ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಡೆಬಿಟ್ ಕಾರ್ಡ್, ಭೀಮ್ ಸೇರಿದಂತೆ ಆನ್ ಲೈನ್ ವಹಿವಾಟಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿ ಇತರೆ ಆಪ್ ಗಳನ್ನು ಬಳಸುತ್ತಿದ್ದವರಿಗೆ ಕೇಂದ್ರ ಸರ್ಕಾರ ಶುಭ ಸುದ್ದಿ ನೀಡಿದೆ.
2018ರ ಜನವರಿ 1ರಿಂದ ಮುಂದಿನ ಎರಡು ವರ್ಷಗಳ ಕಾಲ ಡೆಬಿಟ್ ಕಾರ್ಡ್, ಭೀಮ್ ಯುಪಿಐ ಮತ್ತು ಎಇಪಿಎಸ್ ಮೂಲಕ ನಡೆಯುವ 2,000 ರೂ. ವರೆಗಿನ ವ್ಯವಹಾರಗಳ ಶುಲ್ಕ ವೆಚ್ಚವನ್ನು ಸರಕಾರವೇ ಭರಿಸಲಿದೆ ಮತ್ತು ಬ್ಯಾಂಕುಗಳಿಗೆ ಅದನ್ನು ಮರುಪಾವತಿಸಲಿದೆ. ಈ ಮಹತ್ವದ ನಿರ್ಧಾರವನ್ನು ಇಂದು ಕೇಂದ್ರ ಸಚಿವ ಸಂಪುಟ ಕೈಗೊಂಡಿತು.
ದೇಶಾದ್ಯಂತ ಆನ್ ಲೈನ್ ವಹಿವಾಟು ಹೆಚ್ಚುತ್ತಿದ್ದು, ಇದಕ್ಕೆ ಉತ್ತೇಜನ ನೀಡುವ ಸಲುವಾಗಿ ಹಣಕಾಸು ಇಲಾಖೆ ಈ ತೀರ್ಮಾನ ಕೈಗೊಂಡಿದ್ದು, ಡಿಸೆಂಬರ್ ತ್ರೈಮಾಸಿಕದಲ್ಲಿ ಭೀಮ್ ವಹಿವಾಟಿನಲ್ಲಿ ಶೇ.86 ರಷ್ಟು ಹೆಚ್ಚಾಗಿದೆ ಎಂದು ಹಣಕಾಸು ಇಲಾಖೆ ಕಾರ್ಯದರ್ಶಿ ರಾಜೀವ್ ಕುಮಾರ್ ತಮ್ಮ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಆನ್ ಲೈನ್ ವ್ಯವಹಾರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ 2 ಸಾವಿರ ರೂ.ವರೆಗಿನ ವಹಿವಾಟಿಗೆ ಯಾವುದೇ ಶುಲ್ಕ ವಿಧಿಸುವುದಿಲ್ಲವೆನ್ನಲಾಗಿದ್ದು, ಇದರಿಂದ ಗ್ರಾಹಕರು ಹಾಗೂ ವ್ಯಾಪಾರಸ್ಥರಿಗೆ ಅನುಕೂಲವಾಗಲಿದೆ.
ಇನ್ನು ಮುಂದೆ ವರ್ಷಕ್ಕೆ 20 ಲಕ್ಷ ರೂ. ವಹಿವಾಟು ನಡೆಸುವ ಸಣ್ಣ ವ್ಯಾಪಾರಿಗಳು ಪಾಯಿಂಟ್ ಆಫ್ ಸೇಲ್ ಮಶೀನ್ನಲ್ಲಿ ನಡೆಸುವ ಹಣಕಾಸು ವ್ಯವಹಾರಕ್ಕೆ ಶೇ.0.40 ಎಂಡಿಆರ್ ಶುಲ್ಕವನ್ನು ವಿಧಿಸಲಾಗುವುದು ಮತ್ತು ಇದರ ಗರಿಷ್ಠ ಮಿತಿಯನ್ನು ತಲಾ ವ್ಯವಹಾರದ ಮೇಲೆ 200 ರೂ.ಗೆ ನಿಗದಿಸಲಾಗಿದೆ ಎಂದು ಹೊಸ ಅಧಿಸೂಚನೆ ತಿಳಿಸಿದೆ.
