ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ದಾಖಲೆ ನಿರ್ಮಿಸಿದ ಕೊಹ್ಲಿ: ಏಕದಿನ ಕ್ರಿಕೆಟ್ ನಲ್ಲಿ ವೇಗದ 8 ಸಾವಿರ ರನ್ ಸಿಡಿಸಿದ ಮೊದಲ ಕ್ರಿಕೆಟಿಗ!
ವಿರಾಟ್ ಕೊಹ್ಲಿ ಮತ್ತೊಂದು ದಾಖಲೆ ನಿರ್ಮಿಸಿದ್ದು, ಬಾಂಗ್ಲಾದೇಶ ವಿರುದ್ಧ 96 ರನ್ ಗಳಿಸಿ ಶತಕ ವಂಚಿತಗೊಂಡು ,ಏಕದಿನ ಕ್ರಿಕೆಟ್ ನಲ್ಲಿ ಅತೀ ವೇಗದ 8 ಸಾವಿರ ರನ್ ಪೂರೈಸಿದ ಕ್ರಿಕೆಟಿಗ.
ಬ್ಯಾಟ್ಸ್ಮನ್ಗಳಿಗೆ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಕೊಹ್ಲಿ ಅಗ್ರಸ್ಥಾನ ಪಡೆದಿದ್ದಾರೆ
ವಿರಾಟ್ ಕೊಹ್ಲಿ ಮತ್ತೊಂದು ದಾಖಲೆ ನಿರ್ಮಿಸಿದ್ದು, ಬಾಂಗ್ಲಾದೇಶ ವಿರುದ್ಧ 96 ರನ್ ಗಳಿಸಿ ಶತಕ ವಂಚಿತಗೊಂಡು ,ಕೊಹ್ಲಿ ಏಕದಿನ ಕ್ರಿಕೆಟ್ ನಲ್ಲಿ ಅತೀ ವೇಗದ 8 ಸಾವಿರ ರನ್ ಪೂರೈಸಿದ ಕ್ರಿಕೆಟಿಗ.
ಲಂಡನ್ ನ ಎಡ್ಜ್ ಬ್ಯಾಸ್ಟನ್ ಕ್ರೀಡಾಂಗಣದಲ್ಲಿ ನಡೆದ 2ನೇ ಸೆಮಿ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಈ ದಾಖಲೆ ನಿರ್ಮಿಸಿದ್ದು, ತಮ್ಮ 175ನೇ ಇನ್ನಿಂಗ್ಸ್ ನಲ್ಲಿ 8 ಸಾವಿರ ಪೂರೈಸಿದ ವಿಶ್ವದ ಮೊದಲ ಆಟಗಾರ ಎಂಬ ಕೀರ್ತಿಗೆ ಕೊಹ್ಲಿ ಭಾಜನರಾಗಿದ್ದಾರೆ. ಆ ಮೂಲಕ ಕೊಹ್ಲಿ 8 ಸಾವಿರ ರನ್ ಪೂರೈಸಿದ ಕ್ರಿಕೆಟಿಗರ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದ್ದಾರೆ.
2008ರಲ್ಲಿ ಏಕದಿನ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದ ವಿರಾಟ್ ಕೊಹ್ಲಿ ಆರಂಭದಲ್ಲಿ ಹಿನ್ನಡೆ ಅನುಭವಿಸಿದ್ದರಾದರೂ, ಬಳಿಕ ತಮ್ಮ ಅದ್ಬುತ ಫಾರ್ಮ್ ನಿಂದಾಗಿ ಟೀಂ ಇಂಡಿಯಾದಲ್ಲಿ ಸುಧೀರ್ಘವಾಗಿ ಸ್ಥಾನ ಕಾಯ್ದುಕೊಂಡಿದ್ದರು. ಇದೀಗ ಅದೇ ಅದ್ಭುತ ಪ್ರದರ್ಶನದಿಂದಾಗಿ ಕೊಹ್ಲಿ ಟೀಂ ಇಂಡಿಯಾ ನಾಯಕ ಸ್ಥಾನಕ್ಕೇರಿದ್ದು, ಏಕದಿನದಲ್ಲಿ ಕೊಹ್ಲಿ ಅವರ ಬ್ಯಾಟಿಂಗ್ ಸರಾಸರಿ ಬರೊಬ್ಬರಿ 92.37ರಷ್ಟಿದೆ. ಕಳೆದ ವರ್ಷ ಕೊಹ್ಲಿ 85.50 ಬ್ಯಾಟಿಂಗ್ ಸರಾಸರಿ ಹೊಂದಿದ್ದರು.

