ಜ್ಯೋತಿಷ್ಯ

ದಿನ ಭವಿಷ್ಯ ಶನಿವಾರ…ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ …

959

ಇಂದು  ಶನಿವಾರ , 31/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…

ಮೇಷ:

ಲೋಹಗಳ ಉದ್ಯಮಿಗಳಿಗೆ ಹೆಚ್ಚಿನ ಪ್ರಗತಿ. ಕಲಾವಿದರಿಗೆ ಕನಸು ನನಸಾಗುವ ದಿನ. ವಿದೇಶ ಪ್ರಯಾಣಕ್ಕೆ ಯೋಜನೆ ನಿರ್ಮಾಣ ಮಾಡಲಿದ್ದೀರಿ. ಆರೋಗ್ಯ ವಿಷಯದಲ್ಲಿ ಉತ್ತಮ ದಿನವಾಗಿದೆ. ಯೋಗ್ಯ ವಯಸ್ಕರು ಕಂಕಣಧಾರಿಗಳಾದಾರು. ಚಿಲ್ಲರೆ ವ್ಯಾಪಾರಿಗಳಿಗೆ ತೃಪ್ತಿಕರ ಲಾಭ ವಿರುತ್ತದೆ. ದೈವಸಾನ್ನಿಧ್ಯದ ಬಗ್ಗೆ ಯಾತ್ರಾದಿಗಳಿರುತ್ತವೆ. ಭೂ ಖರೀದಿಗಳಿಗೆ ಅನುಕೂಲಕರ ವಾತಾವರಣ.

 

ವೃಷಭ:-

ಕಾರ್ಯಗಳು ಮುನ್ನಡೆಯನ್ನು ಸಾಧಿಸಲಿವೆ. ಅವಿರತ ಶ್ರಮದ ಬೆಲೆ ನಿಮಗೆ ನಿಶ್ಚಿತ ರೂಪದಲ್ಲಿ ಗೋಚರಕ್ಕೆ ಬರುತ್ತದೆ. ವಿದ್ಯಾರ್ಥಿಗಳಿಗೆ ನೆಮ್ಮದಿ ಸಿಗಲಿದೆ. ದಿನಾಂತ್ಯ ಶುಭವಾರ್ತೆ. ಪ್ರಸ್ತುತ ನಿರ್ವಹಿಸುತ್ತಿರುವ ಕೆಲಸ ಉದ್ಯೋಗದಲ್ಲಿ ಪ್ರಗತಿ. ವ್ಯವಹಾರಕ್ಷೇತ್ರ ವಿಸ್ತರಿಸಲು ಸ್ನೇಹಿತರ ಸಹಾಯ ದೊರಕುವ ಸಾಧ್ಯತೆ. ಷೇರು ಪೇಟೆಯಲ್ಲಿ ಹೂಡಿಕೆ ಮಾಡಿದಲ್ಲಿ ಉತ್ತಮ ಲಾಭ.

 

ಮಿಥುನ:

ರೇಷ್ಮೆ ನೇಕಾರರಿಗೆ ಉತ್ತಮ ಅವಕಾಶಗಳು. ಸರ್ಕಾರಿ ಕೆಲಸಗಳಿಗೆ ಹಣ ಖರ್ಚಾದರೂ ಕಾರ್ಯಾನುಕೂಲವಾಗಲಿದೆ. ಭೂ ವ್ಯವಹಾರ ನಡೆಸುತ್ತಿರುವವರಿಗೆ ಯಶಸ್ಸು ದೊರಕಲಿದೆ. ವೃತ್ತಿರಂಗದಲ್ಲಿ ಕುಶಲತೆಗಳಿಂದ ವರ್ತಿಸಬೇಕಾಗುತ್ತದೆ. ಗೃಹ ನಿರ್ಮಾಣ ಕಾರ್ಯ ಸಾಂಸಾರಿಕವಾಗಿ ನಿರ್ವಹಣೆಯ ಯಾ ವಿಚಾರದಲ್ಲಿ ಸಹಮತ ವಿರಲಿ. ಉದ್ಯೋಗದಲ್ಲಿ ಮುಂಭಡ್ತಿ ಇದೆ.

