ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕಾಲವೊಂದಿತ್ತು, ಆಗ ಯಾವುದೇ ಉತ್ತಮ ಆಸ್ಪತ್ರೆಗಳು ಇರಲಿಲ್ಲ.ಹುಟ್ಟುವ ಮಕ್ಕಳಿಗೆ ಆಗ ಯಾವುದೇ ಲಸಿಕೆಗಳನ್ನು ಹಾಕುತ್ತಿರಲಿಲ್ಲ.ಯಾಕಂದ್ರೆ ಆಗಿನ ಆಹಾರ ಪದ್ಧತಿ ಆಗಿತ್ತು.ಯಾವುದೇ ಲಸಿಕೆಗಳು ಆಗ ಅಗತ್ಯವಿರಲಿಲ್ಲ.
ಆದ್ರೆ ಈಗ ಆಗಿಲ್ಲ, ಹುಟ್ಟುತ್ತಲೇ ಮಕ್ಕಳಿಗೆ ಸಮಯಕ್ಕೆ ತಕ್ಕಂತೆ ಅಗತ್ಯವಾದ ಲಸಿಕೆಗಳನ್ನು ಹಾಕಿಸಬೇಕಾಗುತ್ತೆ.ಇಲ್ಲವಾದ್ರೆ ನಾನಾ ಖಾಯಿಲೆಗಳು ಬರುವುದು ಗ್ಯಾರಂಟಿ. ಹಾಗಾಗಿ ಮಕ್ಕಳಿಗೆ ಸಮಯಕ್ಕೆ ತಕ್ಕಂತೆ ಲಸಿಕೆ ಹಾಕಿಸುವುದು ಬಹು ಮುಖ್ಯ.

ಮಗು ಹುಟ್ಟಿದ ದಿನದಂದೇ 3 ಲಸಿಕೆಗಳನ್ನು ಹಾಕಿಸಬೇಕಾಗುತ್ತದೆ…
ಹೆಪಟೈಟಿಸ್ ಬಿ
ಓ ಪಿ ವಿ – 0
ಬಿ ಸಿ ಜಿ

ಮಗುವಿಗೆ 6 ವಾರಗಳಾಗುತ್ತಿದಂತೆ ಒಟ್ಟು 3 ಲಸಿಕೆಗಳನ್ನು ಹಾಕಿಸಬೇಕಾಗುತ್ತದೆ…
ಓ ಪಿ ವಿ – 1
ಐ ಪಿ ವಿ – 1
ಪೆಂಟಾವೇಲೆಂಟ್ – 1
ಮಗು 10 ವಾರವಿದ್ದಾಗ 2 ಲಸಿಕೆಗಳನ್ನು ಹಾಕಿಸಬೇಕಾಗುತ್ತದೆ…
ಓ ಪಿ ವಿ -2
ಪೆಂಟಾವೇಲೆಂಟ್ – 2

ಮಗು 14 ನೇ ವಾರಕ್ಕೆ ಕಾಲಿಡುತಿದ್ದಂತೇ 3 ಲಸಿಕೆ ಗಳನ್ನು ಹಾಕಿಸಬೇಕಾಗುತ್ತದೆ…
ಓ ಪಿ ವಿ – 3
ಐ ಪಿ ವಿ – 2
ಪೆಂಟಾವೇಲೆಂಟ್ – 3
9 ತಿಂಗಳ ಮಗುವಿಗೆ 2 ಲಸಿಕೆಯನ್ನು ಹಾಕಿಸಬೇಕಾಗುತ್ತದೆ…
ದಡಾರ-ರುಬೆಲ್ಲಾ- 1
ಜೆಇ-1*

ಮಗು 16-24 ತಿಂಗಳು ಇರುವಾಗ ಒಟ್ಟು 4 ಲಸಿಕೆಯನ್ನು ಹಾಕಿಸಬೇಕಾಗುತ್ತದೆ…
ಓ ಪಿ ವಿ ವರ್ಧಕ – 1
ಡಿ ಪಿ ಟಿ ವರ್ಧಕ -1
ದಡಾರ- ರುಬೆಲ್ಲಾ- 2
ಜೆಇ ವರ್ಧಕ*

ಮಗು 5-6 ವರ್ಷವಿದ್ದಾಗ ಮಗುವಿಗೆ ಒಂದು ಲಸಿಕೆಗಯನ್ನು ಹಾಕಿಸಬೇಕಾಗುತ್ತದೆ…
ಡಿ ಪಿ ಟಿ ವರ್ಧಕ – 2
10 ವರ್ಷದ ಮಕ್ಕಳಿಗೆ
ಟಿ ಟಿ

