ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ರಾಜ್ಯದಲ್ಲಿ ತಮ್ಮದೇ ಸರ್ಕಾರ ಇದ್ದರೂ ಕೇವಲ ಒಂದು ಸ್ಥಾನ ಗೆದ್ದ ಕಾಂಗ್ರೆಸ್ ಪಕ್ಷಕ್ಕೆ ಪುನಶ್ಚೇತನ ಕೊಡಲು ಕಾಂಗ್ರೆಸ್ ಹೈ ಕಮಾಂಡ್ ಮುಂದಾಗಿದೆ. ರಾಜ್ಯ ಉಸ್ತುವಾರಿ ಬದಲಾವಣೆ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಚಿಂತನೆ ಆರಂಭವಾಗಿದೆ ಎಂಬುದಾಗಿ ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭ್ಯವಾಗಿದೆ.
ಕೆಪಿಸಿಸಿಯ ಜವಾಬ್ದಾರಿ ಹೊರಲು ಟ್ರಬಲ್ ಶೂಟರ್ ಡಿ.ಕೆ ಶಿವಕುಮಾರ್ ಸೂಕ್ತ ಅನ್ನೋದು ಹೈ ಕಮಾಂಡ್ ನಂಬಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಹೈಕಮಾಂಡ್ ನೇರವಾಗಿ ಡಿ.ಕೆ ಶಿವಕುಮಾರ್ ಬಳಿ ಮಾತನಾಡಿದೆ. ಈ ಮೂಲಕ ಪರೋಕ್ಷವಾಗಿ ವಿಷಯ ಡಿಕೆಶಿ ಕಿವಿಗೆ ತಲುಪಿಸುವ ಪ್ರಯತ್ನ ನಡೆದಿದೆ. ಆದರೆ ಇದಕ್ಕೆ ಒಪ್ಪದ ಡಿಕೆಶಿ ಸದ್ಯಕ್ಕೆ ಯಾವುದೆ ಜವಾಬ್ದಾರಿ ಬೇಡ ಎಂದಿದ್ದಾರೆ ಎಂದು ತಿಳಿದುಬಂದಿದೆ.
ಸದ್ಯಕ್ಕೆ ಯಾವುದೇ ಚುನಾವಣೆ ಇಲ್ಲ. ಆದ್ದರಿಂದ ಪಕ್ಷದ ನೇತೃತ್ವ ವಹಿಸುವಂತಹ ಮಹತ್ತರ ಜವಾಬ್ದಾರಿ ಈಗ ಬೇಡ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಅಲ್ಲದೆ ತಮ್ಮದೇ ಆದ ಕೆಲವು ಸಮಸ್ಯೆಗಳಿವೆ. ಆದ್ದರಿಂದ ಬೇಡವೆಂದು ಹೇಳಿದ್ದಾರೆ ಎನ್ನಲಾಗಿದೆ.
ಐಟಿ, ಇಡಿ ಸಂಕಷ್ಟದಲ್ಲಿರುವ ಡಿಕೆಶಿಗೆ ಸದ್ಯಕ್ಕೆ ಯಾವುದೇ ಜವಾಬ್ದಾರಿ ಬೇಡ ಅನ್ನಿಸಿದ್ಯಾ ಗೊತ್ತಿಲ್ಲ. ಆದರೆ ಸದ್ಯದ ಮಟ್ಟಿಗೆ ಪಕ್ಷದ ಜವಾಬ್ದಾರಿ ಬೇಡ. ಸಚಿವನಾಗಿಯೇ ಮುಂದುವರಿಯುತ್ತೇನೆ ಎಂದಿದ್ದಾರೆ.ಒಂದು ಕಾಲದಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬೇಕೇ ಬೇಕು ಎಂದು ಪಟ್ಟು ಹಿಡಿದಿದ್ದ ಡಿಕೆಶಿ, ಇದೀಗ ಹೈಕಮಾಂಡ್ ಮನಸ್ಸು ಮಾಡಿದರೂ ಸ್ಥಾನ ಬೇಡವೇ ಬೇಡ ಅನ್ನುವ ಮೂಲಕ ಪಕ್ಷದ ನಾಯಕರ ಹುಬ್ಬೇರಿಸುವಂತೆ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆಗಳು ಹೆಚ್ಚುತ್ತಿವೆ. ಒಬ್ಬ ವ್ಯಕ್ತಿ ಎರಡು, ಮೂರು ಫೇಸ್ ಬುಕ್ ಖಾತೆ ಓಪನ್ ಮಾಡಿಕೊಂಡಿದ್ದಾರೆ. ನಕಲಿ ಫೇಸ್ಬುಕ್ ಖಾತೆಗಳಿಂದ ಸಾಕಷ್ಟು ವಂಚನೆ ಪ್ರಕರಣಗಳು ಬೆಳಕಿಗೆ ಬಂದಿವೆ. ಇದನ್ನು ತಡೆಯಲು ಫೇಸ್ ಬುಕ್ ಸೇರಿ ಇತರೆ ಸಾಮಾಜಿಕ ಜಾಲತಾಣ ಬಳಕೆದಾರರ ಪ್ರೊಫೈಲ್ಗೆ ಆಧಾರ್ ಸಂಖ್ಯೆ ಜೋಡಣೆ ಮಾಡಬೇಕು ಎಂದು ಮದ್ರಾಸ್, ಬಾಂಬೆ ಹಾಗೂ ಮಧ್ಯ ಪ್ರದೇಶದ ಹೈಕೋರ್ಟ್ನಲ್ಲಿ ಸಲ್ಲಿಕೆಯಾಗಿರೋ ಆರ್ಜಿಗಳನ್ನು ಸುಪ್ರೀಂಕೋರ್ಟ್ಗೆ ವರ್ಗಾಯಿಸಲು ಕೋರಿರುವ ಅರ್ಜಿ ವಿಚಾರಣೆಗೆ ಸರ್ವೋಚ್ಚ ನ್ಯಾಯಾಲಯ ಸಮ್ಮತಿಸಿದೆ. ಈ…
ನಮ್ಮ ರುಪಾಯಿ ಮುಂದೆ ಡಾಲರ್ ಮೌಲ್ಯ ಜಾಸ್ತಿ ಇರುವುದರಿಂದ ಅದರ ಬಗ್ಗೆಯೇ ನಮ್ಮಲ್ಲಿ ಚರ್ಚೆ ನಡೆಯುತ್ತದೆ. ಆದರೆ ನಮಗೆ ಗೊತ್ತೇ ಇಲ್ಲದ ವಿಷಯ ಏನಪ್ಪಾ ಅಂದ್ರೆ ಜಗತ್ತಿನಲ್ಲಿ ನಮ್ಮ ದೇಶದ ರುಪಾಯಿಗಿಂತ ಕಡಿಮೆ ಬೆಲೆಯುಳ್ಳ ಕರೆನ್ಸಿ ದೇಶಗಳು ಬಹಳಷ್ಟಿವೆ.
