ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬದಲಾದ ಜೀವನ ಶೈಲಿಯಿಂದಾಗಿ ನಿತ್ಯ ನಾವು ಸ್ಟೀಲ್ ಮತ್ತು ಪ್ಲಾಸ್ಟಿಕ್ ತಟ್ಟೆ, ಲೋಟಗಳ ಉಪಯೋಗಿಸುವುದು ಹೆಚ್ಚು.
ಆದರೆ ತಾಮ್ರದ ಲೋಟದಲ್ಲಿ ನಿತ್ಯ ನೀರು ಕುಡಿಯುವುದರಿಂದ ಆಗುವ ಪ್ರಯೋಜನಗಳನ್ನು ತಿಳಿದರೆ ಇನ್ನೆಂದೂ ನೀವು ಸ್ಟೀಲ್ ಲೋಟಗಳ ಕಡೆ ತಿರುಗಿಯೂ ನೋಡುವುದಿಲ್ಲ..
ಹೌದು, ದಿನ ನಿತ್ಯ ತಾಮ್ರದ ಲೋಟದಲ್ಲಿ ನೀರು ಕುಡಿಯುವುದರಿಂದ ಮಾರಕ ಕ್ಯಾನ್ಸರ್ ರೋಗದಿಂದಲೂ ನಾವು ದೂರವಿರಬಹುದು ಎಂದು ವೈದ್ಯರು ಹೇಳಿದ್ದಾರೆ.
ಕೇವಲ ಇದು ಮಾತ್ರವಲ್ಲದೇ ಅಜೀರ್ಣ, ಬೊಜ್ಜಿನ ಸಮಸ್ಯೆ ಕೂಡ ಇದರಿಂದ ಬಗೆಹರಿಯುತ್ತದೆ. ತಾಮ್ರದ ಲೋಟದಲ್ಲಿ ನಿತ್ಯ ನೀರು ಕುಡಿಯುವುದರಿಂದ ಆಗುವ ಪ್ರಮುಖ ಪ್ರಯೋಜನಗಳ ಪಟ್ಟಿ ಇಲ್ಲಿದೆ.
ಊಟದ ಬಳಿಕ ಅಥವಾ ಇತರೆ ಸಂದರ್ಭಗಳಲ್ಲಿ ತಾಮ್ರದ ಚೊಂಬು ಅಥವಾ ತಾಮ್ರದ ಲೋಟಗಳಲ್ಲಿ ನೀರು ಕುಡಿಯುವುದರಿಂದ ಅದರಲ್ಲಿನ ಅಂಶಗಳು ಕೆಟ್ಟ ಬ್ಯಾಕ್ಟೀರಿಯಾಗಳನ್ನು ನಾಶ ಮಾಡುತ್ತದೆ. ಅಂತೆಯೇ ಹೊಟ್ಟೆಯೊಳಗಿನ ಉರಿಯನ್ನು ನಿಯಂತ್ರಿಸುತ್ತದೆ. ಆ ಮೂಲಕ ದೇಹದ ಜೀರ್ಣ ಕ್ರಿಯೆಯನ್ನು ಇದು ಉತ್ತಮಪಡಿಸುತ್ತದೆ.
ಬೊಜ್ಜಿನಿಂದ ಬಳಲುತ್ತಿರುವ ಮಂದಿ ನಿತ್ಯ ಡಯಟ್ ಹಾಗೂ ವ್ಯಾಯಾಮ ಮಾಡಿದರೂ ತೂಕ ಇಳಿಕೆಯಾಗುತ್ತಿಲ್ಲ ಎಂದು ದುಃಖ ಪಡುತ್ತಾರೆ. ಆದರೆ ತಾಮ್ರದ ಲೋಟದಲ್ಲಿ ನಿತ್ಯ ನೀರು ಕುಡಿಯುವುದರಿಂದ ಅಧಿಕ ಬೊಜ್ಜು ಕೂಡ ನಿಯಂತ್ರಣಕ್ಕೆ ಬರುತ್ತದೆ. ನೀರಿನಲ್ಲಿರುವ ತಾಮ್ರದ ಅಂಶ ದೇಹದ ಜೀರ್ಣ ಕ್ರಿಯೆಯನ್ನು ಉತ್ತಮಗೊಳಿಸಿ ಬೊಜ್ಜು ಶೇಖರಣೆಯಾಗದಂತೆ ತಡೆಯುತ್ತದೆ. ಆ ಮೂಲಕ ಆಧಿಕ ಬೊಜ್ಜು ಕೂಡ ನಿಯಂತ್ರಣಕ್ಕೆ ಬರುತ್ತದೆ.
