ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸುಂದರವಾದ ಹಾಗೂ ಸದೃಢವಾದ ಕೂದಲನ್ನು ಪ್ರತಿಯೊಬ್ಬ ಹುಡುಗಿಯೂ ಬಯಸುತ್ತಾಳೆ. ಆದರೆ ಇತ್ತೀಚಿಗಿನ ದಿನಗಳಲ್ಲಿ ಕೂದಲು ಉದುರುವುದು ಪ್ರತಿಯೊಬ್ಬ ಮಹಿಳೆಯರ ಸಮಸ್ಯೆಯಾಗಿ ಬದಲಾಗಿದೆ. ನೀವು ಕೂದಲಿಗೆ ಸಂಬಂಧಿಸಿದ ಕೆಲವು ವಿಷಯಗಳ ಬಗ್ಗೆ ತಿಳಿದುಕೊಂಡರೆ ಈ ಸಮಸ್ಯೆಯಿಂದ ಸುಲಭವಾಗಿ ಹೊರಬರಬಹುದು.
ನೀವು ಕೆಲವು ಕೆಟ್ಟ ಅಭ್ಯಾಸಗಳನ್ನು ಬಿಟ್ಟು ಉತ್ತಮವಾದ ಆಹಾರ ಕ್ರಮದ ಮೇಲೆ ನಿಮ್ಮ ಧ್ಯಾನವನ್ನು ಕೇಂದ್ರೀಕರಿಸಿ, ಅದರ ಜೊತೆಗೆ ಸರಿಯಾದ ಜೀವನ ಶೈಲಿ ನಿಮ್ಮದಾಗಿಸಿದರೆ ಸುಂದರ ಹಾಗೂ ಸದೃಢವಾದ ಕೂದಲು ನಿಮ್ಮದಾಗುತ್ತದೆ.
ತುಂಬಾ ಎಣ್ಣೆ ಹಾಕುವುದು :-
ಕೂದಲಿಗೆ ಎಣ್ಣೆ ಹಚ್ಚುವುದು ಉತ್ತಮ ಅಭ್ಯಾಸ. ಆದರೆ ಹೆಚ್ಚು ಎಣ್ಣೆ ಹಚ್ಚಿದರೆ ರಂಧ್ರಗಳು ಮುಚ್ಚಿಹೋಗುತ್ತದೆ. ತಲೆಯ ತ್ವಚೆಯಿಂದ ಸಹ ಎಣ್ಣೆ ಹೊರಬರುತ್ತದೆ.
ಆದುದರಿಂದ ತಲೆಯ ಮೇಲೆ ಎಣ್ಣೆ ಹಚ್ಚುವುದಕ್ಕಿಂತ ಕೂದಲಿಗೆ ಎಣ್ಣೆ ಹಚ್ಚಿದರೆ ಉತ್ತಮ.
ಕೂದಲನ್ನು ಕೆಟ್ಟದಾಗಿ ಇಟ್ಟುಕೊಳ್ಳುವುದು :-
ತ್ವಚೆಯ ವಿಶೇಷಜ್ಞರ ಪ್ರಕಾರ ಕೂದಲಿನಲ್ಲಿ ಎಣ್ಣೆಯ ಅಂಶ ಕಂಡು ಬಂದರೆ ಅದನ್ನು ಅವಶ್ಯಕವಾಗಿ ತೊಳೆಯಬೇಕು. ತಲೆಯ ತ್ವಚೆಯನ್ನು ಚೆನ್ನಾಗಿ ಇಟ್ಟುಕೊಂಡರೆ ಕೂದಲು ಚೆನ್ನಾಗಿ ಬೆಳೆಯುತ್ತದೆ.
ಕೂದಲನ್ನು ವಾರದಲ್ಲಿ ಎರಡು ಬಾರಿ ಶ್ಯಾಂಪೂ ಹಾಕಿ ತೊಳೆಯಿರಿ.
ಕೆಮಿಕಲ್ಗಳ ಪ್ರಯೋಗ :-
ಅಧಿಕ ಪ್ರಮಾಣದಲ್ಲಿ ಕೆಮಿಕಲ್ಗಳ ಉಪಯೋಗ ಮಾಡುವುದರಿಂದ ಕೂದಲಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹೇರ್ ಸ್ಟೈಲ್ ಮಾಡುವ ಸಲುವಾಗಿ ಕೆಮಿಕಲ್ಯುಕ್ತ ಸ್ಪ್ರೇ, ಶ್ಯಾಂಪೂ ಮುಂತಾದವುಗಳ ಬಳಕೆ ಮಾಡುವುದು ಒಳ್ಳೆಯದಲ್ಲ.
