ಸುದ್ದಿ

ತನ್ನ ಗಂಡನಿಗೆ ಬುರ್ಖಾ ಹಾಕಿಸಿ ಉಟಕ್ಕೆ ಕರೆದುಕೊಂಡು ಹೋದ ಯುವತಿ!

155

ಮುಸ್ಲಿಂ ಸಮುದಾಯದಲ್ಲಿ ಸಾಮಾನ್ಯವಾಗಿ ಮಹಿಳೆಯರು ಬುರ್ಖಾ ಹಾಕಿಕೊಂಡೇ ಹೋಗಬೇಕು ಎನ್ನುವ ಸಂಪ್ರದಾಯವಿದೆ. ಇನ್ನು ಪಾಕಿಸ್ತಾನದಂತ ರಾಷ್ಟ್ರಗಳಲ್ಲಿ ಈ ನಿಯಮ ಕಡ್ಡಾಯ. ಆದರೆ ಇಲ್ಲೊಂದು ಜೋಡಿ ಇದಕ್ಕೆ ತದ್ವಿರುದ್ಧ ಎನ್ನುವ ರೀತಿಯಲ್ಲಿ ಊಟಕ್ಕೆ ತೆರಳಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿದ್ದಾರೆ.

ಹೌದು, ಪಾಕಿಸ್ತಾನ ಮೂಲದ ನವವಿವಾಹಿತ ಜೋಡಿಯೊಂದು ಊಟಕ್ಕೆ ತೆರಳಿದ್ದು, ಈ ವೇಳೆ ಯುವತಿ ಬುರ್ಖಾ ಧರಿಸಿಲ್ಲ. ಬದಲಿಗೆ ಆಕೆಯ ಪತಿ ಬುರ್ಖಾ ಧರಿಸಿದ್ದಾನೆ. ಪುರುಷ ಪ್ರಧಾನ ಸಮುದಾಯದಲ್ಲಿರುವ ಈ ರೀತಿಯ ಮೌಢ್ಯ ಹಾಗೂ ಮಹಿಳಾ ಸಬಲೀಕರಣ ವಿರೋಧಿ ಸಂಪ್ರದಾಯಕ್ಕೆ ಸೆಡ್ಡು ಹೊಡೆದು ಈ ರೀತಿ ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಈ ಬಗ್ಗೆ ಪೋಸ್ಟ್‌ ಮಾಡಿರುವ ಪತ್ನಿ, ಈ ರೀತಿ ಮಾಡುವುದರಿಂದ ಮುಂದಿನ ದಿನದಲ್ಲಿ ಸಮಸ್ಯೆಯಾಗುತ್ತದೆ ಎನ್ನುವ ಅರಿವಿದ್ದರು ಮಾಡುತ್ತಿದ್ದೇವೆ. ಇನ್ನು ಪುರುಷ ಪ್ರಧಾನ ಸಮಾಜ ಕಟ್ಟಲೆಗಳನ್ನು ತೆಗೆಯಲು ನನ್ನೊಂದಿಗೆ ಪತಿಯಿದ್ದು, ಆತನ ಸೌಂದರ್ಯ ನಿಮಗೆ ಯಾರಿಗೂ ಕಾಣಿಸುವುದಿಲ್ಲ. ಕಾರಣ ಆತ ಬುರ್ಖಾ ಧರಿಸಿದ್ದಾನೆ ಎಂದು ಬರೆದುಕೊಂಡಿದ್ದಾಳೆ.

ಇನ್ನು ಈ ಪೋಸ್ಟ್‌ ಹಾಕುತ್ತಿದ್ದಂತೆ ನೆಟ್ಟಿಗರು ಪರ-ವಿರೋಧ ಚರ್ಚೆಯನ್ನು ಶುರುಮಾಡಿದ್ದು, ಅನೇಕರು ಯುವತಿಯ ಈ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಮುಸ್ಲಿಂ ಸಮುದಾಯದ ವಿರೋಧಿ ನೀತಿಯನ್ನು ಅನುಸರಿಸುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ರಾಜಕಾರಣಿಯಾ ಕಚೇರಿ ಮುಂದೆಯೆ ಗೊಬ್ಬರ ಸುರಿದ ಭೂಪ….ಕಾರಣವೇನು ಗೊತ್ತಾ?

