ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಮ್ಮ ಮನಸ್ಸಿನ ನೆಮ್ಮದಿಗಾಗಿ, ನಮ್ಮ ಕೋರಿಕೆಗಳನ್ನು ಈಡೇರಿಸಕೊಳ್ಳುವ ಸಲುವಾಗಿ ನಾವು ದೇವಸ್ಥಾನಕ್ಕೆ ಹೋಗುತ್ತೇವೆ.ಆದರೆ ನಾವು ದೇವಾಲಯ ಪ್ರವೇಶ ಮಾಡುವ ಸಂದರ್ಭದಲ್ಲಿ ಹಾಗೂ ದೇವಾಲಯದಲ್ಲಿ ನಮಗೆ ಗೊತ್ತಿದ್ದೂ/ ಗೊತ್ತಿಲ್ಲದಿದೆಯೋ ಮಾಡುತ್ತಿದ್ದೇವೆ..
ಸುದರ್ಶನ್ ಆಚಾರ್ಯ : ಆಧ್ಯಾತ್ಮಿಕ ಚಿಂತಕರು ಹಾಗೂ ದೈವಜ್ಞ ಜ್ಯೋತಿಷ್ಯರು ನಿಮ್ಮ ಜೀವನದ ನಿಮ್ಮ ಜೀವನದ ನಿಖರವಾದ ಭವಿಷ್ಯ ತಿಳಿಸುತ್ತಾರೆ ಹಾಗೂ ಸಮಸ್ಯೆಗಳಾದ ಮದುವೆ ದಾಂಪತ್ಯ ಪ್ರೀತಿ ಪ್ರೇಮ ಕುಟುಂಬ ವಿದ್ಯೆ ಉದ್ಯೋಗ ಮಕ್ಕಳು ಮುಂತಾದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಕರೆ ಮಾಡಿ ಅಥವಾ ಇ-ಸಂದೇಶ ಕಳಿಸಿ 9663542672
೧. ಭಗವಂತನ ಮಂದಿರಕ್ಕೆ ಕೈಕಾಲು ತೊಳೆಯದೇ ಪ್ರವೇಶ ಮಾಡುವುದು.
೨.ಭಗವಂತನ ಮಂದಿರಕ್ಕೆ ಸಾಕ್ಸ್ ಹಾಕಿಕೊಂಡು ಪ್ರವೇಶ ಮಾಡುವುದು.
೩.ಭಗವಂತನ ಮಂದಿರಕ್ಕೆ ಪ್ರವೇಶಮಾಡುವಾಗ ಶೂ,ಸಾಕ್ಸ್ ಕೈಯಿಂದ ತೆಗೆದು,ಕೈ ತೊಳೆಯದೇ ಪ್ರವೇಶ ಮಾಡುವುದು.
೪. ಮಂದಿರಕ್ಕೆ ಸಿಗರೇಟು,ಬೀಡಾ,ಸರಾಯಿ,ಮಾಂಸ ಸೇವಿಸಿ ಪ್ರವೇಶಿಸುವದು.
೫.ಭಗವಂತನ ಮಂದಿರಕ್ಕೆ ಚರ್ಮದ ಬೆಲ್ಟ್,ಚಪ್ಪಲಿ,ಕೈ ಚೀಲ ಧರಿಸಿ ಕೊಂಡು ಹೋಗುವುದು.
೬.ಭಗವಂತನ ಎದುರು ಸನ್ಮಾನ ಮಾಡಿಸಿಕೊಳ್ಳುವುದು.
೭.ಭಗವಂತನಿಗೆ ಕೆಟ್ಟ/ಕೊಳೆತ/ಒಣಗಿದ ಹಣ್ಣುಗಳನ್ನು ಅರ್ಪಿಸುವುದು.
೮.ಭಗವಂತನ ಮಂದಿರದಲ್ಲಿ ಭಕ್ತರಿಂದ ಹಣ ಪಡೆದು ಕಳಪೆ/ಕಡಿಮೆ ಗುಣ ಮಟ್ಟದ ಪೂಜಾ ಸಾಮಗ್ರಿಗಳನ್ನು ದೇವರಿಗೆ ಅರ್ಪಿಸುವುದು.
೯.ದೇವಾಲಯದ ಹೊಸ್ತಿಲು,ಕಿಟಕಿಗಳಲ್ಲಿ ಕರ್ಪೂರ ಹಚ್ಚುವುದು.
