ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕಿಚ್ಚ ಸುದೀಪ್ ಅವರ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಸ್ಯಾಂಡಲ್ವುಡ್ ಸ್ಟಾರ್ ಗಳ ಬಾಕ್ಸ್ ಆಫೀಸ್ ಯುದ್ಧ ಇದೀಗ ಕ್ಯಾನ್ಸಲ್ ಆಗಿದೆ.ಸ್ಯಾಂಡಲ್ವುಡ್ನ ಬಹುನಿರೀಕ್ಷಿತ ಚಿತ್ರಗಳಾದ ‘ಮುನಿರತ್ನ ಕುರುಕ್ಷೇತ್ರ’ ಹಾಗೂ ‘ಪೈಲ್ವಾನ್’ ಒಂದೇ ದಿನ ಅಂದರೆ ಆಗಸ್ಟ್ 9ರಂದು ಬಿಡುಗಡೆಯಾಗಲು ಸಿದ್ಧವಾಗಿತ್ತು. ಆದರೆ ಈಗ ಆಗಸ್ಟ್ 9ರಂದು ಬಿಡುಗಡೆ ಆಗಬೇಕಿದ್ದ ಕುರುಕ್ಷೇತ್ರ ಚಿತ್ರ ಆಗಸ್ಟ್ 2ರಂದು ಬಿಡುಗಡೆ ಆಗಲಿದೆ.
ಕಿಚ್ಚ ಸುದೀಪ್ ನಟನೆಯ ‘ಪೈಲ್ವಾನ್’ ಚಿತ್ರ ಕೂಡ ಆಗಸ್ಟ್ 9ರಂದು ರಿಲೀಸ್ ಆಗಲಿದೆ ಎಂಬ ಸುದ್ದಿ ಕೇಳಿ ಬಂದಿತ್ತು. ಆದರೆ ಈಗ ಪೈಲ್ವಾನ್ ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಆಗಸ್ಟ್ 29ಕ್ಕೆ ಪೈಲ್ವಾನ್ ರಿಲೀಸ್ ಮಾಡಲು ನಿರ್ದೇಶಕ ಕೃಷ್ಣ ನಿರ್ಧರಿಸಿದ್ದಾರೆ. ಸೆ.2ರಂದು ಸುದೀಪ್ ಅವರ ಹುಟ್ಟುಹಬ್ಬ ಇರುವ ಹಿನ್ನೆಲೆಯಲ್ಲಿ ಈ ದಿನಾಂಕವನ್ನು ನಿಗದಿ ಮಾಡಲಾಗಿದೆ. ಈ ವಿಷಯ ಕೇಳಿ ಸುದೀಪ್ ಅಭಿಮಾನಿಗಳು ಖುಷಿ ಆಗಿದ್ದಾರೆ.
ಕುರುಕ್ಷೇತ್ರ ಹಾಗೂ ಪೈಲ್ವಾನ್ ಚಿತ್ರ ಒಟ್ಟಿಗೆ ರಿಲೀಸ್ ಆಗಿದ್ದರೆ, 13 ವರ್ಷಗಳ ನಂತರ ಸುದೀಪ್ ಹಾಗೂ ದರ್ಶನ್ ಮುಖಾಮುಖಿ ಆಗುತ್ತಿದ್ದರು. 2006ರ ಫೆಬ್ರವರಿ 17ರಂದು ಕಿಚ್ಚನ ಮೈ ಆಟೋಗ್ರಾಫ್’ ಹಾಗೂ ದರ್ಶನ್ ಅವರ
ಸುಂಟರಗಾಳಿ’ ಸಿನಿಮಾ ಒಂದೇ ದಿನ ತೆರೆಕಂಡು ಚಿತ್ರಮಂದಿರದ ಅಖಾಡದಲ್ಲಿ ಧೂಳೆಬ್ಬಿಸಿತ್ತು.