 

ಕಟಕ :-

ವೃತ್ತಿರಂಗದಲ್ಲಿ ನಿಮ್ಮ ಒಡನಾಡಿಗಳ ಪ್ರೀತಿ ವಿಶ್ವಾಸಗಳು ನಿಮಗೆ ಅಚ್ಚರಿ ತರಲಿವೆ. ಹಿರಿಯರ ಆರೋಗ್ಯದ ಬಗ್ಗೆ ಗಮನವಿರಲಿ. ನಿರುದ್ಯೋಗಿಗಳಿಗೆ ಸ್ವಂತ ನಿರ್ಧಾರ ಅಗತ್ಯವಿದೆ. ವ್ಯಾಪಾರಿಗಳಿಗೆ ಶ್ರಮಕ್ಕೆ ತಕ್ಕ ಪ್ರತಿಫಲ. ಆತ್ಮವಿಶ್ವಾಸದಿಂದ ಸಮಸ್ಯೆಗಳಿಗೆ ಮುಕ್ತಿ ಕಂಡುಕೊಳ್ಳಲಿದ್ದೀರಿ. ಆರೋಗ್ಯದಲ್ಲಿ ಸುಧಾರಣೆ. ಪ್ರವಾಸ, ಕ್ಷೇತ್ರದರ್ಶನಗಳಿಂದ ಮನೋಲ್ಲಾಸ ದೊರಕಲಿದೆ.

 

 ಸಿಂಹ:

ವಿಶ್ವಾಸದಿಂದ ಸಮಸ್ಯೆಗಳನ್ನು ಎದುರಿಸಿದರೆ ಯಶಸ್ಸು. ಕುಟುಂಬದಲ್ಲಿ ಹೊಂದಾಣಿಕೆಯ ಕೊರತೆ ಸಾಧ್ಯತೆ. ಸಮಾಧಾನದಿಂದಾಗಿ ಸಾಮರಸ್ಯ ಕಂಡುಕೊಳ್ಳಬಹುದು. ಹೊಸ ವ್ಯವಹಾರಕ್ಕೆ ಚಿಂತನೆ ನಡೆಸಲಿದ್ದೀರಿ. ಸಾಂಸಾರಿಕವಾಗಿ ಮನಸ್ಸು ಮಾಡಿದ್ದಲ್ಲಿ ಸಮಾಧಾನ ಸಿಗಲಿದೆ. ಆಗಾಗ ಸಮಸ್ಯೆಗಳು ತೋರಿ ಬಂದರೂ ನಿಮ್ಮ ಪ್ರಯತ್ನಬಲಕ್ಕೆ ಒತ್ತು ನೀಡುವುದು ಅಗತ್ಯ. ದಿನಾಂತ್ಯ ಶುಭವಾರ್ತೆ.

 

ಕನ್ಯಾ :-

ಧನಾದಾಯದ ಹೊರ ಯೋಜನೆಗಳಿಂದ ಯಶಸ್ಸು. ಆರ್ಥಿಕ ಉನ್ನತಿಯಿಂದ ಹೊಸ ಕಾರ್ಯಗಳಲ್ಲಿ ಮುನ್ನಡೆ. ಮನಸ್ಸಿಗೆ ನೆಮ್ಮದಿ ನೀಡುವ ವಾರ್ತೆ ಕೇಳಲಿದ್ದೀರಿ. ವಿದ್ಯಾರ್ಥಿಗಳಿಗೆ ಸಂಕಷ್ಟ. ಪಿತೃ ವರ್ಗದವರ ಸಹಕಾರದಿಂದ ಕಾರ್ಯಸಾಧನೆಯಾಗಲಿದೆ. ವೃತ್ತಿರಂಗದಲ್ಲಿ ಸಂತಸದ ಸುದ್ದಿ ಇರುತ್ತದೆ. ಆತ್ಮ ವಿಶ್ವಾಸ ನಿಮ್ಮ ಮುನ್ನಡೆಗೆ ಸಾಧಕವಾದೀತು. ಮುಂದುವರಿಯಿರಿ.