೧೦.ದೇವಾಲಯಕ್ಕೆ ಅರ್ಪಿಸಿದ ಸಾಮಾಗ್ರಿಗಳನ್ನು ಅಂಗಡಿಗಳಿಗೆ ಮಾರಿ ಮತ್ತೆ ಅದೇ ಸಾಮಾಗ್ರಿಗಳನ್ನು ಬೇರೆ ಭಕ್ತರ ಮೂಲಕ ದೇವರಿಗೆ ಅರ್ಪಿಸುವುದು.
೧೧.ದೇವಾಲಯದ ಆಸ್ತಿಗಳನ್ನು ಪರಭಾರೆ ಮಾಡುವುದು.ದೇವರ ಹುಂಡಿ,ಕಾಣಿಕೆ ಹಣ ದುರುಪಯೋಗ ಮಾಡುವುದು.
೧೨.ದೇವರಿಗೆ ಸಂಭಂದಿಸಿದ ಉತ್ಸವ, ರಥಯಾತ್ರೆಗಳಲ್ಲಿ ಭಾಗವಹಿಸದಿರುವುದು ಮತ್ತು ಅವುಗಳ ದರ್ಶನ ಪಡೆಯದಿರುವುದು..
೧೩.ಭಗವಂತನ ಸಮ್ಮುಖ ಹೋಗಿ ದೇವರ ದರ್ಶನ ಪಡೆಯದಿರುವುದು.
೧೪. ಒಂದೇ ಹಸ್ತದಿಂದ ನಮಸ್ಕರಿಸುವುದು.
೧೫. ಭಗವಂತನ ಸಮ್ಮುಖ ದಲ್ಲಿ ನಿಂತಂತೆಯೇ ಪ್ರದಕ್ಷಿಣೆ ಮಾಡುವುದು. , ನೆಲಕ್ಕೆ ಬಾಗಿ ನಮಸ್ಕಾರ ಮಾಡದೇ ಇರುವುದು.
೧೬. ದೇವಾಲಯಕ್ಕೆ ಪ್ರದಕ್ಷಿಣೇ ಬರದೇ ಇರುವುದು..
೧೭. ಭಗವಂತನ ಎದುರು ಕಾಲುಚಾಚಿ ಕುಳಿತುಕೊಳ್ಳುವುದು ಮತ್ತು ಕುರ್ಚಿ , ಆಸನಗಳ ಮೇಲೆ ಕುಳಿತುಕೊಳ್ಳುವುದು..
೧೮. ಭಗವಂತನ ಸಮ್ಮುಖ ಭೋಜನ ಮಾಡುವುದು..
೧೯. ದೇವಾಲಯದಲ್ಲಿ ಅಸತ್ಯ ನುಡಿಯುವುದು ಮತ್ತು ಅನಗತ್ಯ ವಿಚಾರ ಮಾತಾಡುವುದು..
೨೦. ದೇವಾಲಯದಲ್ಲಿ ಜೋರಾಗಿ ಮಾತಾಡೋದು , ಅಪಭ್ರಂಶ ಮಾತನಾಡುವುದು..
೨೧. ದೇವಾಲಯದಲ್ಲಿ ಬೇರೆಯವರಿಗೆ ಕೆಡುಕನ್ನು ಬಯಸುವುದು..
೨೨.ವಸ್ತುಗಳನ್ನು ದೇವಾಲಯಕ್ಕೆ ಕೊಟ್ಟು , ದಾನಿಗಳು ಅಂತ ತಮ್ಮ ಹೆಸರು ಹಾಕಿಸಿಕೊಳ್ಳುವುದು..
೨೩. ಭಗವಂತನ ಸಮ್ಮುಖ ಆಕಳಿಸುವುದು ಮತ್ತು ಅಧೋವಾಯುವನ್ನು ತ್ಯಜಿಸುವುದು..
೨೪. ತುಂಬಾ ಸಾಮರ್ಥ್ಯವಿದ್ದರೂ ಯಾವುದೇ ಸೇವೆ ಮಾಡದೇ ಇರುವುದು..
೨೫. ಯಾವ ಋತುವಿನ ಫಲವೇ ಆಗಲಿ ದೇವರಿಗೆ ಅರ್ಪಿಸದೇ ಸೇವಿಸುವುದು..
೨೬. ಭಗವಂತನ ಸಮ್ಮುಖ ದೇವರಿಗೆ ನಮಸ್ಕರಿಸದೇ ಅನ್ಯರಿಗೇ ನಮಸ್ಕರಿಸುವುದು..
