ಕವಿ ಪರಿಚಯ

ಜ್ಞಾನಪೀಠ ಪ್ರಶಸ್ತಿ ಪಡೆದ ದ.ರಾ.ಬೇಂದ್ರೆಯವರ ಒಂದು ಕಿರುಪರಿಚಯದ ಬಗ್ಗೆ, ತಿಳಿಯಲು ಈ ಲೇಖನ ಓದಿ..

3287

ಅಂಬಿಕಾತನಯ ದತ್ತ ಎಂಬ ಕಾವ್ಯನಾಮ ಹೊಂದಿದ್ದ ಕನ್ನಡದ ವರಕವಿ, ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು ಕನ್ನಡ ಸಾಹಿತ್ಯ ಲೋಕದ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರಲ್ಲೊಬ್ಬರು.

ಜನನ : 1886ರ ಜನವರಿ 31, ಧಾರವಾಡ

ತಂದೆ ತಾಯಿ : ರಾಮಚಂದ್ರ ಭಟ್ಟ, ಅಂಬಿಕೆ.

ಕಾವ್ಯನಾಮ : ಅಂಬಿಕಾತನಯದತ್ತ.

ವಿಧ್ಯಾಭ್ಯಾಸ :-

1913 ರಲ್ಲಿ ಮೆಟ್ರಿಕ್ಯುಲೇಶನ್ ಮುಗಿಸಿದ ಬಳಿಕ ಬೇಂದ್ರೆ ಪುಣೆಯ ಕಾಲೇಜಿನಲ್ಲಿ ಓದಿ 1918 ರಲ್ಲಿ ಬಿ.ಎ. ಮಾಡಿಕೊಂಡರು. ಹಿಡಿದದ್ದು ಅಧ್ಯಾಪಕ ವೃತ್ತಿ. 1935 ರಲ್ಲಿ ಎಂ.ಎ. ಮಾಡಿಕೊಂಡು, ಕೆಲಕಾಲ (1944 – 1956) ಸೊಲ್ಲಾಪುರದ ಡಿ.ಎ.ವಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು.

ಸಾಂಸಾರಿಕ ಜೀವನ :-

ಬೇಂದ್ರೆಯವರು 1919ರಂದು ಹುಬ್ಬಳ್ಳಿಯಲ್ಲಿ ಲಕ್ಷ್ಮೀಬಾಯಿಯವರನ್ನು ವಿವಾಹವಾದರು

ಸಾಹಿತ್ಯ:-

ಸಾಹಿತ್ಯ ರಚನೆ ಅವರ ಮೊದಲ ಒಲವು. ಕಾಲೇಜಿನಲ್ಲಿ ಓದುತ್ತಿದ್ದಾಗಲೇ ಕವಿತೆಗಳನ್ನು ಕಟ್ಟಿದರು. 1918 ಅವರ ಮೊದಲ ಕವನ “ಪ್ರಭಾತ” ಎಂಬ ಪತ್ರಿಕೆಯಲ್ಲಿ ಪ್ರಕಟವಾಯಿತು. ಅಲ್ಲಿಂದಾಚೆಗೆ ಅವರು ಕಾವ್ಯ ರಚನೆ ಮಾಡುತ್ತಲೇ ಬಂದರು. “ಗರಿ”, “ಕಾಮಕಸ್ತೂರಿ “, “ಸೂರ್ಯಪಾನ”, “ನಾದಲೀಲೆ”, “ನಾಕುತಂತಿ” ಮೊದಲಾದ ಕವನ ಸಂಕಲನಗಳನ್ನು ಪ್ರಕಟಿಸಿದರು.

