ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬಹಳಷ್ಟು ಮಂದಿ ನಿತ್ಯ ದೇವಸ್ಥಾನಕ್ಕೆ ಹೋಗುತ್ತಿರುತ್ತಾರೆ.ದೇವಸ್ಥಾನಕ್ಕೆ ಹೋದಾಗ ದೇವರಿಗೆ ಮಂಗಳಾರತಿ ಮಾಡುವ ಸಮಯದಲ್ಲಿ ಸಾಮಾನ್ಯವಾಗಿ ಎಲ್ಲರೂ ಘಂಟೆ ಬಾರಿಸುತ್ತಾರೆ.ಅದರಲ್ಲೂ ಚಿಕ್ಕಮಕ್ಕಳಿಗಂತೂ ಘಂಟೆ ಬಾರಿಸುವುದರಲ್ಲಿ ಎತ್ತಿದ ಕೈ.ಅದರಲ್ಲಿ ಅವರು ಒಂದು ಕೈ ಮುಂದೆನೇ ಇರ್ತಾರೆ.

ಗುಡಿಗೆ ಹೋದವರು ಕಡ್ಡಾಯವಾಗಿ ಘಂಟೆ ಭಾರಿಸುತ್ತಾರೆ. ಮನೆಯಲ್ಲೂ ಅಷ್ಟೇ ಪೂಜೆ ಮಾಡುತ್ತಿದ್ದಾಗ, ಆರತಿ ಬೆಳಗುತ್ತಿದ್ದಾಗ ಘಂಟೆ ಹೊಡೆಯುತ್ತಾರೆ… ದೇವಾಲಯಕ್ಕೆ ಹೋದಾಗ ಗಂಟೆ ಹೊಡೆದರೆ ಮನಸ್ಸಿಗೆ ಆಧ್ಯಾತ್ಮಿಕ ಆನಂದ ಸಿಗುವುದಷ್ಟೇ ಅಲ್ಲದೆ ಸಕಲ ಶುಭಗಳು ಸಿದ್ಧಿಸುತ್ತವೆ.

ಘಂಟೆಯಲ್ಲಿನ ಪ್ರತಿ ಭಾಗಕ್ಕೂ ಒಂದು ವಿಶೇಷತೆ ಇದೆ. ಅದೇನೆಂದರೆ…ಘಂಟೆ ನಾಲಿಗೆಯಲ್ಲಿ ಸರಸ್ವತಿ ಮಾತೆ ನೆಲೆಸಿರುತ್ತಾರಂತೆ. ಮಹಾರುದ್ರನು ಘಂಟೆಯ ಉದರ ಭಾಗದಲ್ಲಿ, ಮುಖ ಭಾಗದಲ್ಲಿ ಬ್ರಹ್ಮದೇವ, ಕೊನೆಯ ಭಾಗದಲ್ಲಿ ವಾಸುಕಿ ಹಾಗೆಯೇ ಮೇಲಿರುವ ಹಿಡಿ ಭಾಗದಲ್ಲಿ ಪ್ರಾಣಶಕ್ತಿ ಇರುತ್ತದೆ ಎಂದು ಪುರಾಣಗಳು ನಮಗೆ ಹೇಳುತ್ತವೆ.

ನಮಗೆ ಕಷ್ಟಗಳು ಬಂದಾಗ, ಮನಶ್ಯಾಂತಿ ಬೇಕೆಂದುಕೊಂಡಾಗ ನಮ್ಮ ಮನಸ್ಸನ್ನು ಆಧ್ಯಾತ್ಮಿಕ ಭಾವನೆಯಿಂದ ತುಂಬಬೇಕು ಎಂದರೆ ಭಗವಂತನ ಮುಂದೆ ಕಂಚಿನಿಂದ ಮಾಡಿದ ಘಂಟೆಯನ್ನು ಭಾರಿಸಿದರೆ, ಆ ಗಂಟೆಯಿಂದ ಬರುವ “ಓಂಕಾರ” ಶಬ್ದದಿಂದ ದುಷ್ಟ ಶಕ್ತಿಗಳು ದೂರವಾಗಿ, ನಮ್ಮ ಕಷ್ಟಗಳು ದೂರವಾಗುತ್ತವೆ ಎಂದು ಕರ್ಮ ಸಿದ್ಧಾಂತ ನಮಗೆ ತಿಳಿಸುತ್ತದೆ.

