ಆಧ್ಯಾತ್ಮ

ದಯವಿಟ್ಟು ಈ ಏಳು ವಸ್ತುಗಳನ್ನು ಶನಿವಾರದಂದು ಮನೆಗೆ ತರಬೇಡಿ!ಶಾಕ್ ಆಗ್ಬೇಡಿ?ಈ ಲೇಖನ ಓದಿ…

5754

ನಮ್ಮ ಭಾರತೀಯ ಮತ್ತು ಪಾಶ್ಚಾತ್ಯ ಹಸ್ತಸಾಮುದ್ರಿಕರ ಪ್ರಕಾರ ವ್ಯಕ್ತಿಯೊಬ್ಬರ ಜೀವನದ ಮೇಲೆ ಗ್ರಹಗಳ ಗತಿ ಹಾಗೂ ಸ್ಥಾನ ಅಪಾರವಾದ ಪ್ರಭಾವ ಬೀರುತ್ತವೆ. ಇದಕ್ಕೆ ಈ ಗ್ರಹಗಳ ಗುರುತ್ವಶಕ್ತಿ ಹಾಗೂ ಸೂಸುವ ವಿಕಿರಣದ ಅಲೆಗಳೇ ಕಾರಣ. ಈ ವಿಕಿರಣದ ಅಲೆಗಳು ಭಿನ್ನ ಬಣ್ಣಗಳು ಹಾಗೂ ಭಿನ್ನ ಅಂಗಗಳ ಮೇಲೆ ಭಿನ್ನವಾಗಿ ಪ್ರತಿಕ್ರಿಯಿಸುತ್ತವೆ.

ಒಂದು ವೇಳೆ ನಿಮ್ಮ ಜೀವನದಲ್ಲಿ ಶನಿಗ್ರಹದ ಪಾತ್ರವಿದೆ ಎಂದು ಹಸ್ತಸಾಮುದ್ರಿಕರು ಹೇಳಿದರೆ ಇದಕ್ಕೆ ಕೆಲವು ಪರಿಹಾರಗಳನ್ನು ಕೈಗೊಳ್ಳುವುದು ನಿಮಗೆ ಅತ್ಯಗತ್ಯ. ಅದರಲ್ಲೂ ಶನಿಕಾಟವನ್ನು ಅನುಭವಿಸುವವರು ಇನ್ನೂ ಹೆಚ್ಚಿನ ಕಾಳಜಿ ವಹಿಸಬೇಕು.

ಶನಿದೇವರು ಅಥವಾ ಶನಿಗ್ರಹಕ್ಕೆ ಸಂಬಂಧಿಸಿದಂತೆ ಕೆಲವು ವಿಷಯಗಳಿದ್ದು ಇದರಲ್ಲಿ ಪ್ರಮುಖವಾದುದೆಂದರೆ ಶನಿವಾರದಂದು ಕೆಲವು ವಸ್ತುಗಳನ್ನು ಕೊಳ್ಳಬಾರದು ಅಥವಾ ಮನೆಗೆ ತರಬಾರದು ಎಂದು ಹಸ್ತಸಾಮುದ್ರಿಕರು ಅಭಿಪ್ರಾಯ ಪಡುತ್ತಾರೆ. ಇದನ್ನು ಮೀರಿದರೆ ಆರೋಗ್ಯ ಕೆಡುವುದು ಹಾಗೂ ಆರ್ಥಿಕ ನಷ್ಟವನ್ನು ಎದುರಿಸಬೇಕಾಗುತ್ತದೆ.

ಶನಿವಾರದಂದು ಏನು ಮಾಡಬಾರದೆಂದು ತಿಳಿಯೋಣ….

1. ಬದನೇಕಾಯಿಯನ್ನು ಬಳಸಬಾರದು:-
ಶನಿವಾರದಂದು ಬದನೇಕಾಯಿಯನ್ನು ಕೊಳ್ಳಲೂಬಾರದು, ತಿನ್ನಲೂಬಾರದು. ಅಲ್ಲದೇ ಶನಿವಾರದಂದ ಕಾಳುಮೆಣಸನ್ನೂ ಕೊಳ್ಳಬಾರದು ಹಾಗೂ ಈ ದಿನ ಶನಿವ್ರತವನ್ನು ಆಚರಿಸುವುದು ಒಳ್ಳೆಯದು.