ಜ್ಞಾನಪೀಠ ಪ್ರಶಸ್ತಿ :-

ಬೇಂದ್ರೆಯವರಿಗೆ ಕಾಶಿಹಿಂದೂ ವಿಶ್ವ ವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಜೊತೆಗೆ,  ಇವರ ನಾಕುತಂತಿ ಕೃತಿಗೆ 1974 ಇಸವಿಯ ಕೇಂದ್ರ ಜ್ಞಾನಪೀಠ ಪ್ರಶಸ್ತಿ ಬಂದಿದೆ. ಕವಿತೆಗಳನ್ನಲ್ಲದೆ ನಾಟಕಗಳು, ಸಂಶೋಧನಾತ್ಮಕ ಲೇಖನಗಳು, ವಿಮರ್ಶೆಗಳನ್ನು ಬೇಂದ್ರೆ ಬರೆದಿದ್ದಾರೆ.

ಕವನ ಸಂಕಲನಗಳು :-

  • 1922: ಕೃಷ್ಣಾಕುಮಾರಿ;
  • 1932: ಗರಿ;
  • 1934: ಮೂರ್ತಿ ಮತ್ತು ಕಾಮಕಸ್ತೂರಿ;
  • 1937: ಸಖೀಗೀತ.
  • 1398: ಉಯ್ಯಾಲೆ;
  • 1938: ನಾದಲೀಲೆ;
  • 1943: ಮೇಘದೂತ (ಕಾಳಿದಾಸನ ಸಂಸ್ಕೃತ ಮೇಘದೂತದ ಕನ್ನಡ ಅವತರಣಿಕೆ)
  • 1946: ಹಾಡುಪಾಡು;
  • 1951: ಗಂಗಾವತರಣ;
  • 1956: ಸೂರ್ಯಪಾನ;
  • 1956: ಹೃದಯಸಮುದ್ರ;
  • 1956: ಮುಕ್ತಕಂಠ;
  • 1957: ಚೈತ್ಯಾಲಯ;
  • 1957: ಜೀವಲಹರಿ;
  • 1957: ಅರಳು ಮರಳು;
  • 1958: ನಮನ;
  • 1959: ಸಂಚಯ;
  • 1960: ಉತ್ತರಾಯಣ;
  • 1961: ಮುಗಿಲಮಲ್ಲಿಗೆ;
  • 1962: ಯಕ್ಷ ಯಕ್ಷಿ;
  • 1964: ನಾಕುತಂತಿ;
  • 1966: ಮರ್ಯಾದೆ;
  • 1968: ಶ್ರೀಮಾತಾ;
  • 1969: ಬಾ ಹತ್ತರ;
  • 1970: ಇದು ನಭೋವಾಣಿ;
  • 1972: ವಿನಯ;
  • 1973: ಮತ್ತೆ ಶ್ರಾವಣಾ ಬಂತು;
  • 1977: ಒಲವೇ ನಮ್ಮ ಬದುಕು;
  • 1978: ಚತುರೋಕ್ತಿ ಮತ್ತು ಇತರ ಕವಿತೆಗಳು;
  • 1982: ಪರಾಕಿ;
  • 1982: ಕಾವ್ಯವೈಖರಿ;
  • 1982: ತಾ ಲೆಕ್ಕಣಕಿ ತಾ ದೌತಿ;
  • 1982: ಬಾಲಬೋಧೆ;
  • 1986: ಚೈತನ್ಯದ ಪೂಜೆ;
  • 1987: ಪ್ರತಿಬಿಂಬಗಳು.

