ಉಪಯುಕ್ತ ಮಾಹಿತಿ

ನಿಮ್ಮ ಮನೆಯಲ್ಲಿ ಗುಲಾಬಿ ಗಿಡಗಳು ಇವೆಯಲ್ಲಾ ಆ ಗಿಡಗಳಿಗೆ ಹೀಗೆ ಕಸಿ ಮಾಡಿದ್ರೆ,ಕೊಂಬೆಗೊಂದೊಂದು ಬಣ್ಣದ ಹೂಗಳು ನಿಮ್ಗೆ ಸಿಗುತ್ತೆ…

2117

ನಿಮ್ಮ ಮನೆಯಲ್ಲಿ ಗುಲಾಬಿ ಗಿಡಗಳು ಇವೆಯಲ್ಲಾ ಆ ಗಿಡಗಳಿಗೆ ಕಸಿ ಮಾಡುವುದರಿಂದ ಕೊಂಬೆಗೊಂದೊಂದು ಬಣ್ಣದ ಹೂಗಳನ್ನೂ ಸಹ ಪಡೆಯಬಹುದು.ಕಸಿ ಎಂದರೆ ನಿಮಗೆ ತಿಳಿಯದ್ದೇನಲ್ಲ ಆದರೆ ಈ ಮೊದಲಿನ ಸಾಂಪ್ರದಾಯಿಕ ಕಸಿ ಪದ್ಧತಿಯಂತೆ ಗಿಡದ ಕೊಂಬೆಯನ್ನೇ ಕತ್ತರಿಸಿ ಮತ್ತೊಂದು ಗಿಡಕ್ಕೆ ಜೋಡಿಸಿದ ನಂತರ ಅದೇನಾದರೂ ನೆಟ್ಟದೆ ಬೆಳೆಯದೆ ಹಳ್ಳ ಹಿಡಿದು ಮಕಾಡೆ ಮಲಗಿತೆಂದರೆ ಸಾಕು .ನಿಮ್ಮ ಹೆಂಡತಿಯಿಂದ “ಅದೇನು ಸೀಮೇಗಿಲ್ಲದ ಗಂಡೂಂತ ಇವನಿಗೆ ಕೊಟ್ಟು ಮದುವೆ ಮಾಡಿದ್ರಪ್ಪಾ ನನ್ನ ಥತ್ “ ಅಂತ ಬೈಯ್ಯಿಸಿಕೊಳ್ಳಬಾರದೆಂದರೆ ನಾ ಹೇಳಿದಂತೆ ಮಾಡಿ.

ಮೊದಲಿಗೆ ನಿಮ್ಮ ಮನೆಯಲ್ಲಿರುವ ಎರಡು ಬೇರೆ ಬೇರೆ ಬಣ್ಣದ ಗುಲಾಬಿ ಹೂ ಬಿಡುವ ಗಿಡಗಳನ್ನು ಆರಿಸಿಕೊಳ್ಳಿ.ಆ ಗಿಡದ ಮೇಲ್ಭಾಗದಲ್ಲಿ ಚಿಗುರುತ್ತಿರುವ ಕಡೆಯಿಂದ ಕೆಳಗೆ ನೋಡುತ್ತಾ ಬಂದರೆ ಅದೇ ಕೊಂಬೆಯಲ್ಲಿ ಮತ್ತೊಂದು ಕಡೆ ಇನ್ನೂ ಚಿಗುರಲು ತಯಾರಾಗುತ್ತಿರುವ ಕೆಂಪು ಬಣ್ಣದ ಗೆಣ್ಣು ಕಾಣುತ್ತದೆಯಲ್ಲಾ ಅದನ್ನು ಗಮನಿಸಿ.

