ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ದಿನಕ್ಕೆ ಒಂದು ಸೇಬು ತಿಂದರೆ ವೈದ್ಯರಿಂದ ದೂರವಿರ ಬಹುದು ಎಂಬ ಮಾತು ಅನಾದಿ ಕಾಲದಿಂದಲೂ ಕೇಳಿ ಬರುತ್ತಿದೆ. ಇದಕ್ಕೆ ಆಂಗ್ಲ ಭಾಷೆಯಲ್ಲಿ ಆ್ಯನ್ ಆ್ಯಪಲ್ ಎ ಡೇ ಕೀಪ್ಸ್ ಯು ಫ್ರಂ ದಿ ಡಾಕ್ಟ್ರರ್ ಎ ಡೇ ಅನ್ನುತ್ತಾರೆ..
ಮುಖ್ಯವಾಗಿ ಇಂದಿನ ಯಾಂತ್ರಿಕ ಲೋಕದಲ್ಲಿ ಬಲು ಸಹಜವಾಗಿ ಬರುವ ಕ್ಯಾನ್ಸರ್ ರೋಗದ ವಿರುದ್ಧ ಹೋರಾಡುವ ಜೀವಶಕ್ತಿಯನ್ನು ಈ ದಾಳಿಂಬೆ ಹಣ್ಣು ಹೊಂದಿದೆ. ದಾಳಿಂಬೆಯು ನಿಮ್ಮ ಚರ್ಮ, ದೇಹ ಹಾಗೂ ಕೂದಲಿನ ರಕ್ಷಣೆಯಲ್ಲೂ ಮಹತ್ತರ ಪಾತ್ರ ವಹಿಸುತ್ತದೆ. ದಾಳಿಂಬೆಯಲ್ಲಿ ವಿಟಮಿನ್ ಎ, ಸಿ ಹಾಗೂ ಇ ಅಂಶಗಳು ಹೇರಳವಾಗಿದ್ದು ಇವು ರೋಗಗಳ ವಿರುದ್ಧದ ಹೋರಾಡುವ ಶಕ್ತಿಯನ್ನು ಮನುಷ್ಯನ ದೇಹಕ್ಕೆ ನೀಡುತ್ತದೆ. ಅಲ್ಲದೆ ಗ್ರೀನ್ ಟೀಯಲ್ಲಿ ಇರುವ ಆರೋಗ್ಯವರ್ಧನೆ ಲಕ್ಷಣಗಳು ಕೂಡ ದಾಳಿಂಬೆಯಲ್ಲಿ ಕಂಡು ಬರುತ್ತದೆ. ದಾಳಿಂಬೆಯಿಂದ ಆಗುವ ಕೆಲವು ಪ್ರಯೋಜನಗಳು ಈ ಕೆಳಕಂಡಂತಿದೆ.
ಹೊಟ್ಟೆ ನೋವು ಉಪಶಮನ:-
ಮನುಷ್ಯನಲ್ಲಿ ಉಂಟಾಗುವ ಯಾವುದೇ ತೆರವಾದ ಹೊಟ್ಟೆನೋವಿಗೆ ದಾಳಿಂಬೆ ಹಣ್ಣು ರಾಮಬಾಣವಾಗಿದೆ. ಇದರ ಎಲೆಗಳಿಂದ ತಯಾರಿಸುವ ಜ್ಯೂಸ್ ಕುಡಿದರೆ ಹೊಟ್ಟೆ ನೋವು ಉಪಶಮನವಾಗುತ್ತದೆ . ಅಲ್ಲದೆ ಕಾಲರಾದಂತಹ ಮಾರಕ ರೋಗವನ್ನು ಕೂಡ ನಿಯಂತ್ರಿಸಬಹುದು.
ಕ್ಯಾನ್ಸರ್ ರೋಗ ನಿಯಂತ್ರಣ:
ವಿಟಮ್ ಎ, ಸಿ ಮತ್ತು ಕಬ್ಬಿಣ ಅಂಶಗಳು ಸಮೃದ್ಧವಾಗಿರುವ ದಾಳಿಂಬೆಯು ಕ್ಯಾನ್ಸರ್ ರೋಗವನ್ನು ನಿಯಂತ್ರಿಸಬಲ್ಲದು.
ಮುಖ್ಯವಾಗಿ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ವಿವಿಧ ಬಗೆಯ ಕ್ಯಾನ್ಸರ್ ವಿರುದ್ಧ ಹೋರಾಡಿ ರೋಗವನ್ನು ಶೀಘ್ರ ಗುಣಮುಖಗೊಳಿಸುತ್ತದೆ. ದಾಳಿಂಬೆಯಲ್ಲಿರುವ ವಿಟಮನ್ ಅಂಶಗಳು ಕ್ಯಾನ್ಸರ್ ಉಂಟು ಮಾಡುವ ರೋಗಾಣುಗಳ ವಿರುದ್ಧ ಹೋರಾಡುವ ಚೈತನ್ಯವನ್ನು ಹೆಚ್ಚಿಸುತ್ತದೆ.