    ರಾಜಕಾರಣಿಗಳು ಕೆಲಸ ಮಾಡದಿದ್ದರೆ ಅವರ ವಿರುದ್ಧ ಜನರು ವಿವಿಧ ರೀತಿಯಲ್ಲಿ ಪ್ರತಿಭಟನೆ ಮಾಡುತ್ತಾರೆ. ಆದರೆ ಆಗಾಗ ಕೆಲವು ಪ್ರತಿಭಟನೆಗಳು ಎಲ್ಲರ ಗಮನ ಸೆಳೆಯುತ್ತವೆ. ಆಸ್ಟ್ರೇಲಿಯಾದ ತಾಸ್ಮಾನಿಯಾದ ಈ ವ್ಯಕ್ತಿ ಮಾಡಿದ ಪ್ರತಿಭಟನೆ ಕೂಡ ಬಹಳ ವಿಶಿಷ್ಟವಾಗಿದೆ. 51 ವರ್ಷದ ವ್ಯಕ್ತಿಯೊಬ್ಬ ಸ್ಥಳೀಯ ಜನಪ್ರತಿನಿಧಿ ಅವನ ಮಾತು ಕೇಳಲಿಲ್ಲವೆಂದು ಅವರ ಕಚೇರಿಯ ಮುಂದೆ 8000 ಕೆಜಿಯಷ್ಟು ಗೊಬ್ಬರ ಹಾಕಲು ಹೋಗಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ಅವನಿಗೆ ಬೇಕಾಗಿರುವ ಸರ್ಕಾರದ ಅನುದಾನದ ಬಗ್ಗೆ ಕೇಳಿದ್ದಾನೆ. ಯಾವಾಗ ಅವರು ಅವನ ಪ್ರಶ್ನೆಗೆ ಉತ್ತರಿಸಲಿಲ್ಲವೋ…

  • ಉಪಯುಕ್ತ ಮಾಹಿತಿ

    ಹದವಾದ ಸಿಹಿ ಪೊಂಗಲ್ ಸಂಕ್ರಾಂತಿ ಹಬ್ಬದ ವಿಶೇಷ ರೆಸಿಪಿ ಹುಗ್ಗಿ ಮಾಡುವ ವಿಧಾನ.

    ಸುಗ್ಗಿ ಹಬ್ಬವಾದ ಸಂಕ್ರಾಂತಿಯನ್ನು ಕರ್ನಾಟಕದಲ್ಲಷ್ಟೇ ಅಲ್ಲದೆ ಕೇರಳ, ತಮಿಳುನಾಡು ಮತ್ತು ದೇಶದ ಹಲವೆಡೆ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಈ ಹಬ್ಬದ ವಿಶೇಷ ಅಡುಗೆ ಪೊಂಗಲ್. ಆದ್ದರಿಂದ ನಿಮಗಾಗಿ ಸಿಹಿ ಪೊಂಗಲ್ ಮಾಡುವ ವಿಧಾನ ಇಲ್ಲಿದೆ… ಬೇಕಾಗುವ ಸಾಮಗ್ರಿಗಳು:1. ಹೆಸರುಬೇಳೆ 1 ಕಪ್2. ಅಕ್ಕಿ 1 ಕಪ್3. ಪುಡಿ ಮಾಡಿದ ಬೆಲ್ಲ, ಸಕ್ಕರೆ 1 ಕಪ್4. ಏಲಕ್ಕಿ – 45. ದ್ರಾಕ್ಷಿ , ಗೋಡಂಬಿ 50 ಗ್ರಾಂ6. ತುಪ್ಪ 4 ಚಮಚ ಮಾಡುವ ವಿಧಾನಮೊದಲಿಗೆ ಒಂದು ಬಾಣಲೆಯಲ್ಲಿ ಹೆಸರುಬೇಳೆಯನ್ನು…