ಈಗ ಮತ್ತೊಂದು ಗಿಡದ ಬಳಿ ಹೋಗಿ ಹಿಂದೆ ನೋಡಿದ ಅದೇ ಬೆಳ್ಳುಳ್ಳಿ ಗಾತ್ರದ ಕೊಂಬೆಗೆ ಒಂದು ಸ್ವಚ್ಚವಾದ ಬ್ಲೇಡ್ ತೆಗೆದುಕೊಂಡು ಕೊಂಬೆ ಉದ್ದವಾಗಿರುವ ಮಾದರಿಯಲ್ಲಿಯೇ ಒಂದು ಸೆಂಟಿಮೀಟರಿನಷ್ಟು ಉದ್ದದ ಗೆರೆ ಎಳೆಯಿರಿ ಅಂದರೆ ನಿಮ್ಮ ಬ್ಲೇಡಿನಿಂದ ಕುಯ್ಯುವುದು ಕೊಂಬೆಯ ಕಾಂಡದ ಒಳಗೆ ಹೋಗುವುದು ಬೇಡ ಮೇಲಿನ ಕಾಂಡದ ಸಿಪ್ಪೆಯನ್ನು ಮೀರುವುದು ಬೇಡ.

ಹೀಗೆ ಉದ್ದಕ್ಕೆ ಕುಯ್ದ ನಂತರ ಆ ಗೆರೆಯ ಮೇಲ್ಭಾಗಕ್ಕೆ ಅಡ್ಡ ಸ್ವಲ್ಪ ಕುಯ್ದುಬಿಡಿ ಅಂದರೆ ಈಗ ನಿಮಗೆ ಅದು ಇಂಗ್ಲೀಷಿನ T ಆಕಾರದಲ್ಲಿ ಕಾಣುತ್ತಿದೆಯಲ್ಲವೇ ? ಅದನ್ನು ನಿಧಾನವಾಗಿ ಸಿಪ್ಪೆ ಬಿಡಿಸಿ .ಈಗ ಅದನ್ನು ಹಾಗೆಯೇ ಬಿಟ್ಟು ಮೊದಲಿನ ಗಿಡದ ಹೊಸದಾದ ಚಿಗುರು ಗಿಣ್ಣಿನ್ನು ನಿಧಾನವಾಗಿ ಮೇಲಿನಿಂದ ಸಿಪ್ಪೆಯ ಅಳತೆಗೆ ಮಾತ್ರ ನಿಧಾನವಾಗಿ ಸೌತೆಕಾಯಿ ಹೆರೆಯುವ ಮಾದರಿಯಲ್ಲಿ ಚಿಗುರು ಗಿಣ್ಣನ್ನು ಮಾತ್ರ ಹೊರ ತೆಗೆಯಿರಿ.

ಹೊರತೆಗೆದ ಚಿಗುರು ಗಿಣ್ಣನ್ನು ತಂದು T ಡಿಸೈನಲ್ಲಿ ಕಟ್ ಮಾಡಿಟ್ಟ ಕಾಂಡದ ಸಿಪ್ಪೆಯೊಳಗೆ ನಿಧಾನವಾಗಿ ಮೇಲಿನಿಂದ ತೂರಿಸಿ ನಂತರ ಆ ಗಿಣ್ಣಿನ ಮೇಲೆ ಕೆಳಗೆ ಗಮ್ ಟೇಪ್ ಸುತ್ತಿ ಬಿಡಿ .ಇದಾದ ನಂತರ ಗಿಡದಲ್ಲಿ ಶೇ 80ರಷ್ಟು ಎಲೆಗಳನ್ನು ಅದೇ ಬ್ಲೇಡಿನಿಂದ ಕತ್ತರಿಸಿ ಹಾಕಿ ಹಾಗೂ ಗಿಡದ ಮೇಲಭಾಗದಲ್ಲಿರುವ ಚಿಗುರನ್ನೂ ಕೂಡ ಕತ್ತರಿಸಿ ಬಿಡಿ.ಇದನ್ನು ಟಿ ಬಡ್ಡಿಂಗ್ ಎಂದು ಕರೆಯುತ್ತಾರೆ.

ನಂತರ ನೀವು ಮೂರ್ನಾಲ್ಕು ದಿನಗಳಲ್ಲಿ ಈ ಹೊಸ ಗಿಣ್ಣು ನಿಧಾನವಾಗಿ ಚಿಗುರಿ ಹೊಸ ಬಣ್ಣದ ಹೂ ಬಿಡಲು ಶುರುವಾಗುತ್ತದೆ.ಈ ವಿಧಾನ ಮೊದಲು ಬಂದದ್ದು ನಿಂಬೆ ಗಿಡದಲ್ಲಿ ಬೇಗನೆ ಕಾಯಿ ಬಿಡಿಸುವುದಕ್ಕೆ ಆ ನಂತರ ಬಹಳಷ್ಟು ಗಿಡಗಳಿಗೆ ಇದೇ ವಿಧಾನವನ್ನು ಇಸ್ರೇಲಿನಲ್ಲಿ ಬಳಸುತ್ತಿದ್ದಾರೆ.

