ಉಪಯುಕ್ತ ಮಾಹಿತಿ

ನಿಮ್ಮ ಶೌಚಾಲಯವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಲು ಹೊಸ ಟ್ರಿಕ್ಸ್..!ತಿಳಿಯಲು ಈ ಲೇಖನ ಓದಿ …

330

ಹೆಚ್ಚಿನ ವಿಜ್ಞಾನಿಗಳು ಹೇಳುವಂತೆ ಶೌಚಾಲಯವು ರೋಗ ರುಜಿನಗಳ ತವರಾಗಿದೆ ಎಂದಾಗಿದೆ. ಆದ್ದರಿಂದ ನೀವು ಸ್ಥಳಕ್ಕೆ ಹೆಚ್ಚು ಆದ್ಯತೆ ನೀಡಿ ಸ್ವಚ್ಛಗೊಳಿಸಿದಂತೆ ನಿಮ್ಮ ಮನೆಯನ್ನು ರಕ್ಷಿಸಿಕೊಳ್ಳಬಹುದಾಗಿದೆ.


ಶೌಚಾಲಯದಲ್ಲಿ ನೀವು ಬಳಸುವ ಬ್ರಶ್ ಆಗಿರಬಹುದು, ಟಾಯ್ಲೆಟ್ ಸೀಟ್ ಆಗಿರಬಹುದು, ಫ್ಲಶ್ ಬಟನ್‌ ಆಗಿರಬಹುದು ಹೀಗೆ ನಾವು ಯೋಚಿಸಲೂ ಸಾಧ್ಯವಾಗದೇ ಇರುವ ಕಡೆಗಳಲ್ಲಿ ಕೀಟಾಣುಗಳು ಮನೆ ಮಾಡಿಕೊಂಡುಬಿಡುತ್ತವೆ. ನೀವು ವಾರಕ್ಕೊಮ್ಮೆ ಸ್ವಚ್ಛಮಾಡಿದರೂ ಕೆಲವೊಮ್ಮೆ ಪ್ರಮುಖ ಅಂಶಗಳ ಕಡೆಗೂ ಗಮನ ಹರಿಸಬೇಕಾಗುತ್ತದೆ.

ಟಾಯ್ಲೆಟ್ ಬ್ರಶ್:-

ಒಮ್ಮೆ ನೀವು ಬ್ರಶ್ ಬಳಸಿ ಸ್ವಚ್ಛಮಾಡಿದ ನಂತರ ಈ ಬ್ರಶ್ ಅನ್ನು ಬ್ಲೀಚ್‌ನಲ್ಲಿ ರಾತ್ರಿಪೂರ್ತಿ ನೆನೆಸಿಕೊಳ್ಳಿ. ಇದರಿಂದ ನಿಮ್ಮ ಬ್ರಶ್ ಸ್ವಚ್ಛಗೊಳ್ಳುತ್ತದೆ. ಟಾಯ್ಲೆಟ್‌ನ ಹಿಂಭಾಗವನ್ನು ತೊಳೆಯುವುದು ಕಷ್ಟದ ಕೆಲಸವಾಗಿದೆ ವೈಪ್ ಬದಲಿಗೆ ಸ್ಪ್ರೇಯನ್ನು ಬಳಸಿ.


ಸೋಂಕು ನಿವಾರಕ :-

ಸೋಂಕು ನಿವಾರಕವನ್ನು ಸಿಂಪಡಿಸಿ ಮತ್ತು ರಾತ್ರಿಯಲ್ಲಿ ಅದನ್ನು ಹಾಗೆಯೇ ಬಿಟ್ಟುಬಿಡಿ, ಟಾಯ್ಲೆಟ್ ಕಲೆಗಳು ಹಠಮಾರಿಯಾಗಿರುವುದರಿಂದ ನೀವು ಸೋಂಕುನಿವಾರಕವನ್ನು ಅಥವಾ ಶುಚಿಗೊಳಿಸುವ ದ್ರಾವಣದಲ್ಲಿ ಬೆರೆಸಿಕೊಳ್ಳಬಹುದು, ಒಂದು ಕೈಯಲ್ಲಿ ಬ್ರಶ್‌ನ ಒಂದು ತುದಿಯನ್ನು ಹಿಡಿದುಕೊಳ್ಳಿ.