ಸಚಿನ್, ಗಂಗೂಲಿ, ಲಾರಾ ದಾಖಲೆ ಧೂಳಿಪಟ
ಇದೇ ವೇಳೆ ವಿರಾಟ್ ಕೊಹ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮತ್ತು ಮಾಜಿ ನಾಯಕ ಸೌರವ್ ಗಂಗೂಲಿ ಅವರ ದಾಖಲೆಯನ್ನೂ ಕೂಡ ಹಿಂದಿಕ್ಕಿದ್ದಾರೆ. ಸಚಿನ್ 8 ಸಾವಿರ ರನ್ ಪೂರೈಸಲು 210 ಇನ್ನಿಂಗ್ಸ್ ಗಳನ್ನು ತೆಗೆದುಕೊಂಡಿದ್ದರೆ, ಗಂಗೂಲಿ 200 ಇನ್ನಿಂಗ್ಸ್ ಗಳಲ್ಲಿ 8 ಸಾವಿರ ರನ್ ಪೂರೈಸಿದ್ದರು. ಅಂತೆಯೇ ವೆಸ್ಟ್ ಇಂಡೀಸ್ ಬ್ಯಾಟಿಂಗ್ ಲೆಜೆಂಡ್ಸ ಬ್ರಿಯಾನ್ ಲಾರಾ 211 ಇನ್ನಿಂಗ್ಸ್ ಗಳಲ್ಲಿ 8 ಸಾವಿರ ರನ್ ಪೂರೈಸಿದ್ದರು.
ಕೊಹ್ಲಿ, ಡಿ ವಿಲ್ಲಿಯರ್ಸ್ ಮತ್ತು ವಾರ್ನರ್ ವಿರುದ್ಧ ಅಗ್ರ ಸ್ಥಾನ ಪಡೆದರು. ಐಸಿಸಿ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ, ಭಾರತ ತಂಡದ ನಾಯಕತ್ವದಲ್ಲಿ ಎರಡು ಸ್ಥಾನಗಳನ್ನು ಏರಿಸಿದ್ದಾರೆ. 2017 ರ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಮುನ್ನ ಮೂರನೇ ಶ್ರೇಯಾಂಕಿತ ಕೊಹ್ಲಿ – ಎಬಿ ಡಿ ವಿಲಿಯರ್ಸ್ನ 22 ನೇ ಸ್ಥಾನ ಮತ್ತು ಡೇವಿಡ್ ವಾರ್ನರ್ ಅವರ ಹಿಂದೆ 19 ಪಾಯಿಂಟ್ಗಳನ್ನು ಗಳಿಸಿದರು.
ಜೂನ್ 13 ರಂತೆ ಐಸಿಸಿ ಏಕದಿನ ತಂಡಗಳ ಶ್ರೇಯಾಂಕಗಳು
1. ದಕ್ಷಿಣ ಆಫ್ರಿಕಾ (119 ಅಂಕಗಳು) 2. ಆಸ್ಟ್ರೇಲಿಯಾ (117)
3. ಭಾರತ (117) | 4. ಇಂಗ್ಲೆಂಡ್ (114)
5. ನ್ಯೂಜಿಲೆಂಡ್ (111) | 6. ಬಾಂಗ್ಲಾದೇಶ (95)
7. ಶ್ರೀಲಂಕಾ (93) | 8. ಪಾಕಿಸ್ತಾನ (91)
9. ವೆಸ್ಟ್ ಇಂಡೀಸ್ (77) | 10. ಅಫ್ಘಾನಿಸ್ತಾನ (54)
11. ಜಿಂಬಾಬ್ವೆ (46) | 12. ಐರ್ಲೆಂಡ್ (41).
