ಜ್ಯೋತಿಷ್ಯ

ದಿನ ಭವಿಷ್ಯ ಗುರುವಾರ…ಇಂದು ನಿಮಗೆ ಗುರು ಒಲಿಯುತ್ತಾನೆಯೇ ನೋಡಿ ತಿಳಿಯಿರಿ…ಶೇರ್ ಮಾಡಿ..

456

ಗುರುವಾರ, 05/04/2018  ಇಂದಿನ ದಿನ ಭವಿಷ್ಯ, ಖ್ಯಾತ ಆಧ್ಯಾತ್ಮಿಕ ಚಿಂತಕರು, ದೈವಜ್ಞ ಜ್ಯೋತಿಷ್ಯರು ಪಂಡಿತ್ ಸುದರ್ಶನ್ ಭಟ್‘ರವರಿಂದ…

ಮೇಷ:

ಬಹುದಿನದ ನೀರಿಕ್ಷಿತ ಕನಸು ಕೈಗೂಡುವುದು. ಎಲ್ಲರಂತೆ ನೀವು ಕೂಡಾ ಸಮಾಜ ಮುಖಿಯಾಗಿ ಉ  ನ್ನತ ಅಧಿಕಾರವನ್ನು ಹೊಂದುವಿರಿ. ಇದರೊಂದಿಗೆ ಸಕಾರಾತ್ಮಕ ಚಿಂತನೆಯನ್ನು ಮೈಗೂಡಿಸಿಕೊಂಡಲ್ಲಿ ಒಳಿತಾಗುವುದು.

ವೃಷಭ:-

ಇವತ್ತಿನ ಕೆಲಸ ಕಾರ್ಯಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. ಈ ಬಗ್ಗೆ ಈ ಅನುಭೂತಿ ನಿಮ್ಮ ಮನದಲ್ಲಿರಲಿ. ಹೊರಗಡೆ ಸಂತೋಷವನ್ನು ವ್ಯಕ್ತಪಡಿಸಿದಲ್ಲಿ ಹಣಕಾಸಿನ ವಿಷಯದಲ್ಲಿ ನೀವು ಪರರಿಗೆ ಸಹಾಯ ಮಾಡಬೇಕಾಗುವುದು. ಶತ್ರುವನ್ನು ಕೂಡಾ ಪ್ರೀತಿಸುವಿರಿ.

ಮಿಥುನ:

ನಿರಾಸೆಯ ಅಲೆಗಳು ನಿಮ್ಮೆದುರು ಹರಿದು ಬರುವ ಮೂಲಕ ನಿಮ್ಮ ಆತ್ಮವಿಶ್ವಾಸವನ್ನು ಕುಂದಿಸುವ ಸಾಧ್ಯತೆ ಬಹಳ. ಆದರೆ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ. ವಿಜಯಶಾಲಿಗಳಾಗಿ.

ಕಟಕ :-

ಹಲವು ಸಮಸ್ಯೆಗಳ ನಡುವೆಯೂ ಹಮ್ಮಿಕೊಂಡ ಕಾರ್ಯವನ್ನು ಮಾಡಿ ಮುಗಿಸುವಿರಿ ಮತ್ತು ಈ ಮೂಲಕ ನಿಮ್ಮನ್ನು ವಿರೋಧಿಸುತ್ತಿದ್ದವರ ಮನದಲ್ಲೂ ಕೂಡಾ ಸಂತಸ ಸಂಭ್ರಮವನ್ನುಂಟು ಮಾಡುವಿರಿ.

 ಸಿಂಹ:

ಅಸತ್ಯ ಅನ್ಯಾಯವನ್ನು ಕಂಡು ಸಹಿಸಲಾರದ ನೀವು ನಿಮ್ಮ ಎದುರಾಳಿಯನ್ನು ಎದುರಿಸಲು ಹೆಚ್ಚಿನ ಆತ್ಮಸ್ಥೈರ್ಯದಿಂದ ಹೋರಾಟ ಮಾಡುವಿರಿ ಮತ್ತು ಅದರಲ್ಲಿ ಜಯವನ್ನು ಸಂಪಾದಿಸುವಿರಿ.

