ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕೆಲವರಿಗೆ ನಾಯಿ ಎಂದರೆ ಅಪಾರ ಪ್ರೀತಿ. ಅವರು ಹೋದಲ್ಲಿ ಬಂದಲ್ಲಿ ಎಲ್ಲಾ ಕಡೆ ನಾಯಿ ಜೊತೆಗಿರಬೇಕು. ಇನ್ನು ಕೆಲವರು ನಾಯಿ ಎಂದರೆ ಮೂಗು ಮುರಿಯುತ್ತಾರೆ. ಆದರೆ ನಾಯಿ ಸಾಕುವುದರಿಂದ ಹೃದಯದ ಆರೋಗ್ಯ ಚೆನ್ನಾಗಿರುತ್ತದೆ.
ಹಾಗೂ ಅವರಲ್ಲಿ ಹೃದಯ ಸಂಬಂಧಿ ರೋಗಗಳೂ ಕಡಿಮೆ ಎಂದು ಸಮೀಕ್ಷೆಯೊಂದು ಹೇಳುತ್ತಿದೆ. ಅದರಲ್ಲೂ ನಗರಗಳಲ್ಲಿ ನಾಯಿ ಸಾಕುವುದರಿಂದ ಆ ಮನೆಯವರಿಗೆ ಪ್ರಯೋಜನ ಹೆಚ್ಚು ಎಂದು ವಿಜ್ಞಾನಿಗಳ ತಂಡವೊಂದು ಹೇಳಿದೆ. ಹಲವಾರು ಸಮೀಕ್ಷೆಗಳ ಪ್ರಕಾರ ನಾಯಿ ಮಾಲಿಕರಿಗೆ ರಕ್ತದೊತ್ತಡ ಕಡಿಮೆ ಇರುತ್ತದೆ.
ಕಾರಣ ಸಾಕಿದ ನಾಯಿಯನ್ನು ಹೊರಗಡೆಗೆ ಕರೆದುಕೊಂಡು ಹೋಗುವ ನೆವದಲ್ಲಾದರೂ ಅದರ ಯಜಮಾನ ಅಥವಾ ಮನೆಯವರು ಒಂದಷ್ಟು ವಾಕ್ ಮಾಡುತ್ತಾರೆ. ನಾಯಿ ಓಡಿದರೆ ಅವರೂ ಓಡುತ್ತಾರೆ. ಇದರಿಂದ ದೈಹಿಕ ಚಟುವಟಿಕೆ ಸಿಗುತ್ತದೆ. ಜತೆಗೆ ಮನಸ್ಸಿಗೆ ಒಂದಷ್ಟು ಆನಂದವೂ ಸಿಗುತ್ತದೆ.
ಇದರಿಂದ ದೇಹಕ್ಕೆ, ಹೃದಯಕ್ಕೆ ಬಹಳಷ್ಟು ಲಾಭವಾಗುತ್ತದೆ ಎಂದು ಹೇಳಲಾಗಿದೆ. ಹಾಗೆಯೇ ದೇಹದಲ್ಲಿ ಕೊಬ್ಬಿನ ಅಂಶ ಕಡಿಮೆಯಾಗುತ್ತದೆ. ರಕ್ತದೊತ್ತಡ ಕಡಿಮೆಯಾಗುತ್ತದೆ ಎಂದೂ ಹೇಳಿದ್ದಾರೆ. ಸೈಂಟ್ ಅನ್ನೆ ವಿವಿಯ ಸಂಶೋಧಕರ ತಂಡ 2 ಸಾವಿರ ಮಂದಿಯನ್ನು ನಾಯಿ ಹೊಂದಿದವರು ಮತ್ತು ಹೊಂದದವರು ಎಂದು ಪ್ರತ್ಯೇಕಿಸಿ ಸಮೀಕ್ಷೆ ನಡೆಸಿ ಈ ಅಭಿಪ್ರಾಯಕ್ಕೆ ಬಂದಿದೆ.