2. ಶನಿವಾರದಂದು ಉಪ್ಪು ಕೊಳ್ಳುವುದು ಬೇಡ  :-

ಶನಿವಾರದಂದು ಉಪ್ಪನ್ನು ಕೊಳ್ಳುವುದು ಆರ್ಥಿಕ ನಷ್ಟಕ್ಕೆ ಆಹ್ವಾನ ಎಂದು ಜ್ಯೋತಿಷ್ಯಾಸ್ತ್ರಜ್ಞರು ಅಭಿಪ್ರಾಯಪಡುತ್ತಾರೆ. ಬದಲಿಗೆ ಈ ದಿನ ಹತ್ತಿರದ ಮಂದಿರ ಅಥವಾ ಆರಾಧನಾ ಸ್ಥಳಕ್ಕೆ ಉಪ್ಪನ್ನು ದಾನ ಮಾಡಬೇಕು.

3. ಹೊಸ ವಾಹನವನ್ನು ಶನಿವಾರ ಕೊಳ್ಳಬೇಡಿ:-

ಶನಿವಾರದಂದು ಕಬ್ಬಿಣವನ್ನು ಅಥವಾ ಕಬ್ಬಿಣದಿಂದ ಮಾಡಿದ ವಸ್ತುಗಳನ್ನು ಕೊಳ್ಳಬಾರದು. ಅದರಲ್ಲೂ ಹೊಸ ವಾಹನವನ್ನು ಶನಿವಾರ ಕೊಳ್ಳಲೇಬಾರದು. ಏಕೆಂದರೆ ಇದರಿಂದ ಅಪಘಾತವಾಗುವ ಸಾಧ್ಯತೆ ಅತಿ ಹೆಚ್ಚಾಗಿರುತ್ತದೆ ಎಂದು ಜ್ಯೋತಿಷ್ಯಾಸ್ತ್ರಜ್ಞರು ಎಚ್ಚರಿಸುತ್ತಾರೆ.

4. ಬೇಳೆಯನ್ನುಕೊಳ್ಳಬೇಡಿ:-

ಬೇಳೆಯನ್ನು ಶನಿವಾರದಂದು ಕೊಳ್ಳಬಾರದು. ಆದ್ದರಿಂದ ಬೇಳೆಯನ್ನು ಕೊಳ್ಳದಿರುವುದೇ ಉತ್ತಮ. ಬದಲಿಗೆ ಬೇಳೆಯನ್ನು ಬೇಯಿಸಿ ತಯಾರಿಸಿದ ಆಹಾರವನ್ನು ಬಡವರಿಗೆ ದಾನ ಮಾಡಬೇಕು ಅಥವಾ ಕಾಗೆಗಳಿಗೆ ಆಹಾರಧಾನ್ಯಗಳನ್ನು ತಿನ್ನಲು ನೀಡಬೇಕು.


5. ಕಪ್ಪು ಬಣ್ಣದ ಬಟ್ಟೆ:-

ಕಪ್ಪು ಬಣ್ಣ ನಿಮ್ಮ ಇಷ್ಟದ ಬಣ್ಣವಾಗಿರಬಹುದು. ಆದರೆ ಒಂದು ವೇಳೆ ನಿಮ್ಮ ಗ್ರಹಗತಿಯಲ್ಲಿ ಶನಿಯ ಪ್ರಭಾವವಿದ್ದರೆ ಶನಿವಾರ ಮಾತ್ರ ಕಪ್ಪುಬಣ್ಣದ ಬಟ್ಟೆಗಳನ್ನು ಕೊಳ್ಳಲು ಹೋಗಬಾರದು. ಇದರಿಂದ ದುರಾದೃಷ್ಟವನ್ನು ಆಹ್ವಾನಿಸಿದಂತಾಗುತ್ತದೆ.

6. ಸಾಸಿವೆ ಕೊಳ್ಳಬಾರದು:-

ಶನಿವಾರ ಸಾಸಿವೆಯನ್ನೂ ಕೊಳ್ಳಬಾರದು, ಬದಲಿಗೆ ಬಡವರಿಗೆ ದಾನ ನೀಡಬೇಕು. ಅಲ್ಲದೇ ಶನಿಯ ವಿಗ್ರಹದ ಮೇಲೂ ಕೊಂಚ ಚಿಮುಕಿಸಬೇಕು. ಇದರಿಂದ ಶುಭಸಮಾಚಾರಗಳು ಆಗಮಿಸುತ್ತವೆ.