ಕನ್ಯಾ :-

ಯಾವುದು ಎದುರಿಗಿಲ್ಲವೋ ಅದರ ಬಗ್ಗೆ ಬಹಳ ಚಿಂತೆ ಮಾಡುವುದು ತರವಲ್ಲ. ಸದ್ಯಕ್ಕೆ ನಿಮ್ಮ ಎದುರಿರುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ. ಇದರಿಂದ ನಿಮಗೆ ಸಮಾಜದಲ್ಲಿ ಗೌರವ ಮನ್ನಣೆ ದೊರೆಯುವುದು.

ತುಲಾ:

ಸಹನೆ ಮತ್ತು ಸಮಧಾನಗಳಿಂದ ಕೆಲ ಸ್ಥಳಗಳಲ್ಲಿ ವಿಶೇಷ ಜನಪ್ರಿಯತೆಯನ್ನು ಘಳಿಸುವಿರಿ. ಹಾಗಾಗಿ ಬರಬೇಕಾಗಿದ್ದ ಹಣವು ಶೀಘ್ರದಲ್ಲಿ ದೊರೆಯುವುದು. ಆಂಜನೇಯ ಸ್ತೋತ್ರವನ್ನು ತಪ್ಪದೆ ಪಠಿಸಿ.

ವೃಶ್ಚಿಕ :-

ವೃಥಾ ಸುಮ್ಮನೆ ಖರ್ಚಿನ ದಾರಿಗಳನ್ನು ಹುಡುಕಲು ಹೋಗದಿರಿ. ಇದರಿಂದ ನಿಮಗೆ ಸಮಸ್ಯೆ ಎದುರಾಗುವುದು. ಒಳ್ಳೆಯ ಕಾರ್ಯಗಳಿಗೆ ಹಣವನ್ನು ಖರ್ಚು ಮಾಡಿ. ಆಗ ನಿಮಗೆ ಭಗವಂತನು ದುಪ್ಪಟ್ಟು ಹಣವನ್ನು ಕೊಡುವನು.

ಧನಸ್ಸು:

ನೀವು ಹಳೆಯ ಗೆಳೆಯರನ್ನು ಭೇಟಿ ಮಾಡುವಿರಿ. ಅವರ ಮಾತಿನ ಪ್ರಭಾವದಿಂದ ಹಣಕಾಸಿನ ವಿಚಾರದಲ್ಲಿ ಅನುಕೂಲವಾಗುವುದು ಮತ್ತು ಬೇರೊಂದು ಕಡೆ ಉದ್ಯೋಗ ದೊರೆಯುವುದು.

ಮಕರ :-

ಕೈಗೆ ಬಂದ ತುತ್ತು ಬಾಯಿಗಿಲ್ಲ ಎನ್ನುವಂತೆ ನೀವು ಶ್ರಮಪಟ್ಟು ಮಾಡಿದ ಕೆಲಸದ ಲಾಭಾಂಶವು ಪರರ ಪಾಲಾಗುವುದು. ದುರ್ಗಾದೇವಿಯ ಪ್ರಾರ್ಥನೆ ಮಾಡಿ ಮತ್ತು ಶಿವ ಪಂಚಾಕ್ಷ ರಿ ಮಂತ್ರ ಪಠಿಸಿ.

ಕುಂಭ:-

ಹಲವು ತಾಪತ್ರಯಗಳ ನಡುವೆಯೂ ಹಿಡಿದ ಕೆಲಸವನ್ನು ಮುಗಿಸುವ ಆತುರತೆ ತೋರುವಿರಿ. ಗೆಳೆಯರು ನಿಜವಾಗಿಯೂ ಈ ಸಂದರ್ಭದಲ್ಲಿ ಸಹಾಯ ಮಾಡುವರು. ಸಮಾಜದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಾಗುವುದು.

