ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ತುಂಬಾ ದುಡ್ಡು ಕೊಟ್ಟು ಸ್ಮಾರ್ಟ್’ಫೋನ್ ಕೊಂಡುಕೊಂಡಿದ್ದೇವೆಂದು ಬಹಳ ಜೋಪಾನ ಮಾಡುತ್ತಿರುತ್ತೇವೆ. ಸದ್ಯಕ್ಕೆ ಸರಾಸರಿ ಹೆಚ್ಚಿನ ಅಂಶಗಳಲ್ಲಿ ಎಲ್ಲರ ಕಡೆಗೆ ಸ್ಮಾರ್ಟ್ ಫೋನ್ ಗಳೇ ಜಾಸ್ತಿ ಇವೇ. ಆದರೆ, ಎಂದಾದರೊಮ್ಮೆ ಆಕಸ್ಮಿಕವಾಗಿ ಮೊಬೈಲ್ ಕೆಳಗೆ ಬೀಳುವುದೋ, ನೀರಿಗೆ ತಾಕುವುದೋ ಅಥವಾ ಕೆಲವೊಮ್ಮೆ ಮಕ್ಕಳ ಕೈಯಿಂದ ಇನ್ನೂ ಕೆಲವೊಂದು ಸಲ ನಮ್ಮ ನಿಮ್ಮ ಕೈಯಿಂದ ಮೊಬೈಲ್ ಆಕಸ್ಮಿಕವಾಗಿ ನೀರಲ್ಲಿ ಬೀಳುತ್ತದೆ. ಆಗುವ ಸಾಧ್ಯತೆ ಇರುತ್ತದೆ. ನೀರಿನಲ್ಲಿ ಬಿದ್ದರೆ ಬಹುತೇಕ ಮೊಬೈಲ್’ಗಳು ಹಾಳಾಗಿಬಿಡುತ್ತವೆ.
ಅನೇಕ ಪ್ರಕರಣಗಳಲ್ಲಿ ನೀರಿನಿಂದಲೇ ಮೊಬೈಲ್ ಹಾಳಾದರೆ, ಕೆಲ ಕೇಸ್’ಗಳಲ್ಲಿ ನಮ್ಮ ಅಜ್ಞಾನದಿಂದಲೇ ಫೋನ್ ಹಾಳು ಮಾಡಿಕೊಳ್ಳುತ್ತೇವೆ. ಅನೇಕರು ತಮ್ಮ ಕೆಲವು ಐಡಿಯಾಗಳಿಂದ ಮನೆಯಲ್ಲಿಯೇ ರಿಪೇರಿ ಮಾಡುವುದಕ್ಕೆ ಪ್ರಯತ್ನ ಪಡುತ್ತಾರೆ. ಫೋನ್ ನ್ನು ಬಿಸಿಲಿನಲ್ಲಿ ಇಡುವದು ಮೈಕ್ರೋವೇವ್ ಆವನ್ ನಲ್ಲಿ ಇಡುವದು ಹೀಗೆ ಬೇರೆ ಬೇರೆ ಯತ್ನ ಮಾಡುವರು. ಇಂತಹ ತಪ್ಪು ಮಾರ್ಗಗಳಿಂದ ಫೋನ್ ಮತ್ತಷ್ಟು ಹಾಳಾಗುವ ಸಾಧ್ಯತೆಗಳೇ ಹೆಚ್ಚಾಗಿ ಇರುತ್ತವೆ.
ನಿಮ್ಮ ಮೊಬೈಲ್ ನೀರಿನಲ್ಲಿ ಬಿದ್ದುಬಿಟ್ಟರೆ ನೀವು ಮಾಡಬೇಕಾದ ಮೊದಲ ಕೆಲಸ ಎಂದರೆ, ಅದನ್ನ ಸ್ವಿಚ್ ಆಫ್ ಮಾಡುವುದು. ಹಾಗೆಯೇ ಅದರೊಳಗಿನ ಸಿಮ್ ಕಾರ್ಡ್, ಮೆಮರಿ ಕಾರ್ಡುಗಳನ್ನು ತೆಗೆಯಿರಿ. ಮೊಬೈಲ್ ಸ್ವಿಚ್ ಆಫ್ ಆಗಿರಲಿ, ಬಿಡಲಿ. ನಾವು ತಕ್ಷಣ ಮೊಬೈಲ್ ಸ್ವಿಚ್ ಆಫ್ ಮಾಡಿ ಬ್ಯಾಟರಿಯನ್ನು ತೆಗೆಯಬೇಕು. ಆಕಸ್ಮಾತ್ ರಿಮೊವೆಬಲ್ ಬ್ಯಾಟರಿ ಆಗಿರದಿದ್ದರೆ ಮೊಬೈಲ್ ಸ್ವಿಚ್ ಆಫ್ ಮಾಡಬೇಕು. ಇದರಿಂದ ಫೋನ್’ನೊಳಗೆ ಶಾರ್ಟ್ ಸರ್ಕ್ಯೂಟ್ ಆಗುವ ಸಾಧ್ಯತೆಯನ್ನ ತಡೆಯಬಹುದು.
