ಸುದ್ದಿ

ದಿನಸಿ ಅಂಗಡಿ ಮಾಲೀಕನ ಅಕ್ಷರದಾಸೋಹ : ಮೆಟ್ರೋ ಸೇತುವೆ ಕೆಳಗೆ 300 ಬಡ ಮಕ್ಕಳಿಗೆ ಪಾಠ…..!

26

ಒಬ್ಬ ಅಂಗಡಿ ಮಾಲೀಕ ಸರ್ಕಾರ ಅಥವಾ ಯಾವುದೇ ಸಂಘ-ಸಂಸ್ಥೆಯ ನೆರವಿಲ್ಲದೇ ಕಳೆದ ಎಂಟು ವರ್ಷಗಳಿಂದ 300 ಬಡ ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಸಮಾಜಕ್ಕೆ ಮಾದರಿ ಎನಿಸಿದ್ದಾರೆ. ಅದೂ ಕೂಡ ದೆಹಲಿಯ ಯಮುನಾ ನದಿ ತಟದಲ್ಲಿರುವ ಮೆಟ್ರೋ ರೈಲು ಸೇತುವೆ ಕೆಳಗೆ….!

ರಾಜೇಶ್ ಕುಮಾರ್ ಎಂಬ ಈ ವ್ಯಕ್ತಿ ಯಮುನಾ ತಟದಲ್ಲಿ ಜೋಪಡಿಗಳನ್ನು ಹಾಕಿಕೊಂಡು ಜೀವನ ಸಾಗಿಸುತ್ತಿರುವ ಬಡ ಕುಟುಂಬಗಳ ಮಕ್ಕಳಿಗೂ ಶಿಕ್ಷಣ ಸಿಗಲಿ ಎಂಬ ಉದ್ದೇಶವಿಟ್ಟುಕೊಂಡು ಈ ಶಾಲೆ ನಡೆಸುತ್ತಿದ್ದಾರೆ.

ಉತ್ತರಪ್ರದೇಶ ಮೂಲದ ಇವರು ತಮ್ಮ ಐವರು ಸದಸ್ಯರ ತುಂಬು ಕುಟುಂಬದ ಜೀವನಾಧಾರಕ್ಕೆಂದು ಒಂದು ದಿನಸಿ ಅಂಗಡಿ ಇಟ್ಟುಕೊಂಡಿದ್ದಾರೆ. ಬೆಳಗ್ಗೆ 9 ರಿಂದ 11 ಮತ್ತು ಮಧ್ಯಾಹ್ನ 2 ರಿಂದ 4.30 ರವರೆಗೆ ಎರಡು ಪಾಳಿಯಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡುತ್ತಾರೆ. ಇವರ ಕಾರ್ಯವನ್ನು ಕಂಡ ನೆರೆಹೊರೆಯಲ್ಲಿ ವಾಸವಾಗಿರುವ ಇನ್ನೂ ಏಳು ಮಂದಿ ಶಿಕ್ಷಕರು ತಮ್ಮ ಬಿಡುವಿನ ವೇಳೆಯಲ್ಲಿ ಇವರ ಶಾಲೆಗೆ ಬಂದು ಪಾಠ ಹೇಳಿಕೊಡುತ್ತಿದ್ದಾರೆ.

ಇದೊಂದು ಓಪನ್ ಹೌಸ್ ಸ್ಕೂಲ್. ಇದಕ್ಕೆ ಸೂರು ಎಂದರೆ ಮೆಟ್ರೋ ಸೇತುವೆ. ಮೆಟ್ರೋ ಕಾಂಪ್ಲೆಕ್ಸ್ ನ ಗೋಡೆಗೆ ಕಪ್ಪು ಬಣ್ಣ ಬಳಿದು ಅದನ್ನೇ ಬೋರ್ಡ್ ಮಾಡಲಾಗಿದೆ, ಕಾರ್ಪೆಟ್ ಹಾಕಿ ಅದರ ಮೇಲೆ ಮಕ್ಕಳನ್ನು ಕೂರಿಸಿ ಪಾಠ ಮಾಡಲಾಗುತ್ತದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ವಿಚಿತ್ರ ಆದರೂ ಸತ್ಯ

    ಪ್ರಸಿದ್ದ ರಾಜಕಾರಣಿಗಳಂತೆಯೇ ಕಾಣುವ ಈ ವ್ಯಕ್ತಿಗಳ ಪೋಟೋಗಳನ್ನು ನೋಡಿದ್ರೆ ನೀವ್ ಶಾಕ್ ಆಗ್ತೀರಾ..!