ಮೀನ:-

ನಿಮ್ಮ ಉತ್ಕರ್ಷವನ್ನು ಕಂಡು ಸಹಿಸಲು ಕಷ್ಟಪಡುತ್ತಿರುವವರು ನಿಮ್ಮ ಮೇಲೆ ವಿನಾಕಾರಣ ಆರೋಪಗಳನ್ನು ಮಾಡುವರು. ಭಗವಂತನ ಅನುಗ್ರಹ ನಿಮ್ಮ ಕಡೆ ಇರುವುದರಿಂದ ಹೆಚ್ಚಿಗೆ ಚಿಂತಿಸುವ ಅಗತ್ಯವಿಲ್ಲ.

ಪಂಡಿತ್ ಸುದರ್ಶನ್ ಭಟ್

ಆಧ್ಯಾತ್ಮಿಕ ಚಿಂತಕರು ದೈವಜ್ಞ ಜ್ಯೋತಿಷ್ಯರು  ನಿಮ್ಮ ಜೀವನದ ನಿಖರವಾದ ಭವಿಷ್ಯ ತಿಳಿಸುತ್ತಾರೆ ಹಾಗೂ ಸಮಸ್ಯೆಗೆ ಪರಿಹಾರ ಸೂಚಿಸುವರು : 9663542672

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜೀವನಶೈಲಿ

    ಮನೆಗಳಲ್ಲಿ ಮೂಲೆಗುಂಪಾಗಿರುವ ಈ ಹರಳೆಣ್ಣೆಯ ಮಹತ್ವ ಗೊತ್ತಾದ್ರೆ, ಈಗ್ಲೇ ಬಳಸೋದಕ್ಕೆ ಶುರು ಮಾಡ್ತೀರಾ…

    ಸಾಮಾನ್ಯವಾಗಿ ಹಿಂದೆ ಹರಳೆಣ್ಣೆ ಎಂದರೆ ಎತ್ತಿನಗಾಡಿಯ ಕೀಲುಗಳಿಗೆ ಹಾಕಲು ಅಥವಾ ತಲೆಗೆ ಮತ್ತು ಮಲಬದ್ಧತೆಗೆ ಔಷಧೀಯ ರೂಪದಲ್ಲಿ ಬಳಸಲಾಗುತ್ತಿತ್ತು. ವಾಸ್ತವವಾಗಿ ಹರಳೆಣ್ಣೆ ಹಲವು ರೀತಿಯಲ್ಲಿ ಆರೋಗ್ಯಕ್ಕೆ ಪೂರಕವಾಗಿದೆ.

  • ಸುದ್ದಿ

    ಪಾಕಿಸ್ತಾನಕ್ಕೆ ಟೊಮೆಟೊ ಬ್ಯಾನ್ ಮಾಡಿದ್ದಕ್ಕೆ, ಭಾರತದ ಮೇಲೆ ಅಣು ಬಾಂಬ್ ಹಾಕ್ತೀವಿ ಎಂದ ಪಾಪಿ ಪಾಕ್ ನಿರೂಪಕ ಹೇಳಿದ್ದೇನು ಗೊತ್ತಾ?

    ಜಮ್ಮುಕಾಶ್ಮೀರದ ಪುಲ್ವಾಮಾದಲ್ಲಿ ಯೋಧರ ಮೇಲೆ ನಡೆದ ದಾಳಿ ಇತಿಹಾಸದಲ್ಲೇ ಅತ್ಯಂತ ಭೀಕರವಾದ ದಾಳಿ. ಇದ್ರಿಂದಾಗಿ ಪ್ರತಿಯೊಬ್ಬ ಭಾರತೀಯನ ಎದೆಯಲ್ಲೂ ಪಾಕ್‍ ಮೇಲೆ ಪ್ರತೀಕಾರದ ಕಿಚ್ಚು ಹೆಚ್ಚಿದೆ. ಈ ದಾಳಿಯ ನಂತರ ಪಾಕಿಸ್ತಾನವನ್ನು ಹೊಸಕಿ ಹಾಕಲು ಭಾರತ ಇನ್ನಿಲ್ಲದ ಕ್ರಮ ಕೈಗೊಳ್ಳುತ್ತಿದೆ. ಅದ್ರಲ್ಲಿ ಪ್ರಮುಖವಾಗಿ ಆಮದು ಸುಂಕ ಏರಿಕೆ, ಟೊಮೆಟೊ ರಫ್ತು ಸ್ಥಗಿತ, ಇವೆಲ್ಲದರ ಪರಿಣಾಮ ಪಾಕ್‍ ನಲ್ಲಿ ಟೊಮೆಟೊ ಬೆಲೆ ಗಗನಕ್ಕೇರಿದೆ. ಈ ಬಗ್ಗೆ ಅಲ್ಲಿನ ಮಾಧ್ಯಮಗಳು ಕಿಡಿಕಾರಿವೆ. ಟೊಮೆಟೊ ರಫ್ತು ಬಂದ್‍ ಮಾಡಿದ್ದಕ್ಕೆ ಪ್ರತಿಯಾಗಿ ಅಣುಬಾಂಬ್‍…

