ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಈ ನಟಿ ನಿಮಗೆ ನೆನಪಿದ್ದಾರಾ..? ಕನ್ನಡ ನನ್ನ ಶತ್ರು, ಪೂರ್ಣಚಂದ್ರ, ಪ್ರೇಮಖೈದಿ ಹಾಗೂ ಇತ್ತೀಚೆಗೆ ಬಿಡುಗಡೆಯಾದ ದರ್ಶನ್ ಅಭಿನಯದ ಅಂಬರೀಶ ಸಿನಿಮಾಗಳಲ್ಲಿ ನಟಿಸಿರುವ ಇವರು ಹೆಸರು ರೇಖಾ. ಇವರ ಮೊದಲ ಹೆಸರು ಜೋಸೆಫೆನ್. ಮೂಲತ: ಮಲಯಾಳಂ ಕುಟುಂಬಕ್ಕೆ ಸೇರಿದ ರೇಖಾ ಮಲಯಾಳಂ, ತಮಿಳು, ತೆಲುಗು, ಕನ್ನಡ ಭಾಷೆಗಳಲ್ಲಿ ನಟಿಸಿದ್ದಾರೆ.

ಈ ನಟಿ ಸಿನಿಮಾಗಳ ವಿಷಯಕ್ಕೆ ಸಂಬಂಧಿಸಿದಂತೆ ಸುದ್ದಿಯಾಗಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ತಾವು ಬದುಕಿರುವಾಗಲೇ ತಮ್ಮ ಸಮಾಧಿ ಸ್ಥಳವನ್ನು ಖರೀದಿಸುವ ಮೂಲಕ ಸುದ್ದಿಯಾಗಿದ್ದಾರೆ. ಇಂತಹ ಘಟನೆಗಳು ಬಹಳ ಅಪರೂಪ ಬಿಡಿ. ಚೆನ್ನೈನ ಕಿಲ್ಪಾಕ್ ಎಂಬಲ್ಲಿ ತನ್ನ ತಂದೆ ಸಮಾಧಿ ಪಕ್ಕದಲ್ಲೇ ರೇಖಾ ಕೂಡಾ ತಮ್ಮ ಸಮಾಧಿ ಸ್ಥಳವನ್ನು ಖರೀದಿಸಿದ್ದಾರಂತೆ. ಹೀಗಂತ ಸಂದರ್ಶನವೊಂದರಲ್ಲಿ ಅವರೇ ಹೇಳಿಕೊಂಡಿದ್ದಾರೆ. ಇದಕ್ಕೆ ಬಲವಾದ ಕಾರಣ ಕೂಡಾ ಇದೆ.

ರೇಖಾ, ತನ್ನ ತಂದೆ ವರದರಾಜ್ ಅವರನ್ನು ಬಹಳ ಇಷ್ಟಪಡುತ್ತಿದ್ದರಂತೆ. ತಂದೆ ಎಂದರೆ ಅವರಿಗೆ ಪ್ರಾಣ. ಆದರೆ ವರದರಾಜ್ ಅವರಿಗೆ ರೇಖಾ ಸಿನಿಮಾರಂಗಕ್ಕೆ ಬರುವುದು ಸ್ವಲ್ಪವೂ ಇಷ್ಟವಿರಲಿಲ್ಲವಂತೆ. ರೇಖಾ ಅವರು ನಟಿಸಿರುವ ಯಾವ ಸಿನಿಮಾವನ್ನು ಕೂಡಾ ತಂದೆ ನೋಡಿಲ್ಲವಂತೆ. ತಂದೆ ನನ್ನ ಸಿನಿಮಾಗಳನ್ನು ನೋಡಲಿಲ್ಲ ಎಂಬ ಬೇಸರ ಒಂದು ಕಡೆ ಆದರೆ, ತಂದೆ ಇಷ್ಟಕ್ಕೆ ವಿರುದ್ಧವಾದ ಕ್ಷೇತ್ರದಲ್ಲಿ ಮುಂದುವರೆದಿದ್ದಕ್ಕೆ ಅವರಿಗೆ ಪಶ್ಚಾತಾಪ ಕೂಡಾ ಇದೆಯಂತೆ.