ಈ ತರಹದ ಕಸಿ ಮಾಡುವಾಗ ಒಂದೇ ಕೊಂಬೆಯ ಗಿಡಕ್ಕೆ ಕಸಿ ಮಾಡಿದರೆ ಗರಿಷ್ಠ ಫಲಿತಾಂಶ ಎರಡೂ ಗಿಡದಿಂದ ಪಡೆಯಬಹುದು ಹಾಗೂ ಒಂಟಿ ಕೊಂಬೆಯ ಗಿಡಕ್ಕೆ ಈ ತರಹ ಕಸಿ ಮಾಡಿದ ನಂತರ ಕಸಿ ಮಾಡಿದ ಜಾಗದಿಂದ ಮೂರು ಇಂಚಿನಷ್ಟು ಮೇಲಿನ ಕೊಂಬೆಯನ್ನು ಅರ್ಧಕ್ಕೆ ಕತ್ತರಿಸಿ ಮಡಿಚಿಬಿಡಬೇಕು ಏಕೆಂದರೆ ಮೇಲಿನ ಕೊಂಬೆ ಹಾಗೆಯೇ ಇದ್ದರೆ ಗಿಡ ಪೋಷಕಾಂಶಗಳೆಲ್ಲವೂ ಮೇಲಕ್ಕೆ ಹೋಗಲು ಶುರುವಾಗುವುದರಿಂದ ಕಸಿ ಮಾಡಿದ ಹೊಸ ಚಿಗುರು ಬೇಗ ಬೆಳೆಯುವುದಿಲ್ಲ.

ಹಾಗೂ ಅದನ್ನು ಏಕೆ ಅರ್ಧ ಕತ್ತರಿಸಿ ಹಾಗೆಯೇ ಬಿಡಬೇಕೆಂದರೆ ಈ ಮೊದಲಿನ ಕೊಂಬೆಯು ನೆಲದಿಂದ ಪೋಷಕಾಂಶಗಳನ್ನು ಅತ್ಯುತ್ತಮವಾಗಿ ಮೇಲಕ್ಕೆ ಎಳೆಯುತ್ತಿರುತ್ತದೆ ಹಾಗಾಗಿ ಅದನ್ನು ಪೂರಾ ಕತ್ತರಿಸಿಬಿಟ್ಟರೆ ಪೂಷಕಾಂಶ ಮೇಲೆಕ್ಕೆಳೆಯುವ ಪ್ರಮುಖ ಪಂಪನ್ನೇ ಆಫ್ ಮಾಡಿದಂತಾಗುತ್ತದೆ ಹಾಗಾಗಿ ಅದನ್ನು ಅರ್ಧ ಕತ್ತರಿಸಿ ಮಡಚಿ ಬಿಟ್ಟರೆ ಅದು ಮುಂದೆ ಬಳೆಯುವುದಿಲ್ಲ ಆದರೆ ಪೋಷಕಾಂಶ ಸೆಳೆದು ಹೊಸ ಚಿಗುರಿಗೆ ಕೊಡುತ್ತದೆ ಎಂದಷ್ಟೇ.

ಈ ವಿಧಾನದಲ್ಲಿ ನಿಮ್ಮ ಎರಡೂ ಗಿಡಗಳೂ ಕೂಡ ಹಾಳಾಗುವುದಿಲ್ಲ ಹಾಗೂ ಏಕಕಾಲದಲ್ಲಿ ಎರಡೂ ಗಿಡಗಳಿಗೆ ಕಸಿ ಮಾಡಬಹುದು.ಹಾಗೂ ನಿಮ್ಮ ಹೆಂಡತಿಯು ಗುಲಾಬಿ ಗಿಡಕ್ಕೆ ಕಸಿ ಮಾಡಲು ಒಪ್ಪಿಗೆ ಕೊಡದಿದ್ದರೆ ಪಕ್ಕದ ಮನೆಯ ಆಂಟಿಯ ಗುಲಾಬಿ ಗಿಡಕ್ಕೆ ಆದರೂ ಕಸಿ ಮಾಡಿಬಿಡಿ !
ನಾಳೆದಿನ ಬಿಡುವ ಚಿತ್ರಾವಿಚಿತ್ರ ಬಣ್ಣದ ಗುಲಾಬಿ ಹೂ ನೋಡಿ ಹೊಟ್ಟೆ ಉರಿದುಕೊಳ್ಳಲಿ !