ಮೊಬೈಲ್ ಸ್ವಿಚ್ ಆಫ್ ಮಾಡಿದ ಬಳಿಕ ನಿಮ್ಮ ಫೋನ್’ನ ಭಾಗಗಳನ್ನು ಸಾಧ್ಯವಾದಷ್ಟೂ ತೆಗೆದುಹಾಕಿರಿ. ಕವರ್, ಬ್ಯಾಟರಿ, ಸಿಮ್ ಕಾರ್ಡ್ಸ್, ಮೆಮೋರಿ ಕಾರ್ಡ್ ಇತ್ಯಾದಿ ಬಿಡಿಭಾಗಗಳನ್ನ ಫೋನ್’ನಿಂದ ಹೊರತೆಗೆಯಿರಿ.
ಫೋನಿನಲ್ಲಿಯ ಬಿಡಿಭಾಗಗಳನ್ನು ಬೆರ್ಪಡಿಸಿದ ನಂತರ ಅದನ್ನು ಒಣಗಿಸಲು ಟಿಶ್ಯೂ ಪೇಪರ್ ಅಥವಾ ಕಾಟನ್ ಬಟ್ಟೆಯನ್ನು ಉಪಯೋಗಿಸಿರಿ. ಯಾಕೆಂದರೆ ಇದರಿಂದ ಫೋನಿನ ಮೂಲೆ ಮೂಲೆಗಳನ್ನು ಒರೆಸಲು ಸಾಧ್ಯವಾಗುತ್ತದೆ.
ಮೊಬೈಲ್ ನಿಂದ ಮೆಮೊರಿ ಕಾರ್ಡ್ ಹಾಗೂ ಸಿಮ್ ರಿಮೋವ್ ಮಾಡಿ ಬಿಸಿಲಿನಲ್ಲಿ ಇಡಬೇಕು. ಯಾವುದೇ ಕಾರಣಕ್ಕೂ ಮೊಬೈಲ್ ಸ್ವಿಚ್ ಆನ್ ಮಾಡಬೇಡಿ.
ಇಲ್ಲಿ ಓದಿ :-ನಿಮ್ಮ ಮೊಬೈಲ್’ನಲ್ಲಿ ಈ 4 ಆಪ್’ಗಳಿದ್ರೆ ಏನೆಲ್ಲಾ ಆಗುತ್ತೆ ಗೊತ್ತಾ..?
ಮೊಬೈಲನ್ನ ಒಂದು ಅಕ್ಕಿಯ ಬ್ಯಾಗ್ ಒಳಗೆ ಹಾಕಿ. ಮೊಬೈಲ್ ಸಂಪೂರ್ಣ ಮುಚ್ಚುವಷ್ಟು ಬ್ಯಾಗ್ ನಲ್ಲಿ ಅಕ್ಕಿ ಇರಲಿ. ಎರಡು ಮೂರು ದಿನ ಮೊಬೈಲನ್ನ ಅಲ್ಲೇ ಇಡಿ. ಯಾಕೆಂದರೆ ಅಕ್ಕಿ ಒಂದು ನೀರನ್ನು ಹೀರಿಕೊಳ್ಳುವ ಅದ್ಭುತ ವಸ್ತು. 2 ಅಥವಾ 3 ದಿನಗಳ ಬಳಿಕ ಫೋನ್ ನನ್ನು ತೆಗೆದು ಬ್ಯಾಟರಿ ಹಾಕಿ ಸ್ವಿಚ್ ಆನ್ ಮಾಡಿ.ಇದಕ್ಕೂ ಮುಂಚೆ ಮೊಬೈಲ್’ನ್ನು ಅಪ್ಪಿ ತಪ್ಪಿ ಸ್ವಿಚ್ ಆನ್ ಮಾಡಬೇಡಿ. ನಿಮ್ಮ ಫೋನ್ ಎಂದಿನಂತೆ ವರ್ಕ್ ಆಗುತ್ತದೆ. ಅಲ್ಲಿಯವರೆಗೂ ಕುತೂಹಲಕ್ಕಾಗಿಯಾದರೂ ಮೊಬೈಲ್ ಮುಟ್ಟಲು ಹೋಗಬೇಡಿ.