  • ಸುದ್ದಿ

    ಜಗತ್ತಿನ ಅತ್ಯಂತ ಹಿರಿಯ ವ್ಯಕ್ತಿ ಯಾರಿರಬಹುದು?..ಮಾನವನ ಆಯಸ್ಸು ಎಷ್ಟು ಗೊತ್ತಾ….?

    ಮನುಷ್ಯ ಎಷ್ಟು ವರ್ಷ ಬದುಕಿರಬಲ್ಲ…? ಜಗತ್ತಿನ ಅತ್ಯಂತ ಹಿರಿಯ ವ್ಯಕ್ತಿ ಯಾರಿರಬಹುದು….? ಮನುಷ್ಯನ ವಯಸ್ಸಿಗೆ ಮಿತಿ ಇದ್ಯಾ….? ಇಂತಹ ಹತ್ತಾರು ಪ್ರಶ್ನೆಗಳು ನಮ್ಮ ಮನಸ್ಸಿನಲ್ಲಿ ಆಗಾಗ ಗಿರಕಿ ಹೊಡೆಯುತ್ತಲೇ ಇರುತ್ತವೆ. ಅಮೆರಿಕದ ವಿಜ್ಞಾನಿಗಳು ಈ ಬಗ್ಗೆ ಸಂಶೋಧನೆ ನಡೆಸಿದ್ದಾರೆ. 5 ತಂಡಗಳಾಗಿ ಪ್ರತ್ಯೇಕ ಸಂಶೋಧನೆ ನಡೆಸಿದ್ದು, ಮನುಷ್ಯನ ಆಯಸ್ಸು ಗರಿಷ್ಠ 114.9 ವರ್ಷ ಅಥವಾ ಅದನ್ನು ಮೀರಲೂಬಹುದು ಅನ್ನೋ ತೀರ್ಮಾನಕ್ಕೆ ಬಂದಿದ್ದಾರೆ. ಆದ್ರೆ ಈ ಸಂಶೋಧನೆಯಲ್ಲಿ ನಿಖರತೆ ಇಲ್ಲ ಅನ್ನೋದು ಇನ್ನು ಕೆಲವರ ವಾದ. ಮನುಷ್ಯ 120…

  • ಸುದ್ದಿ

    ವಿದ್ಯಾರ್ಥಿಗಳನ್ನೇ ಕಾರ್ಮಿಕರನ್ನಾಗಿ ಬಳಸಿದ ಶಾಲೆ..!