ಮಕ್ಕಳು 16 ವರ್ಷವಾಗುತ್ತಿದಂತೆ ಹಾಕಿಸಬೇಕಾದ ಲಸಿಕೆ…
ಟಿ ಟಿ
ಇವೆಲ್ಲಾ ಲಸಿಕೆಗಳು ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಸಿಗುತ್ತದೆ.. ಯಾವುದೇ ದುಡ್ಡನ್ನು ಕೊಡಬೇಕಿಲ್ಲ.. ಸರಿಯಾದ ಸಮಯದಲ್ಲಿ ತಪ್ಪದೆ ಈ ಎಲ್ಲಾ ಲಸಿಕೆ ಹಾಕಿಸಿ ಮಕ್ಕಳನ್ನು ಆರೋಗ್ಯವಂತರನ್ನಾಗಿ ಮಾಡಿ…
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸರ್ವರ್ ಸಮಸ್ಯೆಯಿಂದಾಗಿ ಜಗತ್ತಿನಾದ್ಯಂತ ಮೊಬೈಲ್ ಗ್ರಾಹಕರು ವಾಟ್ಸಪ್ ಕ್ರ್ಯಾಶ್ ಆದ ಹಿನ್ನೆಲೆಯಲ್ಲಿ ಸಂದೇಶ ಕಳುಹಿಸಲು ಮತ್ತು ಸ್ವೀಕರಿಸಲು ಸಾಧ್ಯವಾಗದೆ ಇರುವ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.
ದಿನನಿತ್ಯ ವ್ಯಾಯಾಮ, ಡಯಟ್, ಕಟ್ಟುನಿಟ್ಟಾದ ಆಹಾರ ಮಾಡಿದರೂ ಸಹ ಬೊಜ್ಜು ಕರಗುವುದಿಲ್ಲ. ಹಲವು ಪ್ರಯತ್ನ ಮಾಡಿದರು ಕೆಲವರಿಗೆ ಬೊಜ್ಜು ಕರಗಿಸಲು ಹಾಗುವುದಿಲ್ಲ. ಆದರೆ ಕೆಲವು ಹಣ್ಣುಗಳನ್ನು ಸೇವಿಸಿದರೆ ತೂಕ ಕಡಿಮೆ ಮಾಡಬಹುದು ಎಂದು ಇತ್ತೀಚಿನ ಅಧ್ಯಯನಗಳು ತಿಳಿಸಿದೆ. ಹೌದು ನಿಮಗೆ ಇಷ್ಟವಾದ ರುಚಿಕರವಾದ ಕೆಲವು ಹಣ್ಣುಗಳಿಂದ ಬೊಜ್ಜನ್ನು ಕರಗಿಸಿ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರ ಜೊತೆಗೆ ಈ ಹಣ್ಣುಗಳಲ್ಲಿ ನಮ್ಮ ದೇಹಕ್ಕೆ ಬೇಕಾದ ಆರೋಗ್ಯಕರ ಫೈಬರ್ ಮತ್ತು ಪೋಷಕಾಂಶಗಳಿರುತ್ತವೆ. ಈಗ ನಾವು ದಿನನಿತ್ಯ ಸೇವನೆ…
ಇದೊಂದು ಭಯಾನಕ ಸುದ್ದಿ. ಎಲ್ಲರೂ ಭಹಯಬೀಳುವಂತಹ ಸುದ್ದಿಯೇ. ಹೆಬ್ಬಾವೊಂದು ಮನೆಯೊಳಗಿನ ಶೌಚಾಲಯದಲ್ಲಿ ಇಲಿ ಬೇಟೆಯಾಡಿದಂತಹ ದಿಗಿಲುಗೊಳ್ಳುವಂತಹ ಸಂಗತಿ. ಇದು ನಡೆದಿರುವುದು ಆಸ್ಟ್ರೇಲಿಯಾದ ಕೈನ್ಸ್ನಲ್ಲಿ. ಇಲ್ಲಿನ ಜನ್ನಾ ಎಂಗ್ಲರ್ ಬೆಳಗ್ಗೆ ಸುಮಾರು 4 ಗಂಟೆಗೆ ಎದ್ದು ಮನೆಯ ಕೆಲಸದಲ್ಲಿ ನಿರತರಾಗಿದ್ದರು. ಈ ವೇಳೆ, ಇವರಿಗೆ ಶೌಚಾಲಯದೊಳಗೆ ಏನೋ ಶಬ್ದ ಆದಂತೆ ಕಂಡಿತು. ತಕ್ಷಣ ಏನದು ಎಂದು ನೋಡಿದಾಗ ಅಲ್ಲಿನ ದೃಶ್ಯವನ್ನು ಕಂಡು ಇವರು ಒಂದು ಕ್ಷಣ ಭಯಬೀತರಾಗಿದ್ದರು. ಯಾಕೆಂದರೆ, ಶೌಚಾಲಯದೊಳಗೆ ಬೃಹತ್ ಗಾತ್ರದ ಹೆಬ್ಬಾವೊಂದು ಇಲಿ ಬೇಟೆಯಲ್ಲಿ ತೊಡಗಿತ್ತು….