ಅಪ್ಪಿ ತಪ್ಪಿ ಒದ್ದೆಯಾದ ಮೊಬೈಲ್ ನ್ನು ಹೆಯರ್ ಡ್ರಾಯರ್ ನಿಂದ ಒಣಗಿಸಬೇಡಿ. ಡ್ರಾಯರ್ ನಿಂದ ಹೊರ ಹೊಮ್ಮುವ ಗಾಳಿ ಅತಿಯಾದ ಉಷ್ಣತೆ ಹೊಂದಿರುವದರಿಂದ ಫೋನ್ ನಲ್ಲಿಯ ಸರ್ಕಿಟ್ ಹಾಳಾಗುವ ಸಾಧ್ಯತೆಗಳಿರುತ್ತವೆ. ಇದರಿಂದ ಮೊಬೈಲ್ ಹಾಳಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.
ಸ್ವಲ್ಪ ಹೊತ್ತು ಮಾತ್ರ ಬಿಸಿಲಿನಲ್ಲಿ ಇಡಿ.ಆದ್ರೆ ಅತಿಯಾದ ಬಿಸಿಲಿನಲ್ಲಿ ಫೋನ್ ಇಡುವದರಿಂದ ಕೆಟ್ಟು ಹೋಗುವ ಸಾಧ್ಯತೆಗಳು ಜಾಸ್ತಿ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆಗಳು ಹೆಚ್ಚುತ್ತಿವೆ. ಒಬ್ಬ ವ್ಯಕ್ತಿ ಎರಡು, ಮೂರು ಫೇಸ್ ಬುಕ್ ಖಾತೆ ಓಪನ್ ಮಾಡಿಕೊಂಡಿದ್ದಾರೆ. ನಕಲಿ ಫೇಸ್ಬುಕ್ ಖಾತೆಗಳಿಂದ ಸಾಕಷ್ಟು ವಂಚನೆ ಪ್ರಕರಣಗಳು ಬೆಳಕಿಗೆ ಬಂದಿವೆ. ಇದನ್ನು ತಡೆಯಲು ಫೇಸ್ ಬುಕ್ ಸೇರಿ ಇತರೆ ಸಾಮಾಜಿಕ ಜಾಲತಾಣ ಬಳಕೆದಾರರ ಪ್ರೊಫೈಲ್ಗೆ ಆಧಾರ್ ಸಂಖ್ಯೆ ಜೋಡಣೆ ಮಾಡಬೇಕು ಎಂದು ಮದ್ರಾಸ್, ಬಾಂಬೆ ಹಾಗೂ ಮಧ್ಯ ಪ್ರದೇಶದ ಹೈಕೋರ್ಟ್ನಲ್ಲಿ ಸಲ್ಲಿಕೆಯಾಗಿರೋ ಆರ್ಜಿಗಳನ್ನು ಸುಪ್ರೀಂಕೋರ್ಟ್ಗೆ ವರ್ಗಾಯಿಸಲು ಕೋರಿರುವ ಅರ್ಜಿ ವಿಚಾರಣೆಗೆ ಸರ್ವೋಚ್ಚ ನ್ಯಾಯಾಲಯ ಸಮ್ಮತಿಸಿದೆ. ಈ…
ಒಂದೆಲಗ ಅಥವಾ ಬ್ರಾಹ್ಮೀ ಎಲೆ ಇದಕ್ಕೆ ದಕ್ಷಿಣ ಕನ್ನಡದ ಕಡೆ ತಿಮರೆ ಎಂದು ಕರೆಯುತ್ತಾರೆ. ಒಂದೆಲಗ ಎಂದರೆ ಒಂದು ಎಲೆ ಉಳ್ಳ ಸಸಿ ಎಂದರ್ಥ. ಇದರಲ್ಲಿರುವ ಮದ್ದಿನ ಗುಣ ಅಸಾಮಾನ್ಯವಾದದ್ದು. ಅದು ಏನೆಂದು ತಿಳಿದರೆ ನಿಮಗೆ ಆಗುತ್ತೆ ನೋಡಿ ಆಶ್ಚರ್ಯ.
ಮತದಾನ ಪ್ರತಿಯೊಬ್ಬರ ಹಕ್ಕು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವಾದರೂ , ಮತದಾನದ ದಿನ ಎಷ್ಟೋ ಮಂದಿ ಮನೆಯಿಂದ ಹೊರಬರುವುದಿಲ್ಲ.. ಅದರಲ್ಲಿ ಕೆಲವರು ಯುವ ಜನತೆಯೂ ಕೂಡ ಸೇರಿರುತ್ತಾರೆ..