    ಚೆನ್ನಾಗಿಓದಲಿ ಎಂದು ಪೋಷಕರು ಆಸೆಯಿಂದ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಿದರೆ ಅಲ್ಲಿ ನಡೆಯುವುದೇ ಬೇರೆ.ಓದಿ, ಆಡಬೇಕಾದ ಮಕ್ಕಳು ದೊಡ್ಡವರು ಮಾಡುವ ಕಷ್ಟದ ಕೆಲಸಗಳನ್ನು ಮಾಡುತ್ತಿದ್ದಾರೆ. ಚಿಕ್ಕಬಳ್ಳಾಪುರದ ಖಾಸಗಿ ಶಾಲೆಯಲ್ಲಿ ಮಕ್ಕಳಿಂದಲೇ ಟ್ರಾಕ್ಟರ್‌ಗೆ ಜಲ್ಲಿ ತುಂಬಿಸಲಾಗಿದೆ. ಶಾಲೆಯಲ್ಲಿ ಮಕ್ಕಳಿಗೆ ಪಾಠ ಕಲಿಸ ಬೇಕಾ ದ ಶಿಕ್ಷಕರು, ಸಾವಿರಾರು ರುಪಾಯಿ ಶುಲ್ಕ ಪಡೆಯುವ ಜೊತೆಗೆ ವಿದ್ಯಾರ್ಥಿಗಳನ್ನು ಕೂಲಿ ಕಾರ್ಮಿಕರನ್ನಾಗಿ ದುಡಿಸಿ ಕೊಂಡಿರುವ ಘಟನೆ ತಾಲೂಕಿನ ಚೇಳೂರು ಅರವಿಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದಿದೆ. ಸಾವಿರಾರು ರುಪಾಯಿ ಶುಲ್ಕ ಪಾವತಿಸಿ ಖಾಸಗಿ…

  • ವಿಚಿತ್ರ ಆದರೂ ಸತ್ಯ

    ಭಾರತವನ್ನು ಆಳಿದ ಮಾಹನ್ ರಾಜ ‘ಚಂದ್ರಗುಪ್ತ ಮೌರ್ಯ’ ತನ್ನ ಕೊನೆಯ ದಿನಗಳನ್ನು ಎಲ್ಲಿ ಕಳೆದನು ನಿಮಗೆ ಗೊತ್ತಾ..?ತಿಳಿಯಲು ಈ

    ಚಂದ್ರಗುಪ್ತನು ಅಧಿಕಾರವನ್ನು ಬಲಪಡಿಸುವ ಮೊದಲು ಉಪಖಂಡದ ವಾಯುವ್ಯ ಭಾಗದಲ್ಲಿ ಸಣ್ಣ ಸಣ್ಣ ರಾಜ್ಯಗಳೇ ಇದ್ದವು . ಗಂಗಾ ನದಿಯ ಬಯಲಿನಲ್ಲಿ ನಂದರ ಸಾಮ್ರಾಜ್ಯವು ಪ್ರಮುಖವಾಗಿತ್ತು.

  • ಸುದ್ದಿ

    ತೃತೀಯ ಲಿಂಗ ವರ್ಗಕ್ಕೆ ಮಾದರಿಯಾದ ರಾಣಿ ಕಿಣ್ಣರ್,.!! ಯಾಕೆ ಗೊತ್ತೇ,.?

    ತೃತೀಯ ಲಿಂಗಿ ರಾಣಿ ಕಿಣ್ಣರ್ ದೇಶದ ಮೊದಲ ಉಬರ್ ಕ್ಯಾಬ್ ಡ್ರೈವರ್ ಆಗಿದ್ದು, ಸದ್ಯ ಉಬರ್ ಕಂಪನಿಯ ಡ್ರೈವರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಣಿ ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಫುಟ್ ಪಾತ್ ನಲ್ಲಿ ಭಿಕ್ಷೆ ಬೇಡುವುದನ್ನು ನಿರಾಕರಿಸಿದ್ದಾರೆ. ಹೀಗಾಗಿ ಸಮಾಜದಲ್ಲಿ ಧೈರ್ಯವಾಗಿ ಮೆಟ್ಟಿ ನಿಂತು ಇತರರಿಗೆ ಮಾದರಿಯಾಗಿದ್ದಾರೆ. ರಾಣಿ 2016ರಲ್ಲಿ ಆಟೋ ರಿಕ್ಷಾ ತೆಗೆದುಕೊಂಡು ಆ ಮೂಲಕ ತಮ್ಮ ಜೀವನ ನಡೆಸಿಕೊಳ್ಳಲು ಆರಂಭಿಸಿದ್ದರು. ಆದರೆ ರಾಣಿ ತೃತೀಯ ಲಿಂಗಿ ಎಂಬ ಕಾರಣಕ್ಕೆ ಯಾರೂ ಅವರ ಆಟೋವನ್ನು ಬಳಸಿಕೊಂಡಿರಲಿಲ್ಲ….