ಪ್ರಶಸ್ತಿ, ಪುರಸ್ಕಾರ, ಬಿರುದು:-

  • 1943ರಲ್ಲಿ ಶಿವಮೊಗ್ಗದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ.
  • 1948ರಲ್ಲಿ ‘ಅರಳು ಮರಳು’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
  • 1964ರ ಮೈಸೂರು ದಸರಾ ಕಾರ್ಯಕ್ರಮದಲ್ಲಿ ಬೇಂದ್ರೆಯವರಿಗೆ ಸನ್ಮಾನ
  • 1965ರಲ್ಲಿ ಮರಾಠಿಯಲ್ಲಿ ರಚಿಸಿದ “ಸಂವಾದ” ಎಂಬ ಕೃತಿಗೆ ಕೇಳ್ಕರ್ ಬಹುಮಾನ
  • 1968ರಲ್ಲಿ ‘ಪದ್ಮಶ್ರೀ’ ಪ್ರಶಸ್ತಿ ಲಭಿಸಿತು
  • 1973ರಲ್ಲಿ ‘ನಾಕುತಂತಿ’ ಕೃತಿಗೆ ಜ್ಞಾನಪೀಠಪ್ರಶಸ್ತಿ.
  • ಕಾಶಿ ವಿದ್ಯಾಪೀಠ, ವಾರಣಾಸಿ, ಮೈಸೂರು ಹಾಗೂ ಕರ್ನಾಟಕ ವಿಶ್ವವಿದ್ಯಾನಿಲಯಗಳ ಗೌರವ ಡಾಕ್ಟರೇಟ್
  • ಕೇಂದ್ರ ಸಾಹಿತ್ಯ ಅಕಾಡೆಮಿಯ ಫೆಲೋಷಿಪ್ ಪಡೆದರು.

ನಿಧನ :-

ಸಾಹಿತ್ಯ ಕ್ಷೇತ್ರದ ಸರ್ವೋಚ್ಛ ನೆಲೆಯಲ್ಲಿ ಗುರುತಿಸಿಕೊಂಡಿದ್ದ ಬೇಂದ್ರೆಯವರು 1981ರಲ್ಲಿ ತಮ್ಮ  ಇಹಲೋಕ ಯಾತ್ರೆ ಮುಗಿಸಿದರು.

ಕೃಪೆ: ವಿಕಿಪೀಡಿಯ

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • inspirational, ದೇವರು, ದೇವರು-ಧರ್ಮ

    ಭಾರತದಲ್ಲಿ ರಾಮನ ವಿವಿಧ ಹೆಸರು ಅತಿ ಸಾಮಾನ್ಯಇಲ್ಲಿದೆ ರಾಮನ 108 ವಿವಿದ ಹೆಸರುಗಳು

    ಭಾರತದಲ್ಲಿ ರಾಮ ಅಥವಾ ಶಿವನ ಹೆಸರು ಸರ್ವೇ ಸಾಮಾನ್ಯ. ಇಂದು ರಾಮ ನವಮಿ ಇಲ್ಲಿದೆ ರಾಮನ ೧೦೮ ನಾಮದೇಯ. ಇದರಲ್ಲಿ ನಿಮಗೆಷ್ಟು ತಿಳಿದಿದೆ ಅಥವಾ ನಿಮಗೆ ತಿಳಿದ ಮತ್ತಷ್ಟು ನಾಮದೇಯ ವನ್ನು ನಮಗೆ ತಿಳಿಸಿ.

  • ಕ್ರೀಡೆ, ಸಾಧನೆ, ಸುದ್ದಿ

    1500 ಮೀ. ಓಡಿ ಚಿನ್ನ ಗೆದ್ದು ಮೈದಾನದಲ್ಲೇ ಮೃತಪಟ್ಟ 78 ವರ್ಷದ ವೃದ್ಧ.

    78 ವರ್ಷದ ವೃದ್ಧರೊಬ್ಬರು 1500 ಮೀ. ಓಡಿ ಚಿನ್ನದ ಪದಕ ಗೆದ್ದು ಮೈದಾನದಲ್ಲೇ ಮೃತಪಟ್ಟ ಘಟನೆಯೊಂದು ಪಂಜಾಬ್‍ನ ಸಂಗ್ರೂರ್‍ನಲ್ಲಿ ನಡೆದಿದೆ. ಬಕ್ಷೀಶ್ ಸಿಂಗ್ ಮೃತಪಟ್ಟ ವ್ಯಕ್ತಿ. ಪಂಜಾಬ್ ಮಾಸ್ಟರ್ ಅಥ್ಲೆಟಿಕ್ ಅಸೋಸಿಯೇಷನ್ ವೃದ್ಧರಿಗೆ ಅಥ್ಲೆಟಿಕ್ ಮೀಟ್ ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಬಕ್ಷೀಶ್ ಸಿಂಗ್ ಭಾಗವಹಿಸಿ ಚಿನ್ನದ ಪದಕವನ್ನು ಗೆದ್ದಿದ್ದಾರೆ. ಬಳಿಕ ಮೈದಾನದಲ್ಲಿಯೇ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. 1500 ಮೀ. ರೇಸ್ ಪೂರ್ಣಗೊಳಿಸಿದ ನಂತರ ಬಕ್ಷೀಶ್ ವಿಶ್ರಾಂತಿ ಪಡೆಯುತ್ತಿದ್ದರು. ಇದೇ ವೇಳೆ ಅವರಿಗೆ ಹೃದಯಾಘಾತವಾಗಿದೆ. ತಕ್ಷಣ ಅವರನ್ನು ಸಿಂಗ್ರೂರ್ ನ…