ತಾಮ್ರದ ಅಂಶ ಮಾನವನ ದೇಹದಲ್ಲಿ ರೋಗ ನಿರೋಧಕ ಅಂಶವನ್ನು ಹೆಚ್ಚಿಸುತ್ತದೆ. ಆ ಮೂಲಕ ಯಾವುದೇ ರೋಗಗಳು ಸುಲಭವಾಗಿ ದೇಹಕ್ಕೆ ತಾಗದಂತೆ ನೋಡಿಕೊಳ್ಳುತ್ತದೆ.
ಹಿಂದಿನ ಕಾಲದಲ್ಲಿ ಈಗಿನ ಸ್ಟೀಲ್ ನಾಣ್ಯಗಳ ಬದಲಿಗೆ ತಾಮ್ರ ಮತ್ತು ಚಿನ್ನದ ನಾಣ್ಯಗಳು ಚಾಲ್ತಿಯಲ್ಲಿದ್ದವು. ತಾಮ್ರ ಮತ್ತು ಚಿನ್ನ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಎಂದು ತಿಳಿದಿದ್ದ ಅಂದಿನ ವೈದ್ಯರು ಮತ್ತು ಧರ್ಮ ಪ್ರಚಾರಕರು ದೇವಾಲಯಗಳ ಕಲ್ಯಾಣಿ ಹಾಗೂ ಪವಿತ್ರ ನದಿಗಳಲ್ಲಿ ನಾಣ್ಯವನ್ನು ಹಾಕಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಹೇಳುತ್ತಿದ್ದರು. ಆ ಮೂಲಕ ಕಲ್ಯಾಣಿಯ ನೀರು ಮತ್ತು ನದಿಯ ನೀರು ಕುಡಿಯುವ ಮಂದಿ ಯಾವುದೇ ರೋಗಗಳಿಗೆ ತುತ್ತಾಗುವುದಿಲ್ಲ ಎಂಬುದು ಅವರ ಭಾವನೆಯಾಗಿತ್ತು.
ತಾಮ್ರದಲ್ಲಿ ಆ್ಯಂಟಿ ಆಕ್ಸಿಂಡೆಂಟ್ ಅಂಶ ಯಥೇಚ್ಛವಾಗಿದ್ದು, ಇದು ದೇಹದ ಅನಾವಶ್ಯಕ ಬೊಜ್ಜಿನ ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ಮಾಡುತ್ತದೆ. ಅಂತೆಯೇ ದೇಹ ಮತ್ತು ಮುಖದ ಮೇಲಿನ ಸುಕ್ಕುಗಳನ್ನು ತೊಡೆದು ಹಾಕುವ ಶಕ್ತಿ ತಾಮ್ರಕ್ಕೆ ಇದ್ದು, ನಿರ್ಜೀವ ಜೀವಕೋಶಗಳನ್ನು ತೊಡೆದುಹಾಕಿ ಹೊಸ ಜೀವಕೋಶಗಳ ಬೆಳವಣಿಗೆಗೆ ಸಹಕಾರಿಯಾಗುತ್ತದೆ.
ತಾಮ್ರದ ಅಂಶ ಹೃದಯಸಂಬಂಧಿ ರೋಗಗಳನ್ನು ದೂರವಿಡುತ್ತದೆ. ಅಧಿಕ ಬೊಜ್ಜು ನಿಯಂತ್ರಣದ ಮೂಲಕ ಮತ್ತು ಹೃದಯದ ರಕ್ತನಾಳಗಳ ಶುದ್ದೀಕರಣದ ಮೂಲತ ಹೃದಯ ಆರೋಗ್ಯವಾಗಿರುವಂತೆ ತಾಮ್ರದ ಅಂಶ ನೋಡಿಕೊಳ್ಳುತ್ತದೆ. ಅಮೆರಿಕನ್ ವೈದ್ಯರು ಹೇಳಿರುವಂತೆ ತಾಮ್ರ ಬಿಪಿಯನ್ನು ಕೂಡ ನಿಯಂತ್ರಣದಲ್ಲಿಡುತ್ತದೆಯಂತೆ.