ವೈಜ್ಞಾನಿಕ ಸಮೀಕ್ಷೆಯಲ್ಲಿ ಪಾಲ್ಗೊಂಡವರೆಲ್ಲ 24 ರಿಂದ 65 ವರ್ಷ ವಯಸ್ಸಿನವರು. ಇವರಿಗೆ ಹೃದಯದ ಸಮಸ್ಯೆಯಿದ್ದು, ನಾಯಿಯನ್ನು ವಾಕಿಂಗ್ ಮಾಡಿಸುವ, ಅದರೊಂದಿಗೆ ಆಡುವ ಇತ್ಯಾ ದಿ ಕ್ರಿಯೆಗಳಿಂದ ಹೃದಯ ಹೆಚ್ಚು ಗೆಲುವಾಗಲು ಕಾರಣವಾಗಿದೆ ಎಂದು ಹೇಳಿದ್ದಾರಂತೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹಿಂದೂ ದೇವರುಗಳ ಭಾವಚಿತ್ರಗಳನ್ನು ಬಳಸಿಕೊಂಡು ಇತ್ತೀಚೆಗೆ ಇ – ಕಾಮರ್ಸ್ ಜಾಲತಾಣದ ಪ್ರಮುಖ ಅಮೆಜಾನ್ನಲ್ಲಿ ಶೂ, ರಗ್ಗಳು ಹಾಗೂ ಟಾಯ್ಲೆಟ್ ಸೀಟ್ ಕವರ್ಗಳನ್ನು ಮಾರಾಟ ಮಾಡಲಾಗುತ್ತಿದೆ. ಈ ಹಿನ್ನೆಲೆ ಅಮೆಜಾನ್ ವಿರುದ್ಧ ಹಲವು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇ – ಕಾಮರ್ಸ್ ಜಾಲತಾಣದ ಪ್ರಮುಖ ಅಮೆಜಾನ್ ಮತ್ತೆ ಟೀಕೆಗೆ ಗುರಿಯಾಗಿದೆ. ಈ ಬಾರಿ ಹಿಂದೂ ದೇವರ ಭಾವಚಿತ್ರಗಳುಳ್ಳ ಟಾಯ್ಲೆಟ್ ಸೀಟ್ ಕವರ್ಗಳನ್ನು, ಶೂಗಳನ್ನು ಹಾಗೂ ರಗ್ಗಳನ್ನು ಆನ್ಲೈನ್ನಲ್ಲಿ ಮಾರಾಟ ಮಾಡಲಾಗುತ್ತಿದೆ. ಹಿಂದೂ ದೇವರುಗಳ ಭಾವಚಿತ್ರಗಳನ್ನು ಬಳಸಿಕೊಂಡು ಇತ್ತೀಚೆಗೆ…
ಪ್ರತಿಬಾರಿ ಆಲೂಗಡ್ಡೆಯನ್ನ ಬೇಯಿಸುವಾಗ ಎಲ್ಲರಲ್ಲೂ ಕಾಡುವ ಪ್ರಶ್ನೆ ಎಂದರೆ ಆಲೂಗಡ್ಡೆ ಬೇಯುವಾಗ ಒಡೆದುಹೋಗುತ್ತದೆ ಎಂಬುದು. ಆಲೂಗಡ್ಡೆ ಒಡೆದು ಅದರೊಳಗೆ ನೀರು ಸೇರಿ ಆಲೂಗಡ್ಡೆಯ ರುಚಿ ಹಾಳಾಗುತ್ತದೆ.
ಕ್ರಿಕೆಟ್ ಬಹುತೇಕರ ಕನಸು. ಆದ್ರೆ ಅಂತರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯುವುದು ಸುಲಭದ ಕೆಲಸವಲ್ಲ. ಕ್ರೀಡೆ ಗೊತ್ತಿಲ್ಲದವರಿಗೂ ಕ್ರಿಕೆಟ್ ಜಗತ್ತಿನಲ್ಲಿ ಕೆಲಸ ಸಿಗುತ್ತದೆ. ಒಳ್ಳೆ ವಿದ್ಯಾಭ್ಯಾಸ ಹೊಂದಿರುವವರು ಕ್ರಿಕೆಟ್ ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಂಡು ಲಕ್ಷಾಂತರ ರೂಪಾಯಿ ಗಳಿಕೆ ಮಾಡ್ತಿದ್ದಾರೆ. ಬ್ಯಾಟಿಂಗ್, ಬೌಲಿಂಗ್ ಮಾತ್ರವಲ್ಲ, ಮೈದಾನದಲ್ಲಿ ಹಾಗೂ ಮೈದಾನದ ಹೊರಗೆ ಕ್ರಿಕೆಟ್ ಗೆ ಸಂಬಂಧಿಸಿದ ಅನೇಕ ಕೆಲಸಗಳಿವೆ. ಪಂದ್ಯದ ತೀರ್ಪುಗಾರನಾಗಿ ನೀವು ಕೆಲಸ ಮಾಡಬಹುದು. ಪ್ರತಿ ಪಂದ್ಯಕ್ಕೆ 30 ಸಾವಿರ ರೂಪಾಯಿ ನೀಡಲಾಗುತ್ತದೆ. ಐಸಿಸಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ…