 

ತುಲಾ:

ಲವಿದ್ಯಾ ಪ್ರವೃತ್ತಿಯವರಿಗೆ ಆಗಾಗ ಅಡಚಣೆಗಳಿರುತ್ತವೆ. ಯಂತ್ರ ಸಾಮಾಗ್ರಿಗಳ ವ್ಯಾಪಾರಿಗಳಿಗೆ ಆದಾಯ ವರ್ಧಿಸಲಿದೆ. ಅಪೇಕ್ಷಿತ ಕೆಲಸಕಾರ್ಯಗಳು ಮುನ್ನಡಿಯಲಿವೆ. ನಿರುದ್ಯೋಗಿಗಳಿಗೆ ಖಾಸಗಿ ಕಂಪೆನಿಗಳಲ್ಲಿ ಅವಕಾಶ ಸಾಧ್ಯತೆ. ಕೋರ್ಟ್ ಕಚೇರಿ ಕೆಲಸ ಕಾರ್ಯಗಳಲ್ಲಿ ಯಶಸ್ಸು. ಮನೆ ನಿರ್ಮಾಣ ಕಾರ್ಯಕ್ಕೆ ಚಾಲನೆ ಸಾಧ್ಯತೆ. ಸಂಗಾತಿಯಿಂದ ಉತ್ತಮ ಸಹಕಾರ.

 

ವೃಶ್ಚಿಕ :-

ವ್ಯಾಪಾರ ವಿಸ್ತರಣೆಗೆ ಸಕಾಲ. ಆರ್ಥಿಕ ಪ್ರಗತಿಯಿಂದ ಮನೆಯಲ್ಲಿ ಸಂತಸದ ವಾತಾವರಣ. ಸಹೋದರರಿಂದ ಧನ ಸಹಾಯ ನಿರೀಕ್ಷಿಸಬಹುದು. ಉದ್ಯೋಗಿಗಳಿಗೆ ಬದಲಾವಣೆಯ ಸಾಧ್ಯತೆ. ವ್ಯಾಪಾರೋದ್ಯಮಿಗಳಿಗೆ ಆಗಾಗ ಕಷ್ಟನಷ್ಟಗಳಿರುತ್ತವೆ. ಸಾಂಸಾರಿಕವಾಗಿ ತುಸು ನೆಮ್ಮದಿ ತೋರಿ ಬರುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ತಂದೀತು. ದೂರ ಸಂಚಾರದಲ್ಲಿ ಜಾಗ್ರತೆ ವಹಿಸಬೇಕು.

 

ಧನಸ್ಸು:

ಸಮಯವರಿತು ಕಾರ್ಯ ಸಾಧನೆ ಮಾಡಲು ನಿಶ್ಚಯಿಸುವಿರಿ. ಮದುವೆ ಸಿದ್ಧತೆಗಳಿಗಾಗಿ ಪ್ರಯಾಣ ಮಾಡಬೇಕಾದೀತು. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ದೊರಕಲಿದೆ. ಸ್ತ್ರೀನಿಮಿತ್ತ ಅಸಮಾಧಾನ ಬರುತ್ತದೆ. ಅಗಾಗ ಶೀತ, ಕಫ‌, ಬಾಧೆಗಳು ಗೋಚರ ಬರುತ್ತವೆ. ಧಾರ್ಮಿಕ-ಸಾಹಿತ್ಯಗಳಲ್ಲಿ ಆಸಕ್ತಿ ತೋರಿ ಬರುತ್ತದೆ. ಸಾಂಸಾರಿಕವಾಗಿ ಸುಖ ಸಂತೋಷಗಳಿರುತ್ತವೆ.