ಕುರುಕ್ಷೇತ್ರ ಬರೋಬ್ಬರಿ 50 ರಿಂದ 60 ಕೋಟಿ ರೂ. ವೆಚ್ಚದಲ್ಲಿ ವೃಷಭಾದ್ರಿ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣವಾಗಿದೆ. ಕುರುಕ್ಷೇತ್ರ ಚಿತ್ರವನ್ನು ನಾಗಣ್ಣ ನಿರ್ದೇಶಿಸಿದ್ದಾರೆ. ಈ ಮೊದಲು ದರ್ಶನ್ ಅಭಿನಯದ `ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಚಿತ್ರವನ್ನು ನಾಗಣ್ಣ ನಿರ್ದೇಶಿಸಿದ್ದರು. ನೂತನ ತಂತ್ರಜ್ಞಾನದಲ್ಲಿ ಬಾಹುಬಲಿ ಚಿತ್ರಕ್ಕಾಗಿ ದುಡಿದ ತಂತ್ರಜ್ಞಾನಿಗಳ ಕೈಚಳಕದಲ್ಲಿ ಕನ್ನಡದ ಕುರುಕ್ಷೇತ್ರ ಮೂಡಿ ಬಂದಿದೆ.
ಪೈಲ್ವಾನ್ ಚಿತ್ರ ಗಜಕೇಸರಿ ಕೃಷ್ಣ ನಿರ್ದೇಶನದಲ್ಲಿ ಮೂಡಿ ಬರುತ್ತಿದ್ದು, ಚಿತ್ರದ ಮೇಕಿಂಗ್ ನೋಡಿ ತೆಲುಗು, ತಮಿಳು, ಮಲೆಯಾಳಂ, ಪಂಜಾಬಿ, ಬೆಂಗಾಲಿ, ಮರಾಠಿ, ಭೋಜ್ಪುರಿ ವಿತರಕರು ಡಬ್ಬಿಂಗ್ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಸುದೀಪ್ ಆಪ್ತ ರಿತೇಶ್ ದೇಶಮುಖ್ ಹಿಂದಿಯಲ್ಲಿ ಪೈಲ್ವಾನ್ ರಿಲೀಸ್ ಮಾಡಲು ಒಪ್ಪಿಕೊಂಡಿದ್ದಾರೆ. ಒಟ್ಟು 30ರಿಂದ 40 ಕೋಟಿ ರೂ. ಬಜೆಟ್ ನಲ್ಲಿ ಸಿನಿಮಾ ನಿರ್ಮಾಣವಾಗಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಟ, ನಟಿಯರು ಶೂಟಿಂಗ್ಗೆ ತೆರಳುವಾಗ ಅವರೊಂದಿಗೆ “ವ್ಯಾನಿಟಿ ವ್ಯಾನ್’ ಕೂಡಾ ತೆರಳುವುದು ಸಾಮಾನ್ಯ. ಕೆಲವರದ್ದು ಸಾಮಾನ್ಯ ಸೌಲಭ್ಯ ಇರುವ ವ್ಯಾನ್ ಆದರೆ ಇನ್ನು ಕೆಲವರನ್ನು ಅತ್ಯಾಧುನಿಕ ಸೌಲಭ್ಯ ಇರುವ ವ್ಯಾನಿಟಿ ವ್ಯಾನ್. ಈ ಅತ್ಯಾಧುನಿಕ ವ್ಯಾನಿಟಿ ವ್ಯಾನ್ ಹೊಂದಿರುವವರ ಸಾಲಿಗೆ ಇದೀಗ ನಟ ಶಾರುಖ್ ಖಾನ್ ಕೂಡಾ ಸೇರ್ಪಡೆಯಾಗಿದ್ದಾರೆ.
ಮೈಸೂರಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿಯ ಆರಾಧನೆಯೊಡನೆ ಆರಂಭವಾಗುವ ನವರಾತ್ರಿ ವೈಭವದ ವಿಜಯ ದಶಮಿಯ ಮೈಸೂರು ದಸರಾ ಮಹೋತ್ಸವಕ್ಕೆ ಅದರದೇ ಆದ ಐತಿಹಾಸಿಕ ಪರಂಪರೆ ಹಾಗೂ ಸಾಂಸ್ಕೃತಿಕ ಹಿರಿಮೆ ಇದೆ. ವಿಜಯನಗರ ಸಾಮ್ರಾಜ್ಯದ ಅರಸರ ಕಾಲದಲ್ಲಿ ಆರಂಭಗೊಂಡು ಆಚರಿಸಲ್ಪಡುತ್ತಿದ್ದ ನವರಾತ್ರಿ ಉತ್ಸವದ ವಿಜಯ ದಶಮಿಯ ದಸರಾ ಹಬ್ಬಕ್ಕೆ ಇನ್ನೂ ಹೆಚ್ಚಿನ ವೈಭವದ ವರ್ಣಮಯ ಕಳೆ ತಂದುಕೊಟ್ಟವರು ವಿಜಯನಗರ ಅರಸರಲ್ಲೇ ಅತ್ಯಂತ ಪ್ರಖ್ಯಾತರಾಗಿದ್ದ ಶ್ರೀ ಕೃಷ್ಣದೇವರಾಯರು. ಆಗ ಹಂಪೆಯಲ್ಲಿರುವ ಮಹಾನವಮಿ ದಿಬ್ಬ ಮತ್ತು ವಿಜಯ ವಿಠಲ ದೇವಾಲಯಗಳು ಈ ಮಹೋತ್ಸವದ…
ಆನ್ ಲೈನ್ ಶಾಪಿಂಗ್ ತಾಣಗಳಾದ ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ ಗೆ 16ರ ಫೋರನೊಬ್ಬ ಸರಿಯಾದ ಸವಾಲನ್ನೇ ಹಾಕಿದ್ದಾನೆ. ಇದು ಈ ಎರಡು ಮಾರಾಟ ತಾಣಗಳಿಗೆ ಮಾತ್ರ ಸೀಮಿತ ಅಂದುಕೊಳ್ಳಬೇಡಿ ಆನ್ ಲೈನ್ಎಲ್ಲ ಮಾರಾಟ ತಾಣಗಳಿಗೂ ಬಾಲಕನ ಸವಾಲು ಅನ್ವಯವಾಗುತ್ತದೆ ಇದು ಎಲ್ಲಾ ಆನ್ಲೈನ್ ಮಾರಾಟಗಾರರು ತಿಳಿದುಕೊಳ್ಳಬೇಕಾದ ವಿಷಯ. ಆನ್ಲೈನ್ ಶಾಪಿಂಗ್ ತಾಣಗಳು ಒಂದು ಬಾರಿ ಬಳಸುವ ಪ್ಲಾಸ್ಟಿಕ್ ನಿಷೇಧಿಸಲು ಆಗ್ರಹಿಸಿ 16 ವರ್ಷದ ಬಾಲಕ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ(ಎನ್ಜಿಟಿ)ಕ್ಕೆದೂರು ನೀಡಿದ್ದಾನೆ. ದೆಹಲಿಯ ಮಾಡರ್ನ್ ಶಾಲೆಯ 11ನೇ ತರಗತಿ ವಿದ್ಯಾರ್ಥಿ ಆದಿತ್ಯ ದುಬೆ ಎನ್ಜಿಟಿಗೆ…
