ಸುದ್ದಿ

ನೀವು ಇನ್ಸೂರೆನ್ಸ್ ಬಳಕೆದಾರರೇ? ಆಗದರೆ ತಪ್ಪದೇ ಇದನ್ನು ಒಮ್ಮೆ ಓಧಿ…..!

56

ಆಕಸ್ಮಿಕ ದುರ್ಘಟನೆಗಳು ಹಾಗೂ ಸಂಭವನೀಯ ಹಾನಿಗಳಿಂದ ಪಾರಾಗುವ ಮುಂಜಾಗ್ರತಾ ಕ್ರಮವಾಗಿ ವಿಮಾ ಸುರಕ್ಷೆಯನ್ನು ಬಳಸಲಾಗುತ್ತದೆ. ಜೀವ ವಿಮೆ, ಆಸ್ತಿ ವಿಮೆ, ಆರೋಗ್ಯ ವಿಮೆ ಹೀಗೆ ಹಲವಾರು ರೀತಿಯ ವಿಮಾ ಸುರಕ್ಷೆಯ ಪಾಲಿಸಿಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ.

ಹಣಕಾಸು ಉತ್ಪನ್ನಗಳಿಗೆ ಸಹ ವಿಮೆ ಸುರಕ್ಷೆ ಇರುತ್ತದೆ ಎಂಬುದು ಬಹುತೇಕರಿಗೆ ಈವರೆಗೂ ತಿಳಿದಿಲ್ಲ. ಕೆಲ ಹಣಕಾಸು ಉತ್ಪನ್ನಗಳಿಗೆ ಉಚಿತ ವಿಮಾ ಸುರಕ್ಷೆ ಇದ್ದರೆ ಇನ್ನು ಕೆಲವಕ್ಕೆ ಅತಿ ಕಡಿಮೆ ಹಣ ಪಾವತಿಸುವುದರ ಮೂಲಕ ವಿಮಾ ಸೌಲಭ್ಯ ಪಡೆಯಬಹುದು. ಯಾವೆಲ್ಲ ಹಣಕಾಸು ಉತ್ಪನ್ನಗಳಿಗೆ ವಿಮಾ ಸೌಲಭ್ಯವಿದೆ ಹಾಗೂ ಅವನ್ನು ಪಡೆದುಕೊಳ್ಳುವುದು ಹೇಗೆ ಎಂಬ ಬಗ್ಗೆ ವಿವರವಾಗಿ ತಿಳಿಯೋಣ.

ವಿಮೆಗಳ ಬಗ್ಗೆ ಮೇಲ್ನೋಟಕ್ಕೆ ತಿಳಿಯುವ ಬದಲು ಆಳವಾಗಿ ಕೂಡ ಅಭ್ಯಸಿಸಬೇಕಾಗುತ್ತದೆ. ನಿಮಗೆ ಗೊತ್ತಿರದ ಕೆಲ ಪ್ರಮುಖ ಉಚಿತ ಅಂತರ್ಗತ ವಿಮಾ ಸುರಕ್ಷತೆ-ಇನ್ಸೂರೆನ್ಸ್‌ ಕವರ್ ಬಗ್ಗೆ ತಿಳಿಯೋಣ ಬನ್ನಿ..