ಆರತಿ ಸಮಯದಲ್ಲಿ ಘಂಟೆ ಹೊಡೆದರೆ, ನಮ್ಮ ಮನೆಯಲ್ಲಿ ಅಥವಾ ದೇವಾಲಯದಲ್ಲಿನ ದೇವಮೂರ್ತಿಗಳ ವಿಗ್ರಹಗಳೊಳಗೆ ದೇವತೆಗಳನ್ನು ಆಹ್ವಾನಿಸುತ್ತಿದ್ದೇವೆಂದು ಅರ್ಥ.ಆರತಿ ಸಮಯದಲ್ಲಿ ಘಂಟೆ ಹೊಡೆಯುವ ಸಂದರ್ಭದಲ್ಲಿ ಕಣ್ಣು ಮುಚ್ಚಿಕೊಳ್ಳಬಾರದು. ಆ ಸಮಯದಲ್ಲಿ ಆರತಿ ಕೊಡುತ್ತಾ, ಘಂಟೆ ಭಾರಿಸುತ್ತಾ ದೈವವನ್ನು ಆಹ್ವಾನಿಸುತ್ತಾ ಪೂಜಾರಿ ನಮಗೆ ತೋರಿಸುತ್ತಿದ್ದಾರೆ ಎಂದರ್ಥ.
ಕೆಲವು ಆಲಯಗಳಲ್ಲಿ ಘಂಟೆಗಳ ಗೊಂಚಲನ್ನು ನಾವು ನೋಡುತ್ತಿರುತ್ತೇವೆ. ಆ ರೀತಿಯ ಘಂಟೆಗಳನ್ನು ಹೊಡೆಯುವುದರಿಂದ ಯಾವುದೇ ಪ್ರಯೋಜನವಾಗಲ್ಲ. ಅವು ಕೇವಲ ಅಲಂಕಾರಕ್ಕೆ ಮಾತ್ರ ಸೀಮಿತ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬಿಗ್ ಬಾಸ್ ಸೀಸನ್-7ನ ಸ್ಪರ್ಧಿ ಡ್ಯಾನ್ಸರ್ ಕಿಶನ್ ಹಿರಿಯ ನಟ ಜೈ ಜಗದೀಶ್ ಅವರ ಬಳಿ ಕ್ಷಮೆ ಕೇಳಿದ್ದಾರೆ. ಕಿಶನ್ ಸೋಮವಾರ ಜೈ ಜಗದೀಶ್ ಅವರ ಜೊತೆ ಜಗಳವಾಡಿದ್ದರು. ಇದಾದ ಬಳಿಕ ಮನೆಯ ಸದಸ್ಯರು ಹಿರಿಯರನ್ನು ಎಲ್ಲರ ಮುಂದೆ ಈ ರೀತಿ ಪ್ರಶ್ನಿಸಬಾರದು ಇದು ಅವರನ್ನು ಅವಮಾನ ಮಾಡಿದಂತೆ ಎಂದು ಕಿಶನ್ ಬಳಿ ಹೇಳಿದ್ದರು. ಹೀಗಾಗಿ ಕಿಶನ್ ಮಂಗಳವಾರ ಜೈ ಜಗದೀಶ್ ಅವರ ಬಳಿ ಹೋಗಿ ಕ್ಷಮೆ ಕೇಳಿದ್ದಾರೆ. ಜೈ ಜಗದೀಶ್ ಅಡುಗೆ ಮನೆಯಲ್ಲಿದ್ದ ವೇಳೆ ನಾನು…
ಶುಕ್ರವಾರದ ಹೊಸ ಸಿನಿಮಾಗಳ ನೀರಿಕ್ಷೆಯಲ್ಲಿರುವ ಸಿನಿ ಪ್ರೇಕ್ಷಕರಿಗೆ ಶಾಕಿಂಗ್ ನ್ಯೂಸ್. ಈ ದಿನ ಯಾರೂ ಚಿತ್ರಮಂದಿರಗಳ ಹತ್ತಿರ ಸುಳಿಯಬೇಡಿ.