ಟಾಯ್ಲೆಟ್ ಸುತ್ತಲೂ ತೊಳೆಯಿರಿ ಮತ್ತು ಅದನ್ನು ವೈಪ್ ಮಾಡಿ :-

ಟಾಯ್ಲೆಟ್ ರಿಮ್ ಅಡಿಯಲ್ಲಿ ಹೆಚ್ಚು ಕೊಳೆ ಸಂಗ್ರಹವಾಗುತ್ತದೆ, ಮತ್ತು ಸ್ವಚ್ಛಗೊಳಿಸುವುದು ತುಂಬಾ ಕಷ್ಟ. ಈ ಭಾಗದಲ್ಲಿ ಸೋಂಕುನಿವಾರಕವನ್ನು ಬಳಸಿಕೊಂಡು ಸ್ವಚ್ಛಮಾಡಿ. ಈ ರಿಮ್ ಅನ್ನು ನೀವು ಸ್ವಚ್ಛಗೊಳಿಸಿಲ್ಲ ಎಂದಾದಲ್ಲಿ ಆ ಭಾಗ ಸೂಕ್ಷ್ಮ ಜೀವಿಗಳ ಮನೆಯಾಗುತ್ತದೆ.

ಬ್ರಶ್ :-

ನಿಮ್ಮ ರಿಮ್ ಅನ್ನು ಸ್ವಚ್ಛಗೊಳಿಸುವ ಸೂಕ್ತ ಬ್ರಶ್ ಅನ್ನು ಆರಿಸಿಕೊಳ್ಳಿ. ಟಾಯ್ಲೆಟ್ ಸ್ವಚ್ಛಗೊಳಿಸುವಾಗ ಗ್ಲೌಸ್ ಬಳಸುವುದನ್ನು ಮರೆಯಬೇಡಿ. ನಿಮ್ಮ ಟಾಯ್ಲೆಟ್ ಸ್ವಚ್ಛಗೊಳಿಸಲು ನೀವು ಸರಿಯಾದ ಟಾಯ್ಲೆಟ್ ಸ್ವಚ್ಛಕಗಳನ್ನು ಬಳಸಬೇಕು.

ಬಿಳಿ ವಿನೇಗರ್ :-

ನಿಮ್ಮ ಫ್ಲಶ್ ಟ್ಯಾಂಕ್‌ಗೆ ಬಿಳಿ ವಿನೇಗರ್ ಅನ್ನು ಹಾಕಿ ಮತ್ತು ಇದು ಸುವಾಸನೆ ಬೀರುವವರೆಗೆ ಫ್ಲಶ್ ಮಾಡಿ. ನಿಮ್ಮ ಸ್ಯಾನಿಟರಿ ವೇರ್‌ನಲ್ಲಿ ಯಾವುದಾದರೂ ಗಾಢ ನೀರು ಡಿಪಾಸಿಟ್ ಆಗಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಇದೊಂದು ಉತ್ತಮ ಸೋಂಕು ನಿವಾರಕವಾಗಿದ್ದು ಕೊಳೆಯನ್ನು ಶೀಘ್ರದಲ್ಲಿಯೇ ನಿವಾರಿಸುತ್ತದೆ.

ಫ್ಲಶ್ ಟ್ಯಾಂಕ್‌ಗೆ ವಿನೇಗರ್ ಅನ್ನು ಸುರಿಯುವುದು ನಿಮ್ಮ ವಾರಾಂತ್ಯದ ಶೌಚಾಲಯ ಸ್ವಚ್ಛತೆ ಕೆಲಸವನ್ನು ಸುಲಭಗೊಳಿಸುತ್ತದೆ.