  1. ಬ್ಯಾಂಕ್ ಡಿಪಾಸಿಟ್‌ಗಳು ; ಭಾರತದಲ್ಲಿ ಕಾರ್ಯನಿರ್ವಹಿಸುವ ಪ್ರಾದೇಶಿಕ, ಸಹಕಾರಿ ಹಾಗೂ ವಿದೇಶಿ ಬ್ಯಾಂಕುಗಳು ಸೇರಿದಂತೆ ಇತರ ಎಲ್ಲ ಬ್ಯಾಂಕುಗಳಲ್ಲಿನ ಫಿಕ್ಸೆಡ್ ಡಿಪಾಸಿಟ್ (ನಿಶ್ಚಿತ ಠೇವಣಿ) ಗಳಿಗೆ ಸರಕಾರದ ಡಿಪಾಸಿಟ್ ಇನ್ಸೂರೆನ್ಸ್ ಆಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಶನ್ (ಡಿಐಸಿಜಿಸಿ) ಯಿಂದ ವಿಮಾ ಸುರಕ್ಷತೆ ನೀಡಲಾಗಿರುತ್ತದೆ. ಒಂದೊಮ್ಮೆ ಯಾವುದೇ ಬ್ಯಾಂಕು ವಿಲೀನ ಅಥವಾ ಲೈಸೆನ್ಸ್ ರದ್ದತಿಯ ಕಾರಣದಿಂದ ಗ್ರಾಹಕರ ಫಿಕ್ಸೆಡ್ ಡಿಪಾಸಿಟ್ ಮೊತ್ತವನ್ನು ಮರುಪಾವತಿ ಮಾಡಲು ವಿಫಲವಾದಲ್ಲಿ ಹೂಡಿಕೆ ಮೊತ್ತ ಹಾಗೂ ಬಡ್ಡಿಯ ಮೇಲೆ 1 ಲಕ್ಷ ರೂ.ಗಳವರೆಗೆ ವಿಮಾ ಸುರಕ್ಷತೆ ಇರುತ್ತದೆ. ಆದರೆ ಒಂದು ವೇಳೆ ಎಫ್‌ಡಿ ಇಟ್ಟ ಗ್ರಾಹಕನು ಬ್ಯಾಂಕಿಗೆ ಯಾವುದಾದರೂ ಮೊತ್ತ ಪಾವತಿಸಬೇಕಿದ್ದಲ್ಲಿ ಡಿಐಸಿಜಿಸಿ ಮೊದಲಿಗೆ ಅದನ್ನು ಕಡಿತಗೊಳಿಸುತ್ತದೆ. ಇಂಥ ವಿಮೆಯ ಪಾಲಿಸಿ ಹಣವನ್ನು ಬ್ಯಾಂಕುಗಳೇ ಭರಿಸುತ್ತವೆ. ಉಳಿತಾಯ, ಚಾಲ್ತಿ ಖಾತೆ, ಫಿಕ್ಸೆಡ್ ಡಿಪಾಸಿಟ್ ಹಾಗೂ ರೆಕರಿಂಗ್ ಡಿಪಾಸಿಟ್ ಖಾತೆಗಳಿಗೆ ಡಿಐಸಿಜಿಸಿ ವಿಮಾ ಸುರಕ್ಷತೆ ಇರುತ್ತದೆ.
  2. ಗೃಹೋಪಕರಣಗಳಿಗೆ ವಿಮೆ ; ಫ್ರಿಜ್, ಟಿವಿ ಮತ್ತು ವಾಶಿಂಗ್ ಮಶೀನ್ ಸೇರಿದಂತೆ ಇನ್ನಿತರ ಇನ್ನೂ ಹಲವಾರು ಗೃಹೋಪಯೋಗಿ ಉಪಕರಣಗಳು ಎಲೆಕ್ಟ್ರಿಕ್ ಅಥವಾ ಮೆಕ್ಯಾನಿಕಲ್ ತೊಂದರೆಯಿಂದ ಹಾಳಾದಲ್ಲಿ ಅದಕ್ಕೆ ವಿಮಾ ಸುರಕ್ಷತೆ ಯೋಜನೆಯನ್ನು ಆಯಾ ಗೃಹೋಪಯೋಗಿ ವಸ್ತು ತಯಾರಿಕಾ ಕಂಪನಿಗಳು ನೀಡುತ್ತವೆ. ಈ ವಿಮಾ ಸೌಲಭ್ಯವನ್ನು ವಾರಂಟಿಯೊಂದಿಗೆ ತಳಕು ಹಾಕಿ ಗೊಂದಲ ಮಾಡಿಕೊಳ್ಳಬೇಡಿ. ಇವೆರಡೂ ಭಿನ್ನ ಸಂಗತಿಗಳಾಗಿವೆ. ಸಾಮಾನ್ಯವಾಗಿ ಹಬ್ಬದ ಸೇಲ್ ಸಂದರ್ಭಗಳಲ್ಲಿ ಇಂಥ ವಿಮಾ ಸೌಕರ್ಯಗಳನ್ನು ಹೆಚ್ಚುವರಿಯಾಗಿ ಕಂಪನಿಗಳು ಆಫರ್ ಮಾಡುತ್ತವೆ. ಈ ವಿಮೆಗೆ ನೀವು ನೇರವಾಗಿ ಯಾವುದೇ ಮೊತ್ತವನ್ನು ಪಾವತಿ ಮಾಡುವುದಿಲ್ಲವಾದರೂ ಕಂಪನಿಗಳೇ ತಮ್ಮ ಉಪಕರಣಗಳ ಬೆಲೆಯನ್ನು ಒಂದಿಷ್ಟು ಹೆಚ್ಚಿಸಿ ಅದರಿಂದ ವಿಮಾ ಖರ್ಚಿನ ಮೊತ್ತವನ್ನು ಭರಿಸುತ್ತವೆ.