ಬಿಗ್ ಬಾಸ್ ಸೀಸನ್-6 ಕೊನೆಯಾಗುವುದಕ್ಕೆ ಕೆಲವು ದಿನಗಳು ಮಾತ್ರ ಬಾಕಿ ಇದೆ. ಕಳೆದ ವಾರ ಬಿಗ್ ಬಾಸ್ ಮನೆಗೆ ಸ್ಪರ್ಧಿಗಳ ಕುಟುಂಬದವರು ಭೇಟಿ ನೀಡಿದ್ದರು. ಆದರೆ ಈಗ ಹಳೆಯ ಸೀಸನ್ ಸ್ಪರ್ಧಿಗಳು ಬಿಗ್ ಮನೆಗೆ ಎಂಟ್ರಿ ನೀಡಿದ್ದಾರೆ. ಆದರೆ ಅವರಿಗಾಗಿ ಇಲ್ಲಿ ವಿಶೇಷ ಮನೆಯನ್ನು ನಿರ್ಮಿಸಲಾಗಿದೆ. ಬಿಗ್ ಬಾಸ್ ಸೀಸನ್-4 ಸ್ಪರ್ಧಿ ವಿನ್ನರ್, ಒಳ್ಳೆ ಹುಡುಗ ಪ್ರಥಮ್, ರನ್ನರಪ್ ಕಿರಿಕ್ ಕೀರ್ತಿ ಹಾಗೂ ಸಂಜನಾ ಚಿದಾನಂದ್ ಬಿಗ್ ಬಾಸ್ ಮನೆಗೆ ಎಂಟ್ರಿ ನೀಡಿದ್ದಾರೆ. ಬಿಗ್ ಬಾಸ್ ಸೀಸನ್…
ಮಾಜಿ ಸಂಸದೆ ನಟಿ ರಮ್ಯ ಪ್ರಧಾನಿ ಮೋದಿ ಹಾಗೂ ಬಿಜೆಪಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ಮತದಾರರಿಗೆ ಆಮಿಷ ಒಡ್ಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಬಿಜೆಪಿ, ‘ಮೈ ಫಸ್ಟ್ ವೋಟ್ ಫಾರ್ ಮೋದಿ’ ಎಂಬ ಫೇಸ್ಬುಕ್ ಖಾತೆ ಮೂಲಕ ಬ್ಯಾಡ್ಜ್, ಟೀ ಶರ್ಟ್, ಫೋನ್ ಕವರ್, ಟೋಪಿ ಮೊದಲಾದ ಉಚಿತ ಉಡುಗೊರೆಗಳಿಗಾಗಿ ನರೇಂದ್ರ ಮೋದಿಯವರಿಗೆ ವೋಟ್ ಮಾಡಿ ಎಂದು ಮತದಾರರಿಗೆ ಆಮಿಷ ಒಡ್ಡಲಾಗಿದೆ. ಅಲ್ಲದೆ ವೆಬ್ ಸೈಟ್ ಒಂದರ ಮೂಲಕ ಈ ವಸ್ತುಗಳನ್ನು…
ನನ್ನ ಹೆಸರು ಅಶ್ವಥ್ ಕುಮಾರ್ 42 ವರ್ಷ ವಯಸ್ಸು,ನಾನು ಕೋಲಾರ ಜಿಲ್ಲೆ ಬಂಗಾರಪೇಟೆಯಲ್ಲಿ ವಾಸವಾಗಿರುವುದು. ನಾನು ಲೈಬ್ರರಿಯನ್ ಆಗಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವುದು, 2016 ರಲ್ಲಿ ನನಗೆ ಸೊಂಟ ನೋವು ವಿಪರೀತ ಬರುತ್ತಿತ್ತು,ಮೂತ್ರ ಹೋಗಲೂ ಕಷ್ಟ ಆಗುತ್ತಿತ್ತು, ನಂತರ ಕೋಲಾರಿನ ಸರ್ಕಾರಿ ಆಸ್ಪೇಟಲ್ ನಲ್ಲಿ ತೋರಿಸಿ ಸ್ಕ್ಯಾನಿಂಗ್ ಮಾಡಿಸಿದೆ ಆಗ ತಿಳಿಯಿತು …..
ಮತ ಹಾಕದ ಸಿಲಿಕಾನ್ ಸಿಟಿ ಮಂದಿ ಪ್ರಜ್ಞಾವಂತ ಮುಖವಾಡದ ನಿಷ್ಪ್ರಯೋಜಕ ನತದೃಷ್ಟರು. ಅವರು ಬದುಕಿರುವ ಶವಗಳು ಎಂದು ನವರಸ ನಾಯಕ ಜಗ್ಗೇಶ್ ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಗುರುವಾರದಂದು 2019ರ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ನಡೆದಿದೆ. ಮತದಾನ ಮಾಡಲು ಹಳ್ಳಿಗರು, ಅನಕ್ಷರಸ್ಥರು, ವೃದ್ಧರು, ಅಂಗವಿಕಲರು, ತುಂಬು ಗರ್ಭಿಣಿಯರು ಕೂಡ ಉತ್ಸಾಹದಿಂದ ಮತಗಟ್ಟೆಗೆ ಬಂದು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಆದ್ರೆ ಹೆಚ್ಚು ಪ್ರಜ್ಞಾವಂತರಿರುವ ಗಾರ್ಡನ್ ಸಿಟಿಯಲ್ಲಿಯೇ ಅತೀ ಕಡಿಮೆ ಪ್ರಮಾಣದಲ್ಲಿ ಮತದಾನವಾಗಿದೆ. ಬೆಂಗಳೂರು ದಕ್ಷಿಣದಲ್ಲಿ 53.47%…