7. ಮರದಿಂದ ಮಾಡಿದ ಪೀಠೋಪಕರಣಗಳನ್ನು ಕೊಳ್ಳಬೇಡಿ:-

ಒಂದು ವೇಳೆ ಮನೆಗೆ ಮರದಿಂದ ಮಾಡಿದ ಪೀಠೋಪಕರಣಗಳನ್ನು ಕೊಳ್ಳುವುದಿದ್ದರೆ ಶನಿವಾರ ಮಾತ್ರ ಕೊಳ್ಳುವುದಾಗಲೀ, ಅಥವಾ ವಿತರಣೆಯನ್ನು ಪಡೆಯುವುದಾಗಲೀ ಮಾಡಬೇಡಿ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆರೋಗ್ಯ, ಉಪಯುಕ್ತ ಮಾಹಿತಿ

    ಮೆಂತ್ಯ ತಿನ್ನೋದ್ರಿಂದ ನಿಮ್ಮ ಆರೋಗ್ಯದ ಮೇಲೆ ಏನೆಲ್ಲಾ ಅದ್ಭುತ ಪ್ರಯೋಜನಗಳಾಗುತ್ತೆ ಗೊತ್ತಾ..!

    ಹಲವಾರು ರೋಗಗಳಿಗೆ ಮನೆಯಲ್ಲೇ ಮದ್ದಿದೆ ಎಂಬುದು ಎಷ್ಟೋ ಜನಕ್ಕೆ ಗೊತ್ತಿದ್ದರೂ ಅದನ್ನು ಉಪಯೋಗ ಮಾಡಿಕೊಳ್ಳದಿರುವವರೇ ಹೆಚ್ಚು. ಇದಕ್ಕೆ ಕಾರಣವೂ ಇದೆ. ಆಧುನಿಕ ಯುಗದಲ್ಲಿ ತಂತ್ರಜ್ಞಾನಗಳೊಂದಿಗೆ ಸಾಗುತ್ತಿರುವ ನಾವು ನಮ್ಮಲ್ಲೇ ಇರುವ ನೈಸರ್ಗಿಕವಾದ ಔಷಧಿಗಳನ್ನು ಅರಿಯದೆ ಸಾಕಷ್ಟು ಸಮಸ್ಯೆಗಳನ್ನು ಸೃಷ್ಟಿಸಿಕೊಳ್ಳುತ್ತಿದ್ದೇವೆ. *ನೆನೆ ಹಾಕಿದ ಮೆಂತ್ಯವನ್ನು ನುಣ್ಣಗೆ ರುಬ್ಬಿ ಕುದಿಯುವ ಹಾಲಿನೊಂದಿಗೆ ಬೆರೆಸಿ ರಾತ್ರಿ ಮಲಗುವಾಗ ಹಚ್ಚಿ, ಬೆಳಿಗ್ಗೆ ಎದ್ದೊಡನೆ ಮುಖ ತೊಳೆದುಕೊಳ್ಳಬೇಕು. ಇದರಿಂದ ಚರ್ಮ ಸುಕ್ಕುಗಟ್ಟುವುದಿಲ್ಲ. *ಇದನ್ನು ಸೇವಿಸಿದರೆ ತಾಯಂದಿರಲ್ಲಿ ಎದೆ ಹಾಲು ಹೆಚ್ಚಿಸಲು ಸಹಾಯ ಮಾಡುತ್ತದೆ. *ಬೆಳಿಗ್ಗೆ…

  • ಸಿನಿಮಾ

    ಬಿಗ್ ಬಾಸ್ ಸಂಚಿಕೆ-5ರಲ್ಲಿ ನೀವೂ ಸಹ ಸ್ಪರ್ಧಿಸಬಹುದು!ಹೇಗಂತೀರಾ?ಈ ಲೇಖನಿ ಓದಿ….

    ಕನ್ನಡದ ಖಾಸಗಿ ಚಾನಲ್ ನಡೆಸುವ, ಕನ್ನಡದ ರಿಯಾಲಿಟಿ ಶೋ ‘ಬಿಗ್ ಬಾಸ್’ ಕಾರ್ಯಕ್ರಮ ಈಗಾಗಲೇ ತುಂಬಾ ಜನಪ್ರಿಯವಾಗಿದೆ. ನಿಮಗೆ ಗೊತ್ತಿರುವ ಹಾಗೆ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಇಲ್ಲಿಯವರಿಗೂ ವಿವಿಧ ಕ್ಷೇತ್ರಗಳಲ್ಲಿ ಗುರ್ತಿಸಿಕೊಂಡ ಸೆಲೆಬ್ರೆಟಿಗಳಿಗೆ ಮಾತ್ರ ಭಾಗವಹಿಸುವುದಕ್ಕೆ ಅವಕಾಶವಿತ್ತು.

