ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಪ್ಯಾರಾಚ್ಯೂಟ್ ಕೋಕೊನಟ್ ಆಯಿಲ್ ಗೊತ್ತಲ್ಲವೇ. ನಾವು ಚಿಕ್ಕಂದಿನಿಂದ ಅದನ್ನು ನಮ್ಮ ತಲೆಕೂದಲಿಗೆ ಹಚ್ಚಿಕೊಳ್ಳುತ್ತಿದ್ದೇವೆ. ಚಳಿಗಾಲದಲ್ಲಾದರೆ ಅದರಲ್ಲಿರುವ ಎಣ್ಣೆ ಗಡ್ಡೆಕಟ್ಟಿಕೊಳ್ಳುತ್ತದೆ. ಇದರಿಂದ ಅದನ್ನು ಬಿಸಿ ಮಾಡಿ ಹಚ್ಚಿಕೊಳ್ಳುತ್ತಿದ್ದೆವು.. ನೆನಪಿದೆಯೇ.

ಮಾರುಕಟ್ಟೆಗೆ ಅದೆಷ್ಟೇ ಹೊಸ ಹೇರ್ ಆಯಿಲ್ ಬಂದರೂ ಪ್ಯಾರಾಚ್ಯೂಟ್ ಆಯಿಲನ್ನು ಮಾತ್ರ ಇಂದಿಗೂ ಬಹಳಷ್ಟು ಮಂದಿ ಬಳಸುತ್ತಿದ್ದಾರೆ. ಆದರೆ ಈ ಆಯಿಲ್ ಬಗ್ಗೆ ನಿಮಗೊಂದು ಸಂಗತಿ ಗೊತ್ತಾ.? ನಿಜವಾಗಿ ನಾವು ಈ ಎಣ್ಣೆಯನ್ನು ಹೇರ್ ಆಯಿಲ್ ಆಗಿ ಬಳಸುತ್ತಿದ್ದೇವಾದರೂ, ಪ್ಯಾರಾಚ್ಯೂಟ್ ಕೋಕೊನಟ್ ಹೇರ್ ಆಯಿಲ್ ಅಲ್ಲವಂತೆ. ಹೌದು ನೀವು ಕೇಳಿದ್ದು ನಿಜ. ಅದು ಕುಕಿಂಗ್ ಆಯಿಲ್ ಅಂತೆ. ಹೌದು ಸಾಕ್ಷಾತ್ ಅದನ್ನು ತಯಾರಿಸುವ ಕಂಪೆನಿಯೇ ಆ ಮಾತು ಹೇಳುತ್ತಿದೆ.

ಪ್ಯಾರಾಚ್ಯೂಟ್ ಕೋಕನಟ್ ಹೇರ್ ಆಯಿಲ್ ಅಲ್ಲ. ಅದು ಕುಕಿಂಗ್ ಆಯಿಲ್. ಬೇಕಿದ್ದರೆ ಅದರ ಪ್ಯಾಕಿಂಗ್ ಮೇಲೆ ನೋಡಿದರೆ ಕೋಕೊನಟ್ ಆಯಿಲ್ ಎಂದಿರುತ್ತದಾದರೂ..ಹೇರ್ ಆಯಿಲ್ ಎಂದು ಇರಲ್ಲ ಅಲ್ಲವೇ. ಅಷ್ಟೇ ಅಲ್ಲ, ಆ ಆಯಿಲ್ ಕುಕಿಂಗ್ ಆಯಿಲ್ ಎಂದು ಹೇಳಿ ಅದನ್ನು ತಯಾರಿಸುವ ಕಂಪೆನಿ ವಾದಿಸುತ್ತಾ ಸರಕಾರಕ್ಕೆ ತೆರಿಗೆ ವಂಚಿಸುತ್ತಿದೆ. ಯಾಕೆಂದರೆ…ಕುಕಿಂಗ್ ಆಯಿಲ್ಸ್ ಮೇಲೆ ಅಬಕಾರಿ ಸುಂಕ ಇರಲ್ಲ. ಕಾಸ್ಮೆಟಿಕ್ಸ್‌ನ ಒಂದು ಭಾಗವಾದ ಹೇರ್ ಆಯಿಲ್ ಮೇಲೆ ಈ ಸುಂಕ ಇರುತ್ತದೆ. ಆದಕಾರಣ ಮರಿಕೋ ಎಂಬ ಕಂಪೆನಿ ಏನು ಮಾಡುತ್ತಿದೆ ಎಂದರೆ… ತನ್ನ ಪ್ಯಾರಾಚ್ಯೂಟ್ ಕೋಕೋನಟ್ ಆಯಿಲನ್ನು ಕುಕಿಂಗ್ ಆಯಿಲ್ ಎಂದು ಹೇಳುತ್ತಿದೆ.