  • inspirational

    ಇಡೀ ಪ್ರಪಂಚ ತಲೆಕೆಡಿಸಿದ ಈ ಕ್ಯಾಪ್ಸಿಕಂ ಒಳಗೆ ಏನಿತ್ತು ಗೊತ್ತಾ?

    ಪ್ರಕೃತಿಯ ವಿಸ್ಮಯಗಳನ್ನು ಅರ್ಥ ಮಾಡಿಕೊಳ್ಳುವುದು ತುಂಬಾ ಕಷ್ಟ. ಕೆಲುವೊಂದಕ್ಕೆ ಉತ್ತರ ಸಿಗಲ್ಲ. ಹೀಗೆ ಉತ್ತರ ಸಿಗದ ಅದೇಷ್ಟೋ ಪ್ರಶ್ನೆಗಳು ಹಾಗೇ ಉಳಿದುಕೊಂಡಿವೆ. ಇಂತಹ ಘಟನೆ ಹಿಂದೆಂದೂ ನಡೆದಿರಲಿಲ್ಲ. ಒಬ್ಬ ಮಹಿಳೆ ಮಾರುಕಟ್ಟೆಗೆ ಹೋಗಿ ಕ್ಯಾಪ್ಸಿಕಂ ತಂದು ಅಡುಗೆ ಮಾಡುವಾಗ ಅದನ್ನು ಕಟ್ ಮಾಡುತ್ತಿದ್ದಾಗ ಕ್ಯಾಪ್ಸಿಕಂ ಒಳಗೆ ಇದದ್ದು ಏನು ಗೊತ್ತಾ..? ಇಡೀ ಪ್ರಪಂಚವನ್ನು ಚಿಂತಿಸುವಂತೆ ಮಾಡಿದ ಆ ಘಟನೆ ನಡೆದದ್ದು ಹೇಗೆ ಗೊತ್ತಾ..? ಕೆನಡಾಗೆ ಸೇರಿದ ನಿಕೋಲೆ ಎಂಬ ಮಹಿಳೆ ರಾತ್ರಿ ಅಡುಗೆ ಮಾಡುವ ಸಲುವಾಗಿ ಹತ್ತಿರದ…

  • ಜ್ಯೋತಿಷ್ಯ

    ದಿನ ಭವಿಷ್ಯ,ಈ ದಿನದ ರಾಶಿ ಭವಿಷ್ಯದಲ್ಲಿ ನಿಮಗೆ ಶುಭಕರವಾಗಿದಯೇ…

    ಒಂದೆಕರೆ ಕ್ಷಣದಲ್ಲೇ ಪರಿಹಾರ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು  9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷರಾಶಿ:- ವರ್ಚಸ್ಸನ್ನು ವಿಸ್ತರಿಸಿಕೊಳ್ಳಲು ಅನುಕೂಲವಾಗುವ ಒಳ್ಳೆಯ ಅವಕಾಶಗಳು ನಿಮಗೆ ಹೇರಳವಾಗಿ ದೊರೆಯುವುವು. ಬರುವ ಅವಕಾಶಗಳನ್ನು ಪೂರ್ಣಪ್ರಮಾಣದಲ್ಲಿ ಬಳಸಿಕೊಳ್ಳಿ. ಒಳಿತಾಗುವುದು .ನಿಮ್ಮ ಸಮಸ್ಯೆ.ಏನೇ .ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ…

  • ದೇಶ-ವಿದೇಶ

    ಇದು ಭಾರತದ ಮಿನಿ ಇಸ್ರೇಲ್! ಆದ್ರೆ ಇಲ್ಲಿ ನಮ್ಮ ಭಾರತೀಯರಿಗೆ ಪ್ರವೇಶವಿಲ್ಲ !!!