  • ವ್ಯಕ್ತಿ ವಿಶೇಷಣ

    ಹುಟ್ಟಿದು ಹಿಟ್ಲರ್ ನೆಲದಲ್ಲಿ,ಕೊಟ್ಟಿದ್ದು ಕನ್ನಡ ಕೊಡುಗೆ..! ತಿಳಿಯಲು ಲೇಖನ ಓದಿ…

    ಮೊಟ್ಟಮೊದಲನೆಯದಾಗಿ ಕಿಟ್ಟೆಲ್ಲರು ಇಂದಿಗೂ ‘ಅವಿಸ್ಮರಣೀಯರಾಗಿರುವುದು’ ಅವರ ಕಿಟ್ಟೆಲ್ ಶಬ್ದಕೋಶದಿಂದ. ಸುಮಾರು ೨೦ ವರ್ಷಗಳಕಾಲ ಸತತವಾಗಿ ದುಡಿದಿದ್ದರ ಪರಿಣಾಮ – ಈ ಅಮರ ಕೃತಿಯ ನಿರ್ಮಾಣ. ಅವರು ೧೮೫೭ ರಲ್ಲಿ ಮೊದಲುಮಾಡಿ, ೧೮೯೩ ರಲ್ಲಿ ಹಸ್ತಪ್ರತಿ ತಯಾರಿಸಿದರು. ಅದನ್ನು ‘ಬಾಸೆಲ್ ಮಿಶನ್’ ನವರು ಪ್ರಕಟಿಸಿದರು.

  • Cinema

    ಪ್ರಥಮ್ ಈಗ ಬಿಲ್ಡಪ್ ರಾಜ!ಈ ನನ್ಮಗಂದ್ ಇದೇ ಆಯ್ತು ಗುರೂ!ಶಾಕ್ ಆಗ್ಬೇಡಿ…ಈ ಲೇಖನಿ ಓದಿ…

    ನಮ್ಮ ಹಳ್ಳಿ ಹೈದ,ಬಿಗ್‌ಬಾಸ್ ಶೋ ವಿನ್ನರ್ ಪ್ರಥಮ್ ಒಂದಲ್ಲ ಒಂದು ವಿಚಾರದಲ್ಲಿ ಸುದ್ದಿಯಾಗ್ತಾನೆ ಇರ್ತಾರೆ.  ಇತ್ತೀಚೆಗಷ್ಟೇ ತಮ್ಮ ಬಿಗ್‌ಬಾಸ್ ಸ್ನೇಹಿತ ಹಾಗೂ ಖಾಸಗಿ ಚಾನೆಲ್ನಲ್ಲಿ ಪ್ರಸಾರವಾಗುತ್ತಿರುವ ಸಿರಿಯಲ್’ನಲ್ಲಿ ನಟಿಸುತ್ತಿರುವ ಭುವನ್’ರವರನ್ನು ಕಚ್ಚಿ ಸುದ್ದಿಯಾಗಿದ್ದರು.

  • ಶಿಕ್ಷಣ

    ಪಿಯುಸಿ ಬಳಿಕ ಡಿಪ್ಲೊಮಾ 2ನೇ ವರ್ಷಕ್ಕೆ ಸೇರಲು ಅವಕಾಶ…!

    ಬೆಂಗಳೂರು: ದ್ವಿತೀಯ ಪಿಯುಸಿಯನ್ನು ವಿಜ್ಞಾನ ಅಥವಾ ತಾಂತ್ರಿಕ ವಿಷಯದಲ್ಲಿ ಪೂರೈಸಿದ ವಿದ್ಯಾರ್ಥಿಗಳಿಗೆ ನೇರವಾಗಿ ಡಿಪ್ಲೊಮಾ 2ನೇ ವರ್ಷಕ್ಕೆ ದಾಖಲಾಗಲು ರಾಜ್ಯ ಸರಕಾರ ಅವಕಾಶ ಮಾಡಿಕೊಟ್ಟಿದ್ದು, ಇದಕ್ಕಾಗಿ ಬ್ರಿಡ್ಜ್ ಕೋರ್ಸ್‌ ಕೂಡ ಸಿದ್ಧವಾಗುತ್ತಿದೆ. ಡಿಪ್ಲೊಮಾ ಪೂರೈಸಿದ ವಿದ್ಯಾರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಲ್ಯಾಟರಲ್‌ ಎಂಟ್ರಿ ಮೂಲಕ ಎಂಜಿನಿಯರಿಂಗ್‌ ಎರಡನೇ ವರ್ಷಕ್ಕೆ ಸೇರಿಕೊಳ್ಳಲು ಈ ವರೆಗೂ ಅವಕಾಶ ನೀಡಲಾಗುತ್ತಿತ್ತು. ಇದೇ ಮೊದಲ ಬಾರಿಗೆ ರಾಜ್ಯ ಸರಕಾರ ಪಿಯುಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ನೇರವಾಗಿ ಡಿಪ್ಲೊಮಾ ಎರಡನೇ ವರ್ಷಕ್ಕೆ ದಾಖಲಾಗಲು ಅವಕಾಶ…