ವರ್ಷಕ್ಕೆ 20 ಲಕ್ಷ ಮೀರಿ ವಹಿವಾಟು ನಡೆಸುವ ಮಧ್ಯಮ ಮಟ್ಟದ ವ್ಯಾಪಾರಿಗಳಿಗೆ ತಲಾ 1,000 ರೂ. ವಹಿವಾಟಿನ ಮೇಲೆ ಶೇ.0.90 ಎಂಡಿಆರ್ ಶುಲ್ಕವಿದೆ. ಕ್ಯೂಆರ್ ಕೋಡ್ ಮೂಲಕ ವ್ಯವಹರಿಸಿದಲ್ಲಿ ಶೇ.0.80 ಎಂಡಿಆರ್ ಅನ್ವಯವಾಗುತ್ತದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಜಗತ್ತಿನಾದ್ಯಂತ ದಾಖಲೆ ಕಲೆಕ್ಷನ್ ಮಾಡುತ್ತಿರುವ ಬಾಹುಬಲಿ ಚಿತ್ರದ ಖಳನಟ ಬಲ್ಲಾಳದೇವ ಪಾತ್ರದಲ್ಲಿ ಮಿಂಚಿದ ರಾಣಾ ದಗ್ಗುಬಾಟಿ ಕನ್ನಡ ಚಿತ್ರದಲ್ಲಿ ಅಭಿನಯಿಸಲಿದ್ದು, ಈ ಬಗ್ಗೆ ಅಧಿಕೃತ ಘೋಷಣೆಯೊಂದೇ ಬಾಕಿ ಇದೆ.
ಹಿಮಾಚಲ ಪ್ರದೇಶದ ಕಾಂಗ್ರಾ ಎಂಬಲ್ಲಿ ಶುಕ್ರವಾರದಂದು 10 ನೇ ತರಗತಿಯ ವಿದ್ಯಾರ್ಥಿನಿಯನ್ನು ಒಂದು ದಿನದ ಮಟ್ಟಿಗೆ ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ ಎಸ್ಡಿಎಂ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿ ಎಲ್ಲರ ಗಮನವನ್ನು ಸೆಳೆದಿದ್ದಾರೆ. 10ನೇ ತರಗತಿಯಲ್ಲಿ ಶೇಕಡ 94 ರಷ್ಟು ಅಂಕವನ್ನು ಗಳಿಸಿ ತೇರ್ಗಡೆ ಹೊಂದಿರುವ ವಿದ್ಯಾರ್ಥಿನಿ ಹೀನಾ ಠಾಕೂರ್ ಎಂಬವರಿಗೆ ಈ ಅದೃಷ್ಟ ಒಲಿದು ಬಂದಿದೆ. ಹೀನಾ ಅವರ ತಂದೆ ಕಾಂಗ್ರಾ ಉಪವಿಭಾಗದಲ್ಲಿ ಮ್ಯಾಜಿಸ್ಟ್ರೇಟ್ನಲ್ಲಿ ಪಿಯೋನ್ ಆಗಿ ಕೆಲಸ ಮಾಡುತ್ತಿದ್ದಾರೆ. ಇದೀಗ ಪೀಯೊನ್ ತಮ್ಮ ಮಗಳ ಸಾಧನೆಗೆ ಗೌರವ ಸಲ್ಲಿಸಿ ಈ…
ಭಾರತ ಮೂಲದ 12 ವರ್ಷ ವಯಸ್ಸಿನ ಬಾಲಕ ಬ್ರಿಟಿಷ್ ಟಿವಿ ಷೋ ಒಂದರಲ್ಲಿ ಎಲ್ಲ ಪ್ರಶ್ನೆಗಳಿಗೆ ಸರಿ ಉತ್ತರ ನೀಡುವ ಮೂಲಕ ರಾತ್ರೋರಾತ್ರಿ ಮನೆಮಾತಾಗಿದ್ದಾನೆ.