  3. ಮೊಬೈಲ್ ಫೋನುಗಳಿಗೆ ವಿಮೆ ; ಮೊಬೈಲ್ ತಯಾರಿಕಾ ಕಂಪನಿಗಳು ಮೊಬೈಲ್ ಫೋನುಗಳಿಗೆ ವಿಮಾ ಸೌಲಭ್ಯ ನೀಡುತ್ತಿವೆ. ಮೊಬೈಲ್ ಫೋನ್ ಕಳುವಾದಲ್ಲಿ ಅಥವಾ ಹಾನಿಗೀಡಾದಲ್ಲಿ ವಿಮಾ ಸುರಕ್ಷತೆ ಪಡೆಯಬಹುದು. ಉದಾಹರಣೆಗೆ ನೋಡುವುದಾದರೆ, ನೋಕಿಯಾ ಕಂಪನಿಯು ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿಯ ಸಹಯೋಗದಲ್ಲಿ ತನ್ನ ಕಂಪನಿಯ ಮೊಬೈಲ್ ಫೋನುಗಳಿಗೆ ವಿಮಾ ಸುರಕ್ಷತೆ ಒದಗಿಸುತ್ತಿದೆ. ಹಾಗೆಯೇ ಟೆಲಿನಾರ್ ಇಂಡಿಯಾ ಕಮ್ಯೂನಿಕೇಶನ್ ಕಂಪನಿ ತನ್ನ ಗ್ರಾಹಕರಿಗೆ ಸುಮಾರು 50 ಸಾವಿರ ರೂ.ಗಳವರೆಗೂ ವಿಮಾ ಸೌಲಭ್ಯ ನೀಡುತ್ತದೆ ಎಂಬುದು ಅನೇಕರಿಗೆ ಗೊತ್ತಿಲ್ಲ.
  4. ಎಲ್ಪಿಜಿ ವಿಮಾ ; ಸುರಕ್ಷೆ ಎಲ್ಲ ನೋಂದಾಯಿತ ಎಲ್ಪಿಜಿ ಗ್ರಾಹಕರು ಹಾಗೂ ಅವರ ಕುಟುಂಬಸ್ಥರಿಗೆ ಗ್ಯಾಸ್ ಸಿಲಿಂಡರ್‌ನಿಂದ ಉಂಟಾಗಬಹುದಾದ ಅಪಘಾತಗಳ ಸಂದರ್ಭದಲ್ಲಿ ವಿಮಾ ಸುರಕ್ಷತೆ ನೀಡಲಾಗುತ್ತದೆ. ಇಂಥ ಸಂದರ್ಭಗಳಲ್ಲಿ ಅಪಘಾತ ಪ್ರಕರಣದ ಬಗ್ಗೆ ಮೊದಲಿಗೆ ಹತ್ತಿರದ ಪೊಲೀಸ್ ಸ್ಟೇಷನ್‌ನಲ್ಲಿ ದೂರು ದಾಖಲಿಸಬೇಕು. ಈ ಬಗ್ಗೆ ಎಲ್ಪಿಜಿ ವಿತರಕರಿಗೆ ಸಹ ಲಿಖಿತವಾಗಿ ದೂರು ಸಲ್ಲಿಸಬೇಕಾಗುತ್ತದೆ. ಆದರೆ ಈ ರೀತಿಯ ವಿಮೆ ಪಡೆಯಬೇಕಾದರೆ ನೀವು ಮಾನ್ಯತೆ ಪಡೆದ ಐಎಸ್‌ಐ ಮಾರ್ಕಿನ ಗ್ಯಾಸ್ ಪೈಪ್ ಹಾಗೂ ಲೈಟರ್‌ಗಳನ್ನೇ ಉಪಯೋಗಿಸುತ್ತಿರಬೇಕು. ಹಾಗೆಯೇ ವಿತರಕರಲ್ಲಿ ನೋಂದಾಯಿತ ವಿಳಾಸದಲ್ಲಿಯೇ ಎಲ್ಪಿಜಿ ಸಂಪರ್ಕವನ್ನು ಬಳಸುತ್ತಿರಬೇಕು. ನೀವು ನೀಡಿದ ವಿಳಾಸ ಹಾಗೂ ಎಲ್ಪಿಜಿ ಕನೆಕ್ಷನ್ ಬಳಸುತ್ತಿರುವ ಸ್ಥಳ ಬೇರೆಯಾಗಿದ್ದಲ್ಲಿ ಈ ವಿಮೆ ಕ್ಲೇಮ್ ಮಾಡಲಾಗದು.