ಇದರಿಂದ ಕೂದಲು ತುಂಡಾಗುತ್ತದೆ ಹಾಗೂ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.
ಹೇರ್ ಡ್ರೈಯರ್ ಬಳಕೆ ಮಾಡುವುದು :-
ಯಾವಾಗಲಾದರೂ ಹೇರ್ ಡ್ರೈಯರ್ ಉಪಯೋಗ ಮಾಡುವುದು ಉತ್ತಮ. ಆದರೆ ಪ್ರತಿ ದಿನ ಹೇರ್ ಡ್ರೈಯರ್ ಉಪಯೋಗ ಮಾಡುತ್ತಾ ಬಂದರೆ ಕೂದಲಿನ ಮೇಲೆ ಪರಿಣಾಮ ಬೀರುತ್ತದೆ. ಆದುದರಿಂದ ನಿಮ್ಮ ಕೂದಲನ್ನು ಒಣಗಿಸಲು ಹೇರ್ ಡ್ರೈಯರ್ ಉಪಯೋಗ ಮಾಡಲೇಬೇಡಿ.
ಕಲರಿಂಗ್ ಮತ್ತು ಬ್ಲೀಚಿಂಗ್ :-
ಕೂದಲಿಗೆ ಕಲರಿಂಗ್ ಅಥವಾ ಬ್ಲೀಚಿಂಗ್ ಯಾವತ್ತೂ ಮಾಡಲೇಬೇಡಿ. ಇದರಲ್ಲಿರುವ ರಾಸಾಯನಿಕ ವಸ್ತುಗಳು ಕೂದಲಿನ ಮೇಲೆ ಪರಿಣಾಮ ಬೀರುತ್ತದೆ, ಅದು ಕೂದಲಿನ ಸದೃಢತೆಯನ್ನು ಕಡಿಮೆ ಮಾಡುತ್ತದೆ.
ಕೂದಲಿಗೆ ಕಲರಿಂಗ್ ಮಾಡಬೇಕೆಂದಿದ್ದರೆ ಮದರಂಗಿ ಉಪಯೋಗಿಸಿ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮೈಕಲ್ ಜಾಕ್ಸನ್ ಎಂಬ ಮಹಾನ್ ಗಾಯಕ ಪ್ರತಿಭೆಯು 150 ವರ್ಷಗಳ ಕಾಲ ಬದುಕಬೇಕೆಂದು ಬಯಸಿದ, ಅದಕ್ಕಾಗಿ ತಲೆ ಕೂದಲಿಂದ ಹಿಡಿದು ಕಾಲಿನ ಬೆರಳುಗಳವರೆಗೆ ದಿನ ನಿತ್ಯ ಪರೀಕ್ಷಿಸಲು 12 ನುರಿತ ಡಾಕ್ಟರ್ ಗಳನ್ನು ತನ್ನ ಮನೆಯಲ್ಲಿ ನೇಮಿಸಿದ್ದ. ಆತ ಆಹಾರವನ್ನು ಸೇವಿಸುವುದಕ್ಕೆ ಮುಂಚೆ ಆತನ ಆಹಾರಗಳನ್ನು ಲ್ಯಾಬ್ ನಲ್ಲಿ ಟೆಸ್ಟ್ ಮಾಡುತ್ತಿದ್ದರು. ಆತನ ದೈನಂದಿನ ವ್ಯಾಯಾಮ ಮತ್ತು ಇತರ ದೇಹ ಸಂರಕ್ಷಣೆಗಾಗಿ ಮತ್ತೆ 15 ಜನರನ್ನು ಕೂಡಾ ನೇಮಿಸಿದ್ದ. ಆಕ್ಸಿಜನ್ ನ ಅಳತೆಯನ್ನು ನಿಯಂತ್ರಿಸುವ ತಂತ್ರಜ್ಞಾನವಿರುವ ಬೆಡ್ಡನ್ನು…
