ಸುದ್ದಿ

ದೊಡ್ಡಗೌಡರ ಎದುರೆ ಕುರ್ಚಿಗಾಗಿ ಕಚ್ಚಾಟ..!

152

ಮೈತ್ರಿಯಲ್ಲಿ ಸಚಿವ ಸಂಪುಟ ವಿಸ್ತರಣೆ ವಿಷಯದ ಬೆನ್ನೆಲ್ಲೇ ಇದೀಗ ನಿಗಮ ಮಂಡಳಿಗಾಗಿ ಫೈಟ್ ಶುರುವಾಗಿದೆ. ಖಾಲಿ ಇರುವ ನಿಗಮ ಮಂಡಳಿಗಾಗಿ ತೆನೆ ಕಾರ್ಯಕರ್ತರಲ್ಲಿ ಮತ್ತೊಂದು ಹಂತದ ಕುಸ್ತಿ ಶುರುವಾಗಿದೆ.

ಏನೋ ಮಾಡೋಕೆ ಹೋಗಿ ಇನ್ನೇನೋ ಆಯ್ತು ಅಂತಾರಲ್ಲ ಇದಕ್ಕೇ ಅನ್ಸತ್ತೆ. ಮೈತ್ರಿ ಸರ್ಕಾರ ಉಳಿಸಿಕೊಳ್ಳೋಕೆ ಬರೀ ಶಾಸಕರಿಗಷ್ಟೇ ನಿಗಮ ಮಂಡಳಿ ಸ್ಥಾನ ಕರುಣಿಸಿದ್ದ ದಳಪತಿಗಳಿಗೆ ಹೊಸ ಸಂಕಷ್ಟ ಶುರುವಾಗಿದೆ. ಜೆಡಿಎಸ್​ ವರಿಷ್ಠರ ನಡೆಗೆ ಹತ್ತಾರು ವರ್ಷ ಪಕ್ಷಕ್ಕಾಗಿ ದುಡಿದ ತೆನೆ ಕಾರ್ಯಕರ್ತರು ಕೆಂಡಾಮಂಡಲರಾಗಿದ್ದಾರೆ. ದೇವೇಗೌಡರ ಎದುರೇ ಪಟ್ಟಕ್ಕಾಗಿ ಪಟ್ಟು ಹಿಡಿದಿದ್ದಾರೆ.

ಮೂರ್ನಾಲ್ಕು ದಿನದಿಂದ ಮೇಲಿಂದ ಮೇಲೆ ಸಭೆ ನಡೆಸ್ತಿರೋ ಹೆಚ್​ಡಿ ದೇವೇಗೌಡರು ಪಕ್ಷ ಸಂಘಟನೆಗೆ ಇನ್ನಿಲ್ಲ ಇಂಪಾರ್ಟೆನ್ಸ್​ ಕೊಡ್ತಿದ್ದಾರೆ. ಇಂದೂ ಸಹ ಜೆಪಿ ಭವನದಲ್ಲಿ ಬೆಂಗಳೂರು ನಗರದ ಪದಾಧಿಕಾರಿಗಳ ಜೊತೆ ಸಭೆ ಹಮ್ಮಿಕೊಂಡಿದ್ರು. ಈ ವೇಳೆ ಪಕ್ಷಸಂಘಟನೆಬಗ್ಗೆ ಮಾತಅಡಿದ್ದಕ್ಕಿಂತ ನಿಗಮ ಮಂಡಳಿ ವಿಷ್ಯವೇ ಹೆಚ್ಚು ಸದ್ದು ಮಾಡ್ತು. ದೇವೇಗೌಡ ವಿರುದ್ಧ ಫುಲ್​ ಗರಂ ಆಗಿದ್ದ ಕಾರ್ಯಕರ್ತರು ಪಕ್ಷ ಅಧಿಕಾರಕ್ಕೆ ಬಂದು ಒಂದು ವರ್ಷ ಆಗ್ತಿದೆ. ಆದರೆ, ಬರೀ ಶಾಸಕರಿಗಷ್ಟೇ ಸ್ಥಾನ ಮಾನ ನೀಡಲಾಗಿದೆ. ಹೀಗೇ ಆದರೆ, ಪಕ್ಷಕ್ಕಾಗಿ ದುಡಿದ ನಾವು ಎಲ್ಲಿಗೆ ಹೋಗ್ಬೇಕು. ನಮಗೂ ನಿಗಮ ಮಂಡಳಿ ಸ್ಥಾನ ನೀಡಿ ಅಂತಾ ಏರು ಧ್ವನಿಯಲ್ಲೇ ಆಕ್ರೋಶ ಹೊರಹಾಕಿದರು.

ಯಾವಾಗ ನಿಗಮ ಮಂಡಳಿ ಗದ್ದಲ ಮುಗಿಯೋ ಹಾಗೆ ಕಾಣ್ಲಿಲ್ವೋ ಮಧ್ಯಪ್ರವೇಶಿಸಿದ ಶಾಸಕ ಗೋಪಾಲಯ್ಯ ಎಲ್ರನ್ನೂ ಸಮಾಧಾನ ಪಡಿಸೋ ಪ್ರಯತ್ನ ಮಾಡಿದ್ರು. ಅದ್ರೆ, ಕಾರ್ಯಕರ್ತರು ಕೇಳ್ಬೇಕಲ್ಲ, ನಿಗಮ ಮಂಡಳಿ ಸ್ಥಾನ ನಮಗೂ ಕೊಡ್ಲೇ ಬೇಕು ಅನ್ನೋ ಕೂಗೂ ಮತ್ತೆ ಜೋರು ಮಾಡಿದರುಅನಿವಾರ್ಯವಾಗಿ ಸಭೆಯನ್ನು ಮೊಟುಕು ಗೊಳಿಸಿದ ಹೆಚ್​ಡಿಡಿ ಸಭೆಯಿಂದ ಅರ್ಧಕ್ಕೆ ಎದ್ದು ನಡೆದ್ರು. ಇಷ್ಟಕ್ಕೂ ಸುಮ್ಮನಾದ ಕಾರ್ಯಕರ್ತರು ರಾಜ್ಯಸಭಾಸದಸ್ಯ ಕುಪೇಂದ್ರರೆಡ್ಡಿಯನ್ನು ಅಡ್ಡ ಗಟ್ಟಿದ ಕಾರ್ಯಕರ್ತರು ಅಲ್ಲೋ ಪಟ್ಟಕ್ಕಾಗಿ ಪಟ್ಟು ಹಿಡಿದರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