  • ಸುದ್ದಿ

    ಕಾರ್ನಾಡ್ ಅವರ ಕೊನೆಯ ಇಚ್ಚೆಯಂತೆ ಅಂತ್ಯಸಂಸ್ಕಾರ…….

    ಗಿರೀಶ್ ಕಾರ್ನಾಡ್ ಅವರ ಆಸೆಯಂತೆ ಅವರ ಅಂತ್ಯಸಂಸ್ಕಾರ ನಡೆಸಲು ಕುಟುಂಬದವರು ಸಿದ್ಧತೆ ನಡೆಸುತ್ತಿದ್ದಾರೆ. ನನ್ನ ಅಂತ್ಯ ಸಂಸ್ಕಾರಕ್ಕೆ ಯಾವುದೇ ರಾಜಕಾರಣಿ, ಸಾರ್ವಜನಿಕರು ಬರಬಾರದು. ಸರ್ಕಾರಿ ಗೌರವ, ಸರ್ಕಾರಿ ಜಾಗದ ಅಗತ್ಯವಿಲ್ಲ. ಕುಟುಂಬದ ಸದಸ್ಯರು ಮಾತ್ರ ಬರಬೇಕು. ಯಾವುದೇ ವಿಧಿವಿಧಾನವನ್ನು ಅನುಸರಿಸಬಾರದು. ಅಂತಿಮ ನಮನವನ್ನು ಸಲ್ಲಿಸಬಾರದು ಎಂದು ಗಿರೀಶ್ ಕಾರ್ನಾಡ್ ತಮ್ಮ ಪತ್ನಿ ಸರಸ್ವತಿ ಜೊತೆ ಹೇಳಿದ್ದರು. ಮನೆ ಬಳಿ ಯಾರೂ ಬಂದು ನಮನ ಸಲ್ಲಿಸಬಾರದು. ಯಾವುದೇ ಸಂಪ್ರದಾಯ, ವಿಧಿ ವಿಧಾನ ಇಲ್ಲದೇ ಸಂಸ್ಕಾರ ಮಾಡಬೇಕು ಎಂದು ಕೊನೆಯ…

  • inspirational

    ಮಾರಕ ಕರೋನಾ ಬಗ್ಗೆ ನಾವೆಷ್ಟು ತಿಳಿದಿದ್ದೇವೆ ಮತ್ತು ನಾವು ಏನೆಲ್ಲಾ ತಿಳಿಯಬೇಕು

    ಸಾಮಾಜಿಕ ತಾಣಗಳಾದ ವಾಟ್ಸ್ ಅಪ್ ಮತ್ತು ಅಂತರ್ಜಾಲದಲ್ಲಿ ಕೊರೋನಾ ವೈರಸ್ ಕುರಿತಂತೆ ಹಲವು ಸಂಗತಿಗಳು ಹರಡುತ್ತಿವೆ. ಇವುಗಳಲ್ಲಿ ಕೆಲವು ನಿಜವಾದರೆ, ಹಲವು ಮಾಹಿತಿಗಳು ಆಧಾರರಹಿತವಾಗಿವೆ. ಯಾವಾಗ ಕರೊನಾ ಮಹಾಮಾರಿ ವಿಶ್ವದಾದ್ಯಂತ ಹಬ್ಬಲು ಆರಂಭಿಸಿದೆಯೋ ಆ ಸಂದರ್ಭದಲ್ಲಿ ಈ ಮಾರಕ ವೈರಾಣುವಿಗೆ ಸಂಬಂಧಿಸಿದಂತಹ ವಿಚಾರ ತಿಳಿಯುವುದು ಅಷ್ಟೇ ಮಹತ್ವದ್ದಾಗಿದೆ. ವಿಜ್ಞಾನ ಪ್ರಸಾರದ ಹಿರಿಯ ವಿಜ್ಞಾನಿ ಡಾ. ಟಿ.ವಿ. ವೆಂಕಟೇಶ್ವರನ್ ಈ ವೈರಸ್ ಕುರಿತ ಸಂಶೋಧನೆಯ ಬಳಿಕ ನಮಗೆ ಹಲವು ಫಲಶ್ರುತಿಗಳನ್ನು ತಿಳಿಯಪಡಿಸಿದ್ದಾರೆ. ಸೋಂಕು: ಈ ವೈರಾಣು ಗಂಟಲು ಮತ್ತು ಶ್ವಾಸಕೋಶದಲ್ಲಿನ…