  5. ರೈಲು ಪ್ರಯಾಣ ; ರೈಲಿನಲ್ಲಿ ಪ್ರಯಾಣಿಸುವ ವೇಳೆ ನಿಮ್ಮ ಲಗೇಜ್‌ಗಳು ಕಳುವಾದಲ್ಲಿ ಅದಕ್ಕೆ ವಿಮಾ ಸೌಲಭ್ಯ ಸಿಗುತ್ತದೆ ಎಂಬುದು ಬಹಳಷ್ಟು ಜನರಿಗೆ ತಿಳಿದಿಲ್ಲ. ನೀವು ಇ-ಟಿಕೆಟ್ ಬುಕ್ ಮಾಡಿದಾಗಲೇ ಐಆರ್‌ಸಿಟಿಸಿ ಈ ವಿಮೆ ನೀಡಿರುತ್ತದೆ. ಪ್ರಯಾಣ ಮಾಡುವಾಗ ಬ್ಯಾಗ್ ಅಥವಾ ಲಗೇಜು ಕಳುವಾದಲ್ಲಿ ಈ ವಿಮಾ ಸೌಲಭ್ಯವನ್ನು ಕ್ಲೇಮ್ ಮಾಡಬಹುದು. ಮೊಬೈಲ್ ಫೋನ್, ಲ್ಯಾಪಟಾಪ್ ಹಾಗೂ ಇನ್ನಿತರ ಯಾವುದೇ ಬೆಲೆಬಾಳುವ ವಸ್ತುಗಳಿಗೂ ಈ ವಿಮೆ ಅನ್ವಯಿಸುತ್ತದೆ.
  6. ಜೀರೊ ಲಯಾಬಿಲಿಟಿ ; ಕಾರ್ಡ್ಸ್ (ಶೂನ್ಯ ಹೊಣೆಗಾರಿಗೆ ಕಾರ್ಡ್) ವೀಸಾ ಹಾಗೂ ಮಾಸ್ಟರಕಾರ್ಡ್ ಕಾರ್ಡುಗಳನ್ನು ಹೊಂದಿದ ಗ್ರಾಹಕರಿಗೆ ಹಲವಾರು ಬ್ಯಾಂಕುಗಳು ಜೀರೊ ಲಯಾಬಿಲಿಟಿ ಇನ್ಸೂರೆನ್ಸ್ ಕವರೇಜ್ ನೀಡುತ್ತವೆ. ತಮ್ಮ ಕಾರ್ಡುಗಳ ಮೇಲೆ ನಡೆಯುವ ಯಾವುದೇ ಅನಧಿಕೃತ ವ್ಯವಹಾರಗಳಿಗೆ ಬ್ಯಾಂಕುಗಳು ವಿಮಾ ಸುರಕ್ಷೆ ನೀಡುತ್ತವೆ. ಕಾರ್ಡ್ ಕಳೆದು ಹೋದ ಸಂದರ್ಭದಲ್ಲಿ ತಕ್ಷಣ ಬ್ಯಾಂಕಿಗೆ ತಿಳಿಸಿದಲ್ಲಿ ಆ ಕಾರ್ಡ್‌ನಿಂದ ಮಾಡಲಾಗುವ ಯಾವುದೇ ಅನಧಿಕೃತ ವ್ಯಹಹಾರಗಳ ಹಾನಿಯನ್ನು ಬ್ಯಾಂಕುಗಳೇ ಭರಿಸುತ್ತವೆ. ಹಾಗೆಯೇ ಡೆಬಿಟ್ ಕಾರ್ಡ್ ಕಳೆದು ಹೋದ ಸಂದರ್ಭದಲ್ಲಿ ಗ್ರಾಹಕರಿಗೆ ಉಂಟಾಗುವ ಹಾನಿಯನ್ನು ಬ್ಯಾಂಕುಗಳು ಮರುಪಾವತಿಸುತ್ತವೆ.
  7. ಪ್ರಧಾನ ಮಂತ್ರಿ ಜನ ಧನ ಯೋಜನೆ ; ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯಡಿ ಬ್ಯಾಂಕಿನಲ್ಲಿ ಖಾತೆ ಹೊಂದಿದ ಗ್ರಾಹಕರಿಗೆ ಜೀರೋ ಬ್ಯಾಲೆನ್ಸ್ ಅಕೌಂಟ್ ಸೌಲಭ್ಯದೊಂದಿಗೆ ರುಪೇ ಡೆಬಿಟ್ ಕಾರ್ಡ್ ನೀಡಲಾಗುತ್ತದೆ. ಈ ಕಾರ್ಡ್ ಹೊಂದಿದವರಿಗೆ ಕ್ರಮವಾಗಿ 1 ಲಕ್ಷ ರೂ.ವರೆಗೆ ವೈಯಕ್ತಿಕ ಅಪಘಾತ ವಿಮೆ ಹಾಗೂ 30 ಸಾವಿರ ರೂ.ಗಳವರೆಗೆ ಜೀವ ವಿಮಾ ಸುರಕ್ಷತೆ ಇರುತ್ತದೆ.
