ಆರೋಗ್ಯ

ನೀವು ದಿನಕ್ಕೆ 5 ಗಂಟೆಗಳ ಕಾಲ ಟಿವಿ ವೀಕ್ಷಿಸುವುದರಿಂದ ಆಗುವ ಸಮಸ್ಯೆ ..!ತಿಳಿಯಲು ಈ ಲೇಖನ ಓದಿ..

180

ಟಿವಿ ವೀಕ್ಷಣೆಯಲ್ಲಿ ಅತಿ ಹೆಚ್ಚು ಆಸಕ್ತಿ ಹೊಂದಿರೋ ಪುರುಷರು ಓದಲೇಬೇಕು. ಯಾಕಂದ್ರೆ ಇತ್ತೀಚೆಗೆ ನಡೆದ ಸಂಶೋಧನೆಯೊಂದರ ಪ್ರಕಾರ ದಿನಕ್ಕೆ 5 ಗಂಟೆಗಳ ಕಾಲ ಟಿವಿ ವೀಕ್ಷಿಸುವ ಪುರುಷರ ವೀರ್ಯಾಣು ಶೇ.35ರಷ್ಟು ಕಡಿಮೆಯಾಗುತ್ತದೆ.

ಯಾರು ವಾರಕ್ಕೆ ಕನಿಷ್ಠ 20 ಗಂಟೆ ಟಿವಿ ನೋಡುತ್ತಾರೋ ಅವರಲ್ಲಿ ವೀರ್ಯಾಣುಗಳ ಸಂಖ್ಯೆ ಟಿವಿ ವೀಕ್ಷಿಸದೇ ಇರುವವರಿಗಿಂದ ಶೇ.50ರಷ್ಟು ಕಡಿಮೆಯಾಗಿರುತ್ತದೆ. 18-22 ವರ್ಷ ವಯಸ್ಸಿನ 200 ವಿದ್ಯಾರ್ಥಿಗಳ ವೀರ್ಯವನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

ಅತಿಯಾಗಿ ಟಿವಿ ನೋಡುವುದರ ಜೊತೆಗೆ ಜಂಕ್ ಫುಡ್ ಸೇವನೆ ಕೂಡ ಜಾಸ್ತಿಯಾಗುತ್ತದೆ. ಆಲಸ್ಯತನ ಆವರಿಸಿಕೊಳ್ಳುತ್ತದೆ.

ದಿನಕ್ಕೆ ಒಂದೊಂದು ಗಂಟೆ ಹೆಚ್ಚುವರಿಯಾಗಿ ಟಿವಿ ನೋಡಿದಾಗ ಮಾರಕ ಪಲ್ಮನರಿ ಎಂಬಾಲಿಸಮ್ ಶೇ.45ರಷ್ಟು ಹೆಚ್ಚಾಗುತ್ತದೆ.ಇದರಿಂದಾಗಿ ಶ್ವಾಸಕೋಶದಲ್ಲಿ ರಕ್ತ ಹೆಪ್ಪುಗಟ್ಟಿ ಸಾವನ್ನಪ್ಪುವ ಅಪಾಯವಿರುತ್ತದೆ.

ಯಾರು ಹೆಚ್ಚು ಟಿವಿ ವೀಕ್ಷಿಸುತ್ತಾರೋ ಅವರಲ್ಲಿ ಇತರರಿಗಿಂತ ವೀರ್ಯಾಣುಗಳ ಸಂಖ್ಯೆ ಶೇ.35ರಷ್ಟು ಕಡಿಮೆಯಿತ್ತು. ದೈಹಿಕವಾಗಿ ಅತ್ಯಂತ ಚಟುವಟಿಕೆಯಿಂದ, ಚುರುಕಾಗಿರುವವರಲ್ಲಿ ವೀರ್ಯಾಣುಗಳ ಸಂಖ್ಯೆ ಅಧಿಕವಾಗಿರುವುದು ಕಂಡು ಬಂದಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