  • ಉಪಯುಕ್ತ ಮಾಹಿತಿ

    ನಿಮ್ಮ ಮುಖದ ಮೇಲಿನ ಅನಾವಶ್ಯಕ ಕೂದಲನ್ನು ತೆಗೆಯಲು ಹೀಗೆ ಮಾಡಿ..ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ ಉಪಯೋಗವಾಗಲಿ…

    ಪ್ರತಿಯೊಬ್ಬ ಮಹಿಳೆಯು ತಾನು ಸುಂದರವಾಗಿ ಕಾಣಲು ಬಯಸುವುದು ಸಹಜ. ತತ್ವಚೆಗೆ ಹೆಚ್ಚಿನ ಅರಿಕೆಯನ್ನ ಮಾಡುತ್ತಾರೆ. ಆದರೆ ಮುಖದ ಅಂದವನ್ನ ಮುಖದ ಮೇಲಿನ ಬೇಡವಾದ ಕೂದಲುಗಳು ಹಾಳುಮಾಡುತ್ತವೆ. ಇಂತಹ ಬೇಡವಾದ ಕೂದಲುಗಳನ್ನ ತೆಗೆಯಲು ಹಲವು ಬಗೆಯ ಪ್ರಯತ್ನಗಳನ್ನ ಮಾಡುತ್ತಾರೆ. ಆದರೆ ಇದಕ್ಕೆ ಮನೆಯಲ್ಲೇ ಪರಿಹಾರವಿದೆ ಎಂಬುದನ್ನ ಮರೆತಿರುತ್ತಾರೆ. ನಿಮ್ಮ ಮುಖದಲ್ಲಿನ ಬೇಡವಾದ ಕೂದಲನ್ನ ನಿವಾರಿಸಲು ಇಲ್ಲಿದೆ ನೋಡಿ ಸುಲಭ ಉಪಾಯ… * ಎರಡು ಚಮಚ ಸಕ್ಕರೆ ಮತ್ತು ಒಂದು ಚಮಚ ಲಿಂಬೆರಸ. ಸಕ್ಕರೆಯನ್ನು ಸಂಪೂರ್ಣವಾಗಿ ಲೀನವಾಗದಂತೆ ಕದಡಿ. ದೊರಗಾದ…

  • ಸುದ್ದಿ

    ಜಗತ್ತಿನಲ್ಲೇ ಅತಿ ದುಬಾರಿ ಡೈವೋರ್ಸ್; ಪತ್ನಿಗೆ 2.4 ಲಕ್ಷ ಕೋಟಿ ರೂ ಪರಿಹಾರ ಕೊಟ್ಟಿದ್ದು ಯಾರು ಗೊತ್ತೇ.??

    ವಿಶ್ವದ ಅತೀದೊಡ್ಡ  ಶ್ರೀಮಂತ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದ ಅಮೇಜಾನ್​​​​ ಸಂಸ್ಥಾಪಕ ಹಾಗೂ ಸಿಇಒ ಜೆಫ್​​​ ಬೆಜೋಸ್ ಈ ಬಾರಿ 2ನೇ ಸ್ಥಾನಕ್ಕಿಳಿದಿದ್ದಾರೆ. 2019-20 ವರ್ಷದ ಮೂರನೇ ತ್ರೈಮಾಸಿಕದಲ್ಲಿ ಅಮೇಜಾನ್ ಕಂಪನಿಯ ನಿವ್ವಳ ಲಾಭಾಂಶ ಕಡಿಯಾಗಿದೆ. ಹಾಗಾಗಿ ಜೆಫ್​​​ ಬೆಜೋಸ್ ಒಟ್ಟು ಆಸ್ತಿ ಮೌಲ್ಯ 103.9 ಬಿಲಿಯನ್ ಡಾಲರ್​​ಗೆ ಇಳಿಕೆಯಾಗಿದ್ದು, 2ನೇ ಸ್ಥಾನಕ್ಕಿಳಿದಿದ್ದಾರೆ. ಇದೀಗ ವಿಶ್ವದ ಅತ್ಯಂತ ದೊಡ್ಡ ಶ್ರೀಮಂತ ಸ್ಥಾನವನ್ನು ಮತ್ತೆ ಮೈಕ್ರೋಸಾಫ್ಟ್​​​ ಸಹ ಸಂಸ್ಥಾಪಕ ಬಿಲ್​​ ಗೇಟ್ಸ್​ ಅಲಂಕರಿಸಿದ್ದಾರೆ. ಫೋರ್ಬ್ಸ್​​​ ಬಿಡುಗಡೆ ಮಾಡಿರುವ ಜಗತ್ತಿನ ಶ್ರೀಮಂತರ…