ್

    – MAYOON N  ಮೆದುಳಿನ ಕ್ಯಾನ್ಸರ್ ಮೆದುಳಿನಲ್ಲಿ ಅಸಹಜವಾಗಿ ಬೆಳೆಯುವ ಜೀವಕೋಶಗಳು,ಇವು ಕ್ಯಾನ್ಸರ್ ಅಥವಾ (ಮಾಲಿಗಂಟ) ಇಲ್ಲವೆ ಕ್ಯಾನ್ಸರ್ ರಹಿತ ಗೆಡ್ಡೆ(ಬೆನಿಗ್ನ್ ) ಗಳಾಗಿ ಮಾರ್ಪಾಡಗಬಹುದು. ಇದನ್ನು ತಲೆ ಬುರುಡೆಯೊಳಗಿನ ಗೆಡ್ಡೆ ಇಲ್ಲವೆ ಅನಿಯಂತ್ರಿತ ಕೋಶಗಳ ವಿಭಜನೆಯ ಕ್ರಿಯೆ ಎಂದು ಹೇಳಲಾಗುತ್ತದೆ.ಮೆದುಳು ಅಲ್ಲದೇ (ನ್ಯುರಾನ್ಗಳು, ಗ್ಲಿಯಾಲ್ ಕೋಶಗಳು(ಅಸ್ಟ್ರಿಸೈಟ್ಗಳು, ಒಲಿಗೊದೆಂಡ್ರೊಸೈಟ್ಗಳು, ಎಪೆಂಡಿಮಲ್ ಕೋಶಗಳು , ಮೈಲಿನ್-ಉತ್ಪಾದನೆಯ ಸ್ಕಾನ್ ಕೋಶಗಳು), ಲಿಂಫ್ಅಟಿಕ್ ಅಂಗಾಂಶ, ರಕ್ತ ನಾಳಗಳು ), ಕ್ರೇನಿಯಲ್ ನರಗಳಲ್ಲಿರುವವಗಳು , ಮೆದುಳಿನಲ್ಲಿ ಆವರಿಸಿದ (ಮೆನಿಂಗ್ಸ್), ಬುರುಡೆ, ಪಿಟ್ಯುಟರಿ ಮತ್ತು ಪೈನಿಯಲ್ ಗ್ಲಾಂಡ್, ಅಥವಾ ಕ್ಯಾನ್ಸರ್ಗಳ ಮೂಲಕ ಹರಡಿದ್ದು (ಮೆಟಾಸ್ಟಿಕ್ ಗೆಡೈಗಳು).ಇದನ್ನು ತಲೆ ಬುರುಡೆಯೊಳಗಿನ ಗೆಡ್ಡೆ ಇಲ್ಲವೆ ಅನಿಯಂತ್ರಿತ ಕೋಶಗಳ ವಿಭಜನೆಯ ಕ್ರಿಯೆ…