1. ವಿರಾಟ್ ಕೊಹ್ಲಿ (862 ಅಂಕಗಳು)
2. ಡೇವಿಡ್ ವಾರ್ನರ್ (861)
3. ಎಬಿ ಡಿ ವಿಲಿಯರ್ಸ್ (847)
4. ಜೋ ರೂಟ್ (798)
5. ಕೇನ್ ವಿಲಿಯಮ್ಸನ್ (779)
6. ಕ್ವಿಂಟನ್ ಡಿ ಕೊಕ್ (769)
7. ಫಾಫ್ ಡು ಪ್ಲೆಸಿಸ್ (768)
8. ಬಾಬರ್ ಅಜಮ್ (763)
9. ಮಾರ್ಟಿನ್ ಗುಪ್ಟಿಲ್ (749)
10. ಶಿಖರ್ ಧವನ್ (746)
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಅಧಿಕಾರದ ಮದವನ್ನು ತುಂಬಿರುವಂತ ಎಷ್ಟೋ ಜನ ಐಎಎಸ್ ಅದಿಕಾರಿಗಳನ್ನ ಪ್ರಸ್ತುದಿನಗಳಲ್ಲಿ ಕಾಣಬಹುದು. ಆದರೆ ಕೆಲ ಐಎಎಸ್ ಅಧಿಕಾರಿಗಳು ತಮ್ಮ ರಕ್ತದಲ್ಲೇ ಸಮಾಜ ಸೇವೆ ಬೆರೆತು ಬಂದಿದೆ ಏನೋ ಅನ್ನೋ ರೀತಿಯಲ್ಲಿ ಕೆಲಸವನ್ನು ಮಾಡುತ್ತಾರೆ. ಕೆಲ ಐಎಎಸ್ ಅಧಿಕಾರಿಗಳ ಸೇವೆಯನ್ನು ನಾವು ನೋಡಿರುವ ಹಾಗೆ ಸಮಾಜಕ್ಕೆ ಅಥವಾ ಒಂದು ಸಮುದಾಯಕ್ಕೆ ಮಾದರಿಯಾಗುವ ರೀತಿಯಲ್ಲಿ ಕೆಲಸ ಮಾಡುವ ಅಧಿಕಾರಿಗಳನ್ನು ನೋಡಿರುತ್ತಿವೆ.
ಎಲ್ಲರ ಜೀವನ ಅವರು ಅಂದುಕೊಂಡಷ್ಟು ಸುಲಭವೂ ಸುಗಮವೂ ಆಗಿರಲ್ಲ. ಇಂದು ನೀವು ಯಾರನ್ನು ಯಶಸ್ವಿ ವ್ಯಕ್ತಿಗಳು ಎಂದು ಗುರುತಿಸುತ್ತೀರೋ ಅವರು ಹುಟ್ಟಿದಾಗಿನಿಂದ ಯಶಸ್ಸು ಪಡೆದು ಬಂದವರಲ್ಲ ಬದಲಿಗೆ ಅವಮಾನ ಸನ್ಮಾನ ಎಲ್ಲವನ್ನು ಮೆಟ್ಟಿ ನಿಂತು ಸಮಾಜದಲ್ಲಿ ತಲೆ ಎತ್ತಿ ಬದುಕಿದವರು. ನೆನಪಿರಲಿ ಬದುಕಿನ ದಾರಿಯಲ್ಲಿ ನಮ್ಮವರಿಂದಲೇ ನಮಗೆ ವಾಮನ ನಮ್ಮವರಿಂದಲೇ ಸನ್ಮಾನ. ಅದೇನೇ ಇರಲಿ ಇಲೊಬ್ಬಳು ಹೆಣ್ಣುಮಗಳಿದ್ದಾಳೆ ಆಕೆ ಹೇಗೆ ಐಪಿಎಸ್ ಅಧಿಕಾರಿ ಆದಳು ಎನ್ನುವ ಸ್ಟೋರಿಯನ್ನು ನಿಮ್ಮ ಮುಂದೆ ಬಿಚ್ಚಿಡುತ್ತಿದ್ದೇವೆ. ಈ ಸ್ಟೋರಿ ಕೇಳಿದ ನೀವು…
ಕರ್ನಾಟಕ ಸರ್ಕಾರದ ಹೊಸ ಯೋಜನೆಯಾದ ಇಂದಿರಾ ಕ್ಯಾಂಟೀನ್ ಯೋಜನೆ ಆರಂಭವಾಗಿದ್ದು, ಮೊದಲ ದಿನವೇ ಭರ್ಜರಿ ಪ್ರತಿಕ್ರಿಯೆ ದೊರೆತಿದೆ. ಇದು ರ್ರಾಜ್ಯ ಸರ್ಕಾರದ ನೂತನ ಯೋಜನೆಯಾಗಿದ್ದು, ಬೆಂಗಳೂರು ನಗರದಲ್ಲಿ ಬಡ ಹಾಗೂ ಕೆಳ ಮಧ್ಯಮ ವರ್ಗ ದವರಿಗೆ ರಿಯಾಯಿತಿ ದರದಲ್ಲಿ ಆಹಾರ ಪೂರೈಕೆ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ‘ಇಂದಿರಾ ಕ್ಯಾಂಟೀನ್’ ಎಂಬ ಹೆಸರಿನಲ್ಲಿ ಆರಂಭಿಸಿದೆ.