ಸುಶ್ಮಾ ಸ್ವರಾಜ್ ಮಂಗಳವಾರ ರಾತ್ರಿ ನಿಧನರಾಗುವುದರೊಂದಿಗೆ ರಾಷ್ಟ್ರೀಯ ರಾಜಧಾನಿ ದಿಲ್ಲಿ ಒಂದು ವರ್ಷದೊಳಗೆ ತನ್ನ ಮೂವರು ಮಾಜಿ ಮುಖ್ಯಮಂತ್ರಿಗಳನ್ನು ಕಳೆದುಕೊಂಡಂತಾಗಿದೆ. 1998ರ ಅಕ್ಟೋಬರ್-ಡಿಸೆಂಬರ್ನಲ್ಲಿ ಅಲ್ಪ ಅವಧಿಗೆ ದಿಲ್ಲಿಯ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದ ಸುಶ್ಮಾ ಮಂಗಳವಾರ ರಾತ್ರಿ ತೀವ್ರ ಹೃದಯಾಘಾತದಿಂದ ಮೃತಪಟ್ಟರು. ಮೂರು ಬಾರಿ ದಿಲ್ಲಿಯ ಮುಖ್ಯಮಂತ್ರಿಯಾಗಿದ್ದ, ಕಾಂಗ್ರೆಸ್ನ ಹಿರಿಯ ನಾಯಕಿ ಶೀಲಾ ದೀಕ್ಷಿತ್ ಈ ವರ್ಷದ ಜುಲೈನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು. ದೀಕ್ಷಿತ್ ಹಾಗೂ ಸುಶ್ಮಾ ಸ್ವರಾಜ್ ಒಂದು ತಿಂಗಳ ಅಂತರದಲ್ಲಿ ವಿಧಿವಶರಾಗಿದ್ದಾರೆ. 1993ರಿಂದ 96ರ ತನಕ ದಿಲ್ಲಿಯ ಮುಖ್ಯಮಂತ್ರಿಯಾಗಿದ್ದ…
ಪ್ರತಿವರ್ಷ ಚೈತ್ರ ಮಾಸದ ಶುಧ್ಧ ನವಮಿಯಂದು ಶ್ರೀರಾಮ ನವಮಿ ಮಾಡುತ್ತೇವೆ. ಆದರೆ ಶ್ರೀರಾಮನವಮಿ ಎಂಬುದು ಯಾಕೆ ಬಂದಿದೆ ಎಂದರೆ, ಇದೇ ನವಮಿಯಂದು ಶ್ರೀ ರಾಮಚಂದ್ರ ಹುಟ್ಟಿದ್ದು, ಇದೇ ನವಮಿಯಂದು ಸೀತಾ ಮಾತೆಯನ್ನು ಮದುವೆ ಮಾಡಿಕೊಂಡು ಸೀತರಾಮನಾದ. ಹಾಗೆಯೇ 14 ವರ್ಷಗಳ ವನವಾಸದ ನಂತರ ಸೀತಾದೇವಿಯನ್ನು ರಾವಣನನಿಂದ ಬಿಡಿಸಿ ಅದೇ ದಿನ ಅಯೋಧ್ಯೆ ಮಹಾರಾಜನಾಗಿ ಶ್ರೀರಾಮನು ಪಟ್ಟಾಭಿಷೇಕ ಆದ ದಿನ. ಹಾಗಾಗಿ ಅದೇ ನವಮಿಯ ದಿನ ರಾಮನ ಜನ್ಮದಿನದ ಜೊತೆಗೆ ಸೀತಾರಾಮ ಕಲ್ಯಾಣ ಮಹೋತ್ಸವ ನೋಡಿದರೆ ಜನ್ಮಜನ್ಮದ ಪುಣ್ಯ…
ನಗರದಲ್ಲಿ ಎಲ್ಲೆಲ್ಲಿ ಟ್ರಾಫಿಕ್ ಸಮಸ್ಯೆ ಇದೆ ಎನ್ನುವ ಮಾಹಿತಿ ನೀಡುವ ಗೂಗಲ್ ಕಂಪನಿಗೆ ವ್ಯಕ್ತಿಯೊಬ್ಬ ಚಮಕ್ ಕೊಟ್ಟ ಘಟನೆ ಜರ್ಮನಿಯಲ್ಲಿ ನಡೆದಿದೆ. ಗೂಗಲ್ ಮ್ಯಾಪ್ ಸಂಚಾರದ ಸಂದರ್ಭದಲ್ಲಿ ಜಿಪಿಎಸ್ ಸಾಧನಗಳು ಎಷ್ಟು ಆನ್ ಆಗಿದೆ ಎನ್ನುವುದನ್ನು ತಿಳಿದುಕೊಂಡು ಜನರಿಗೆ ಪ್ರದೇಶದಲ್ಲಿ ಎಷ್ಟು ಸಂಚಾರ ದಟ್ಟಣೆಯಿದೆ ಎನ್ನುವ ವಿವರ ಇರುವ ಸಂದೇಶವನ್ನು ನೀಡುತ್ತಿರುತ್ತದೆ. ಈ ವಿಚಾರವನ್ನು ತಿಳಿದ ವ್ಯಕ್ತಿಯೊಬ್ಬ ಗೂಗಲ್ ಕಂಪನಿ ಮುಂದೆ ಕೃತಕವಾಗಿ ಟ್ರಾಫಿಕ್ ಜಾಮ್ ಸೃಷ್ಟಿಸಿ ಸುದ್ದಿ ಮಾಡಿದ್ದಾನೆ. ಜರ್ಮನಿಯ ಕಲಾವಿದ ಸೈಮನ್ ವೆಕರ್ಟ್ ಬರ್ಲಿನ್…
