ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಇಂಗ್ಲೆಂಡ್ನ ಲೀಸೆಸ್ಟರ್ ಶೈರ್ನ ನಿವಾಸಿ ಟೀನಾ ವ್ಯಾಟ್ಸನ್(73) ಅವರಿಗೆ ಚಹಾ ಎಂದರೆ ಎಲ್ಲಿಲ್ಲದ ಪ್ರೀತಿ. ಹೀಗಾಗಿ ಅವರು ತಮ್ಮ ಸಾವಿನಲ್ಲೂ ಚಹಾ ತಮ್ಮೊಂದಿಗೆ ಒಂದಾಗ ಬೇಕು ಎಂಬ ಆಸೆ ಇಟ್ಟುಕೊಂಡಿದ್ದರು. ಟೀನಾ ಅವರು ಸಾಯುವ 4 ವರ್ಷಗಳ ಹಿಂದೆಯೇ ಅವರು ತಾವು ನಿಧನವಾದರೆ ತಮ್ಮಅಂತ್ಯಸಂಸ್ಕಾರ ಹೇಗೆ ನಡೆಯ ಬೇಕು ಎನ್ನುವ ಬಗ್ಗೆ ಮಗಳು ಡೇಬ್ಸ್ ಬಳಿ ಹೇಳಿಕೊಂಡಿದ್ದರು.

ತಮ್ಮ ಮೃತ ದೇಹವನ್ನು ಚಹಾದ ಬ್ಯಾಗ್ ರೀತಿ ಕಾಣುವ ಶವದ ಪೆಟ್ಟಿಗೆಯಲ್ಲಿ ಇಟ್ಟುಅಂತ್ಯ ಸಂಸ್ಕಾರ ಮಾಡಿ ಎಂದು ತಮ್ಮಆಸೆ ತಿಳಿಸಿದ್ದರು. ಹೀಗಾಗಿ ಟೀನಾ ಸಾವನ್ನಪ್ಪಿದಾಗ ಅವರ ಮೃತ ದೇಹವನ್ನು ಚಹಾದ ಬ್ಯಾಗ್ ರೀತಿಯೇ ಕಾಣುವ ಶವದ ಪೆಟ್ಟಿಗೆಯಲ್ಲಿ ಇಟ್ಟುಅಂತ್ಯ ಸಂಸ್ಕಾರ ಮಾಡಲಾಯಿತು. ಈ ವಿಚಾರ ತಿಳಿದು ಅನೇಕರು ಎಂಥ ವಿಚಿತ್ರ ಆಸೆಯೋ ಎಂದಿದ್ದರೆ, ಕೆಲವರು ತಾಯಿಯ ಕೊನೆ ಆಸೆ ಪೂರೈಸಿದ ಮಗಳ ಪ್ರೀತಿಗೆ ಭೇಷ್ ಎಂದಿದ್ದಾರೆ.

ಈ ಬಗ್ಗೆ ಮಾತನಾಡಿದ ಡೇಬ್ಸ್, ನನ್ನ ತಾಯಿಯ ಆಸೆಯನ್ನು ಪೂರೈಸಿದ್ದೇನೆ ಎಂಬ ತೃಪ್ತಿ ನನಗಿದೆ. ಅಮ್ಮನನ್ನು ಚಹಾದ ಬ್ಯಾಗ್ ರೀತಿ ಕಾಣುವ ಶವದ ಪೆಟ್ಟಿಗೆಯಲ್ಲಿ ಅಂತ್ಯ ಸಂಸ್ಕಾರ ಮಾಡಿರೋದನ್ನು ಅವರೂ ಕೂಡ ಸ್ವರ್ಗದಿಂದ ನೋಡಿದ್ದಾರೆ ಎಂದು ನಾನು ಅಂದುಕೊಂಡಿದ್ದೇನೆ. ಮೇಲಿನಿಂದ ತನ್ನ ಚಹಾ ಬ್ಯಾಗ್ರೀತಿ ಕಾಣುವ ಶವದ ಪೆಟ್ಟಿಗೆ ನೋಡಿ ಅವರು ಸಿಕ್ಕಾಪಟ್ಟೆ ನಕ್ಕಿರುತ್ತಾರೆ. ಅವರಿಗೆ ಇದರಿಂದ ಖುಷಿಯಾಗಿದೆ ಎಂದುನನಗೆ ಗೊತ್ತು. ಈಗಲೂ ನಾನು ಚಹಾ ಮಾಡಿದಾಗಲೆಲ್ಲಾ ಅಮ್ಮನಿಗಾಗಿ ಚಹಾವನ್ನು ಎತ್ತಿಡುತ್ತೇನೆ ಎಂದು ಹೇಳಿದ್ದಾರೆ.