೨೭. ನಿಮ್ಮನ್ನು ನೀವೇ ಪ್ರಶಂಸೆ ಮಾಡಿಕೊಳ್ಳುವುದು..
೨೮. ದೇವರ ಪ್ರಸಾದ ಸ್ವೀಕರಿಸದೇ ಬರುವುದು.
೨೯. ಯಾವುದೇ ದೇವರನ್ನು ನಿಂದಿಸುವುದು..
೩೦. ಭಗವಂತನ ವಿಗ್ರಹಕ್ಕೆ ಬೆನ್ನುತೋರಿಸಿ ಕೂಡುವುದು..
೩೧. ಗುರುಗಳ ಸ್ಮರಣೆ ಮಾಡದೇ ಇರುವುದು..
೩೨. ಅಶೌಚವಿದ್ದಾಗ ದೇವಾಲಯ ಪ್ರವೇಶ ಮಾಡುವುದು..
೩೩.ದೇವಾಲಯದಲ್ಲಿ ಕಣ್ಣು,ಕಿವಿ,ಮೂಗುಗಳಲ್ಲಿ ಬೆರಳು ಹಾಕಿ ಕಸ ತೆಗೆಯುವುದು.
೩೪.ದೇವಾಲಯದಲ್ಲಿ ಉಗುರು ಕಡಿಯುವುದು,ಕತ್ತರಿಸುವುದು.
೩೫.ದೇವಾಲಯದಲ್ಲಿ ನೀಡಿದ ಪ್ರಸಾದ ರೂಪದ ಹಣ್ಣು,ಕಾಯಿ,ಹೂವು,ಇತ್ಯಾದಿಗಳನ್ನು ಅಲ್ಲಿಯೇ ದೊಡ್ಡಸ್ತಿಕೆಯಿಂದ ಬೇರೆಯವರಿಗೆ,ಬಿಕ್ಷುಕರಿಗೆ ನೀಡುವುದು.
೩೬.ದೇವಾಲಯದ ಹೊರಗೆ ಕುಳಿತಿರುವ ಬಿಕ್ಷುಕರಿಗೆ ಬಿಕ್ಷೆ ನೀಡಿ ಬಿಕ್ಷಾವೃತ್ತಿಯನ್ನು ಉತ್ತೇಜಿಸುವುದು.
೩೭.ದೇವಾಲಯದ ದರ್ಶನದ ಅವಧಿ ಮುಗಿದಿದ್ದರೂ ಬಾಗಿಲು ತೆರೆಸಿ ದರ್ಶನ ಪಡೆಯುವುದು.
೩೮.ದೇವಾಲಯದ/ಧಾರ್ಮಿಕ ಸಂಸ್ಥೆಗಳ ಅಭಿವೃಧ್ದಿ ಕಾರ್ಯಗಳಿಗೆ ಅಡ್ಡಿ ಬರುವುದು.
೩೯.ದೇವರ ಸನ್ನಿಧಾನದಲ್ಲಿ ಪೂಜೆಗಳು ನಡೆಯುವಾಗ ಮುಂದಿನ ಸ್ಥಾನಗಳನ್ನು ಆಕ್ರಮಿಸಿ ಬೇರೆ ಭಕ್ತಾದಿಗಳಿಗೆ ದರ್ಶನಕ್ಕೆ ಅಡ್ಡಿಪಡಿಸುವುದು.
೪೦.ದೇವಾಲಯದ ಗರ್ಭಗುಡಿಯ ಮೂರ್ತಿಗಳನ್ನು ಮಡಿ ಉಡದೆ ಮುಟ್ಟುವುದು/ ಅದಕ್ಕೆ ಅವಕಾಶ ಮಾಡಿ ಕೊಡುವುದು.
೪೧.ದೇವಾಲಯದ ಗರ್ಭಗುಡಿ ಬಾಗಿಲು ಹಾಕುವಾಗ ನಂದಾ ದೀಪ ಆರಿಸಿ ಎಣ್ಣೆ ಉಳಿಸುವುದು.
೪೨.ದೇವರಿಗೆ ಅರ್ಪಿಸುವ ಮೊದಲು ಹೂವು.ಹಣ್ಣು,ಊದು ಬತ್ತಿಗಳನ್ನು ಆಘ್ರಾಣಿಸುವುದು(ಮೂಸಿ ನೋಡುವುದು).