ಆದರೆ ತನ್ನ ತಂದೆ ಸಮಾಧಿ ಪಕ್ಕದಲ್ಲೇ ತನ್ನ ಸಮಾಧಿ ಇರಬೇಕು ಎಂಬುದು ರೇಖಾ ಅವರ ಆಸೆಯಂತೆ. ಈಗಾಗಲೇ ಸೈಟ್ ಖರೀದಿಸಿದ್ದು, ತಾನು ಸತ್ತಾಗ ಅದೇ ಸ್ಥಳದಲ್ಲಿ ನನ್ನನ್ನು ಮಣ್ಣು ಮಾಡಬೇಕು ಎಂದು ಮನೆಯವರು ಹಾಗೂ ಸಂಬಂಧಿಕರ ಬಳಿ ರೇಖಾ ಮಾತು ಪಡೆದಿದ್ದಾರೆ ಎನ್ನಲಾಗಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಯಾವುದೇ ರಾಜ್ಯದಲ್ಲಿ ಚುನಾವಣೆ ಬಂದಾಗ ತಮ್ಮ ನಾಯಕರು ಗೆಲ್ಲಲೆಂದು ಅಭಿಮಾನಿಗಳು ಎನೆಲ್ಲಾ ಕಸರತ್ತುಗಳನ್ನು ಮಾಡುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ. ತೆಲಂಗಾಣ ವಿಧಾನಸಭಾ ಚುನಾವಣಾ ಕಣ ಚಿತ್ರ, ವಿಚಿತ್ರ ಸಂಗತಿಗಳಿಂದ ಗಮನ ಸೆಳೆಯುತ್ತಿದೆ. ಚುನಾವಣೆಯಲ್ಲಿ ತಮ್ಮ ನಾಯಕರು ಗೆಲಲ್ಲಿ ಎಂದು ಜನರು ಹೋಮ, ಯಜ್ಞ ಮತ್ತಿತರ ಪೂಜೆ ಮಾಡುತ್ತಿದ್ದರೆ, ಕೆಲವರು ದೇವಾಲಯಗಳಿಗೆ ಲಕ್ಷ ಗಟ್ಟಲೇ ಹಣದ ಆಮಿಷವೊಡ್ಡುತ್ತಿದ್ದಾರೆ. ಮತ್ತೆ ಕೆಲವರು ಮೂಢನಂಬಿಕೆಗಳಿಗೆ ಜೋತು ಬಿದಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ಪಶ್ಚಿಮ ಗೋಧಾವರಿ ಜಿಲ್ಲೆಯ ಮಹೇಶ್ ಎಂಬಾತ ಇನ್ನೂ…
ಪೋರ್ಚುಗೀಸ್ ತೀರದಲ್ಲಿ ಸಾಗರ ತಳದಲ್ಲಿ ಸುಮಾರು 710 ಅಡಿ ಕೆಳಗಿನ ಪ್ರದೇಶದಲ್ಲಿ ಡೈನೋಸಾರ್ ಯುಗದ ತಿಮಿಂಗಿಲವೊಂದನ್ನು ಪತ್ತೆ ಹಚ್ಚಿರುವ ಬೆಳವಣಿಗೆ ವಿಶ್ವಾದ್ಯಂತ ವಿಜ್ಞಾನಿಗಳಲ್ಲಿ ಸಂಚಲನ ಸೃಷ್ಟಿಸಿದೆ.