ಈ ಸಂಬಂಧ ಸರಕಾರ ಕೋರ್ಟ್ ಮೆಟ್ಟಿಲೇರಿತು. ಮರಿಕೋ ಕಂಪೆನಿ ತಯಾರಿಸುತ್ತಿರುವ ಪ್ಯಾರಾಚ್ಯೂಟ್ ಕೋಕೊನಟ್ ಆಯಿಲ್ ಕುಕಿಂಗ್ ಆಯಿಲ್ ಅಲ್ಲ, ಹೇರ್ ಆಯಿಲ್ ಎಂದು, ಆದಕಾರಣ ಅದರ ಮೇಲೆ ತೆರಿಗೆ ವಿಧಿಸುವಂತೆ ಕ್ರಮ ಕೈಗೊಳ್ಳಬೇಕೆಂದು ಕೋರ್ಟನ್ನು ಸರಕಾರ ಕೋರಿದೆ. ಆದರೆ ಕೋರ್ಟ್ ಇದಕ್ಕೆ ವಿವರಣೆ ಕೇಳಿದರೆ ಸದರಿ ಮರಿಕೋ ಕಂಪೆನಿ ತನ್ನ ವಾದವನ್ನು ಮಂಡಿಸಿತು. ತಾವು ತಯಾರಿಸುತ್ತಿರುವ ಪ್ಯಾರಾಚ್ಯೂಟ್ ಆಯಿಲ್ ಕುಕಿಂಗ್ ಆಯಿಲ್ ಎಂದು, ಹೇರ್ ಆಯಿಲ್ ಅಲ್ಲವೆಂದು, ಅದರ ಮೇಲೆ ಎಲ್ಲೂ ಹೇರ್ ಆಯಿಲ್ ಎಂದು ಬರೆದಿಲ್ಲವೆಂದು, ಬೇಕಿದ್ದರೆ ಪರಿಶೀಲಿಸಬಹುದೆಂದು ವಾದಿಸಿತು.

ಆದರೆ 200 ಎಂಎಲ್‍ಗಿಂತಲೂ ಕಡಿಮೆ ಪ್ರಮಾಣದಲ್ಲಿ ಪ್ಯಾಕ್ ಶಾಚೆಗಳನ್ನು ಯಾಕೆ ಕೊಡುತ್ತಿದ್ದೀರಿ ಎಂದು ಕೇಂದ್ರ ಕೇಳಿದ್ದಕ್ಕೆ, ಅದಕ್ಕೆ ಮರಿಕೋ ಪ್ರತಿಕ್ರಿಯಿಸುತ್ತಾ, ಆ ರೀತಿಯ ಶಾಚೆಗಳು ಬಡ, ಮಧ್ಯಮ ವರ್ಗದ, ವಿದ್ಯಾರ್ಥಿಗಳನ್ನು ಉದ್ದೇಶಿಸಿ ತಯಾರಿಸಿದೇವೆಂದು, ಅವರು ಆಯಿಲನ್ನು ಅಡುಗೆಗೆ ಕಡಿಮೆ ಪ್ರಮಾಣದಲ್ಲಿ ಬಳಸುತ್ತಾರೆಂದು, ಹಾಗಾಗಿ ದೊಡ್ಡ ಪ್ಯಾಕೆಟ್ ಅಗತ್ಯವಿಲ್ಲವೆಂದು, ಚಿಕ್ಕ ಪ್ಯಾಕೆಟ್ ಸಾಕೆಂದು ಹಾಗಾಗಿ ಅವನ್ನು ಬಳಸುತ್ತಿದ್ದೇವೆಂದು ಮರಿಕೋ ವಾದಿಸಿತು.

ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಪೂಜೆಯಲ್ಲಿ ದೀಪ, ಧೂಪದ ಜೊತೆ ಅಡಿಕೆಗೂ ಮಹತ್ವದ ಸ್ಥಾನವಿದೆ. ಸಣ್ಣ ಅಡಿಕೆ ದೊಡ್ಡ ಖುಷಿಗೆ ಕಾರಣವಾಗಬಹುದು. ವಾಸ್ತು ಶಾಸ್ತ್ರದ ಪ್ರಕಾರ ಪೂಜೆ ಮಾಡಿದ್ದ ಅಡಿಕೆ ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಸುಖ-ಶಾಂತಿ ಜೊತೆಗೆ ಆರ್ಥಿಕ ಸಮಸ್ಯೆಗೆ ಪರಿಹಾರ ನೀಡುತ್ತದೆ.
ಡ್ಯಾಡಿ, ನೀನು ನಿನ್ನ ಬಳಿ ಹಣ ಇಲ್ಲ ಅಂತ ಹೇಳ್ತೀಯ. ಆದ್ರೆ ನಮ್ಮ ಬಳಿ ಈ ಮನೆನಾದ್ರೂ ಇದೆ. ಪ್ಲೀಸ್ ಈ ಮನೆಯನ್ನ ಮಾರಿ ನನ್ನ ಚಿಕಿತ್ಸೆಗೆ ಹಣ್ಣ ಕಟ್ಟಿ ಡ್ಯಾಡಿ. ಇಲ್ಲ ಅಂದ್ರೆ ನಾನು ಹೆಚ್ಚು ದಿನ ಬದುಕಲ್ಲ ಅಂತ ಹೇಳಿದ್ದಾರೆ. ಪ್ಲೀಸ್ ಏನಾದ್ರೂ ಮಾಡಿ ನನ್ನ ಉಳಿಸ್ಕೋ ಡ್ಯಾಡಿ….. ಹೀಗಂತ 13 ವರ್ಷದ ಹೆಣ್ಣುಮಗಳೊಬ್ಬಳು ತನ್ನ ಕ್ಯಾನ್ಸರ್ ಚಿತ್ಸೆಗಾಗಿ ಹಣ ಕೊಡಿ ಅಂತ ಅಪ್ಪನನ್ನ ಬೇಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮತ್ತೊಂದು ವಿಪರ್ಯಾಸವೆಂದರೆ ಮೇ 14ರಂದು ಈ ಬಾಲಕಿ ಸಾವನ್ನಪ್ಪಿದ್ದಾಳೆ.
ದಿನೇ ದಿನೆ ರಾಜ್ಯ ರಾಜಕಾರಣ ಕುತೂಹಲ ಕೆರೆಳಿಸುತ್ತಿದೆ. ಈ ಹಿನ್ನೆಲೆಯಲ್ಲಿ ದೇವೇಗೌಡ ರವರ ಕಿರಿಯ ಪುತ್ರ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದ್ದಾರೆ
ಯಶಸ್ಸಿಗೆ ಯಾವುದೇ ಅಡ್ಡದಾರಿಗಳು ಇರುವುದಿಲ್ಲ. ಆದರೆ ಕೆಲ ಹವ್ಯಾಸಗಳನ್ನು ಅನುಸರಿಸಿದರೆ ಅವು ಸ್ವಯಂ ನಿರ್ಮಿತಕೋಟ್ಯಾಧಿಪತಿ ಆಗುವಂತೆ ಉತ್ತೇಜನ ಹಾಗೂ ಪ್ರೇರೆಪಣೆ ನೀಡಬಲ್ಲವು ಎಂಬುದರಲ್ಲಿ ಸಂಶಯವಿಲ್ಲ. ಟಾಟಾ, ಅಂಬಾನಿ, ನಾರಾಯಣಮೂರ್ತಿ, ಬಿಲ್ ಗೇಟ್ಸ್ ಹೀಗೆ ಹಲವರ ಜೀವನಶೈಲಿ ನಮ್ಮನ್ನು ಸ್ಪೂರ್ತಿ ನೀಡಬಲ್ಲದು.
ಒಂದು ರಾತ್ರಿ ಕಾಂಪ್ರಮೈಸ್ ಮಾಡಿಕೋ ಎಂದು ಹೇಳಿದ ನಿರ್ಮಾಪಕನಿಗೆ ಮರಾಠಿ ಚಿತ್ರದ ನಟಿ ಶ್ರುತಿ ಮರಾಠೆ ಜಾಣತನದ ಉತ್ತರ ನೀಡಿದ್ದು, ಈಗ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಹ್ಯುಮನ್ಸ್ ಆಫ್ ಮುಂಬೈ ಬಗ್ಗೆ ಮಾತನಾಡಿದ ನಟಿ ಶ್ರುತಿ, ಚಿತ್ರಕ್ಕೆ ಆಡಿಶನ್ ಮಾಡುವಾಗ ಆದಂತಹ ಕಾಸ್ಟಿಂಗ್ ಕೌಚ್ ಬಗ್ಗೆ ಹೇಳಿಕೊಂಡಿದ್ದಾರೆ. ನಿರ್ಮಾಪಕ ಮಾಡಿದ ಇಂಟರ್ ವ್ಯೂವ್ ನಲ್ಲಿ ಶ್ರುತಿ ಭಾಗವಹಿಸಿದ್ದರು. ಈ ವೇಳೆ ನಿರ್ಮಾಪಕ, “ಕಾಂಪ್ರಮೈಸ್”, ಹಾಗೂ “ಒಂದು ರಾತ್ರಿ” ಎಂಬ ಪದಗಳನ್ನು ಬಳಸಲು ಶುರು ಮಾಡಿದ್ದರು. ನಿರ್ಮಾಪಕನ ಮಾತನ್ನು…
ರಿಲಾಯನ್ಸ್ ಮಾಲೀಕತ್ವದ ಜಿಯೋ ದೇಶದ ಟೆಲಿಕಾಂ ಮಾರುಕಟ್ಟೆಯಲ್ಲಿ ಕೇವಲ ಡೇಟಾ-ಉಚಿತ ಕರೆಗಳ ಸೇವೆಯನ್ನು ನೀಡುವ ಮೂಲಕ ಗ್ರಾಹಕರನ್ನು ಸೆಳೆಯಲಿಲ್ಲ. ಇದರ ಬದಲಿಗೆ ಹೊಸ ಮಾದರಿಯ ಆಪ್ ಸೇವೆಗಳನ್ನು ನೀಡುವ ಮೂಲಕ ಹೊಸ ಹಾದಿಯನ್ನು ಟೆಲಿಕಾಂ ಕಂಪನಿಗಳಿಗೆ ತೋರಿಸಿಕೊಟ್ಟಿತ್ತು.