ಬೇಕಿಂಗ್ ಸೋಡಾ :-

ಟಾಯ್ಲೆಟ್ ಬೌಲ್‌ಗೆ 3 ಚಮಚದಷ್ಟು ಬೇಕಿಂಗ್ ಸೋಡಾವನ್ನು ರಾತ್ರಿಯೇ ಹಾಕಿ. ರಾತ್ರಿ ಪೂರ್ತಿ ಈ ಮಿಶ್ರಣ ಹೀಗೆಯೇ ಇರಲಿ. ಮರುದಿನ ಬೆಳಗ್ಗೆ, ಟಾಯ್ಲೆಟ್ ಅನ್ನು ಫ್ಲಶ್ ಮಾಡಿ ಬೌಲ್‌ನ ಬದಿಗಳನ್ನು ಸ್ಕ್ರಬ್ ಮಾಡಿ ಮತ್ತು ಬೌಲ್ ಪೂರ್ತಿ ಬೆಳ್ಳಗೆ ಹೊಳೆಯುವವರೆಗೆ ಫ್ಲಶ್ ಮಾಡಿ.

ಲಿಂಬೆ ರಸ ಮತ್ತು ಬೋರಾಕ್ಸ್ :-

ನಿಮ್ಮ ಮನೆಯ ಎಂತಹ ಹಠಮಾರಿ ಕಲೆಯನ್ನು ಹೋಗಲಾಡಿಸಲು ಲಿಂಬೆಯನ್ನು ನಿಮಗೆ ಬಳಸಬಹುದಾಗಿದೆ. ಟಾಯ್ಲೆಟ್ ಬೌಲ್ ಅನ್ನು ಹೊಳೆಯುವಂತೆ ಮಾಡಲು, ಬೌಲ್‌ಗೆ ಒಂದು ಕಪ್‌ನಷ್ಟು ಬೋರಾಕ್ಸ್ ಅನ್ನು ಹಾಕಿ.

ಬೋರಾಕ್ಸ್‌ಗೆ 2 ಲಿಂಬೆ ರಸಗಳನ್ನು ಹಿಂಡಿ. ಚೆನ್ನಾಗಿ ಮಿಶ್ರ ಮಾಡಿಕೊಂಡು ದಪ್ಪನೆಯ ಪೇಸ್ಟ್ ತಯಾರಿಸಿಕೊಳ್ಳಿ. ಒಳಭಾಗವನ್ನು ಚೆನ್ನಾಗಿ ಫ್ಲಶ್ ಮಾಡಿ. ಸ್ಪಾಂಜ್ ಬಳಸಿ ಈ ಪೇಸ್ಟ್ ಅನ್ನು ಒಳಭಾಗಕ್ಕೆ ಸವರಿ.
ಸರಿಯಾಗಿ ಫ್ಲಶ್ ಮಾಡಿ :-

ನಿಮ್ಮ ಟಾಯ್ಲೆಟ್ ಅಥವಾ ಶೌಚಾಲಯವನ್ನು ನೀಟಾಗಿ ಇರಿಸಬೇಕು ಎಂದಾದಲ್ಲಿ ಸರಿಯಾಗಿ ಫ್ಲಶ್ ಮಾಡುವುದು ಅತ್ಯವಶ್ಯಕ. ನೀಟಾಗಿ ಫ್ಲಶ್ ಮಾಡುವುದರ ಜೊತೆಗೆ ಫ್ಲಶ್ ಮಾಡಿರುವುದು ಸರಿಯಾಗಿದೆಯೇ ಎಂಬುದನ್ನು ಮನದಟ್ಟು ಮಾಡಿಕೊಳ್ಳಿ.

ನೀವು ಫ್ಲಶ್ ಮಾಡಿದಂತೆಲ್ಲಾ ಶೌಚಾಲಯವು ಸಣ್ಣ ಕಣಗಳನ್ನು ಸಿಂಪಡಿಸುವ ಅಭ್ಯಾಸವನ್ನು ಹೊಂದಿರುತ್ತದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