 

ಮಕರ :-

ನೌಕರರಿಗೆ ಪರಿಶ್ರಮಕ್ಕೆ ತಕ್ಕ ಪ್ರತಿಫಲ. ವಾಹನ ಖರೀದಿ ಮಾಡುವ ಸಾಧ್ಯತೆ. ಅವಿವಾಹಿತರಿಗೆ ಉತ್ತಮ ಸಂಗಾತಿ ಪ್ರಾಪ್ತವಾಗುವ ಸಾಧ್ಯತೆ. ಮಿತ್ರನ ಆಗಮನದಿಂದ ಸಂತೋಷ. ಹೆಜ್ಜೆ ಹೆಜ್ಜೆಗಳಲ್ಲಿ ದುಡುಕಿ ಬೀಳಲಿದ್ದೀರಿ. ಮನಃ ಶಾಂತಿಗಳಿಗಾಗಿ ದೂರ ಸಂಚಾರ ವಿರುತ್ತದೆ. ವಿದ್ಯಾರ್ಥಿಗಳಿಗೆ ಆಗಾಗ ಉದಾಸೀನತೆ ತಂದೀತು. ಹಿರಿಯರ ಮಾರ್ಗದರ್ಶನದಿಂದ ಮುನ್ನಡೆ ಇರುತ್ತದೆ.

 

ಕುಂಭ:-

ಭೂಮಿ-ಸ್ಥಿರಾಸ್ತಿ ವ್ಯವಹಾರಗಳಲ್ಲಿ ಲಾಭ ತರುತ್ತದೆ. ಸಾಂಸಾರಿಕವಾಗಿ ಸಕಲ ರೀತಿಯಲ್ಲಿ ಸೌಭಾಗ್ಯ ಪ್ರಾಪ್ತಿಯಾಗಲಿದೆ. ಆರೋಗ್ಯ ಸಿದ್ಧಿಯಾಗಿ ಉತ್ಸಾಹ ತೋರಿ ಬರುತ್ತದೆ. ದೂರ ಸಂಚಾರದಲ್ಲಿ ಜಾಗ್ರತೆಬೇಕು. ವಿದ್ಯಾರ್ಥಿಗಳಿಗೆ ಕ್ರೀಡಾಪಟುಗಳಿಗೆ ಯಶಸ್ಸಿನ ಕಿರೀಟ ಸಾಧ್ಯತೆ. ರಾಜಕೀಯದಲ್ಲಿರುವವರಿಗೆ ಸೂಕ್ತ ಸ್ಥಾನಮಾನ ದೊರಕಲಿದೆ. ದೈವಾನುಗ್ರಹಕ್ಕಾಗಿ ಕುಲದೇವತಾ ದರ್ಶನ ಮಾಡುವುದು ಉಚಿತ.

ಮೀನ:-

ವೈದ್ಯಕೀಯ ರಂಗದಲ್ಲಿರುವವರಿಗೆ ಯಶಸ್ಸಿನೊಂದಿಗೆ ಹೆಚ್ಚಿನ ಲಾಭವೂ ಪ್ರಾಪ್ತವಾಗುವುದು. ನೌಕರವರ್ಗದವರಿಗೆ ಮುಂಬಡ್ತಿ ಅಥವಾ ಸ್ಥಾನ ಬದಲಾವಣೆಯಾಗುವ ಸಾಧ್ಯತೆ. ಗುತ್ತಿಗೆದಾರರಿಗೆ ಹೆಚ್ಚಿನ ಲಾಭ. ಸಾಂಸಾರಿಕವಾಗಿ ನೆಮ್ಮದಿ ಇದ್ದರೂ ಕೌಟುಂಬಿಕವಾಗಿ ಅಪವಾದ ಇರುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಅಧಿಕ ಲಾಭವಿಲ್ಲವಾದರೂ ನಷ್ಟವಾಗದು. ದೈವಬಲವಿಲ್ಲದೆ ಮನಸ್ಸಿಗೆ ಸಮಾಧಾನ ಸಿಗದು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಉಪಯುಕ್ತ ಮಾಹಿತಿ