  8. ರುಪೇ ಕಾರ್ಡ್ ; ರುಪೇ ಎಂಬುದು ಮಾಸ್ಟರ್ ಕಾರ್ಡ್ ಹಾಗೂ ವೀಸಾ ಕಾರ್ಡುಗಳ ಬದಲಿಗೆ ಭಾರತೀಯ ಕಾರ್ಡ್ ಕಂಪನಿಯಾಗಿದೆ. ಇದನ್ನು ಎಟಿಎಂಗಳಲ್ಲಿ, ಅಂಗಡಿಗಳಲ್ಲಿ ಹಾಗೂ ಇ-ಕಾಮರ್ಸ್ ವೆಬ್ಸೈಟ್‌ಗಳಲ್ಲಿ ಬಳಸಬಹುದು. ಈ ಕಾರ್ಡ್ ಹೊಂದಿದವರಿಗೆ ವೈಯಕ್ತಿಕ ಅಪಘಾತ ಮರಣ ಅಥವಾ ಶಾಶ್ವತ ಅಂಗವೈಕಲ್ಯ ಸಂದರ್ಭಗಳಲ್ಲಿ 2 ಲಕ್ಷ ರೂ.ಗಳವರೆಗೆ ಉಚಿತ ವಿಮಾ ಸುರಕ್ಷತೆ ಇರುತ್ತದೆ ಎಂಬುದು ಅನೇಕರಿಗೆ ತಿಳಿದಿಲ್ಲ.
  9. ಎಂಪ್ಲಾಯೀಸ್ ಡಿಪಾಸಿಟ್ ಲಿಂಕ್ಡ್ ಇನ್ಸೂರೆನ್ಸ್ (ಇಡಿಎಲ್‌ಐ) ಇಪಿಎಫ್ (ಕಾರ್ಮಿಕ ಭವಿಷ್ಯ ನಿಧಿ) ; ಸದಸ್ಯರಿಗೆ 6 ಲಕ್ಷ ರೂ. ಮೊತ್ತದ ವಿಮಾ ಸುರಕ್ಷತೆ ಇರುತ್ತದೆ. ಇಪಿಎಫ್ ಸದಸ್ಯನೋರ್ವ ಮರಣ ಹೊಂದಿದಲ್ಲಿ ಆತನ ಕುಟುಂಬಕ್ಕೆ ವಿಮಾ ಸುರಕ್ಷತೆ ನೀಡಲಾಗುತ್ತದೆ. ಎಲ್ಲ ಇಪಿಎಫ್ ಸದಸ್ಯರು ಇಡಿಎಲ್‌ಐ ವಿಮಾ ಸುರಕ್ಷತೆ ಪಡೆದಿರುತ್ತಾರೆ. ಇಪಿಎಫ್ ಹೊಂದಿದ ಕಾರ್ಮಿಕನ ಒಟ್ಟು ವಂತಿಗೆಯಲ್ಲಿ ಶೇ 0.5 ರಷ್ಟು ಮೊತ್ತವನ್ನು ಇಡಿಎಲ್‌ಐಗೆ ಪ್ರೀಮಿಯಂ ಮೊತ್ತವಾಗಿ ಪಾವತಿಸಲಾಗಿರುತ್ತದೆ.
  10. ಮ್ಯೂಚುವಲ್ ಫಂಡ್‌ಗಳಿಗೆ ವಿಮಾ ಸುರಕ್ಷೆ ಬಿರ್ಲಾ ಸನ್ ಲೈಫ್; ಐಸಿಐಸಿಐ ಪ್ರುಡೆನ್ಷಿಯಲ್ ಮತ್ತು ರಿಲಯನ್ಸ್ ಕ್ಯಾಪಿಟಲ್ ಸೇರಿದಂತೆ ಇನ್ನೂ ಹಲವಾರು ಮ್ಯೂಚುವಲ್ ಫಂಡ್ ಕಂಪನಿಗಳು ತಮ್ಮ ಸಿಪ್ (SIP) ಹೂಡಿಕೆದಾರರಿಗೆ ಜೀವ ವಿಮಾ ಸೌಲಭ್ಯ ನೀಡುತ್ತಿವೆ. ಈ ಯೋಜನೆಯಡಿ ಫಂಡ್ ಹೂಡಿಕೆದಾರ ಅನಿರೀಕ್ಷಿತವಾಗಿ ಸಾವನ್ನಪ್ಪಿದಲ್ಲಿ ಫಂಡ್ ಕಂಪನಿ ತಾನಾಗಿಯೇ ಪ್ರೀಮಿಯಂ ಪಾವತಿ ಜಾರಿಯಲ್ಲಿಡುತ್ತದೆ. ಫಂಡ್ ಮ್ಯಾಚುರಿಟಿ ನಂತರ ನಾಮಿನಿಗೆ ಮೊತ್ತ ಪಾವತಿಸಲಾಗುತ್ತದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆರೋಗ್ಯ

