ಸುದ್ದಿ

ಟ್ಯಾಟೂ ಪ್ರಿಯರಿಗೆ ಇಲ್ಲಿದೆ ಶಾಕಿಂಗ್ ನ್ಯೂಸ್…! ತಪ್ಪದೆ ಇದನ್ನು ಓದಿ..,

77

ಟ್ಯಾಟೂ ಇತ್ತೀಚಿನ ದಿನಗಳಲ್ಲಿ ಹಾಕಿಸಿಕೊಳ್ಳುವುದು ಸಾಮಾನ್ಯಾವಾಗಿದೆ. ಅದರಲ್ಲೂ ಕೆಲ ವರ್ಷಗಳ ಹಿಂದೆ ಫ್ಯಾಷನ್ ಲೋಕದಲ್ಲಿ ಟ್ಯಾಟೂ ಹೊಸ ಟ್ರೆಂಡ್ ನ್ನೆ ಹುಟ್ಟುಹಾಕಿತ್ತು. ಟ್ಯಾಟೂವಿನ ಚಿತ್ರಗಳಿಗೆ ಜನ ಮಾರುಹೋಗಿದ್ದರು. ಇನ್ನೂ ಯುವ ಪೀಳೀಗೆಯಂತೂ ಟ್ಯಾಟೂಗಳ ವಿನ್ಯಾಸಕ್ಕೆ ಫುಲ್ ಫಿದಾ ಆಗಿದ್ದರು. ಅಲ್ಲದೆ ಯಾರ ಕೈ ನೋಡಿದರೂ ಕೂಡ ಟ್ಯಾಟೂ ಇರುತ್ತಿತ್ತು. ಇಂತಹ ಟ್ಯಾಟೂ ಪ್ರಿಯರಿಗೆ ಇದೀಗ ಬಿಗ್ ಶಾಕಿಂಗ್ ನ್ಯೂಸ್ ಒಂದು ಹೊರಬಿದ್ದಿದೆ. ಅದೇನಪ್ಪಾ ಅಂತೀರಾ ?

ಮೊದಲು ಸೆಲೆಬ್ರೆಟಿಗಳಿಂದ ಶುರುವಾದ ಟ್ಯಾಟೂ ಕ್ರೇಜ್ ಬಳಿಕ ಜನ ಸಾಮಾನ್ಯರಿಗೂ ತಲುಪಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಟ್ಯಾಟೂ ಹಾಕಿಸಿಕೊಳ್ಳುವ ಮುನ್ನ ಜನರು ಎಚ್ಚರ ವಹಿಸುವುದು ಬಹಳ ಮುಖ್ಯವಾಗಿದೆ. ಹೌದು ನಾವೆಲ್ಲರೂ ಹಾಕಿಸಿಕೊಳ್ಳುತ್ತಿರುವ ಟ್ಯಾಟೂವಿನಿಂದ ಎಚ್‌ಐವಿ, ಮಲೇರಿಯಾ ಮತ್ತು ಡೆಂಘಿನಂತಹ ಭಯಾನಕ ಮತ್ತು ಮಾರಕ ಕಾಯಿಲೆಗಳಿಗೆ ಕಾರಣವಾಗುತ್ತಿದೆ. ಎಂಬ ಸತ್ಯವನ್ನು ಆ್ಯಕ್ಷನ್ ವೆಲ್​ನೆಸ್​​ ಆರ್ಗನೈಸೇಷನ್ ಸಾಬೀತುಪಡಿಸಿದೆ. ಇನ್ನೂ ಈ ಕಾಯಿಲೆಗಳಿಗೆ ಮುಖ್ಯ ಕಾರಣವೆಂದರೆ ನಿರ್ಲಕ್ಷ್ಯ.

ಟ್ಯಾಟೂ ಬಗೆಗೆ ಏನೂ ತಿಳಿಯದೇ ಎಷ್ಟೋ ಮಂದಿ ಹಚ್ಚೆ ಹಾಕಿಸಿಕೊಳ್ಳುತ್ತಾರೆ. ಆದರೆ ಹಚ್ಚೆ ಹಾಕಿಸಿಕೊಳ್ಳುವ ವೇಳೆ ಕೊಂಚವು ಸಹ ಕಾಳಜಿ ವಹಿಸುವುದಿಲ್ಲ. ಎಂಬುವುದೇ ಈ ಎಲ್ಲಾ ಕಾಯಿಲೆಗಳಿಗೆ ಮುಖ್ಯ ಕಾರಣವಾಗಿದೆ.ಟ್ಯಾಟೂ ಹಾಕಲು ಇಂಕು ಮತ್ತು ಸೂಜಿ ಮುಂತಾದ ಕಾರಣಗಳಿಂದ ರೋಗಗಳು ಹರಡುತ್ತವೆ. ಇನ್ನೂ ಆರಂಭದಲ್ಲಿ ಟ್ಯಾಟೂ ಹಾಕಿಸಿಕೊಳ್ಳುವಾಗ ಮಾಡುವ ನಿರ್ಲಕ್ಷ್ಯ ಭವಿಷ್ಯದಲ್ಲಿ ನಿಮಗೆ ಕೇಡುಕಾಗಬಹುದು.

