ಉಪಯುಕ್ತ ಮಾಹಿತಿ

ನಿಮ್ಮ ಫೋನ್ ಒರ್ಜಿನಲ್ ಹೌದೋ? ಅಲ್ಲವೋ? ಎಂದು ತಿಳಿಯುವುದು ಹೇಗೆ ಗೊತ್ತಾ..?ಇದನ್ನು ಓದಿ …

450

ಆನ್‌ಲೈನ್‌ ಮಾರುಕಟ್ಟೆ ಇಂದಿನ ದಿನದಲ್ಲಿ ಮೊಬೈಲ್ ಫೋನ್‌ಗಳ ಮಾರಾಟವನ್ನು ಹೆಚ್ಚು ಮಾಡುತ್ತಿದೆ. ವಿವಿಧ ಆಫರ್‌ಗಳು, ಹೊಸ ಫೋನ್ ಲಾಂಚ್ ಗಳು ಸೇರಿದಂತೆ ಎಕ್ಸ್‌ಕ್ಲೂಸಿವ್ ಸೇಲ್‌ಗಳು ಸೇರಿದಂತೆ ಅನೇಕ ಆಫರ್ ಗಳು ಲಭ್ಯವಿದೆ. ಈ ಹಿನ್ನಲೆಯಲ್ಲಿ ಸಾಮಾನ್ಯ ಜನರು ಆಫ್ ಲೈನ್‌ ಮಾರುಕಟ್ಟೆಗಿಂತಲೂ ಆನ್‌ಲೈನ್ ಮಾರುಕಟ್ಟೆಯನ್ನು ಹೆಚ್ಚು ಅವಲಂಬನೆ ಮಾಡುತ್ತಿದ್ದಾರೆ.

ಆದರೆ ಆನ್‌ಲೈನಿನಲ್ಲಿ ನಕಲಿ ಫೋನ್‌ಗಳ ಹಾವಳಿಯೂ ಇತ್ತೀಚಿನ ದಿನಗಳಲ್ಲಿ ಅಧಿಕಾವಾಗುತ್ತಿದ್ದು, ಗ್ರಾಹಕರಿಗೆ ಅವು ನಕಲಿಯೇ ಅಸಲಿಯೇ ಎಂಬುದು ತಿಳಿಯುತ್ತಿಲ್ಲ. ಯಾವುದೇ ಫೋನ್‌ಗಳು ಅಸಲಿಯಾಗಿದ್ದರೇ ಅದರಲ್ಲಿ IMEI ಅಥಾವ MEID ಸಂಖ್ಯೆಗಳು ಇರಬೇಕು. ಇದು ಇದ್ದರೇ ಮಾತ್ರವೇ ನಿಮ್ಮ ಫೋನ್ ಅಸಲಿ ಎಂದು ಗುರುತಿಸಬಹುದಾಗಿದೆ. ಹಾಗಾಗಿ ನಿಮ್ಮ ಫೋನ್ ಅಸಲಿಯೇ ಅಥಾವ ನಕಲಿಯೇ ಎಂಬುದನ್ನು ನೀವೆ ತಿಳಿಯುವುದು ಹೇಗೆ ಎಂಬುದನ್ನು ತಿಳಿಸುವ ಪ್ರಯತ್ನವು ಇದಾಗಿದೆ.

ಡಯಲ್ ಪ್ಯಾಡ್‌ನಲ್ಲಿಯೂ ತಿಳಿಯಬಹುದು:-

ನಿಮ್ಮ ಸ್ಮಾರ್ಟ್‌ಫೋನಿನ ಡಯಲ್ ಪ್ಯಾಡಿನಲ್ಲಿ *#06# ಡಯಲ್ ಮಾಡುವ ಮೂಲಕ ನಿಮ್ಮ ಫೋನಿನ IMEI ಅಥಾವ MEID ಸಂಖ್ಯೆಯನ್ನು ನೀವು ತಿಳಿದುಕೊಳ್ಳಬಹುದಾಗಿದೆ. ಇದರಿಂದ ನಿಮ್ಮ ಫೋನ್ ಅಸಲಿ ಇಲ್ಲವೇ ನಕಲಿ ಎಂಬುದು ತಿಳಿಯಲಿದೆ.

ಐಫೋನ್ ನಲ್ಲಿ:-

IMEI ಅಥಾವ MEID ಸಂಖ್ಯೆ ಐಪೋನಿನ ಹಿಂಭಾಗದಲ್ಲಿ ದಾಖಲಿಸಲಾಗಿರುತ್ತದೆ. ಇದಕ್ಕಾಗಿ ನೀವು ಯಾವುದೇ ಶ್ರಮ ಪಡುವ ಅಗತ್ಯವೇ ಇರುವುದಿಲ್ಲ. ಫೋನಿನ ಹಿಂಭಾಗದಲ್ಲಿ ಆಪಲ್ IMEI ಅಥಾವ MEID ಸಂಖ್ಯೆಯನ್ನು ದಾಖಲಿಸಲಿದೆ.

ಸಿಮ್ ಕಾರ್ಡ್ ಟ್ರೈನಲ್ಲಿ:-

ನಿಮ್ಮ ಐಪೋನಿನಲ್ಲಿರುವ ಸಿಮ್‌ ಕಾರ್ಡ್ ಟ್ರೈ ನಲ್ಲಿಯೂ ನೀವು IMEI ಅಥಾವ MEID ಸಂಖ್ಯೆಯನ್ನು ಕಾಣಬಹುದಾಗಿದೆ. ನೂತನ ಫೋನ್‌ಗಳಲ್ಲಿ ಇದೇ ಮಾದರಿಯಲ್ಲಿ ಇರಲಿದೆ.

ಆಂಡ್ರಾಯ್ಡ್ ಫೋನಿನಲ್ಲಿ:

ಆಂಡ್ರಾಯ್ಡ್ ಫೋನಿನ ಸೆಟ್ಟಿಂಗ್ಸ್‌ನಲ್ಲಿರುವ ಎಬೋಟ್ ಫೋನಿನ ಆಯ್ಕೆಯಲ್ಲಿ ಸೆಟ್ಟಸ್ ನಲ್ಲಿ ನೀವು ನಿಮ್ಮ ಪೋನಿನ IMEI ಅಥಾವ MEID ಸಂಖ್ಯೆಯನ್ನು ತಿಳಿದುಕೊಳ್ಳಬಹುದಾಗಿದೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