ಇನ್ನು ತಾಮ್ರದಲ್ಲಿನ ಆ್ಯಂಟಿ ಆಕ್ಸಿಡೆಂಟ್ ಅಂಶ ಮಾರಕ ಕ್ಯಾನ್ಸರ್ ರೋಗವನ್ನು ನಿಯಂತ್ರಿಸಲು ಸಹಕಾರಿಯಾಗುತ್ತದೆ. ಅಂತೆಯೇ ಭವಿಷ್ಯದಲ್ಲಿ ಕ್ಯಾನ್ಸರ್ ರೋಗ ಬರದಂತೆಯೂ ಇದು ತಡೆಯುತ್ತದೆ.
ಪ್ರಸ್ತುತ ಸಮಾಜದಲ್ಲಿ ಸಾಮಾನ್ಯವಾಗಿರುವ ಥೈರಾಯ್ಡ್ ಸಮಸ್ಯೆಗೆ ಪ್ರಮುಖ ಕಾರಣ ತಿನ್ನುವ ಆಹಾರದಲ್ಲಿ ತಾಮ್ರದ ಅಂಶದ ಕೊರತೆ ಎಂದು ವೈದ್ಯರು ಹೇಳುತ್ತಾರೆ. ಹೀಗಾಗಿ ನಾವು ನಿತ್ಯ ತಾಮ್ರದ ಲೋಟದಲ್ಲಿ ನೀರು ಕುಡಿಯುವುದರಿಂದ ದೇಹಕ್ಕೆ ಅಗತ್ಯವಾದ ತಾಮ್ರದ ಅಂಶ ಸೇರುತ್ತದೆ. ಇದು ಥೈರಾಯ್ಡ್ ಸಮಸ್ಯೆ ಪರಿಹರಿಸಲು ನೆರವಾಗುತ್ತದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ತಾಮ್ರದಲ್ಲಿರುವ ಅಂಶಗಳು ಮಾನವನ ಚರ್ಮಕ್ಕೆ ಯಾವುದೇ ರೀತಿಯ ಸಮಸ್ಯೆ ಕಾಡದಂತೆ ತಡೆಯುತ್ತದೆ. ಅಂತೆಯೇ ಸಂಧಿವಾತ ಮತ್ತು ಸಂಧಿನೋವಿನಲ್ಲೂ ಇದು ಪರಿಣಾಮಕಾರಿಯಾಗಬಲ್ಲದು ಎಂದು ವೈದ್ಯರು ಹೇಳಿದ್ದಾರೆ.
ತಾಮ್ರದ ಲೋಟದಲ್ಲಿ ನೀರು ಕುಡಿಯುವುದರಿಂದ ಅದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಅಂಶ ದೇಹದ ಬೊಜ್ಜನ್ನು ನಿಯಂತ್ರಿಸುವ ಮೂಲಕ ದೇಹ ಸದಾಕಾಲ ಚಟುವಟಿಕೆಯಿಂದ ಇರುವಂತೆ ನೋಡಿಕೊಳ್ಳುತ್ತದೆ. ಅಂತೆಯೇ ಹೃದಯ ಆರೋಗ್ಯದಲ್ಲೂ ತಾಮ್ರ ಪರಿಣಾಮಕಾರಿಯಾಗಿದ್ದು, ಹೃದಯ ನಾಳಗಳು ಸದಾಕಾಲ ಚಟುವಟಿಕೆಯಿಂದ ನೋಡಿಕೊಳ್ಳುತ್ತದೆ. ಆ ಮೂಲಕ ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ರಕ್ತ ಪರಿಚಲನೆಯಾಗುವಂತೆ ನೋಡಿಕೊಳ್ಳುತ್ತದೆ. ಇದರಿಂದ ರಕ್ತ ಹೀನತೆ ಸಮಸ್ಯೆ ಕೂಡ ದೂರಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸನಾತನ ಧರ್ಮದಲ್ಲಿ 33 ಕೋಟಿ ದೇವಾನುದೇವತೆಗಳಿವೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ದೇವಾನುದೇವತೆಗಳ ಫೋಟೋ ಹಾಕುವ ಮೊದಲು ಕೆಲವೊಂದು ವಿಷ್ಯಗಳ ಬಗ್ಗೆ ಗಮನ ಹರಿಸಬೇಕಾಗುತ್ತದೆ. ಶಿವನ ಮೂರ್ತಿ ಅಥವಾ ಚಿತ್ರವನ್ನು ಮನೆಯಲ್ಲಿ ಸ್ಥಾಪನೆ ಮಾಡುವಾಗ ವಿಶೇಷ ಗಮನ ನೀಡಬೇಕಾಗುತ್ತದೆ. ಯಾವುದೇ ಹೊಸ ಫೋಟೋ ಅಥವಾ ಮೂರ್ತಿಯನ್ನಿಡುವಾಗ ಕೂಡ ದಿಕ್ಕು, ನಿಯಮವನ್ನು ಪಾಲನೆ ಮಾಡಬೇಕು. ಇಲ್ಲವಾದ್ರೆ ಲಾಭದ ಬದಲು ನಷ್ಟ ಅನುಭವಿಸಬೇಕಾಗುತ್ತದೆ. ಮನೆ ಅಥವಾ ಕಚೇರಿಯಲ್ಲಿ ಎಲ್ಲರ ಕಣ್ಣಿಗೆ ಬೀಳುವಂತೆ ಶಿವನ ಮೂರ್ತಿಯನ್ನು ಸ್ಥಾಪನೆ ಮಾಡಿ. ಭಗವಂತ ಶಿವನ…
ಇಂದೋರ್ ನಲ್ಲಿ ಮಹಿಳೆಯೊಬ್ಬಳು 60 ವರ್ಷದ ನಿವೃತ್ತ ಸರ್ಕಾರಿ ನೌಕರನೊಬ್ಬನನ್ನು ಮದುವೆಯಾಗಿ ಅರೇ ದಿನದಲ್ಲಿ ಮನೆಯಲ್ಲಿ ಚನ್ನಾಭರಣ ಮತ್ತು ನಗದಿನೊಂದಿಗೆ ಪರಾರಿಯಾಗಿರುವ ಘಟನೆ ನಡೆದಿದೆ.
ಪಡಿತರ ಸೋರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ, ಇದನ್ನು ತಡೆಯಲು ಆಹಾರ ನಾಗರಿಕ ಸರಬರಾಜು ಇಲಾಖೆ ಕ್ರಮ ಕೈಗೊಂಡಿದ್ದು ನೈಜ ಫಲಾನುಭವಿಗಳಿಗೆ ಮಾತ್ರ ಪಡಿತರ ವಿತರಿಸಲು ಮುಂದಾಗಿದೆ. ಹೀಗಾಗಿ ನೀವು ರೇಷನ್ ಕಾರ್ಡ್ ಇ-ಕೆವೈಸಿ ಮಾಡಿಸದಿದ್ದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗಲಿದ್ದು ನಿಮಗೆ ಪಡಿತರ ಕೂಡ ಸಿಗುವುದಿಲ್ಲ. ಹೌದು, ಜುಲೈ 31ರ ಒಳಗೆ ನೀವು ನಿಮ್ಮ ರೇಷನ್ ಕಾರ್ಡ್ ಇ-ಕೆವೈಸಿ ಮಾಡಿಸಬೇಕು. ಒಂದು ವೇಳೆ ನೀವು ಇ-ಕೆವೈಸಿ ಮಾಡಿಸದಿದ್ದಲ್ಲಿ ನಿಮ್ಮ ಕಾರ್ಡ್ ರದ್ದಾಗಲಿದ್ದು, ಆಗಸ್ಟ್ ನಿಂದ ನಿಮಗೆ ರೇಷನ್ ಕೂಡ…
ಉದ್ಯೋಗ ಹಂತ 6ರಲ್ಲಿ ಬರುವ ಹಿರಿಯ ಮ್ಯಾನೇಜರ್ಗಳ ಕೆಲಸಕ್ಕೆ ಇದೀಗ ಕುತ್ತು ಬಂದಿದೆ. ಇನ್ಫೋಸಿಸ್ನ ಹಂತ 6,7, ಹಾಗೂ 8ರಲ್ಲಿ ಒಟ್ಟು 30,092 ಉದ್ಯೋಗಿಗಳು ಇದೀಗ ಕಾರ್ಯನಿರ್ವಹಿಸುತ್ತಿದ್ದು, ಈ ಪೈಕಿ 2,200 ಮಂದಿ ಉದ್ಯೋಗ ಕಳೆದು ಕೊಳ್ಳಲಿದ್ದಾರೆ. ಇತ್ತೀಚೆಗಷ್ಟೇ ಐಟಿ ದ್ಯತ್ಯ ಕಾಗ್ನಿಜೆಂಟ್ಸಂಸ್ಥೆ ಕೂಡಾ ತನ್ನ 13,000 ನೌಕರರನ್ನು ಕೆಲಸದಿಂದ ಕಿತ್ತು ಹಾಕಿತ್ತು. ಇನ್ಫೋಸಿಸ್ಕೂಡಾ ಇದೀಗ ಕಾಗ್ನಿಜೆಂಟ್ ಹಾದಿಯನ್ನೇ ತುಳಿಯುತ್ತಿದೆ. ಹಿರಿಯ ಉದ್ಯೋಗಿಗಳ ಕಥೆ ಹೀಗಾದ್ರೆ, ಕಿರಿಯ ಉದ್ಯೋಗಿಗಳೂ ಕೂಡಾ ಕೆಲಸ ಕಳೆದು ಕೊಳ್ಳುವ ಭೀತಿಯಲ್ಲಿ ಇದ್ದಾರೆ….