ಸ್ಯಾಂಡಲ್ ವುಡ್ ನ ಮಾಣಿಕ್ಯ ಅಭಿನಯ ಚಕ್ರವರ್ತಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್. ಅಲ್ಲಿ ಫ್ಯಾನ್ಸ್ ಜೊತೆ ನಿರಂತ ಟಚ್ನಲ್ಲಿರುತ್ತಾರೆ. ಸುದೀಪ್ ತಮ್ಮ ಸಿನಿಮಾಗಳ ಮಾಹಿತಿಗಳ ಅಭಿಮಾನಿಗಳ ಪ್ರಶ್ನೆಗೆ ಉತ್ತರ ನೀಡೋದೆ ಎಲ್ಲಾ ಅಲ್ಲೆ. ಇದೀಗ ಕಿಚ್ಚ ಪೋಸ್ಟ್ ಮಾಡಿರುವ ಎರಡು ಟ್ವೀಟ್ ಭಾರಿ ಚರ್ಚೆಗೆ ಗ್ರಾಸವಾಗಿದೆ.ಯಾಕಂದ್ರೆ ಈ ಟ್ವೀಟ್ನಲ್ಲಿ ಖಡಕ್ ಆಗಿ ಒಂದು ಸಾಲನ್ನು ಪೋಸ್ಟ್ ಮಾಡುವ ಮೂಲಕ ಯಾರಿಗೋ ಸರಿಯಾಗಿ ಟಾಂಗ್ ಕೊಟ್ಟಹಾಗೆ ಇದೆ. ಸಾಮಾನ್ಯವಾಗಿ ಸಿನಿಮಾಗಳ ವಿಚಾರವನ್ನು ಮಾತ್ರ ಟ್ವೀಟ್ ಮಾಡೋ ಕಿಚ್ಚನ…
ಪಕ್ಕದ ಮನೆ ಮಹಿಳೆಗೆ ಫ್ಲೈಯಿಂಗ್ ಕಿಸ್ ನೀಡಿದ ವ್ಯಕ್ತಿಗೆ ಮೂರು ವರ್ಷ ಜೈಲು ಹಾಗೂ 3 ಸಾವಿರ ರೂ. ದಂಡ ವಿಧಿಸಲಾಗಿದೆ.ವಿನೋದ್ ಜೈಲು ಸೇರಿದ ವ್ಯಕ್ತಿ. ವಿನೋದ್ ತನ್ನ ಪಕ್ಕದ ಮನೆ ಮಹಿಳೆಯನ್ನು ನೋಡಿ ಫ್ಲೈಯಿಂಗ್ ಕಿಸ್ ಕೊಡುತ್ತಿದ್ದನು. ಅಲ್ಲದೆ ಸನ್ನೆ ಮಾಡುವ ಮೂಲಕ ಅನುಚಿತವಾಗಿ ವರ್ತಿಸುತ್ತಿದ್ದನು. ಇದರಿಂದ ಬೇಸತ್ತ ಮಹಿಳೆ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಮಹಿಳೆ ತನ್ನ ಪತಿಯ ಜೊತೆ ವಾಸಿಸುತ್ತಿದ್ದರು. ಅಲ್ಲದೆ ಈ ವಿಷಯವನ್ನು ಪತಿಗೆ ಹೇಳಿದ್ದಾರೆ. ಬಳಿಕ ಇಬ್ಬರು…
ಹುವಾವೇ ಮೊಬೈಲ್ ಬಳಕೆ ಮಾಡ್ತಿರೋ ಗ್ರಾಹಕರೇ ಗಮನಿಸಿ. ಇನ್ಮುಂದೆ ಹುವಾವೇ ಮೊಬೈಲ್ ಗಳಿಗೆ ಗೂಗಲ್ ಪ್ಲೇ, ಗೂಗಲ್ ಪ್ಲೇ ಸ್ಟೋರ್, ಜಿ ಮೇಲ್, ಗೂಗಲ್ ಮ್ಯಾಪ್ ಹಾಗೂ ಯೂಟೂಬ್ ಆಪ್ ಗಳು ಲಭ್ಯವಾಗಲ್ಲ. ಕಾರಣ ಚೀನಾದ ಹುವಾವೇ ಸಂಸ್ಥೆಯೊಂದಿಗೆ ಗೂಗಲ್ ಸಂಸ್ಥೆ ಸಂಬಂಧ ಕಡಿದುಕೊಂಡಿದೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ಕಾರ ಹುವಾವೇ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಿತ್ತು. ಇದೀಗ ಗೂಗಲ್ ಕೂಡಾ ಈ ನಿರ್ಧಾರ ತೆಗೆದುಕೊಂಡಿದ್ದು, ಹುವಾವೇ ಕಂಪನಿಯೊಂದಿಗೆ ವ್ಯವಹಾರಗಳನ್ನು ಕಡಿತಗೊಳಿಸಿದೆ. ಸದ್ಯ ಗ್ರಾಹಕರು ಈಗ…