ಹೃದಯ ರೋಗಗಳು ಶಮನ:-
ಅಮೆರಿಕದ ಜರ್ನಲ್ ಆಫ್ ಕ್ಲಿನಿಕಲ್ ನ್ಯುಟ್ರಿಶನ್ ಸಂಸ್ಥೆ ನಡೆಸಿದ ಸಂಶೋಧನೆಯ ಪ್ರಕಾರ ದಾಳಿಂಬೆಯಲ್ಲಿ ಹೇರಳವಾಗಿ ಆ್ಯಂಟಿಆ್ಯಕ್ಸಿಡೆಂಟ್ಸ್ (ಉತ್ಕರ್ಷಣಗಳ) ಅಂಶದ ಪ್ರಮಾಣ ಕಂಡು ಬಂದಿದ್ದು ಇದು ಮನುಷ್ಯನಲ್ಲಿ ಉತ್ಪತ್ತಿಯಾಗುವ ಕೊಬ್ಬಿನ ಅಂಶವನ್ನು ನಿಯಂತ್ರಿಸುವ ಮೂಲಕ ಹೃದಯಕ್ಕೆ ಸಂಬಂಧಿಸಿದ ರೋಗಗಳನ್ನು ತಡೆಗಟ್ಟಲು ಸಹಕರಿಸುತ್ತದೆ.
ನಿಯಮಿತವಾಗಿ ದಾಳಿಂಬೆ ಜ್ಯೂಸ್ ಅನ್ನು ಕುಡಿಯುತ್ತಿದ್ದರೆ ರಕ್ತವು ತೆಳುವಾಗುವ ಮೂಲಕ ಆಪಧಮನಿಯಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ನಿಯಂತ್ರಿಸಿ ಹೃದಯಾಘಾತ ಹಾಗೂ ಸ್ಟ್ರೋಕ್ (ಪಾಶ್ರ್ವವಾಯು ಅಥವಾ ಲಕ್ವ) ಬರದಂತೆ ನಿಯಂತ್ರಿಸುತ್ತದೆ.
ದಂತ ರಕ್ಷಣೆಗೆ ಸಹಕಾರಿ:-
ಇಂದಿನ ವೈಜ್ಞಾನಿಕ ಯುಗದಲ್ಲಿ ಹಲ್ಲುಗಳ ರಕ್ಷಣೆಗಾಗಿ ನಾನಾ ನಮೂನೆಯ ಟೂತ್‍ಪೇಸ್ಟ್ ಗಳನ್ನು ಬಳಸುತ್ತೇವೆ, ಅದರೂ ಕೆಲವೊಮ್ಮೆ ಹಲ್ಲುಗಳು ಹುಳುಕಾಗುತ್ತದೆ.
ಆದರೆ ದಿನನಿತ್ಯ ದಾಳಿಂಬೆ ಸೇವನೆಯಿಂದ ಆ ತೊಂದರೆಯನ್ನು ಸರಿಪಡಿಸಿಕೊಳ್ಳಬಹುದು.
ನವಚೈತನ್ಯ:-
ಕ್ವೀನ್ ಮಾರ್ಗೆಟ್ ಯುನಿವರ್ಸಿಟಿಯು ನಡೆಸಿದ ಅಧ್ಯಯನದ ಪ್ರಕಾರ ದಾಳಿಂಬೆಯು ಮನುಷ್ಯನಿಗೆ ನವಚೈತನ್ಯವನ್ನು ಹೆಚ್ಚಿಸುವ ಅಂಶಗಳನ್ನು ಹೊಂದಿದೆ ಎಂದು ತಿಳಿದು ಬಂದಿದೆ. ಸಾಮಾನ್ಯವಾಗಿ ನಾವು ಖಾಯಿಲೆ ಬಿದ್ದರೆ ವೈದ್ಯರು ಸೇಬಿನ ಜತೆಗೆ ದಾಳಿಂಬೆ ರಸವನ್ನು ಸೇವಿಸಲು ಸೂಚಿಸುತ್ತಾರೆ.