ಹೈದ್ರಾಬಾದ್ ನ ಮಹಿಳೆಯೊಬ್ಬಳ ನೋವಿನ ಕಥೆ ಬಹಿರಂಗವಾಗಿದೆ. ಮಹಿಳೆಗೆ ಒಂದಲ್ಲ ಎರಡಲ್ಲ 7 ಬಾರಿ ಗರ್ಭಪಾತವಾಗಿದೆ. ಪ್ರತಿ ಬಾರಿ ಗರ್ಭ ಧರಿಸುತ್ತಿದ್ದಂತೆ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಗಂಡನ ಮನೆಯವರು ಲಿಂಗ ಪರೀಕ್ಷೆ ನಂತ್ರ ಗರ್ಭಪಾತ ಮಾಡಿಸ್ತಿದ್ದರಂತೆ. ಸುಮತಿ ಏಳು ವರ್ಷಗಳಲ್ಲಿ 7 ಬಾರಿ ಗರ್ಭ ಧರಿಸಿದ್ದಾಳೆ. ಪ್ರತಿ ಬಾರಿಯೂ ಗರ್ಭಪಾತ ಮಾಡಿಸಲಾಗಿದೆ. ಒಂದು ಗರ್ಭಪಾತದಿಂದ ಚೇತರಿಸಿಕೊಳ್ಳುವ ಮೊದಲೇ ಮತ್ತೊಂದು ಗರ್ಭಪಾತ ನಡೆಯುತ್ತಿತ್ತು. ಗರ್ಭ ಧರಿಸಿದ ಮೇಲೆ ಖುಷಿ ಪಡುವ ಬದಲು ಅಳುತ್ತಿದ್ದ ಸುಮತಿ ಈ ಬಾರಿ ಹೆಣ್ಣಾಗದಿರಲಿ ಎಂದು…
ಗುಜರಾತ್ನ ಜಾಮ್ನಗರದಲ್ಲಿ ಇದೇ ರೀತಿಯ ಲವ್ಸ್ಟೋರಿಯೊಂದು ಬೆಳಕಿಗೆ ಬಂದಿದೆ. ಬಹುತೇಕ ಲವ್ ಸ್ಟೋರಿಗಳಂತೆ ಈ ಕಥೆ ಕೂಡಾ ದುರಂತ ಅಂತ್ಯ ಕಂಡಿದೆ. ನಿಶ್ಚಿತಾರ್ಥವಾಗಿ ಎರಡು ತಿಂಗಳ ನಂತ್ರ ಭಾವಿ ಪತ್ನಿಗೆ ಎಲೆಕ್ಟ್ರಿಕಲ್ ಶಾಕ್ ಹೊಡದಿತ್ತು. ಇದ್ರಿಂದ ಯುವತಿಯ ಎರಡು ಕಾಲು, ಕೈ ಕತ್ತರಿಸಬೇಕಾಯ್ತು. ಇಷ್ಟಾದ್ರೂ ಆಕೆಯನ್ನೇ ಮದುವೆಯಾಗ್ತೇನೆಂದು ಭರವಸೆ ನೀಡಿದ್ದ ಭಾವಿ ಪತಿ ಆರು ತಿಂಗಳು ಆಕೆ ಜೊತೆ ಆಸ್ಪತ್ರೆಯಲ್ಲಿದ್ದ. ಆದ್ರೆ ಯುವತಿ ಬದುಕಿ ಬರಲಿಲ್ಲ. ಯುವತಿ ಶವಕ್ಕೆ ವಧುವಿನಂತೆ ಸಿಂಗಾರ ಮಾಡಿ ಅಂತ್ಯಸಂಸ್ಕಾರ ಮಾಡಲಾಯ್ತು. ಕಣ್ಣೀರಿನ…
ಕನಸುಗಾರ ರವಿಚಂದ್ರನ್ ಅವರು ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ. ಇವರು ಮಾಡಿದ ಕೆಲಸ ಗುರುತಿಸಿ ಈಗ ವಿಶ್ವವಿದ್ಯಾಲಯವೊಂದು ಗೌರವ ಡಾಕ್ಟರೇಟ್ ಪದವಿ ನೀಡಲು ಮುಂದಾಗಿದೆ. ನಟ ವಿ.ರವಿಚಂದ್ರನ್ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗಿದೆ. ಬೆಂಗಳೂರಿನ ಸಿಎಂಆರ್ ಕಾಲೇಜು ಆವರಣದಲ್ಲಿ ಸಂಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರಿಗೆ ಡಾಕ್ಟರೇಟ್ ಗೌರವ ನೀಡಲಾಗಿದೆ. ಅಕ್ಟೋಬರ್ 18 ರವಿಚಂದ್ರನ್ ಮಗಳು ಗೀತಾಂಜಲಿ ಹುಟ್ಟಿದ ದಿನ. ಆ ದಿನವೇ ಅವರಿಗೆ ಗೌರವ ಡಾಕ್ಟರೇಟ್ ನೀಡಲಿದ್ದೇವೆ ಎಂದು ಯುನಿವರ್ಸಿಟಿಯಿಂದ ಕಾಲ್ಬಂದಿತ್ತಂತೆ. ಅಷ್ಟೇ ಅಲ್ಲದೆ ಅವರ 35ವರ್ಷಗಳ…