ಆಕಾಶದಲ್ಲಿ ಅತೀ ವೇಗವಾಗಿ ಚಲಿಸುತ್ತಿದ್ದ ಒಂದು ವಿಮಾನದ ಮೇಲೆ ಹದ್ದುಗಳು ಒಮ್ಮೆಲೇ ದಾಳಿಮಾಡಿದವು. ಅದೂ ಸಹ ಒಂದಲ್ಲ ಎರಡಲ್ಲ ಹತ್ತಾರು ಸಂಖ್ಯೆಯಲ್ಲಿ ದಾಳಿ ಮಾಡಿ ಪೈಲೆಟ್ ಅನ್ನು ತಬ್ಬಿಬ್ಬುಗೊಳಿಸಿದವು. ಆತಂಕ ಗೊಂಡ ಪೈಲೆಟ್ ವಿಮಾನವನ್ನು ಆಕಡೆ, ಈಕಡೆ ಓಡಿಸತೊಡಗಿದ.
ಚಂದನವನದಲ್ಲಿ ಸ್ಟಾರ್ ನಟರ ಹೈ ಬಜೆಟ್ ಚಿತ್ರಗಳು ಒಂದರ ಮುಂದೆ ಒಂದು ಬಿಡುಗಡೆಯಾಗುತ್ತಿವೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಭಾರತ ಮಾತ್ರವಲ್ಲದೆ ವಿದೇಶಗಳಲ್ಲಿ ಕೂಡ ಪಂಚ ಭಾಷೆಗಳಲ್ಲಿ ಬಿಡುಗಡೆ ಆಗಿ ಕನ್ನಡ ಚಿತ್ರರಂಗದಲ್ಲಿ ಹೊಸದೊಂದು ಇತಿಹಾಸವನ್ನೇ ಸೃಷ್ಟಿ ಮಾಡಿತ್ತು. ಇದೇ ತಿಂಗಳ ಫೆಬ್ರುವರಿ ೧೧ರಂದು ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ಚಿತ್ರ ನಟಸಾರ್ವಭೌಮ ತೆರೆಗೆ ಅಪ್ಪಳಿಸಲಿದ್ದು ಚಿತ್ರ ರಸಿಕರು ಈ ಚಿತ್ರವನ್ನು ಕಣ್ತುಂಬಿ ಕೊಳ್ಳಲು ತುದಿ ಗಾಲಲ್ಲಿ ನಿಂತಿದ್ದಾರೆ….
ಜಾತಿ ಆಧಾರಿತ ತಾರತಮ್ಯ ತೊಡೆದುಹಾಕುವ ಪ್ರಯತ್ನವಾಗಿ ಕೇಂದ್ರ ಸರಕಾರವು, ಅಂತರ್ಜಾತಿ ವಿವಾಹಗಳನ್ನು ಪ್ರೋತ್ಸಾಹಿಸುವಂತೆ ಎಲ್ಲಾ ರಾಜ್ಯಗಳಿಗೆ ಸೂಚಿಸಿದೆ. ದಲಿತ ಅಂತರ್ಜಾತಿ ವಿವಾಹಗಳಿಗೆ ಪ್ರೋತ್ಸಾಹ ನೀಡುವ ಹಿನ್ನೆಲೆಯಲ್ಲಿ 2.5 ಲಕ್ಷ ರೂ. ಪ್ರೋತ್ಸಾಹ ಧನ ನೀಡುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.
ಅಂಬಿಕಾತನಯ ದತ್ತ ಎಂಬ ಕಾವ್ಯನಾಮ ಹೊಂದಿದ್ದ ಕನ್ನಡದ ವರಕವಿ, ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು ಕನ್ನಡ ಸಾಹಿತ್ಯ ಲೋಕದ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರಲ್ಲೊಬ್ಬರು.