ಈ ಮೇಲ್ಕಂಡ ಎಲ್ಲ ಕಾಯಿಲೆಗಳಿಗೆ ರಾಮಬಾಣದಂತಿರುವ ದಾಳಿಂಬೆ ಹಾಗೂ ದಾಳಿಂಬೆ ಉತ್ಪನ್ನಗಳಿಂದ ತಯಾರಿಸುವ ಜ್ಯೂಸ್ ಕುಡಿಯುವುದರಿಂದ ಚರ್ಮದ ಕಾಂತಿಯು ಹೆಚ್ಚುತ್ತದೆ. ಮುಖ್ಯವಾಗಿ ಖಿನ್ನತೆ ತಡೆಯುವ ಶಕ್ತಿಯೂ ದಾಳಿಂಬೆಗಿದೆ ಇದೆ. ಇನ್ನೇಕೆ ತಡ ದಿನಕ್ಕೊಂದು ದಾಳಿಂಬೆಯನ್ನು ತಿನ್ನುವ ಮೂಲಕ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಒಂದು ಬಾರಿ ಹಾವು ಕಚ್ಚಿದರೂ ಪರಂಧಾಮ ಸೇರುವವರ ಮಧ್ಯೆ ಇಲ್ಲೊಬ್ಬಾಕೆ ಯುವತಿ 34 ಬಾರಿ ಹಾವಿನಿಂದ ಕಚ್ಚಿಸಿಕೊಂಡೂ ಬದುಕುಳಿದಿದ್ದಾಳೆ. ಈಕೆಯನ್ನು ಕೊಲ್ಲಬೇಕು ಎಂದು ಅದೆಷ್ಟೋ ವಿಷಜಂತುಗಳು ಪ್ರಯತ್ನ ಪಟ್ಟರೂ ವಿಷಕಂಠನಂತೆ ಈಕೆ ವಿಷವೇರಿಸಿಕೊಂಡಳೇ ಹೊರತು ಸಾವನ್ನಪ್ಪಿಲ್ಲ.
ಹಿಂದೂ ಧರ್ಮದಲ್ಲಿ ಶಿವನನ್ನು “ದೇವಾದಿದೇವ” ಮಹಾದೇವ ಎಂದು ಆರಾಧಿಸುತ್ತಾರೆ. ಬ್ರಹ್ಮ ವಿಷ್ಣು ಮಹೇಶ್ವರ ಎಂಬ ತ್ರಿಮೂರ್ತಿಗಳಲ್ಲಿ ಮಹೇಶ್ವರನೇ ಹೆಚ್ಚು ಶಕ್ತಿಶಾಲಿ ಎಂದು ನಂಬುವ ಕಾರಣ ಇತರ ದೇವರುಗಳೂ ಸಂಕಟಬಂದಾಗ ಶಿವನ ಬಳಿ ಸಹಾಯ ಬೇಡಿ ಧಾವಿಸುವ ಹಲವಾರು ದೃಷ್ಟಾಂತಗಳನ್ನು ಪುರಾಣಗಳಲ್ಲಿ ಕಾಣಬಹುದು. ಶಿವನನ್ನು ಭಕ್ತರು ಇನ್ನೂ ಹಲವಾರು ಹೆಸರುಗಳಿಂದ ಕರೆಯುತ್ತಾರೆ.
ವಿಶ್ವದೆಲ್ಲೆಡೆ ಡೌನ್ ಆಗಿದ್ದ ಫೇಸ್ಬುಕ್, ವಾಟ್ಸಪ್, ಇನ್ಸ್ಟಾಗ್ರಾಮ್ ಮತ್ತೆ ಎಂದಿನಂತೆ ಕೆಲಸ ಮಾಡುತ್ತಿವೆ. ಈ ಬಗ್ಗೆ ಫೇಸ್ಬುಕ್ ಇಂದು ಬೆಳಗ್ಗೆ ಸ್ಪಷ್ಟನೆ ನೀಡಿ, ನಮ್ಮ ಕೆಲ ಬಳಕೆದಾರರಿಗೆ ಫೋಟೋ, ವಿಡಿಯೋ ಅಪ್ಲೋಡ್ ಮತ್ತು ಕಳುಹಿಸಲು ಕಷ್ಟವಾಗಿತ್ತು. ಈಗ ಈ ಸಮಸ್ಯೆ ಬಗೆಹರಿದಿದ್ದು ನಾವು ಮರಳಿ ಬಂದಿದ್ದೇವೆ. ಈ ತೊಂದರೆ ಆಗಿದ್ದಕ್ಕೆ ಕ್ಷಮೆ ಕೇಳುತ್ತೇವೆ ಎಂದು ಟ್ವೀಟ್ ಮಾಡಿದೆ. ನಮ್ಮ ಕೆಲ ಬಳಕೆದಾರರಿಗೆ ಫೋಟೋ, ವಿಡಿಯೋ ಅಪ್ಲೋಡ್ ಮತ್ತು ಕಳುಹಿಸಲು ಕಷ್ಟವಾಗುತ್ತಿದೆ ಎನ್ನುವ ವಿಚಾರ ನಮ್ಮ ಗಮನಕ್ಕೆ ಬಂದಿದೆ….