    ನಿಮ್ಮ ಜಮೀನಿನ/ಊರಿನ ಯಾವುದೇ ಆಸ್ತಿಯ ವಿವರಗಳನ್ನು ನಿಮ್ಮ ಮೊಬೈಲ್’ನಲ್ಲೇ ನೋಡಿ ಪಡೆಯಿರಿ..!ತಿಳಿಯಲು ಈ ಲೇಖನ ಓದಿ…

    ಈಗಂತೂ ಸರ್ಕಾರಿ ಸಂಸ್ಥೆಗಳಲ್ಲಿ ನಮಗೆ ಬೇಕಾದ ದಾಖಲಾತಿಗಳನ್ನು ಪಡೆಯುವುದು ಅಷ್ಟು ಸುಲಭವಲ್ಲ…ಆದರೆ ನಮಗೆ ಗೊತ್ತಿಲ್ಲದ ವಿಷಯವೇನೆಂದರೆ ಕೆಲವೊಂದು ಸೌಲಭ್ಯಗಳನ್ನು ತುಂಬಾ ಸರಳವಾಗಿ ನಾವು ಪಡೆದುಕೊಳ್ಳಬಹುದು.ಅದರಲ್ಲಿ ಒಂದು, ನಮ್ಮ ಜಮೀನುಗಳಿಗೆ ಸಂಬಂದಪಟ್ಟಪಹಣಿ (RTC), ಮತ್ತು ಮಿಟೆಶನ್ ಗಳನ್ನೂ ನಾವು ನಿಮ್ಮ ಮೊಬೈಲ್ನಲ್ಲಿ ಚೆಕ್ ಮಾಡಿಕೊಳ್ಳಬಹುದು.

  • ಸಾಧನೆ

    ತಂದೆ ಒಂದು ಸಹಿ ಗೋಸ್ಕರ ಸರ್ಕಾರಿ ಕಚೇರಿಗೆ ಅಲೆದಾಡುವುದನ್ನು ನೋಡಿ. ಛಲದಿಂದ ಐಎಎಸ್ ಅಧಿಕಾರಿಯಾದ ಮಗಳು!

    ತನ್ನ ತಂದೆ ಒಬ್ಬ ಸಾಮಾನ್ಯ ರೈತ ಹೊಲದ ದಾಖಲೆಗಳನ್ನು ಸಹಿ ಮಾಡಿಸಲು ಜಿಲ್ಲಾಧಿಕಾರಿಗಳ ಕಚೇರಿಗೆ ಪ್ರತಿದಿನ ಅಲೆದಾಡುತ್ತಿದ್ದರು, ಬಿಸಿಲು ಗಾಳಿ ಮಳೆ ಎನ್ನದೆ ಪ್ರತಿದಿನ ತಮ್ಮ ಕೆಲಸ ಆಗಲಿ ಅನ್ನೋ ಕಾರಣಕ್ಕೆ ಓಡಾಡುತ್ತಿದ್ದರು, ಆದ್ರು ಕೆಲಸ ಆಗದೆ ಮರಳಿ ಮನೆಗೆ ಬರುತ್ತಿದ್ದರು ಇದೆಲ್ಲ ಗಮನಿಸಿದ ಈ ಬಾಲಕಿ ಅಂದ್ರೆ ಈಗ ಐಎಎಸ್ ಅಧಿಕಾರಿ ಆಗಿರುವಂತ ರೋಹಿಣಿಯವರು ಆಗ 9ನೇ ವಯಸ್ಸಿನ ಬಾಲಕಿಯಾಗಿದ್ದರು. ಒಂದು ದಿನ ಈ ಬಾಲಕಿ ತಮ್ಮ ತಂದೆಯನ್ನು ಕೇಳುತ್ತಾರೆ ಅಪ್ಪ ನೀವು ಪ್ರತಿದಿನ ಬಿಸಿಲು…

  • ಜ್ಯೋತಿಷ್ಯ

    ದೇವರಿಗೆ ಪೂಜೆ ಮಾಡುವ ಸಮಯದಲ್ಲಿ ಒಡೆದ ತೆಂಗಿನಕಾಯಿ ಕೆಟ್ಟಿದ್ರೆ ಏನರ್ಥ ಗೊತ್ತಾ..?