ದೇಶದ ಎರಡನೇ ಅತಿ ದೊಡ್ಡ ರೈಲ್ವೆ ಓವರ್ ಬ್ರಿಡ್ಜ್ ಈ ತಿಂಗಳ ಅಂತ್ಯಕ್ಕೆ ಉದ್ಘಾಟನೆಯಾಗುತ್ತಿದೆ. ಪಶ್ಚಿಮ ಬಂಗಾಳದ ಬುರ್ದ್ವಾನ್ ಜಂಕ್ಷನ್ ನಲ್ಲಿ ನಾಲ್ಕು ಪಥದ ಕೇಬಲ್ ಸ್ಟೇಯಡ್ ರೈಲ್ವೆ ಮೇಲು ಸೇತುವೆ ನಿರ್ಮಾಣವನ್ನು ಭಾರತೀಯ ರೈಲ್ವೆ ಪೂರ್ಣಗೊಳಿಸಿದೆ. ಇದನ್ನು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಸೆಪ್ಟೆಂಬರ್ 30 ರಂದು ಉದ್ಘಾಟಿಸಲಿದ್ದಾರೆ. ಸಂಚಾರಕ್ಕೆ ಒಂದು ದಿನವೂ ವ್ಯತ್ಯಯವಾಗದಂತೆ 188.43 ಮೀಟರ್ ಕೇಬಲ್ ಸ್ಟೇಯ್ಡ್ ಓವರ್ ಬಿಡ್ಜ್ ಕಾಮಗಾರಿಯನ್ನು 197 ದಿನಗಳಲ್ಲಿ ಪೂರ್ಣಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ…
ನೋಡುಗರ ಮನವನ್ನು ಕೆರಳಿಸುವ ಬ್ರಹ್ಮ ಕಮಲ ಸೂರ್ಯನ ಬೆಳಕಿನಿಂದ ಮೊಗ್ಗಾಗಿ ರಾತ್ರಿ ಚಂದ್ರ ಬರುವವರೆಗೂ ಕಾದು 11 ಗಂಟೆಯ ನಂತರ ಅರಳಿ ಬೆಳಗಾಗುವ ಹೊತ್ತಿಗೆ ಕಮರುವುದೇ ಬ್ರಹ್ಮ ಕಮಲ. ಕಾಂಡವೇ ಎಲೆಯಾಗಿ, ಎಲೆಯೇ ಹೂವಾಗಿ ಅರಳುವ ಈ ಬ್ರಹ್ಮಕಮಲದ ಬಳ್ಳಿಯನ್ನು ಹೆಚ್ಚಾಗಿ ಮನೆಯ ಅಂಗಳದಲ್ಲಿ ಬೆಳೆಸುತ್ತಾರೆ.
ಇಂದು ಸೋಮವಾರ, 12/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ… ಮೇಷ:– ಖರ್ಚುವೆಚ್ಚಗಳಿದ್ದರೂ ಧನಾಗಮನ ಉತ್ತಮ. ಆರೋಗ್ಯದಲ್ಲಿ ಸ್ಥಿರತೆ ಕಂಡುಬರುವುದು. ತುಸು ಅನಾರೋಗ್ಯ ಕಾಡುವ ಸ್ಥಿತಿ. ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಲಾಭ . ವೃಷಭ:- ದೂರ ಸಂಚಾರದಲ್ಲಿ ಹೆಚ್ಚಿನ ಜಾಗ್ರತೆ. ಶತ್ರುಗಳಿಂದ ಭೀತಿಯ ವಾತಾವರಣ ಸೃಷ್ಟಿ. ಹಣವನ್ನು ಒಯ್ಯುವಾಗ ಎಚ್ಚರಿಕೆಯಿಂದ ಇರಿ.ಅಧಿಕಾರಿಗಳ ಕೆಂಗಣ್ಣಿಗೆ ಗುರಿ. ಕೋರ್ಟು ಕಚೇರಿಯ ಕೆಲಸಗಳಲ್ಲಿ ನಿಮ್ಮ ಪರವಾಗಿ ತೀರ್ಪು . ಮಿಥುನ:– ದೂರ ಸಂಚಾರದಲ್ಲಿ ಜಾಗ್ರತೆ.ತಾಯಿಯವರ ಆರೋಗ್ಯದಲ್ಲಿ ವ್ಯತ್ಯಯ. ಯೋಗ್ಯ ವಯಸ್ಕರಿಗೆ ಕಂಕಣಬಲ.ಯಂತ್ರೋಪಕರಣಗಳಿಂದ ಆದಾಯ….