60 ವಸಂತಗಳನ್ನು ಕಂಡ ಕರ್ನಾಟಕಕ್ಕೆ ನಮ್ಮ ರಾಜ್ಯದ ಹೆಮ್ಮೆಯ ಮೀಸಲು ಪೋಲೀಸ್ ತನ್ನದೇ ಆದ ಶೈಲಿಯಲ್ಲಿ ನಮನವನ್ನು ಸಲ್ಲಿಸುತ್ತಿದೆ..
ಹೌದು. ಉತ್ತರ ಪ್ರದೇಶ ರಾಜ್ಯದ ಆಗ್ರಾ-ಜೈಪುರ ಹೆದ್ದಾರಿಯ ಆಗ್ರಾದಿಂದ 30 ಕಿಲೋ ಮೀಟರ್ ದೂರದಲ್ಲಿರುವ ಅಚ್ನೇರಾ ಬ್ಲಾಕ್ನ ಕುರಾಲಿ ತೆಹ್ಸಿಲ್ಯಲ್ಲಿನ ಚಹ್ ಪೋಕರ್ ಎಂಬ ಗ್ರಾಮದಲ್ಲಿ ಸುಮಾರು 50 ಮುಸ್ಲಿಂ ಕುಟುಂಬಗಳಿವೆ. ಅವರೆಲ್ಲರೂ ತಮ್ಮ ಕುಟುಂಬಸ್ಥರು ಯಾರದರೂ ಸತ್ತರೆ ಅವರನ್ನು ತಮ್ಮ ಮನೆಯಲ್ಲಿಯೆ ಸಮಾಧಿ ಮಾಡುವುದನ್ನು ರೂಡಿಸಿಕೊಂಡು ಬಂದಿದ್ದಾರಂತೆ. ಇದು ಯಾವುದೇ ಪದ್ಧತಿಯಲ್ಲ, ಬಲವಂತ ಎನ್ನುತ್ತಾರೆ ಗ್ರಾಮಸ್ಥರು. ಗ್ರಾಮದಲ್ಲಿರುವ 50 ಮುಸ್ಲಿಂ ಮನೆಗಳಲ್ಲಿ ಸುಮಾರು 300 ಜನಸಂಖ್ಯೆ ಹೊಂದಿದೆ. ಆದರೆ ಅವರಿಗೆ ಖಾಯಂ ಸ್ಮಶಾನ ಭೂಮಿ ಇಲ್ಲ….
ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಭಯ ಹೋಗಲಾಡಿಸಿ ಪರೀಕ್ಷೆ ಬಗ್ಗೆ ಆತ್ಮವಿಶ್ವಾಸ ಮೂಡಿಸುವ ಸಲುವಾಗಿ 6 ಮತ್ತು 8ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಸಲು ಚಿಂತನೆ ನಡೆಸಲಾಗಿದೆ ಎಂದು ಸಚಿವ ಎಸ್. ಸುರೇಶ್ ಕುಮಾರ್ ಅವರು ತಿಳಿಸಿದರು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಬಳಿಕ ಬುಧವಾರ ಮೊದಲ ಬಾರಿಗೆ ಚಾಮರಾಜನಗರ ಜಿಲ್ಲೆಗೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಸುರೇಶ್ ಕುಮಾರ್ ಅವರು ಬ್ಯಾಡಮೂಡ್ಲು ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ಪರೀಕ್ಷೆ ಬಗ್ಗೆ ಚರ್ಚಿಸಿದ ಬಳಿಕ…