    ಹಿಂದೂ ಧರ್ಮದಲ್ಲಿ ದೇವರ ಪೂಜೆ ವೇಳೆ ತೆಂಗಿನ ಕಾಯಿ ಒಡೆಯುವ ಪದ್ಧತಿಯಿದೆ. ಅನೇಕ ಬಾರಿ ಒಡೆದ ತೆಂಗಿನಕಾಯಿ ಹಾಳಾಗಿರುತ್ತದೆ. ಪೂಜೆ ನಂತ್ರ ಹಾಳಾದ ತೆಂಗಿನಕಾಯಿ ನೀಡಿದ ಅಂಗಡಿ ಮಾಲೀಕನಿಗೆ ಕೆಲವರು ಬೈದ್ರೆ ಮತ್ತೆ ಕೆಲವರು ಭಯಪಟ್ಟುಕೊಳ್ತಾರೆ. ತೆಂಗಿನಕಾಯಿ ಹಾಳಾಗಲು ಕಾರಣವೇನು? ಇದು ಅಶುಭ ಫಲ ನೀಡುತ್ತಾ? ಇದು ಮುಂದೆ ಬರಲಿರುವ ಕಷ್ಟದ ಮುನ್ಸೂಚನೆಯಾ? ಹೀಗೆ ಅನೇಕ ಪ್ರಶ್ನೆಗಳು ಏಳುತ್ತವೆ. ನಿಮಗೂ ಈ ಸಮಸ್ಯೆ ಕಾಡಿದ್ದರೆ ಅವಶ್ಯವಾಗಿ ಈ ಸುದ್ದಿ ಓದಿ. ಪೂಜೆ ವೇಳೆ ಒಡೆದ ತೆಂಗಿನಕಾಯಿ ಹಾಳಾಗಿದ್ರೆ…

  • ಜ್ಯೋತಿಷ್ಯ

    ನಿತ್ಯ ಭವಿಷ್ಯ..ಈ ದಿನದ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…

    ಇಂದು ಶನಿವಾರ, 03/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ… ಮೇಷ:– ಕೆಲಸದ ಒತ್ತಡದಿಂದ ಸರಿಯಾಗಿ ಆಹಾರ ಸೇವಿಸದೆ ದೇಹಾಲಸ್ಯ. ಹಣದ ಆಧಾಯ ಹೆಚ್ಚಾಗುತ್ತದೆ. ಉದ್ದೇಶಿಸಿದ ಕೆಲಸಕಾರ್ಯಗಳು ನಡೆಯಲಿವೆ. ನೀವು ನಂಬುವರರಿಂದ ನಿಜ ತಿಳಿಯುತ್ತದೆ.ಆರ್ಥಿಕ ವಿಚಾರದಲ್ಲಿ ಜಾಗ್ರತೆ. ವೃಷಭ:- ಅಪವಾದಗಳೂ ಬೆನ್ನತ್ತಿ ಬರಬಹುದು. ನಿರೀಕ್ಷಿತ ಮೂಲದಿಂದ ಧನಾದಾಯ. ಬಾಕಿಯಿರುವ ಕುಟುಂಬದ ಎಲ್ಲಾ ಸಾಲಗಳನ್ನು ತೀರಿಸಲು ಸಾಧ್ಯ. ತಂದೆಯಿಂದ ನಿಮಗೆ ನಿರೀಕ್ಷಿತ ಧನ ಸಹಾಯ ದೊರೆಯಲಿದೆ. ಪಿತ್ರಾಜಿತ ಆಸ್ತಿಗಳು ಒದಗಿಬರುತ್ತವೆ. ಆರ್ಥಿಕವಾಗಿ ಅಭಿವೃದ್ಧಿ. ಅತಿ ವೇಗದ ಚಾಲನೆ…

  • ವಿಸ್ಮಯ ಜಗತ್ತು

    ಪಾಕಿಸ್ತಾನದ ಸೇನೆಗೆ ಈ ದೇವಾಲಯದ ಹೆಸರನ್ನು ಕೇಳಿದ್ರೆ ಭಯ!ಇಲ್ಲಿ ಪಾಕಿಸ್ತಾನ 3 ಸಾವಿರ ಬಾಂಬ್ ಹಾಕಿದ್ದರೂ, ಒಂದೂ ಸಿಡಿದಿರಲಿಲ್ಲ!!!

