ತಂತ್ರಜ್ಞಾನ

ನೀವು ದಿನನಿತ್ಯ ನಡೆಯುವುದರಿಂದ ಬ್ಯಾಟರಿ ಚಾರ್ಜ್ ಮಾಡಬಹುದು ಹೇಗೆ ಗೊತ್ತಾ..? ತಿಳಿಯಲು ಈ ಲೇಖನ ಓದಿ…

204

ವಿದ್ಯುತ್ ಉತ್ಪಾದನೆಗೆ ಹಲವು ಆಯ್ಕೆಗಳಿವೆ. ನೀರು, ಗಾಳಿ, ಬೆಳಕು ಹೀಗೆ ವಿವಿಧ ಮಾದರಿಯಲ್ಲಿ ವಿದ್ಯುತ್ ಉತ್ಪಾದನೆಯ ಹೊರತಾಗಿಯೂ ವಿದ್ಯುತ್ ಗಳಿಸಲು ಜನರು ವಿವಿಧ ಆಯ್ಕೆಗಳನ್ನು ಸಂಶೋಧಿಸುತ್ತಿದ್ದಾರೆ.

ಸೈಕಲ್ ತುಳಿಯುತ್ತಾ ವಿದ್ಯುತ್ ಉತ್ಪಾದನೆ ತೀರಾ ಹಳೆಯ ತಂತ್ರವಾದರೂ, ಅದನ್ನೇ ಮಾದರಿಯಾಗಿಟ್ಟುಕೊಂಡು ಇಂದು ಕೂಡಾ ಅತ್ಯಾಧುನಿಕ ರೀತಿಯ ಹಲವು ಆವಿಷ್ಕಾರಗಳು ನಮಗೆ ಕಾಣಸಿಗುತ್ತವೆ. ಅಮೆರಿಕದ ಲಾಸ್ ವೇಗಾಸ್ನಲ್ಲಿ ಪಾದಚಾರಿ ಮಾರ್ಗದಲ್ಲಿಯೇ ವಿದ್ಯುತ್ ಉತ್ಪಾದನೆಯಾಗುತ್ತದೆ.

ಇಲ್ಲಿನ ಜನನಿಬಿಡ ಪ್ರದೇಶದ ಪ್ಲಾಝಾದ ಪಾದಚಾರಿ ಮಾರ್ಗದಲ್ಲಿ ಅಳವಡಿಸಿರುವ ವಿಶೇಷ ಟೈಲ್ಸ್ಗಳ ಮೇಲೆ ಜನರು ನಡೆದಾಡಿದಂತೆ ವಿದ್ಯುತ್ ಉತ್ಪಾದನೆಯಾಗಿ ಬ್ಯಾಟರಿಯಲ್ಲಿ ಶೇಖರವಾಗುತ್ತದೆ. ಬಳಿಕ ಅದೇ ವಿದ್ಯುತ್ನ್ನು ಬಳಸಿಕೊಂಡು ಅಲ್ಲಿನ ಬೀದಿದೀಪಗಳನ್ನು ಉರಿಸಲಾಗುತ್ತದೆ.

ಬೀದಿದೀಪಗಳಿಗೆ ಎಲ್ಇಡಿ ದೀಪಗಳಿರುವುದರಿಂದ ಹೆಚ್ಚು ಪ್ರಮಾಣದ ವಿದ್ಯುತ್ ಬೇಕಾಗುವುದಿಲ್ಲ, ಈ ಯೋಜನೆಯನ್ನು ಎನ್ಗೊ ಪ್ಲಾನೆಟ್ ಸಂಸ್ಥೆ ಪ್ರಾಯೋಗಿಕವಾಗಿ ನಡೆಸುತ್ತಿದ್ದು, ಕೈನೆಟಿಕ್ ಫೂಟ್ಪ್ಯಾಡ್ ಜತೆಗೆ ಸೋಲಾರ್ ಪ್ಯಾನಲ್ಗಳನ್ನೂ ಇಲ್ಲಿ ಬಳಸಲಾಗಿದೆ. ಈ ಯೋಜನೆ ಯಶಸ್ವಿಯಾದರೆ ಮುಂದೆ ಇನ್ನಷ್ಟು ಬೀದಿಗಳನ್ನು ವಿದ್ಯುತ್ ಉತ್ಪಾದಕ ಪಾದಚಾರಿ ಮಾರ್ಗಗಳನ್ನಾಗಿ ಪರಿವರ್ತಿಸಲಾಗುತ್ತದೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