ಭಾರತದ ಹೆಮ್ಮೆಯ ಪಿವಿ ಸಿಂಧೂ, ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ಶಿಪ್ ಗೆದ್ದು ನೂತನ ಇತಿಹಾಸ ಬರೆದಿದ್ದಾರೆ. ಮಹಿಳಾ ಸಿಂಗಲ್ಸ್ ಫೈನಲ್ ಮುಖಾಮುಖಿಯಲ್ಲಿ ಜಪಾನ್ನ ನಜೊಮಿ ಮಣಿಸಿ ವಿಶ್ವ ಚಾಂಪಿಯನ್ಶಿಪ್ಗೆ ಮುತ್ತಿಕ್ಕಿದರು, ಭಾರತದ ಅಗ್ರಮಾನ್ಯ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧೂ, ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್ಶಿಪ್ ಗೆದ್ದು ಇತಿಹಾಸ ರಚಿಸಿದ್ದಾರೆ. ಅಲ್ಲದೆ ಬ್ಯಾಡ್ಮಿಂಟನ್ ವಿಶ್ವ ಸಾಮ್ರಾಜ್ಞಿಯಾದ ಭಾರತದ ಮೊದಲ ಆಟಗಾರ್ತಿಯೆನ್ನುವ ಚಾರಿತ್ರಿಕ ದಾಖಲೆಯನ್ನು ಬರೆದಿದ್ದಾರೆ. ಭಾನುವಾರ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ನಡೆದ ಫೈನಲ್ ಮುಖಾಮುಖಿಯಲ್ಲಿ ತಮ್ಮ ಬದ್ದ ವೈರಿ ಜಪಾನ್ನ ಜಪಾನ್ನ ನಜೊಮಿ ಒಕುಹರಾ ವಿರುದ್ಧ21-7, 21-7ರ…
ಮನುಷ್ಯನ ದೇಹದ ರಚನೆ ಆತನ ಭವಿಷ್ಯವನ್ನು ಹೇಳುತ್ತದೆ. ನಮ್ಮ ಕೈ, ಕಾಲು ಸೇರಿದಂತೆ ದೇಹದ ಪ್ರತಿಯೊಂದು ಭಾಗವೂ ನಮ್ಮ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ನಮ್ಮ ಕೈ, ಕಾಲು, ಮಚ್ಚೆಯನ್ನೇ ನೋಡಿ ಪಂಡಿತರು ನಮ್ಮ ಭವಿಷ್ಯ ಹೇಳ್ತಾರೆ. ಸಾಮಾನ್ಯವಾಗಿ ಮನುಷ್ಯನ ಕೈ, ಕಾಲಿನ ಸೌಂದರ್ಯವನ್ನು ಉಗುರು ಹೆಚ್ಚಿಸುತ್ತದೆ. ಇದೇ ಕಾರಣಕ್ಕೆ ಮಹಿಳೆಯರು ಉಗುರಿನ ಸೌಂದರ್ಯಕ್ಕೆ ಹೆಚ್ಚಿನ ಗಮನ ನೀಡ್ತಾರೆ. ಉಗುರಿಗೆ ಚೆಂದದ ಆಕಾರ ನೀಡಿ, ಬಣ್ಣ ಹಚ್ಚಿಕೊಳ್ತಾರೆ. ಆದ್ರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಉಗುರಿನ ಬಗ್ಗೆ ಬೇರೆಯದೇ ನಂಬಿಕೆಯಿದೆ….