ಸಾಮನ್ಯವಾಗಿ ಟ್ಯಾಟೂ ಹಾಕುವಾಗ ಚರ್ಮದೊಳಗೆ ಬಣ್ಣವನ್ನು ಹಾಕುತ್ತಾರೆ. ಇದರಿಂದಾಗಿ ಸೂಜಿ ಚುಚ್ಚಿ ರಕ್ತದ ಸಂಪರ್ಕದಲ್ಲಿರುತ್ತದೆ. ನಿಮಗಿಂತ ಮೊದಲು ಬಂದಿದ್ದ ವ್ಯಕ್ತಿ ಎಚ್‌ಐವಿ, ಮಲೇರಿಯಾ ಮತ್ತು ಡೆಂಘಿ ರೋಗಗಳಿದ್ದರೆ , ಅವರಿಗೆ ಇದೇ ಸೂಜಿಯನ್ನು ಬಳಸಿದ್ದರೆ ಅವರಿಗಿದ್ದ ರೋಗಗಳು ನಿಮಗೆ ಹರಡುವುದರಲ್ಲಿ ಯಾವುದೇ ರೀತಿಯ ಸಂದೇಹವಿಲ್ಲ.ಹಾಗಾಗಿ ಟ್ಯಾಟೂ ಹಾಕಿಸಿಕೊಳ್ಳುವ ಮುನ್ನ ಟ್ಯಾಟೂ ಸೂಜಿಯನ್ನು ಸರಿಯಾಗಿ ಸ್ವಚ್ಛಗೊಳಿಸಿದ್ದಾನೆಯೇ ಎಂದು ಗಮನಿಸಬೇಕು. ಇಲ್ಲ ಹೊಸ ಸೂಜಿಯನ್ನು ಬಳಸಿದರೆ ಇನ್ನೂ ಉತ್ತಮ.

ಆದರೆ ಸ್ವಚ್ಛಗೊಳಿಸದ ಹಳೆಯ ಸೂಜಿಯನ್ನು ಯಾವುದೇ ಕಾರಣಕ್ಕೂ ಬಳಸಬೇಡಿ.ಟ್ಯಾಟೂ ಹಾಕುವ ವೇಳೆ ಸೂಜಿ ಬಳಕೆ ಬಗ್ಗೆ ಅತೀ ಎಚ್ಚರವಹಿಸಬೇಕು. ಜೊತೆಗೆ ಹಚ್ಚೆ ಹಾಕುವ ಮೊದಲು, ಟ್ಯಾಟೂ ಮಿಶನ್​ನ್ನು ಸ್ವಚ್ಛತಾ ಕ್ರಿಮಿನಾಶಕ ಬಳಸಿ ಶುದ್ಧಗೊಳಿಸಿದ್ದಾನೆಯೇ ಎಂದು ಪರೀಕ್ಷಿಸಿ,ಹಾಗೆಯೇ ಹಚ್ಚೆ ಹಾಕಿಸಿಕೊಳ್ಳಬೇಕಾದ ನಿಮ್ಮ ದೇಹದ ಭಾಗವನ್ನು ಸಹ ಸಂಪೂರ್ಣ ಸ್ವಚ್ಛಗೊಳಿಸಲು ಮರೆಯಬೇಡಿ.

ಅಲ್ಲದೆ ಲೈಸೆನ್ಸ್​ ಪಡೆದಿರುವ ಟ್ಯಾಟೂ ಆರ್ಟಿಸ್ಟ್​ಗಳಿಂದ ಮಾತ್ರ ಹಚ್ಚೆ ಹಾಕಿಸಿಕೊಳ್ಳಿ. ಯಾವುದೇ ಕಾರಣಕ್ಕೂ ರಸ್ತೆಬದಿಯಲ್ಲಿ ಹಚ್ಚೆ ಹಾಕಿಸಿಕೊಳ್ಳುವವರ ಹತ್ತಿರ ಹಚ್ಚೆ ಹಾಕಿಸಿಕೊಳ್ಳಬೇಡಿ. ಕಾರಣ ಇಂತಹ ಸ್ಥಳಗಳಲ್ಲಿ ಕಳಪೆ ಇಂಕ್ ಗುಣಮಟ್ಟ ಕಡಿಮೆ ಇರುತ್ತದೆ ಜೊತೆಗೆ ಒಂದೇ ಸೂಜಿಯಲ್ಲಿ ಎಷ್ಟೊ ಜನರಿಗೆ ಹಚ್ಚೆ ಹಾಕಿರುತ್ತಾರೆ.ಹಾಗೆಯೇ ಟ್ಯಾಟೂ ಹಾಕಿಸಿಕೊಳ್ಳುವ ಮೊದಲು ಮದ್ಯಪಾನ ಅಥವಾ ಕೆಫೇನ್ ಅಂಶವಿರುವ ವಸ್ತುಗಳನ್ನು ಸೇವಿಸಬಾರದು. ಆದರೆ ಟ್ಯಾಟೂ ಹಾಕಿಸಿಕೊಳ್ಳುವ ಮುನ್ನ ಸಾಕಷ್ಟು ನೀರು ಕುಡಿಯಬೇಕಿರುವುದು ಅತ್ಯವಶ್ಯಕ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