ಕೃಪೆ:ಉಮೇಶ್ ಆಚಾರ್

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸೌಂದರ್ಯ

    ತರಕಾರಿ,ಹಣ್ಣು ಸಿಪ್ಪೆ ಬಿಸಾಡಬೇಡಿ – ಇದರಿಂದಾಗುವ ಉಪಯೋಗಗಳು…..

    ತರಕಾರಿ ಅಥವಾ ಹಣ್ಣುಗಳ ಸಿಪ್ಪೆಗಳಿಂದ ಹಲವಾರು ಪ್ರಯೋಜನಗಳಿವೆ. ಇವುಗಳನ್ನು ಬಿಸಾಡುವ ಬದಲು ಅವುಗಳಿಂದ ಲಾಭಗಳನ್ನು ಪಡೆದುಕೊಳ್ಳಿ. ಯಾವ ಸಿಪ್ಪೆಯಲ್ಲಿ ಏನು ಲಾಭ ಎಂಬುದರ ವಿವರ ಇಲ್ಲಿದೆ. ನಿಂಬೆ ಸಿಪ್ಪೆ : ಹಳದಿ ಬಣ್ಣದ ಈ ಸಿಪ್ಪೆಯಲ್ಲಿ ನಾರು, ವಿಟಮಿನ್‌ ಸಿ, ಬಿ6, ಕ್ಯಾಲ್ಷಿಯಂ, ಐರನ್‌ ಮತ್ತು ಮೆಗ್ನೀಷಿಯಂಗಳಿವೆ. ಇವುಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ನಿಂಬೆ ಸಿಪ್ಪೆಯ ರುಚಿ ನಾಲಿಗೆಯ ರುಚಿ ಹೆಚ್ಚುವಂತೆ ಮಾಡುತ್ತದೆ. ಕಲ್ಲಂಗಡಿ ಸಿಪ್ಪೆ : ಇದರ ಹಸಿರು ಸಿಪ್ಪೆಯಲ್ಲಿರುವ ಸಿಟ್ರಲ್ಲೈನ್‌ ಎಂಬ ಅಮಿನೊ…

  • ಸುದ್ದಿ

    ಪಿಂಚಣಿ ಹಣಕ್ಕಾಗಿ 100 ವರ್ಷ ವಯಸ್ಸಿನ ತಾಯಿಯನ್ನ ಮಂಚದ ಸಮೇತ ಬ್ಯಾಂಕಿಗೆ ಕರೆತಂದ ಮಗಳು.

    100 ವರ್ಷ ವಯಸ್ಸಿನ ವೃದ್ಧ ತಾಯಿಯ ಪಿಂಚಣಿ ಹಣಕ್ಕಾಗಿ ಮಗಳು ಮಂಚದ ಸಮೇತ ಆಕೆಯನ್ನು ಬ್ಯಾಂಕಿಗೆ ಕರೆತಂದ ಘಟನೆಯೊಂದು ನಡೆದಿದೆ. ಮಗಳು ತನ್ನ ತಾಯಿಯನ್ನು ಮಂಚದ ಸಮೇತ ಕರೆದೊಯ್ಯುವುದನ್ನು ಸ್ಥಳೀಯರು ವಿಡಿಯೋ ಮಾಡಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಪಿಂಚಣಿ ಹಣವನ್ನು ಡ್ರಾ ಮಾಡಲು ಆಕೆಯೇ ಬರಬೇಕು ಎಂದು ಬ್ಯಾಂಕ್ ಸಿಬ್ಬಂದಿ ಸೂಚನೆ ನೀಡಿದ್ದಾರೆ. ಆದರೆ ತಾಯಿಗೆ ಎದ್ದು ನಡೆಯಲು ಸಾಧ್ಯವಿಲ್ಲ. ಹೀಗಾಗಿ ಅವರು ಬ್ಯಾಂಕಿಗೆ ಬರಲು ಆಗುತ್ತಿಲ್ಲ ಎಂದು ಹೇಳಿದರೂ ಸಿಬ್ಬಂದಿ…

  • ಸುದ್ದಿ

    ಬಸ್ ಕಂದಕಕ್ಕೆ ಬಿದ್ದು 6 ಮಂದಿ ಸಾವು, 39 ಜನರಿಗೆ ತೀವ್ರ ಗಾಯ….!