ಒಂದು ಬಾರಿ ಹಾವು ಕಚ್ಚಿದರೂ ಪರಂಧಾಮ ಸೇರುವವರ ಮಧ್ಯೆ ಇಲ್ಲೊಬ್ಬಾಕೆ ಯುವತಿ 34 ಬಾರಿ ಹಾವಿನಿಂದ ಕಚ್ಚಿಸಿಕೊಂಡೂ ಬದುಕುಳಿದಿದ್ದಾಳೆ. ಈಕೆಯನ್ನು ಕೊಲ್ಲಬೇಕು ಎಂದು ಅದೆಷ್ಟೋ ವಿಷಜಂತುಗಳು ಪ್ರಯತ್ನ ಪಟ್ಟರೂ ವಿಷಕಂಠನಂತೆ ಈಕೆ ವಿಷವೇರಿಸಿಕೊಂಡಳೇ ಹೊರತು ಸಾವನ್ನಪ್ಪಿಲ್ಲ.
ಅಭಿನಯ ಚಕ್ರವರ್ತಿ ಬಾದ್ಷಾ ಕಿಚ್ಚ ಸುದೀಪ್. ಬಹುಭಾಷೆಯಲ್ಲಿ ಬೇಡಿಕೆ ಇರುವ ಬಹುಮುಖ ಪ್ರತಿಭೆ. ಪೈಲ್ವಾನ್ ಸಕ್ಸಸ್ ಸಂಭ್ರಮ , ಪೈರಸಿ ಸಂಗ್ರಾಮವನ್ನು ಮುಗಿಸಿಕೊಂಡು ಈಗ ಪೋಲೆಂಡ್ ದೇಶಕ್ಕೆ ಹಾರಿದ್ದಾರೆ. ಕಾರಣ ಕೋಟಿಗೋಬ್ಬ -3 ಸಿನಿಮಾದ ಶೂಟಿಂಗ್. ಕಳೆದ ಎರಡು ವರ್ಷದಿಂದ ‘ಕೋಟಿಗೊಬ್ಬ-3’ ಚಿತ್ರದ ಕಾರ್ಯಗಳು ಪ್ರಗತಿಯಲ್ಲಿವೆ. ನಾಲ್ಕೈದು ಶೆಡ್ಯೂಲ್ ಶೂಟಿಂಗ್ ಅನ್ನು ಕೂಡ ಚಿತ್ರತಂಡ ಮುಗಿಸಿಕೊಂಡಿದೆ. ಈಗ ಸೂರಪ್ಪ ಬಾಬು ನಿರ್ಮಾಣದ ಈ ‘ಕೋಟಿಗೊಬ್ಬ-3’ ಚಿತ್ರದ ಶೂಟಿಂಗ್ ದೂರದ ಪೋಲೆಂಡ್ ದೇಶದಲ್ಲಿ ಭರ್ಜರಿಯಾಗಿ ಸಾಗುತ್ತಿದೆ. ‘ಕೋಟಿಗೊಬ್ಬ-3’ ಸಿನಿಮಾದ…