ನಿಮ್ಮ ಮುಖ ಸುಂದರವಾಗಿದ್ದರೂ ಈ ಬ್ಲಾಕ್ ಹೆಡ್ಸ್ ನಿಂದಾಗಿ ಕಿರಿಕಿರಿಯಾಗುತ್ತದೆ.. ಇದರಿಂದ ಕೆಲವು ಬಾರಿ ಮುಜುಗರಕ್ಕೂ ಒಳಗಾಗುತ್ತೇವೆ.. ಪ್ರತಿ ಬಾರಿ ಬ್ಯೂಟಿ ಪಾರ್ಲರ್ ಗೆ ಹೋಗಿ ತೆಗಿಸಲು ಸಾಧ್ಯವಿಲ್ಲ.. ಅದರಲ್ಲೂ ಹುಡುಗರು ಪಾರ್ಲರ್ ಗಳಲ್ಲಿ ತೆಗೆಸಲು ಮುಜುಗರವೂ ಆಗುತ್ತದೆ.. ಇದಕ್ಕಾಗಿಯೇ ಮನೆ ಮದ್ದುಗಳ ಮೊರೆ ಹೋಗುವುದೇ ಒಳ್ಳೆಯದು.. ನಿಮಗಾಗಿಯೇ ಇಲ್ಲಿ ಕೆಲವು ಮನೆಮದ್ದುಗಳ ಮಾಹಿತಿ ನೀಡಿದ್ದೇವೆ ನೋಡಿ..
ಜೇನುತುಪ್ಪವನ್ನು ಯಾರು ತಾನೇ ಬೇಡ ಎನ್ನುತ್ತಾರೆ. ಪ್ರಪಂಚದಲ್ಲಿ ‘ಏಕ್ಸ್ಪಾರ್ ಡೇಟ್’ ಇಲ್ಲದೆ ಇರುವ ಏಕೈಕ ವಸ್ತು ಎಂದರೆ ಅದು ಈ ಜೇನು ತುಪ್ಪ. ಈ ಜೇನು ತುಪ್ಪವನ್ನು ಗಾಜಿನ ಬಾಟಲಿಯಲ್ಲಿ ಇಟ್ಟರೆ ಅದು ಎಷ್ಟೇ ವರ್ಷ ಹಳೆಯದಾದರೂ ಬಳಸಬಹುದು.ಇದನ್ನು ಫ್ರಿಜ್ ನಲ್ಲಿ ಮತ್ತು ಬಿಸಿಲಿನಲ್ಲಿ ಇರಬಾರದು. ಯಾರಿಗೆ ಜೇನು ತುಪ್ಪ ಇಷ್ಟ ಇಲ್ಲವೋ ಅಥವಾ ಅದರ ಬಗ್ಗೆ ಮಾಹಿತಿ ಇಲ್ಲವೋ, ಅವರು ಈ ಮಾಹಿತಿಯನ್ನು ಒಮ್ಮೆ ಓದಿ.ಇದನ್ನು ಎಲ್ಲಾ ವಯೋಮಾನದವರು ಬಳಸ ಬಹುದು. ಇದನ್ನು ರಕ್ತವರ್ಧಕ ಟಾನಿಕ್…
ಸಾಮಾನ್ಯವಾಗಿ ಹೊಸ ವರ್ಷ ಬಂತೆಂದರೆ ಆಚರಣೆಯ ಜೊತೆಗೆ ಎಷ್ಟು ದಿನ ರಜೆ ಇರುವುದು ಎಂಬ ಕುತೂಹಲ ಇದ್ದೇ ಇರುತ್ತದೆ..
2018 ರಲ್ಲಿ ರಜೆ ಬಯಸುವವರಿಗೆ ಬಂಪರ್ ಕೊಡುಗೆ ಎಂದರೇ ತಪ್ಪಾಗಲಾರದು.. ಏಕೆಂದರೆ ಬರೋಬ್ಬರಿ 23 ದಿನಗಳ ಸರ್ಕಾರಿ ರಜೆ ಬಂದಿದೆ..
ಸರ್ಕಾರವು ಈಗಾಗಲೇ ಆರೋಗ್ಯ ಭಾಗ್ಯ,ಶಾದಿ ಭಾಗ್ಯ,ಜ್ಯೋತಿ ಭಾಗ್ಯ ಅನ್ನ ಭಾಗ್ಯ ಹೀಗೆ ಹಲವಾರು ಭಾಗ್ಯಗಳನ್ನು ಜನರಿಗೆ ಕೊಟ್ಟಿದೆ.ಈಗ ಇದಕ್ಕೆ ಮತ್ತೊಂದು ಭಾಗ್ಯ ಸೇರ್ಪಡೆಯಾಗಿದೆ.