    ಬಸ್ ಕಂದಕಕ್ಕೆ ಉರುಳಿ 6 ಮಂದಿ ಮೃತಪಟ್ಟು, 39 ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಗಳವಾರ ಜಾರ್ಖಂಡ್‍ನ ಗಹ್ರ್ವಾದಲ್ಲಿ ನಡೆದಿದೆ. ಜಿಲ್ಲಾ ಕೇಂದ್ರವಾದ ಗಹ್ರ್ವಾದಿಂದ ಅಂಬಿಕಾಪುರ ರಸ್ತೆಯ 14 ಕಿ.ಮೀ ದೂರದಲ್ಲಿ ಇರುವ ಅನ್ನಜ್ ನವೀದ್ ಕಣಿವೆಯಲ್ಲಿ ಬಸ್ ಪ್ರಪಾತಕ್ಕೆ ಬಿದ್ದಿದೆ. ಪರಿಣಾಮ 6 ಮಂದಿ ಮೃತಪಟ್ಟಿದ್ದು, 39 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಸ್ ಅಂಬಿಕಾಪುರದಿಂದ ಸಾಸಾರಾಮ್ ಕಡೆಗೆ ಹೋಗುತ್ತಿತ್ತು. ನಸುಕಿನ ಜಾವ ಸುಮಾರು 2.30ಕ್ಕೆ ಈ ಅಪಘಾತ ನಡೆದಿದ್ದು, ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡವರನ್ನು ಹತ್ತಿರದ…

  • ಉಪಯುಕ್ತ ಮಾಹಿತಿ

    ಫೇಸ್ಬುಕ್’ನಲ್ಲಿ ಸಿಗಲಿದೆ ನಿರುದ್ಯೋಗಿಗಳಿಗೆ ಕೆಲಸ.!ತಿಳಿಯಲು ಈ ಲೇಖನ ಓದಿ ಮರೆಯದೇ ಶೇರ್ ಮಾಡಿ…

    *ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ಡೇಟಾ ಲೀಕ್ ಪ್ರಕರಣದಲ್ಲಿ ವಿಶ್ವದಾದ್ಯಂತ ಫೇಸ್ಬುಕ್ ಟೀಕೆಗೆ ಗುರಿಯಾಗಿದೆ. ಈ ಮಧ್ಯೆಯೇ ವಿಶ್ವದಾದ್ಯಂತ ಫೇಸ್ಬುಕ್ ದೊಡ್ಡ ಮಟ್ಟದಲ್ಲಿ ನೇಮಕಾತಿಗೆ ಮುಂದಾಗಿದೆ. ಫೇಸ್ಬುಕ್ ಒಟ್ಟೂ 20000 ಜನರನ್ನು ಕೆಲಸಕ್ಕೆ ನೇಮಿಸಿಕೊಳ್ಳಲು ಮುಂದಾಗಿದೆ. ಕಂಪನಿ ವಿಷಯ ಪರಿಶೀಲನೆ ಹಾಗೂ ಭದ್ರತೆ ವಿಭಾಗಕ್ಕಾಗಿ 15000 ಜನರನ್ನು ನೇಮಿಸಿಕೊಳ್ಳಲಿದೆ. ಉಳಿದ 5000 ಮಂದಿ ಇತರ ಕೆಲಸ ಮಾಡಲಿದ್ದಾರೆ. ಈ ಬಗ್ಗೆ ಫೇಸ್ಬುಕ್ ಸಿಇಓ ಮಾರ್ಕ್ ಜ್ಯೂಕರ್ಬರ್ಗ್ ಅಧಿಕೃತ ಮಾಹಿತಿ ನೀಡಿದ್ದಾರೆ. ಯುಎಸ್ ಸೆನೆಟ್ ನಲ್ಲಿ ಮಾರ್ಕ್ ಜ್ಯೂಕರ್ಬರ್ಗ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ….

