ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹೋದ ವರ್ಷ ಆರಂಭವಾಗಿದ್ದ ರಿಲಾಯನ್ಸ್ ಜಿಯೋ ಸೇವೆ, ದೇಶದ ಟೆಲಿಕಾಂ ಮಾರುಕಟ್ಟೆಯಲ್ಲಿ ಭಾರೀ ಅಲ್ಲೋಲಕಲ್ಲೋಲವನ್ನೇ ಸೃಷ್ಟಿ ಮಾಡಿತ್ತು.

ಜಿಯೋ ತನ್ನ ಸೇವೆ ಆರಂಭಿಸಿದ ನಂತರ, ನಡುಗಿಹೋದ ಇತರೆ ಅನೇಕ ಟೆಲಿಕಾಂ ಕಂಪನಿಗಳು ಜಿಯೋಗೆ ಸೆಡ್ಡು ಹೊಡೆಯಲು ಅವುಗಳು ಕೂಡ ನಾ ಮುಂದು ತಾ ಮುಂದು ಎಂಬಂತೆ ವಿವಿಧ ರೀತಿಯಾದ ಆಫರ್’ಗಳನ್ನು ನೀಡಲಾರಂಭಿಸಿದವು.

ಜಿಯೋ ಒಡೆತನದ ಮುಕೇಶ್ ಅಂಬಾನಿ ಜಿಯೋ ಪ್ರೈಮ್ ಮೆಂಬರ್’ಶಿಪ್ ಆಫರ್’ನ್ನು ಹೋದ ವರ್ಷ ಪ್ರಾರಂಭಿಸಿದ್ದು, 99 ರು.ಗಳಿಗೆ ಮಾರ್ಚ್ 31ರ ವರೆಗೆ ಒಂದು ವರ್ಷ ಕಾಲ ಸೇವೆ ನೀಡಿದ್ದರು.ಈಗ ಆ ಕಾಲ ಮುಗಿದಿದೆ.
ಅದಾದ ಬಳಿಕ ಮುಂದೇನು ಎನ್ನುವ ಪ್ರಶ್ನೆ ಇದೀಗ ರಿಲಾಯನ್ಸ್ ಜಿಯೋ ಸೇವೆ ಬಳಕೆದಾರರಿಗೆ ಎದುರಾಗಿತ್ತು.ಆದರೆ ಜಿಯೋ ರಿಲಾಯನ್ಸ್ ತನ್ನ ಪ್ರೈಂ ಸದಸ್ಯರಿಗೆ ಖುಷಿ ಸುದ್ದಿಯನ್ನು ನೀಡಿದೆ.

ಮಾರ್ಚ್ 31ಕ್ಕೆ ಮುಕ್ತಾಯವಾಗಬೇಕಿದ್ದ ಜಿಯೋ ಪ್ರೈಮ್ ಮೆಂಬರ್’ಶಿಪ್ ಆಫರ್’ನ್ನು, ಮತ್ತೆ ಮುಂದುವರೆಸಿರುವ ಜಿಯೋ, ತನ್ನ ಪ್ರೈಂ ಸದಸ್ಯರು ಇನ್ನೂ ಒಂದು ವರ್ಷಗಳ ಕಾಲ ಇದರ ಲಾಭ ಪಡೆಯುವಂತೆ ಮಾಡಿದ್ದಾರೆ.ಇದರ ಜೊತೆಗೆ ಉಳಿದ ಗ್ರಾಹಕರಿಗೂ ಪ್ರೈಂ ಸದಸ್ಯತ್ವ ಪಡೆಯುವ ಅವಕಾಶವನ್ನು ಜಿಯೋ ನೀಡ್ತಿದೆ.

ಜಿಯೋ ಪ್ರೈಮ್ ಮೆಂಬರ್’ಶಿಪ್ ಆಫರ್ ಇನ್ನೂ ಒಂದು ವರ್ಷ ಮುಂದುವರೆಯಲಿದ್ದು, ಇದಕ್ಕೆ ಯಾವುದೇ ಹೆಚ್ಚುವರಿ ಶುಲ್ಕ ಪ್ರಸ್ತುತ ಗ್ರಾಹಕರು ಕೊಡಬೇಕಾಗಿಲ್ಲ.ಈಗಾಗಲೇ ಇರುವ ಪ್ರೈಂ ಸದಸ್ಯರು, ತಾವು ಇದೇ ಪ್ಲಾನ್’ನಲ್ಲಿ ಮುಂದುವರಿಯಲು ಇಚ್ಛಿಸಿದಲ್ಲಿ,ತಮ್ಮ ಮೈ ಜಿಯೋ ಆ್ಯಪ್’ನಲ್ಲಿ ಪ್ರೈಂ ಸದಸ್ಯತ್ವ ಮುಂದುವರೆಸುವ ಆಯ್ಕೆಯನ್ನು ಮಾಡಬೇಕಾಗುತ್ತದೆ.