    ಭಾರತ ಹಲವಾರು ದೇವರು ಧರ್ಮಗಳ ನೆಲಬೀಡು. ಆಂಗ್ಲರ ಕಾಲದಿಂದಲೂ ದೇವಾಸ್ಥಾನ ಮಂದಿರಗಳ ಮೇಲೆ ದಾಳಿಗಳು ನಡೆದಿವೆ. ಹಾಗೂ ನಮ್ಮಲ್ಲಿನ ವಿವಿದ ರೀತಿಯ ಆಚರಣೆಗಳು, ಮತ್ತು ಸಂಪ್ರದಾಯಗಳ ಮೇಲೆ ಪರಕೀಯರ ದಾಳಿಯಾಗಿದೆ.ಆದ್ರೆ ಏನೇ ಆಗಿದ್ದರೂ ಭಾರತ ತನ್ನ ಅನಾದಿಕಾಲದಿಂದ ಬಂದ ಸಂಸ್ಕೃತಿಯನ್ನು ಉಳಿಸುಕೊಂಡು ಬಂದಿರುವುದು ಅಚ್ಚರಿಗೆ ಕಾರಣವಾಗಿದೆ.ರಾಜಸ್ಥಾನದ ತನೋಟ್ ಮಾತಾ ದೇವಾಲಯ ಇಂತಹ ಅಚ್ಚರಿಗಳ ಸಾಲಿಗೆ ಸೇರುವ ದೇವಾಲಯವಾಗಿದೆ.

  • ಆರೋಗ್ಯ

    ನೈಸರ್ಗಿಕವಾಗಿ ಹೊಟ್ಟೆಯ ಬೊಜ್ಜು ಕರಗಿಸಬೇಕೇ, ಹಾಗಾದರೆ ಹೀಗೆ ಮಾಡಿ.

    ಬೊಜ್ಜು ಕರಗಲು ಸರಳ ಯೋಗಾಸನವಾದ ಊರ್ಧ್ವ ಪ್ರಸಾರಿತ ಪಾದಾಸನದ ಅಭ್ಯಾಸ ಮಾಡಬಹುದು. ಊರ್ಧ್ವ ಎಂದರೆ ಮೇಲ್ಮುಖ, ಪ್ರಸಾರಿತ ಎಂದರೆ ವಿಸ್ತ್ರತ. ಪಾದ ಎಂದು ಕಾಲು ಮತ್ತು ಆಸನ ಎಂದರೆ ಯೋಗಭಂಗಿ. ಸಾಮಾನ್ಯ ಎಲ್ಲ ವಯಸ್ಸಿನವರು ಅಭ್ಯಾಸ ಮಾಡಬಹುದು. ಆರಂಭದಲ್ಲಿ ಹೊಸಬರು ಗೋಡೆಯ ಸಹಾಯ ತೆಗೆದುಕೊಳ್ಳಬಹುದು. ವಿಧಾನ: ನೆಲದ ಮೇಲೆ ಆರಾಮವಾಗಿ ವಿಶ್ರಾಂತಿ ಮಾಡಿ. ಆಮೇಲೆ ಕಾಲುಗಳು ಜೋಡಣೆ, ಕೈಗಳನ್ನು ತೊಡೆಯ ಪಕ್ಕದಲ್ಲಿ ಇರಿಸಿ. ಸ್ವಲ್ಪ ಹೊತ್ತು ಈ ಸ್ಥಿತಿಯಲ್ಲಿದ್ದು, ಉಸಿರನ್ನು ತೆಗೆದುಕೊಳ್ಳುತ್ತ ನಿಧಾನವಾಗಿ ಎರಡೂ ಕಾಲುಗಳನ್ನು 30ರಿಂದ…