ಸಾಮಾನ್ಯವಾಗಿ ರೈತರು ಮನೆಯಲ್ಲೇ ರಾಗಿ, ಭತ್ತ ಹಾಗೆ ಇತರೆ ತರಕಾರಿಗಳನ್ನ ಬೆಳೆಯುತ್ತಾರೆ ಮತ್ತು ಮನೆಗಳಲ್ಲಿ ಕುರಿ ಮತ್ತು ಕೋಳಿಗಳನ್ನ ಸಾಕಿ ಜೀವನವನ್ನ ಮಾಡುತ್ತಾರೆ ಹಾಗೆ ಊರಿನ ಹಬ್ಬದ ಇದೆ ಕೋಳಿ ಮತ್ತು ಕುರಿಯನ್ನ ಕಡಿದು ಅಡುಗೆಯನ್ನ ಮಾಡಿ ಊಟ ಮಾಡುತ್ತಾರೆ. ಇನ್ನು ಚೀನಾ ದೇಶದಲ್ಲಿ ರೈತರು ಊರು ಹಬ್ಬದ ದಿನ ಬೇಟೆಯಾಡಿ ತಂದ ಮಾಂಸವನ್ನ ಅಡುಗೆ ಮಾಡಿ ಊರಿಗೆಲ್ಲ ಬಡಿಸುತ್ತಾರೆ, ಇನ್ನು ಇದೆ ರೀತಿಯಾಗಿ ಉಹಾನ್ ಅನ್ನುವ ರೈತ ಬೇಟೆಗಾಗಿ ಕಾಡಿಗೆ ಹೋಗಿ ಕಾಡಿನಲ್ಲಿ ಹಂದಿಯನ್ನ ಬೇಟೆಯಾಡಿ…
ಆಟವಾಡುವುದೆಂದರೆ…ಯಾವ ಮಕ್ಕಳಿಗೆ ತಾನೇ ಇಷ್ಟವಿಲ್ಲ ಹೇಳಿ.. ಒಂದು ಕಾಲದಲ್ಲಿ ಬಯಲಲ್ಲಿ ಆಟವಾಡುತ್ತಿದ್ದ ಮಕ್ಕಳು ಈಗ ನಾಲಕ್ಕು ಗೋಡೆಗಳ ಮಧ್ಯೆ, ಆನ್ ಲೈನ್ ಆಟಗಳನ್ನು ಆಡುತ್ತಿದ್ದಾರೆ. ಈಗಂತೂ ಸಂಪೂರ್ಣ ಡಿಜಿಟಲ್ ಜಮಾನ. ಎದ್ದರೂ ಕೂತರೂ ಮೊಬೈಲ್ ಕಂಪ್ಯೂಟರ್ಗಳದ್ಧೆ ಹವಾ.. ಅದರಲ್ಲೂ ಪುಟ್ಟ ಮಕ್ಕಳು ಆನ್ ಲೈನ್ ಗೇಮ್`ಗಳಿಗೆಂದರೆ ಇನ್ನಿಲ್ಲದಂತೆ ತೊಡಗಿಕೊಳ್ಳುತ್ತಿದ್ಧಾರೆ.
ಧಾರವಾಡ ಜಿಲ್ಲೆಯ ಹೊಸ ಯಲ್ಲಾಪುರದ ರೈತ ಯಲ್ಲನಗೌಡ ಪಾಟೀಲ ಮನೆಯಲ್ಲಿ ದೀಪಾವಳಿ ಪಾಡ್ಯದ ದಿನದಂದು ದೇವಿಯ ಮೂರ್ತಿಯು ಪತ್ತೆಯಾಗಿದೆ. ಜನ ಮರಳೋ ಜಾತ್ರೆ ಮರಳೋ ಎನ್ನುವ ಹಾಗೆ, ಗೋಡೆಯಲ್ಲಿ ಉದ್ಭವವಾಗಿದೆ ಎನ್ನಲಾದ ದೇವಿಯನ್ನು ನೋಡಲು ಇಡೀ ಊರಿಗೆ ಊರೇ ಸೇರುತ್ತಿದೆ. ಧಾರವಾಡ ನಗರದ ಹೊಸ ಯಲ್ಲಾಪುರದ ದುಂಡಿ ಓಣಿಯಲ್ಲಿರುವ ಯಲ್ಲನ್ನಗೌಡ ಪಾಟೀಲ ಅವರ ಮನೆಯಲ್ಲಿ ದೇವಿ ಉದ್ಭವವಾಗಿದ್ದಾಳೆ ಎಂಬ ಸುದ್ದಿ ಹರಿದಾಡಿದ್ದು, ಈ ದೃಶ್ಯವನ್ನು ನೋಡಲು ಭಕ್ತ ಸಮೂಹವೇ ಹರಿದುಬರುತ್ತಿದೆ. ಯಲ್ಲನ್ನಗೌಡ ದಂಪತಿ ದೇವಿಯ ಆರಾಧಕರಾಗಿದ್ದು, ದೀಪಾವಳಿ…