    ನೀವು ರೆಡ್ ವೈನ್ ಕುಡಿದ್ರೆ ಏನೆಲ್ಲಾ ಲಾಭಗಳಿವೆ ಎಂದು ನಿಮ್ಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ..

    ರೆಡ್ ವೈನ್ ಎಂಬುದು ಗಾಢ ಬಣ್ಣದ (ಕಪ್ಪು) ದ್ರಾಕ್ಷಿಗಳಿಂದ ತಯಾರಿಸಿದ ಒಂದು ಪಾನಿಯವಾಗಿದೆ ಮತ್ತು ದ್ರಾಕ್ಷಿಗಳು ಅನೇಕ ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿರುವ ಕಾರಣ ಇದರಿಂದ ಆರೋಗ್ಯಕ್ಕಾಗುವ ಪ್ರಯೋಜನಗಳು ಬಹಳಷ್ಟಿವೆ. ಅಷ್ಟೇ ಅಲ್ಲ ಆರೋಗ್ಯಕರ ಮತ್ತು ಸುಂದರ ತ್ವಚೆಯನ್ನು ಸಹ ಪಡೆಯಬಹುದು.

  • inspirational

    ಬಯಲಾಯ್ತು ದಾಸ ದರ್ಶನ್ ರವರ ಮತ್ತೊಂದು ಮುಖ..?

    ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ನಡೆಯ ಮೂಲಕ ನಿಜಜೀವನದಲ್ಲಿಯೂ ಹೀರೋ ಆಗಿದ್ದಾರೆ. ಅಂದ ಹಾಗೆ ಹಿರಿಯ ನಟ ರೆಬಲ್ ಸ್ಟಾರ್ ಅಂಬರೀಶ್ ಅವರ ನಿಧನದ ಹಿನ್ನೆಲೆಯಲ್ಲಿ ದರ್ಶನ್ ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಲು ಅಭಿಮಾನಿಗಳಿಗೆ ಕರೆ ನೀಡಿದ್ದಾರೆ. ಇದರ ಹಿಂದೆ ಮತ್ತೊಂದು ಕಾರಣ ಕೂಡ ಇದೆ ಎಂದು ಹೇಳಲಾಗಿದೆ. ತಮ್ಮ ಹುಟ್ಟುಹಬ್ಬ ಆಚರಣೆ ಸಂದರ್ಭದಲ್ಲಿ ಅಭಿಮಾನಿಗಳು ಪಟಾಕಿ ಸಿಡಿಸಿ, ಘೋಷಣೆ ಕೂಗಿ ಸಂಭ್ರಮಿಸುತ್ತಾರೆ. ಇದರಿಂದ ಅಕ್ಕಪಕ್ಕದ ನಿವಾಸಿಗಳಿಗೆ ತೊಂದರೆ ಆಗುತ್ತದೆ ಎಂಬುದನ್ನು ದರ್ಶನ್…