೪೩.ದೇವಾಲಯದ ಆಸ್ತಿಗಳನ್ನು ಮಾರುಕಟ್ಟೆ ಬೆಲೆಗಿಂತ ಕಡಿಮೆ ಬಾಡಿಗೆಗೆ ಪಡೆಯುವುದು/ಕೊಡುವುದು.ಕಡಿಮೆ ಬಾಡಿಗೆಗೆ ಪಡೆದು ಹೆಚ್ಚನ ಬಾಡಿಗೆಗೆ ಬೇರೆಯವರಿಗೆ ನೀಡುವುದು.
೪೪.ದೇವಾಲಯದ ಆಸ್ತಿಗಳ ಮೇಲೆ ಹಕ್ಕು ಸಾಧಿಸುವುದು.
೪೫.ದೇವರ ಆಭರಣ ದುರುಪಯೋಗ ಮಾಡಿಕೊಳ್ಳುವುದು.**ಇತ್ಯಾದಿ
ನಮಗೆ ಗೊತ್ತಿದ್ದೂ/ ಗೊತ್ತಿಲ್ಲದಿದೆಯೋ ಮಾಡುತ್ತಿದ್ದೇವೆ..
ಈ ಅಂಶಗಳನ್ನು ಎಚ್ಚರಿಕೆಯಾಗಿ ದೇವಾಲಯಗಳಲ್ಲಿ ಪ್ರಚಾರ ಮಾಡಿ ದಯವಿಟ್ಡು ನಮ್ಮ ಸಂಸ್ಕೃತಿಯನ್ನು ಉಳಿಸಿರಿ..
ಕೃಪೆ: ಸುದರ್ಶನ್ ಆಚಾರ್ಯ
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ರಾಜಸ್ಥಾನದ ರಾಜ್ಸಮಂಡ್ ಜಿಲ್ಲಾ ಕೇಂದ್ರದಿಂದ 12 ಕಿ.ಮೀ. ದೂರದಲ್ಲಿರುವ ಪಿಪ್ಲಾಂತ್ರಿ ಗ್ರಾಮದಲ್ಲಿ ಪ್ರತಿ ದಿನವೂ ಮಹಿಳಾ ದಿನ; ಪ್ರತಿ ದಿನವೂ ಪರಿಸರ ದಿನ. ಹೆಣ್ಣು ಮಗು ಜನಿಸಿದರೆ ಹಬ್ಬದ ವಾತಾವರಣ. 111 ಗಿಡ ನೆಡುವ ಮೂಲಕ ಸಂಭ್ರಮಾಚರಣೆ. ವ್ಯಕ್ತಿಯೊಬ್ಬರು ನಿಧನರಾದಾಗ 11 ಮರ ಬೆಳೆಸುವುದರೊಂದಿಗೆ ಗೌರವ ನಮನ. ದಶಕದಿಂದಲೂ ಈ ಪರಿಪಾಠ ಹೀಗಾಗಿ ಅಲ್ಲಿನ ಬೋಳು ಗುಡ್ಡಬೆಟ್ಟಗಳಲ್ಲಿ ಹಸಿರು ಹಬ್ಬಿ ಅದೀಗ ಆ ರಾಜ್ಯದ ಓಯಸಿಸ್. ಪಿಪ್ಲಾಂತ್ರಿಯ ಸ್ವರಾಜ್ಯ-ಸುಸ್ಥಿರ ಅಭಿವೃದ್ಧಿ ಮಾದರಿ ಇತರೆಡೆಗಳಿಗೂ ಸ್ಫೂರ್ತಿ. ಈ ಯಶೋಗಾಥೆಯ…
ಸಾವಿರಾರು ಕೋಟಿ ಹಣ ಗಳಿಕೆಯ ಜೊತೆ ವಿಶ್ವದಾದ್ಯಂತ ಅದ್ಭುತ ಯಶಸ್ಸು ಗಳಿಸಿದ ಬಾಹುಬಲಿ-2 ಚಿತ್ರದ ನಿರ್ದೆಶಕ ಎಸ್.ಎಸ್.ರಾಜಮೌಳಿ ತಮ್ಮ ಮುಂದಿನ ಚಿತ್ರಕ್ಕೆ ಸ್ಯಾಂಡಲ್’ವುಡ್ ಪವರ್ ಸ್ಟಾರ್ ಪುನೀತ್ ರಾಜ್’ಕುಮಾರ್ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿಕೊಳ್ಳಲಿದ್ದಾರೆ ಎಂಬ ಸುದ್ದಿ ಎಲ್ಲಡೆ ಹರಿದಾಡುತ್ತಿದೆ.