ನನ್ನ ಅಮ್ಮ 73ನೇ ವಯಸ್ಸಿಗೆ ಹೃದಯಾಘಾತದಿಂದ ನಮ್ಮನ್ನು ಅಗಲಿದರು. ಅವರು ಎರಡು ಬಾರಿ ಕ್ಯಾನ್ಸರ್ ಜೊತೆ ಹೋರಾಡಿ ಗುಣಮುಖರಾಗಿದ್ದರು. ಅವರು 14 ವರ್ಷದವರಾಗಿದ್ದಾಗ ಸ್ಪೇನ್ನಲ್ಲಿ ಒಂದುಕೀಟ ಅವರನ್ನು ಕಚ್ಚಿತ್ತು. ಅದರ ಕಡಿತದಿಂದ ಅವರ 1 ಕಾಲಿಗೆ ಇನ್ಫೆಕ್ಷನ್ಆಗಿ ಕಾಲನ್ನೇ ಕತ್ತರಿಸಬೇಕಾಯ್ತು. ಬಳಿಕ ಸೋಂಕು ಹರಡಿ ಇನ್ನೊಂದು ಕಾಲನ್ನುಕೂಡ ಕತ್ತರಿಸಬೇಕಾಯ್ತು. ಎರಡೂ ಕಾಲನ್ನು ಕಳೆದುಕೊಂಡಿದ್ದರೂ ನನ್ನ ಅಮ್ಮ ಛಲ ಬಿಟ್ಟಿರಲಿಲ್ಲ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಫೇಸ್ಬುಕ್ನಲ್ಲಿ ಪ್ರೊಫೈಲ್ ಚಿತ್ರವನ್ನು ನಾವು ಹಾಕುವುದಕ್ಕೆ ಮುಂಚೆ ಹಿಂಜರಿಯುವುದು ಸಹಜ.ನಿಮಗೆಲ್ಲಾ ಗೊತ್ತಿರುವ ಹಾಗೆ ಕೆಲವರು ಪ್ರೊಫೈಲ್ ಫೋಟೋಗಳನ್ನು ದುರುಪಯೋಗ ಮಾಡಿಕೊಳ್ಳುವ ತುಂಬಾ ಘಟನೆಗಳು ನಡೆಯುತ್ತಿರುತ್ತವೆ.
ನೋಡುಗರ ಮನವನ್ನು ಕೆರಳಿಸುವ ಬ್ರಹ್ಮ ಕಮಲ ಸೂರ್ಯನ ಬೆಳಕಿನಿಂದ ಮೊಗ್ಗಾಗಿ ರಾತ್ರಿ ಚಂದ್ರ ಬರುವವರೆಗೂ ಕಾದು 11 ಗಂಟೆಯ ನಂತರ ಅರಳಿ ಬೆಳಗಾಗುವ ಹೊತ್ತಿಗೆ ಕಮರುವುದೇ ಬ್ರಹ್ಮ ಕಮಲ. ಕಾಂಡವೇ ಎಲೆಯಾಗಿ, ಎಲೆಯೇ ಹೂವಾಗಿ ಅರಳುವ ಈ ಬ್ರಹ್ಮಕಮಲದ ಬಳ್ಳಿಯನ್ನು ಹೆಚ್ಚಾಗಿ ಮನೆಯ ಅಂಗಳದಲ್ಲಿ ಬೆಳೆಸುತ್ತಾರೆ.