    ನಮ್ಮ ಭಾರತದಲ್ಲಿರುವ ವಿವಿಧ ರೀತಿಯ ಸಂಪ್ರಧಾಯಗಳು, ನಮ್ಮ ಆಹಾರ ಪದ್ಧತಿ, ನಮ್ಮ ವೇಷ ಭೂಷಣ ಹಾಗೂ ಇಲ್ಲಿರುವ ಪಾಕೃತಿಕ ಸೌಂದರ್ಯವನ್ನು ವೀಕ್ಷಿಸಲು ಹಾಗೂ ಅಧ್ಯನ ಮಾಡಲು ಅನೇಕ ಬೇರೆ ಬೇರೆ ದೇಶದ ವಿದೇಶಿಗರು ಬರುತ್ತಿರುತ್ತಾರೆ.ಅವರಲ್ಲಿ ಇಸ್ರೇಲಿಗರು ಕೂಡ ಸೇರಿದ್ದಾರೆ. ನಮ್ಮ ಪ್ರಧಾನಿಗಳು ಕೂಡ ಇಸ್ರೇಲ್ ಪ್ರವಾಸ ಮುಗಿಸಿ ಬಂದಿದ್ದಾರೆ. ಆದರೆ ಭಾರತದಲ್ಲಿಯೇ ಒಂದು ಇಸ್ರೇಲ್ ಇದೆ.

  • ಜ್ಯೋತಿಷ್ಯ

    15 ಲಕ್ಷ ರೂ ಮೌಲ್ಯದ 23 ದ್ವಿಚಕ್ರ ವಾಹನಗಳನ್ನು ಒಂದೆ ಕೀ ಬಳಸಿ ಕದ್ದ ಪೋರ……!

    ತಾನೇ ಸಿದ್ದಪಡಿಸಿದ ನಕಲಿ ಕೀ ಬಳಸಿ 15 ಲಕ್ಷ ರೂ ಮೌಲ್ಯದ 23 ದ್ವಿಚಕ್ರ ವಾಹನಗಳನ್ನು ಕದ್ದು ಮೆಕ್ಯಾನಿಕ್ ಒಬ್ಬಾತ ಸಿಕ್ಕಿ ಬಿದ್ದಿದ್ದಾನೆ. ರಾಜ್ಯ ರಾಜಧಾನಿಯಲ್ಲಿ ಈ ಘಟನೆ ನಡೆದಿದೆ.ದ್ವಿಚಕ್ರ ವಾಹನ ಮತ್ತು ಮೊಪೆಡ್‌ಗಳ ಮೆಕ್ಯಾನಿಕ್‌ ಒಬ್ಬಾತ ತಾನೇ ಸಿದ್ದಪಡಿಸಿದ ಒಂದೇ ಒಂದು ನಕಲಿ ಕೀ ಬಳಸಿ 15 ಲಕ್ಷ ರೂ ಮೌಲ್ಯದ 23 ದ್ವಿಚಕ್ರ ವಾಹನಗಳನ್ನು ಕದ್ದು ಸಿಕ್ಕಿ ಬಿದ್ದಿದ್ದಾನೆ. ಕೆಂಪೇಗೌಡ ಲೇಔಟ್‌ನ ನಿವಾಸಿ ನವೀನ್‌ ಅಲಿಯಾಸ್‌ ಡಿಯೋ ನವೀನ್‌ (19) ಸಿಕ್ಕಿ ಬಿದ್ದವ. ಈತನ ಸಹಚರ…