ಮೈಸೂರು ಅರಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಮಹಾರಾಣಿ ತ್ರಿಶಿಕಾ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡುವ ಮೂಲಕ ಯದುವಂಶಕ್ಕೆ ವಾರಸುದಾರನನ್ನು ನೀಡಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಮೈಸೂರಿನ ಅರಮನೆಯಲ್ಲಿ ಸಂಭ್ರಮ-ಸಡಗರ ಮನೆಮಾಡಿದೆ.
ಜೀವನದಲ್ಲಿ ಎಲ್ಲರೂ ತಮಗೆ ಸ್ವಂತ ಮನೆಯನ್ನು ಕಟ್ಟಿಕೊಳ್ಳಬೇಕು ಎಂಬ ಆಸೆ ಎಲ್ಲರಲ್ಲಿಯೂ ಇದ್ದೆ ಇರುತ್ತೆ. ಹಾಗಾಗಿ ಮನೆ ಹೀಗಿರಬೇಕು, ಪೀಠೋಪಕರಣಗಳು ಮಾದರಿ, ಮನೆಯ ವಿನ್ಯಾಸ ಸೇರಿದಂತೆ ಪ್ರತಿಯೊಂದರಲ್ಲಿ ಸೂಕ್ತವಾದದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ತಮ್ಮ ಬಜೆಟ್ ಅನುಗುಣವಾಗಿ ಮನೆಯನ್ನು ಸುಂದರಗೊಳಿಸುವ ಖರೀದಿಸಲು ಬ್ಲೂಪ್ರಿಂಟ್ ಸಿದ್ಧಮಾಡಿಕೊಂಡಿರುತ್ತಾರೆ. ಆದರೆ ಅಮೆರಿಕದ ವಿಲ್ ಬ್ರೆಕ್ಸ್ ಎಂಬವರು 11 ಶಿಪ್ ಕಂಟೇನರ್ ಗಳಲ್ಲಿ ಮನೆ ಕಟ್ಟಿ ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾರೆ. ವಿಲ್ ಬ್ರೆಕ್ಸ್ ಹಣದ ಅಡಚಣೆಯಿಂದಾಗಿ ಕಂಟೇನರ್ ಗಳ ಮೂಲಕ ಮನೆ ಕಟ್ಟಲು ನಿರ್ಧರಿಸದ್ದರು….
ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಮದೋರಾ ಗ್ರಾಮದ ಪಂಚಾಯಿತಿ ವಿವಾದಾತ್ಮಕ ತೀರ್ಮಾನ ಕೈಗೊಂಡಿದೆ. ಗ್ರಾಮದ ಹುಡುಗಿಯರು ಮೊಬೈಲ್ ನಲ್ಲಿ ಮಾತನಾಡುವುದು ಕಂಡು ಬಂದರೆ ಅವರಿಗೆ ೨೧ ಸಾವಿರ ರೂ. ದಂಡ ವಿಧಿಸಲಾಗುವುದೆಂದು ಎಚ್ಚರಿಸಿದೆ.
ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳನ್ನು ಪೆಟ್ಟಿಗೆಯಲ್ಲಿಟ್ಟು ಉಸಿರುಗಟ್ಟಿಸಿ ಕೊಲೆ ಮಾಡಿದ ಅಮಾನವೀಯ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಭದೋಹಿಯ ಖಮಾರಿಯಾ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಹಥೇನ್ (6) ಮತ್ತು ಸಹೋದರ ಹಸನ್ (3) ಮೃತ ಬಾಲಕರು. ತಾಯಿ ಮಾನಸಿಕ ಅಸ್ವಸ್ಥೆಯಾಗಿದ್ದರಿಂದ ದುರ್ಘಟನೆ ನಡೆದಿದೆ ಎಂದು ವರದಿಯಾಗಿದೆ. ಮೃತ ಬಾಲಕರ ತಂದೆ ಮಾಲು ಅನ್ಸಾರಿ ಖಮರಿಯಾದ ಕಾರ್ಪೆಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಗುರುವಾರ ರಾತ್ರಿ ಕೆಲಸ ಮುಗಿಸಿಕೊಂಡು ಮನೆಗೆ ಬಂದು ಮಕ್ಕಳನ್ನು ನೋಡಿದ್ದಾರೆ. ಆದರೆ ಮಕ್ಕಳು…