    ಒಬ್ಬರಂತೆ ಮತ್ತೊಬ್ಬರು ಇರುತ್ತಾರೆ ಎಂದು ಕೇಳಿರುತ್ತೇವೆ ಅಲ್ಲಲ್ಲಿ ನೋಡಿರುತ್ತೇವೆ.ಆದ್ರೆ ಅಂತಹ ವ್ಯೆಕ್ತಿಗಳನ್ನು ಕಂಡಾಗ ನಮಗೆ ರೋಮಾಂಚನವಾಗುತ್ತದೆ.ಅಂತಹದರಲ್ಲಿ ಕೆಲವು ಪ್ರಸಿದ್ದ ರಾಜಕಾರಣಿಗಳಂತೆ ಕಾಣುವ ಬೇರೆ ವ್ಯೆಕ್ತಿಗಳ ಕೆಲವು ಚಿತ್ರಗಳು ಇಲ್ಲಿವೆ.

  • ಸುದ್ದಿ

    ಕರೋನ ಎಫೆಕ್ಟ್, 4 ಲಕ್ಷ ಸಂಬಳ ಪಡೆಯುತ್ತಿದ್ದ ಪೈಲಟ್ ಈಗ ಡೆಲಿವರಿ ಬಾಯ್.

    ಕೊರೊನಾ ಸುಳಿಗೆ ಸಿಲುಕಿ ಹಲವರು ಜೀವವನ್ನ ಕಳೆದುಕೊಂಡದ್ರೆ, ಬಹುತೇಕರು ಜೀವನವನ್ನು ಕಳೆದುಕೊಳ್ಳುವಂತಾಗಿದೆ. ಕೊರೊನಾ ತಡೆಗಾಗಿ ವಿಶ್ವಮಟ್ಟದಲ್ಲಿ ಲಾಕ್‍ಡೌನ್ ಸೂತ್ರ ಜಾರಿಗೊಳಿಸಿದ ಪರಿಣಾಮ ಎಷ್ಟೋ ಜನ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಉದ್ಯೋಗ ಕಳೆದುಕೊಂಡ ಕೂಲಿ ಕಾರ್ಮಿಕರು ವಾಹನದ ವ್ಯವಸ್ಥೆ ಇಲ್ಲದೇ ಕಾಲ್ನಡಿಗೆಯಲ್ಲಿಯೇ ತಲೆಯ ಮೇಲೆ ಚೀಲ ಹೊತ್ತು ಹೆಜ್ಜೆ ಹಾಕಿರುವ ದೃಶ್ಯಗಳು ಕಣ್ಮುಂದೆ ಬರುತ್ತವೆ. 42 ವರ್ಷದ ನಾಕರಿನ್ ಇಂಟಾ ನಾಲ್ಕು ವರ್ಷಗಳಿಂದ ಪೈಲಟ್ ವೃತ್ತಿಯಲ್ಲಿದ್ದಾರೆ. ಕೊರೊನಾದಿಂದಾಗಿ ಉದ್ಯೋಗ ಕಳೆದುಕೊಂಡ ನಾಕರಿನ್ ಕುಟುಂಬ ನಿರ್ವಹಣೆಗಾಗಿ ಡೆಲಿವರಿ ಬಾಯ್ ಆಗಿ ಕೆಲಸ…

  • ಆರೋಗ್ಯ, ಉಪಯುಕ್ತ ಮಾಹಿತಿ

    ಪ್ರತೀ ದಿನವೂ ಒಂದು ಗ್ಲಾಸ್ ದಾಳಿಂಬೆ ಜ್ಯೂಸ್ ಕುಡಿಯೋದರಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ?

    ಹಣ್ಣುಗಳು ಆರೋಗ್ಯ ಮತ್ತು ತ್ವಚೆಗೆ ಅಪಾರ ಪ್ರಯೋಜನಕಾರಿಯಾಗಿವೆ. ರೋಗ ನಿರೋಧಕ ಶಕ್ತಿಯನ್ನು ಪಡೆಯಬೇಕಾದರೆ ಪ್ರತಿಯೊಂದು ಋತುಕಾಲಿಕ ಹಣ್ಣುಗಳನ್ನು ತಿನ್ನಬೇಕು. ದಾಳಿಂಬೆ ಜ್ಯೂಸ್ ಕುಡಿಯೋದ್ರಿಂದ ಸಾಕಷ್ಟು ಆರೋಗ್ಯಕರ ಪ್ರಯೋಜನಗಳಿವೆ. ಕ್ಯಾನ್ಸರ್, ಹೃದಯ ರಕ್ತನಾಳದ ಖಾಯಿಲೆಗಳಿಂದಲೂ ರಕ್ಷಣೆ ಕೊಡುತ್ತೆ ಈ ಜ್ಯೂಸ್ ಎನ್ನುತ್ತೆ ಹೊಸ ಸಂಶೋಧನೆ. ಇತ್ತೀಚಿನ ಸಂಶೋಧನೆಯ ಪ್ರಕಾರ ದಾಳಿಂಬೆ ಜ್ಯೂಸ್ ಹೃದಯ ರಕ್ತನಾಳಗಳನ್ನು ಶುದ್ಧಗೊಳಿಸಿ ಖಾಯಿಲೆಗಳು ಬರದಂತೆ ನೋಡಿಕೊಳ್ಳುತ್ತದೆ. ಹೃದಯಾಘಾತಕ್ಕೆ ಮುಖ್ಯ ಕಾರಣವಾಗಿರೋ ಅಪಧಮನಿ ಹಾಗೂ ಅಬಿಧಮನಿ ಮುಚ್ಚಿಹೋಗುವ ಅಪಾಯವನ್ನೂ ಕೂಡ ದಾಳಿಂಬೆ ತಡೆಯುತ್ತದೆ. ಅಲ್ಲದೇ ದಾಳಿಂಬೆ…