ಇವರನ್ನು ಬಿಟ್ಟರೆ ಬೇರೆ ಯಾರಾದರೂ, ಸಿನಿಮಾ ನಟ ಸಮಾಜ ಸುಧಾರಣೆಯ ಕೆಲಸಕ್ಕೆ ಕೈ ಹಾಕಿದ್ರೆ ತೋರಿಸಿ. ಮತ್ತೊಂದು ವಿಚಾರ ಇವರ ಬಗ್ಗೆ ನಾವು ಹೆಮ್ಮೆ ಪಡಬೇಕು ಇದುವರೆಗೆ ಯಾವ ಸಿನಿಮಾ ನಟನ ಬಾಯಿಂದ ಅಂಬೇಡ್ಕರ್,ಬುದ್ದರ ,ಬಸವಣ್ಣ ಟಿಪ್ಪು, ರವರ ಹೆಸರನ್ನು ವೇದಿಕೆ ಮೇಲೆ ಅಲ್ಲ ಸಿನಿಮಾದಲ್ಲು ಕೂಡ, ಹೇಳಿರುವ ಯಾವ ನಟರನ್ನು ನಾನು ನೋಡಿಲ್ಲ ಇಂಥಹ ನಾಯಕನನ್ನು ಪಡೆದ ನಾವೇ ಪುಣ್ಯ ವಂತರು. ನಾವೆಲ್ಲ ಅವರ ಬೆಂಬಲಕ್ಕೆ ನಿಲ್ಲೋಣ…
ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧ ಕಾರ್ಮೋಡ ಪಸರಿಸಿರುವ ಬೆನ್ನಲ್ಲೇ ಪಾಕಿಸ್ತಾನ ಭಾರತೀಯ ಪೈಲಟ್ ರನ್ನು ಬಂಧಿಸಿರುವ ವಿಡಿಯೋವನ್ನು ಬಿಡುಗಡೆ ಮಾಡಿದೆ. ಇನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆಯ ಜೆಟ್ ವಿಮಾನ ಪತನಗೊಂಡಿದ್ದು ಇದರಲ್ಲಿದ್ದ ಪೈಲಟ್ ಗಳ ಪೈಕಿ ಒಬ್ಬರನ್ನು ಬಂಧಿಸಿದ್ದೇವೆ. ಇನ್ನೊಬ್ಬ ಪೈಲಟ್ ಆಸ್ಪತ್ರೆಯಲ್ಲಿ ದಾಖಲಿಸಿರುವುದಾಗಿ ಪಾಕಿಸ್ತಾನ ಹೇಳಿದೆ. ಪಾಕಿಸ್ತಾನ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ನಾನು ವಿಂಗ್ ಕಮಾಂಡರ್ ಅಭಿನಂದನ್, ನಾನು ಐಎಎಫ್ ಅಧಿಕಾರಿ, ನನ್ನ ಸರ್ವಿಸ್ ನಂಬರ್ 27981. ಹೀಗೆ ಪೈಲಟ್ ಒಬ್ಬರು…
ಮಂಡ್ಯ ಲೋಕಸಭಾ ಕ್ಷೇತ್ರದ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ವಿರುದ್ದ ಜೆಡಿಎಸ್ ನಾಯಕರ ವಾಗ್ದಾಳಿ ಮುಂದುವರೆದಿದೆ. ಸಂಸದ ಎಲ್.ಆರ್. ಶಿವರಾಮೇಗೌಡ, ಸುಮಲತಾ ಗೌಡತಿ ಅಲ್ಲ. ಅವರು ನಾಯ್ಡು ಎಂದು ಹೇಳಿದ್ದರಲ್ಲದೆ ಅಂಬರೀಶ್ ನಿಧನರಾದ ಸಂದರ್ಭದಲ್ಲಿ ಅವರ ಅಂತಿಮ ದರ್ಶನಕ್ಕೆ ಸೇರಿದ್ದ ಜನಸ್ತೋಮ ಕಂಡು ಸುಮಲತಾ ಈ ಚುನಾವಣೆಗೆ ನಿಂತಿದ್ದಾರೆಂದು ಕಾಣಿಸುತ್ತದೆ ಎಂದಿದ್ದರು. ಇದೀಗ ಸಚಿವ ರೇವಣ್ಣ ಸುಮಲತಾ ವಿರುದ್ದ ವಾಗ್ದಾಳಿ ಮುಂದುವರೆಸಿದ್ದು, ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿರುವ ಅವರು, ಮೇ 23 ರ…