  • ಜ್ಯೋತಿಷ್ಯ

    ಇದ್ದಕಿದ್ದಂತೆ ನಿಮ್ಮ ಜೇಬಿನಲ್ಲಿರುವ ನಾಣ್ಯ ಅಥ್ವಾ ನೋಟು ಕೆಳಗಡೆ ಬಿದ್ರೆ ಏನಾಗುತ್ತೆ ಗೊತ್ತಾ..?

    ಜೇಬಿನಿಂದ ಪೆನ್ ಅಥವಾ ಮತ್ತ್ಯಾವುದೋ ಚೀಟಿ ತೆಗೆಯುವಾಗ ನಾಣ್ಯ ಅಥವಾ ನೋಟು ಕೆಲವೊಮ್ಮೆ ಕೆಳಗೆ ಬೀಳುತ್ತದೆ. ಕೆಳಗೆ ಬಿದ್ದ ನೋಟನ್ನು ಅನೇಕರು ಕೋಪ ಮಾಡಿಕೊಂಡು ಕಿರಿಕಿರಿ ಮಾಡ್ತಾ ಎತ್ತಿಕೊಳ್ತಾರೆ. ಆದ್ರೆ ಇನ್ಮುಂದೆ ಹಾಗೆ ಮಾಡಬೇಡಿ. ನಿಮ್ಮ ಜೇಬಿನಿಂದ ಕೆಳಗೆ ಬಿದ್ದ ಹಣವನ್ನು ಖುಷಿಯಿಂದ ಎತ್ತಿಕೊಳ್ಳಿ. ಜೇಬಿನಿಂದ ಹಣ ಬೀಳೋದು ಯಾವುದರ ಮುನ್ಸೂಚನೆ ಎಂಬುದನ್ನು ತಿಳಿದುಕೊಂಡ್ರೆ ಯಾವಾಗ ಜೇಬಿನಿಂದ ಹಣ ಬೀಳುತ್ತೆ ಅಂತಾ ನೀವು ಕಾಯೋದ್ರಲ್ಲಿ ಸಂಶಯವಿಲ್ಲ. ನಿಮ್ಮ ಜೇಬಿನಿಂದ ಬಿದ್ದ ನಾಣ್ಯವನ್ನು ಎತ್ತಿಕೊಳ್ಳುವ ಮೊದಲು ಅದ್ರಿಂದಾಗುವ ಶುಭ…

  • ಉಪಯುಕ್ತ ಮಾಹಿತಿ

    ನಿಮ್ಮ ಮನೆಯ ಅಂಗಳದಲ್ಲಿ ಹಾವುಗಳು ಕಂಡು ಬರುತ್ತದೆಯೇ .?ಏನು ಮಾಡಬೇಕು ಗೊತ್ತಾ..?ತಿಳಿಯಲು ಈ ಲೇಖನ ಓದಿ ..

    ಕೆಲವು ಗಿಡಗಳಿರುವಲ್ಲಿ ಹಾವುಗಳು ಬರುವುದಿಲ್ಲ. ಗೊಂಡೆಹೂವು, ಮಾಚಿಪತ್ರೆ, ಪಶ್ಚಿಮ ಭಾರತದ ಮಜ್ಜಿಗೆಹುಲ್ಲು, ಸರ್ಪಗಂಧ ಹಾಗೂ ಬೆಳ್ಳುಳ್ಳಿಯ ಗಿಡ ಬೆಳೆಯುವಲ್ಲಿ ಹಾವುಗಳು ಸುಳಿಯದಿರುವುದನ್ನು ಕೃಷಿಕರು ಗಮನಿಸಿದ್ದಾರೆ. ಇವುಗಳ ರುಚಿ ಹಾಗೂ ಪರಿಮಳದಲ್ಲಿ ಸರ್ಪಗಳನ್ನು ವಿಕರ್ಷಿಸುವ ಗುಣವಿದೆ.