*ರಥಸಪ್ತಮಿಯಂದು ಎಕ್ಕದ ಎಲೆಗಳ ಸ್ನಾನ ಮಾಡುವುದರ ಮಹತ್ವ ಏನು ಗೊತ್ತಾ?* ಮಾಘಮಾಸ ಶುಕ್ಲ ಪಕ್ಷದ ಸಪ್ತಮಿಯಂದು ರಥಸಪ್ತಮಿ ಹಬ್ಬವನ್ನು ಆಚರಿಸಲಾಗುತ್ತದೆ. ಒಂದೊಂದು ಹಬ್ಬಕ್ಕೂ ಒಂದೊಂದು ಮಹತ್ವವಿದ್ದು, ರಥ ಸಪ್ತಮಿಯನ್ನು ಭಗವಾನ್ ಸೂರ್ಯನಾರಾಯಣನಿಗೆ ಅರ್ಪಿಸಲಾಗಿದೆ. ಸೂರ್ಯ ಸಮಸ್ತ ಜೀವಕೋಟಿಗೆ ಆಧಾರವಾಗಿದ್ದು, ಈ ದಿನ ಒಳ್ಳೆಯ ಆರೋಗ್ಯಕ್ಕಾಗಿ ಸೂರ್ಯನಲ್ಲಿ ಬೇಡುವುದು ರಥಸಪ್ತಮಿಯ ಮಹತ್ವಗಳಲ್ಲಿ ಒಂದಾಗಿದೆ. ಸೂರ್ಯದೇವ ಎಂದು ಕರೆಯಲ್ಪಡುವ ಸೂರ್ಯನು ಹಿಂದೂ ಧರ್ಮದ ಪ್ರಮುಖ ದೇವರುಗಳಲ್ಲಿ ಒಬ್ಬನು. 9 ಗ್ರಹಗಳ ಅಧಿಪತಿ ಕೂಡ ಸೂರ್ಯದೇವನೇ ಆಗಿದ್ದಾನೆ. ಈತನನ್ನು ಸೌರಮಂಡಲದ ರಾಜ…
ಗೃಹ ಲಕ್ಷ್ಮಿ ಯೋಜನೆಗೆ ಎಲ್ಲಿ ಯಾವಾಗ ಅರ್ಜಿ ಸಲ್ಲಿಸಬೇಕು ಎಂಬುದು ನಿಮಗೆ ಸರಕಾರದಿಂದ ಸಂದೇಶ ಬರಲಿದೆ ಹಾಗೂ ಈ ಲಿಂಕ್ ಮುಖಾಂತರ ತಿಳಿದುಕೊಳ್ಳಬಹುದು 8147500500 ಸಂಖ್ಯೆ ಗೆ ರೇಷನ್ ಕಾರ್ಡ್ ನಂಬರ್ SMS ಮಾಡಿದ ಬಳಿಕ ನೋಂದಣಿ ಸ್ಥಳ ದಿನಾಂಕ ಮತ್ತು ಸಮಯ ತಿಳಿಯ ಬಹುದು ಈ ಲಿಂಕ್ ತೆರೆದು ರೇಷನ್ ಕಾರ್ಡ್ ನಂಬರ್ ಹಾಕಿದರೆ ದಿನಾಂಕ ಸ್ಥಳ ಮತ್ತು ಸಮಯವನ್ನು ತಿಳಿಯ ಬಹುದು ಅಥವಾ 8147500500 ಸಂಖ್ಯೆ ಗೆ ರೇಷನ್ ಕಾರ್ಡ್ ನಂಬರ್ SMS ಮಾಡಿದ ಬಳಿಕ…