  • ಸುದ್ದಿ

    ತನ್ನ ಯಜಮಾನ ನದಿಗೆ ಹಾರಿದ್ದನ್ನು ನೋಡಿ, ಆತನಿಗಾಗಿ ನಾಲ್ಕು ದಿನಗಳಿಂದ ಸೇತುವೆ ಮೇಲೆಯೇ ಕುಳಿತ ಶ್ವಾನ.

    ಪ್ರಾಣಿಗಳಿಗೆ ಸಾಸಿವೆಯಷ್ಟು ಪ್ರೀತಿ ಕೊಟ್ಟರೆ ಸಾಕು, ಅವು ಬೆಟ್ಟದಷ್ಟು ಪ್ರೀತಿ ತೋರಿಸುತ್ತವೆ ಎಂಬುದಕ್ಕೆ ಇಲ್ಲೊಂದು ನಡೆದಿರುವ ಘಟನೆಯೇ ಸಾಕ್ಷಿ. ಹೌದು. ಚೀನಾದ ವುಹಾನ್ ನಗರದಲ್ಲಿ ಮುದ್ದಿನಿಂದ ಸಾಕಿದ ಶ್ವಾನವೊಂದು ತನ್ನ ಯಜಮಾನನನ್ನು ಕಾಯುತ್ತಾ ಕುಳಿತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಶ್ವಾನ ತನ್ನ ಯಜಮಾನ ನದಿಗೆ ಹಾರಿದ್ದನ್ನು ನೋಡಿದೆ. ಹೀಗಾಗಿ ಆತನಿಗಾಗಿ ನಾಲ್ಕು ದಿನಗಳಿಂದ ಸೇತುವೆ ಮೇಲೆಯೇ ಕುಳಿತು ಆತನ ಬರುವಿಕೆಗಾಗಿ ಕಾಯುತ್ತಾ ಕುಳಿತಿದೆ. ಇದನ್ನು ಗಮನಿಸಿದ ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಫೋಟೋ,…

  • ಸುದ್ದಿ

    ಬಾಲಿವುಡ್​ಗೆ ಸೈ ಕನ್ನಡಕ್ಕೆ ಜೈ: ಈ ಬಾರಿಯ ಬಿಗ್ ಬಾಸ್​ನಲ್ಲಿ ಕಾಣಿಸಿಕೊಳ್ಳಲಿದ್ದಾರಾ ಸಲ್ಮಾನ್ ಖಾನ್‌?

    ‘ಬಿಗ್‌ಬಾಸ್‌’ ರಿಯಾಲಿಟಿ ಶೋನಲ್ಲಿ ಒಂದಷ್ಟು ಜನ ಸ್ಪರ್ಧಿಗಳಾಗಿ ಎಂಟ್ರಿ ನೀಡಿದರೆ, ಮತ್ತೊಂದಿಷ್ಟು ಜನ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ನೀಡುತ್ತಾರೆ. ಜತೆಗೆ ಸಿನಿಮಾ ಪ್ರಮೋಷನ್‌ಗಾಗಿ ಅನೇಕರು ಬಿಗ್‌ಬಾಸ್‌ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಬಾಲಿವುಡ್‌ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಕೂಡ ಬೆಂಗಳೂರಿನ ಬಿಡದಿಯಲ್ಲಿರುವ ಬಿಗ್‌ಬಾಸ್ ಮನೆಗೆ ಕಾಲಿಟ್ಟರೆ ಅಚ್ಚರಿ ಇಲ್ಲ! ಇಂಥದ್ದೊಂದು ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಆದರೆ, ಇತ್ತೀಚಿಗಷ್ಟೇ ನಡೆದ ‘ಬಿಗ್‌ಬಾಸ್’ ಪ್ರೆಸ್‌ಮೀಟ್‌ನಲ್ಲಿ ಸಲ್ಮಾನ್‌ ಆಗಮನದ ಬಗ್ಗೆ ಸುದೀಪ್‌ ಕ್ಲಾರಿಟಿ ನೀಡಿದ್ದಾರೆ. ‘ನಾವಿಬ್ಬರು ಒಂದೇ ದಿನ ಬಿಗ್‌ಬಾಸ್‌ನ ಬೇರೆ…