  • ಕ್ರೀಡೆ

    RCB ಸೋಲಿಗೆ ಕಾರಣವಾಗಿದ್ದು ಅದೊಂದು ಬಾಲ್.!ಆಕ್ರೋಶ ಹೊರಹಾಕಿದ ವಿರಾಟ್…

    ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್.ಸಿ.ಬಿ.) ತಂಡ 5 ರನ್ ನಿಂದ ಸೋಲು ಕಂಡಿದೆ. 1 ನೋಬಾಲ್ ನಿಂದಾಗಿ ಆರ್.ಸಿ.ಬಿ. ಪಂದ್ಯ ಕಳೆದುಕೊಳ್ಳುವಂತಾಗಿದ್ದು, ತಂಡದ ನಾಯಕ ವಿರಾಟ್ ಕೊಹ್ಲಿ ಆಕ್ರೋಶ ಹೊರಹಾಕಿದ್ದಾರೆ. ಮುಂಬೈ ತಂಡ ನೀಡಿದ 187 ರನ್ ಗೆಲುವಿನ ಗುರಿ ಬೆನ್ನತ್ತಿದ್ದ ಆರ್.ಸಿ.ಬಿ.ಗೆ ಕೊನೆಯ ಓವರಿನಲ್ಲಿ 17 ರನ್ ಗಳಿಸುವ ಅವಶ್ಯಕತೆ ಇತ್ತು. ಲಸಿತ್ ಮಾಲಿಂಗ ಎಸೆದ ಕೊನೆಯ ಓವರ್ ನ ಮೊದಲ ಎಸೆತದಲ್ಲಿ…

  • ಉಪಯುಕ್ತ ಮಾಹಿತಿ

    ಈ ಜಾಗಗಳಲ್ಲಿ ಮೊಬೈಲ್ ಫೋನ್ ಗಳನ್ನು ಇಟ್ಟು ಕೊಳ್ಳಲೇಬೇಡಿ…

    ನೀವು ಮೊಬೈಲ್ ಪ್ರಿಯರೇ? ಮೊಬೈಲ್ ಇಲ್ಲದೆ ನಿಮಗೆ ನಿದ್ದೆ ಬರುವುದಿಲ್ಲವೇ? ನೀವು ಹೋದಲ್ಲೆಲ್ಲ ಮೊಬೈಲ್ ಬೇಕೇ ಬೇಕೆನಿಸುತ್ತದೆಯೆ? ಹಾಗಿದ್ದರೇ ಇಲ್ಲಿ ಕೇಳಿ….ಯಾವುದೇ ಕಾರಣಕ್ಕೂ ಈ ಎಂಟು ಕಡೆ ನಿಮ್ಮ ಮೊಬೈಲನ್ನು ಬಳಸಲೇಬೇಡಿ. ನಿಮ್ಮ ಹತ್ತಿರಕ್ಕೂ ಇಟ್ಟುಕೊಳ್ಳಬೇಡಿ. ನೀವು ಮಲಗುವ ಕೊಠಡಿ : ಸಾಮಾನ್ಯವಾಗಿ ಮಲಗುವ ಕೋಣೆಯಲ್ಲಿ ಮೊಬೈಲನ್ನು ಎಲ್ಲರೂ ಇಟ್ಟುಕೊಂಡೇ ಇರುತ್ತಾರೆ. ಕಾರಣ ಬರುವ ಮೆಸೇಜ್ ಗಳನ್ನು ಓದುವುದು, ರಾತ್ರಿ ಮೆಸೇಜುಗಳನ್ನು ಓದಿಯೇ ಮಲಗುವುದು. ಇದೆಲ್ಲದರ ಜೊತೆಗೆ ಅಲಾರಾಂ ಇಟ್ಟುಕೊಳ್ಳುವುದು ಅಭ್ಯಾಸ ಆಗಿ ಬಿಟ್ಟಿರುತ್ತದೆ. ಆದರೆ ನೆನಪಿಡಿ ಇದು…