  • inspirational

    24 ವರ್ಷದ ವೈದ್ಯಕೀಯ ವಿದ್ಯಾರ್ಥಿನಿಗೆ ಗ್ರಾಮದಲ್ಲಿ ಸರ್ಪಂಚ್ ಹುದ್ದೆ ಸಿಗಲಿದೆ..!ತಿಳಿಯಲು ಈ ಲೇಖನ ಓದಿ..

    ಗರಾಜನ್ ಗ್ರಾಮದಲ್ಲಿ ಸರ್ಪಂಚ್ ಆಯ್ಕೆಗಾಗಿ ಚುನಾವಣೆ ನಡೆಯುತ್ತಿದ್ರೆ, ಅಭ್ಯರ್ಥಿಯಾಗಿದ್ದ ಶಹನಾಜ್ ಖಾನ್, ಎಂಬಿಬಿಎಸ್ ನಾಲ್ಕನೇ ವರ್ಷದ ಪರೀಕ್ಷೆ ಬರೆಯುತ್ತಿದ್ಲು. ಮಾರ್ಚ್ 5ರಂದೇ ಚುನಾವಣೆಯ ಫಲಿತಾಂಶವೂ ಹೊರಬಿದ್ದಿದೆ. 24 ವರ್ಷದ ವೈದ್ಯಕೀಯ ವಿದ್ಯಾರ್ಥಿನಿ ಶಹನಾಜ್ ಖಾನ್ ಳನ್ನು ಗ್ರಾಮಸ್ಥರು ತಮ್ಮ ಸರ್ಪಂಚ್ ಆಗಿ ಆಯ್ಕೆ ಮಾಡಿದ್ದಾರೆ. ಶಹನಾಜ್ ಮೊರಾದಾಬಾದ್ ನ ತೀರ್ಥಂಕರ ಮಹಾವೀರ ಮೆಡಿಕಲ್ ಕಾಲೇಜಿನಲ್ಲಿ ಓದುತ್ತಿದ್ದಾಳೆ. ಈ ಗ್ರಾಮದ ಅತ್ಯಂತ ಕಿರಿಯ ಸರ್ಪಂಚ್ ಎನಿಸಿಕೊಂಡಿದ್ದಾಳೆ ಶಹನಾಜ್. ಸದ್ಯದಲ್ಲೇ ಗುರ್ಗಾಂವ್ ನ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಕ್ಟೀಸ್ ಶುರು ಮಾಡಲಿದ್ದಾಳೆ….

  • Sports

    ಟೀಂ ಇಂಡಿಯಾ ಗೆದ್ದ ಖುಷಿಯಲ್ಲಿ ದೇಶಾದ್ಯಂತ ಯುದ್ಧವನ್ನೇ ಗೆದ್ದ ಸಂಭ್ರಮ…!

    ಬೆಂಗಳೂರು: ಭಾರತ-ಪಾಕ್ ಹೈ ವೋಲ್ಟೇಜ್ ಪಂದ್ಯಕ್ಕೆ ತೆರೆ ಬಿದ್ದಿದೆ. ಟೀಂ ಇಂಡಿಯಾ ಗೆದ್ದ ಖುಷಿಯಲ್ಲಿ ದೇಶಾದ್ಯಂತ ಯುದ್ಧವನ್ನೇ ಗೆದ್ದ ಸಂಭ್ರಮ ಮನೆ ಮಾಡಿದೆ. ಈ ನಡುವೆ ಗೆಲುವು ತಂದು ಕೊಟ್ಟ ಟೀಂ ಇಂಡಿಯಾಗೆ ಕೋಟಿ ಕೋಟಿ ಭಾರತೀಯರು ಭೇಷ್, ಇಂಡಿಯಾ ಭೇಷ್ ಎಂದು ಬೆನ್ನು ತಟ್ಟಿದರು. ಹೌದು. ಬದ್ಧ ವೈರಿ ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾ ಭರ್ಜರಿ ಜಯ ಗಳಿಸಿದೆ. ವಿಶ್ವಕಪ್ ಕ್ರಿಕೆಟ್ ಇತಿಹಾಸದಲ್ಲೇ ಏಳನೇ ಬಾರಿಗೆ ಪಾಕ್ ವಿರುದ್ಧ ಭಾರತಕ್ಕೆ ಐತಿಹಾಸಿಕ ಜಯ ಲಭಿಸಿದೆ. ಟೀಂ…