ಜಾತಿ ಆಧಾರಿತ ತಾರತಮ್ಯ ತೊಡೆದುಹಾಕುವ ಪ್ರಯತ್ನವಾಗಿ ಕೇಂದ್ರ ಸರಕಾರವು, ಅಂತರ್ಜಾತಿ ವಿವಾಹಗಳನ್ನು ಪ್ರೋತ್ಸಾಹಿಸುವಂತೆ ಎಲ್ಲಾ ರಾಜ್ಯಗಳಿಗೆ ಸೂಚಿಸಿದೆ. ದಲಿತ ಅಂತರ್ಜಾತಿ ವಿವಾಹಗಳಿಗೆ ಪ್ರೋತ್ಸಾಹ ನೀಡುವ ಹಿನ್ನೆಲೆಯಲ್ಲಿ 2.5 ಲಕ್ಷ ರೂ. ಪ್ರೋತ್ಸಾಹ ಧನ ನೀಡುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.
ಇಂಜಿನಿಯರಿಂಗ್, ವೈದ್ಯ ಸೇರಿದಂತೆ ತಿಂಗಳಿಗೆ ಸಂಬಳ ಸಿಗುವಂತಹ ಹುದ್ದೆಗಳನ್ನು ಮಾತ್ರ ಎಲ್ಲರೂ ಗೌರವದಿಂದ ನೋಡ್ತಾರೆ. ಸಣ್ಣ ಪುಟ್ಟ ವ್ಯಾಪಾರ, ಟೀ ವ್ಯಾಪಾರದ ಹೆಸರು ಕೇಳಿದ್ರೆ ಬಹುತೇಕರು ಮೂಗು ಮುರಿಯುತ್ತಾರೆ. ಆದ್ರೆ ಟೀ ಸಣ್ಣ ವ್ಯಾಪಾರವಲ್ಲ. ಟೀ ಮಾರಾಟ ಮಾಡಿ ಲಕ್ಷಾಂತರ ರೂಪಾಯಿ ಗಳಿಸಬಹುದು ಎಂಬುದನ್ನು ಪುಣೆ ಯುವಕ ತೋರಿಸಿಕೊಟ್ಟಿದ್ದಾನೆ. ಪುಣೆಯಲ್ಲಿ ಯೇವ್ಲೆ ಟೀ ಹೌಸ್ ಪ್ರಸಿದ್ಧಿ ಪಡೆದಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುವ ಗುರಿಯನ್ನು ಈ ಟೀ ಹೌಸ್ ಹೊಂದಿದೆ. ಪುಣೆಯಲ್ಲಿಯೇ ಮೂರು ಸ್ಟಾಲ್ ಗಳನ್ನು ಇದು…
ಬೆಳ್ಳುಳ್ಳಿ ಮುಖ್ಯ ತರಕಾರಿಗಳಲ್ಲಿ ಒಂದು. ಕೆಲವರಿಗೆ ಬೆಳ್ಳುಳ್ಳಿ ಇಲ್ಲದ ಆಹಾರ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಬೆಳ್ಳುಳ್ಳಿ ಆಹಾರವಲ್ಲದೆ ಒಳ್ಳೆಯ ಔಷಧೀಯ ಗುಣವನ್ನು ಹೊಂದಿದೆ. 1) ಒಂದೆರಡು ಬೆಳ್ಳುಳ್ಳಿಯನ್ನು ಹಾಲಿನೊಂದಿಗೆ ಸೇವಿಸುವುದರಿಂದ ಹೊಟ್ಟೆ ಹುಳು ಮಾಯವಾಗುತ್ತದೆ. 2) ತುಪ್ಪದೊಂದಿಗೆ ಉರಿದು ಸೇವಿಸುವುದರಿಂದ ಅಗ್ನಿ ಮಾಧ್ಯ ಅಥವಾ ಉದರ ಶೂಲೆ ಗುಣವಾಗುತ್ತದೆ. 3) ಅರ್ಧಗಂಟೆಗೆ ಒಮ್ಮೆ ಬೆಳ್ಳುಳ್ಳಿಯ ರಸವನ್ನು ಸೇವಿಸುತ್ತಿದ್ದರೆ ಕಾಲರ ಗುಣವಾಗುತ್ತದೆ ಮತ್ತು ಊರಲ್ಲಿ ಕಾಲರ ಬಂದಾಗ ಮುನ್ನೆಚ್ಚರಿಕೆಗೆ ತೆಗೆದುಕೊಳ್ಳಬಹುದು. 4) ಇದರ ರಸವನ್ನು ಸೇವಿಸುವುದರಿಂದ ಕ್ಯಾನ್ಸರ್ ಕಣಗಳನ್ನು ಸಾಯಿಸಬಹುದು…