ನಂಬಲೇಬೇಕಾದ ಆದರೆ ನಂಬಲು ಸಾಧ್ಯವೇ ಇಲ್ಲದ ಸತ್ಯವಿದು. ವೈಷ್ಣವ ಪರಂಪರೆಯ ದಾರ್ಶನಿಕರಲ್ಲಿ ಒಬ್ಬರಾದ ವಿಶಿಷ್ಟಾದ್ವೈತ ಪ್ರತಿಪಾದಕ, ಸನಾತನ ಧರ್ಮ ರಕ್ಷಕ ಭಗವಾನ್ ರಾಮಾನುಜಾಚಾರ್ಯರ ಮೂಲ ಶರೀರವನ್ನು ಕಳೆದ 884 ವರ್ಷಗಳಿಂದ ಜೋಪಾನವಾಗಿಡಲಾಗಿದೆ!! ತಮ್ಮ ಆರಾಧ್ಯ ರಾಮಾನುಜಾಚಾರ್ಯರ ಶರೀರವನ್ನು ಇನ್ನೂ ಸುಸ್ಥಿತಿಯಲ್ಲೇ ಇಡಲಾಗಿದೆ ಎನ್ನುವ ವಿಚಾರವೇ ಹೆಚ್ಚಿನ ವೈಷ್ಣವರಿಗೆ ಗೊತ್ತಿಲ್ಲ. ತಿರುಚರಾಪಳ್ಳಿಯ ಶ್ರೀರಂಗಮ್ ನ ರಂಗನಾಥ ಸ್ವಾಮಿ ಮಂದಿರದಲ್ಲಿ ರಾಮಾನುಜಾಚಾರ್ಯರ ಮೂಲ ಶರೀರವನ್ನು ಇಡಲಾಗಿದೆ. ವೈಯಕ್ತೀಕರಣ ತತ್ತ್ವಶಾಸ್ತ್ರದ ದೃಢವಾದ ಪ್ರತಿಪಾದಕರಾದ ಆಚಾರ್ಯರು ಭಗವಂತ ಮತ್ತು ವೈಯಕ್ತಿಕ ಆತ್ಮಗಳು ಗುಣಾತ್ಮಕವಾಗಿ…
ಅಧಿಕಾರಕ್ಕೆ ಬಂದಾಗಿನಿಂದಲೂ ಚುನಾವಣೆ ವೇಳೆ ನೀಡಲಾದ ಭರವಸೆಗಳನ್ನು ಈಡೇರಿಸೋದರಲ್ಲೇ ನಿರತರಾಗಿರುವ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ, ಒಂದೇ ದಿನಕ್ಕೆ 1 ಲಕ್ಷದ 26 ಸಾವಿರ ಜನರಿಗೆ ಸರ್ಕಾರಿ ಉದ್ಯೋಗ ನೀಡುವ ಮೂಲಕ ಈ ವೇಳೆ ವಿಶ್ವದಾಖಲೆ ನಿರ್ಮಿಸಿದ್ದಾರೆ. ಚುನಾವಣೆ ವೇಳೆ ನಿರುದ್ಯೋಗಿ ಯುವ ಜನತೆಗೆ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದ್ದ ಜಗನ್ ಇದೀಗ ಒಂದೇ ಭಾರಿಗೆ 1 ಲಕ್ಷದ 26 ಸಾವಿರ ಸರ್ಕಾರಿ ಉದ್ಯೋಗಕ್ಕೆ ನೇಮಕ ನಡೆಸಿದ್ದು ನಿನ್ನೇ ನಡೆದ ಸಮಾರಂಭದಲ್ಲಿ ಸ್ವತಃ ತಾವೇ ಅಭ್ಯರ್ಥಿಗಳಿಗೆ…