ಹೊಸ ಗ್ರಾಹಕರು ಜಿಯೋ ಪ್ರೈಮ್ ಮೆಂಬರ್’ಶಿಪ್ ಆಫರ್ ಸೇವೆಗಾಗಿ 99 ರೂಪಾಯಿ ಪಾವತಿಸಿ ಪ್ರೈಂ ಸದಸ್ಯತ್ವ ಪಡೆಯಬಹುದಾಗಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ರಾಕೆಟ್‌ನಲ್ಲಿ ತಾಂತ್ರಿಕ ದೋಷ ಪತ್ತೆಯಾದ ಹಿನ್ನೆಲೆಯಲ್ಲಿ ಮಹತ್ವಾಕಾಂಕ್ಷಿ ಚಂದ್ರಯಾನ-2 ಬಾಹ್ಯಾಕಾಶ ಯೋಜನೆಯನ್ನು ಇಸ್ರೋ ಅನಿರ್ದಿಷ್ಟಾವಧಿಗೆ ಮುಂದೂಡಿದೆ.ಚಂದ್ರಯಾನ-2 ಉಪಕರಣಗಳನ್ನು ಹೊತ್ತ ಬಾಹ್ಯಾಕಾಶ ವಾಹನ ವ್ಯವಸ್ಥೆಯಲ್ಲಿ ಉಡ್ಡಯನಕ್ಕೆ ಒಂದು ತಾಸು ಮೊದಲು ತಾಂತ್ರಿಕ ಸಮಸ್ಯೆಯೊಂದು ಪತ್ತೆಯಾಯಿತು.ಮುಂಜಾಗರೂಕತೆ ಕ್ರಮವಾಗಿ ಚಂದ್ರಯಾನ-2ರ ಉಡ್ಡಯನವನ್ನು ಇಂದು ರದ್ದುಪಡಿಸಲು ನಿರ್ಧರಿಸಲಾಯಿತು. ಹೊಸ ದಿನಾಂಕಗಳನ್ನು ನಂತರ ಘೋಷಿಸಲಾಗುವುದು ಎಂದು ಇಸ್ರೋ ಟ್ವೀಟ್ ಮೂಲಕ ತಿಳಿಸಿತು. ಚಂದಿರನ ಮೇಲೆ ಇಳಿಯಲಿರುವ ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ-2 ಯಾನಕ್ಕೆ ವಿಶ್ವವೇ ಕಣ್ಣರಳಿಸಿಕೊಂಡು ಕಾದಿತ್ತು.ಚಂದ್ರಯಾನ-2 ಗಗನನೌಕೆಯನ್ನು ಹೊತ್ತ ಬಾಹುಬಲಿ ಹೆಸರಿನ ಬೃಹತ್ ರಾಕೆಟ್…
ಬುಧವಾರ, 28/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ… ಮೇಷ:– ಅರಣ್ಯ ಇಲಾಖೆ ಸಿಬ್ಬಂದಿಗೆ ಮನ್ನಣೆ ಸಿಗುವುದು. ಎಲ್ಲಾ ವಿಚಾರಗಳಲ್ಲಿ ಗೆಲುವು ನಿಮ್ಮದೆ ಆಗುವುದು. ಆದರೆ ಅದಕ್ಕೆ ಕ್ರಮಬದ್ಧ ಯೋಚನೆಯನ್ನು ರೂಪಿಸಿಕೊಳ್ಳಬೇಕಾಗುವುದು. ನಿಮ್ಮ ಆಶಾವಾದವು ನಿಮ್ಮ ಕಾರ್ಯಯೋಜನೆಗೆ ಸಹಕಾರಿಯಾಗುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿದೆ. ಸತ್ಕಾರ ಸಮಾರಂಭಗಳಲ್ಲಿ ಭಾಗಿಯಾಗುವಿರಿ. ವಾಹನ ಮತ್ತು ಯಂತ್ರಗಳ ಬಿಡಿಭಾಗಗಳ ವ್ಯಾಪಾರದಿಂದಾಗಿ ವಿಶೇಷ ಲಾಭ ಹೊಂದುವಿರಿ. ವೃಷಭ:- ಬೆಳ್ಳಗಿರುವುದೆಲ್ಲಾ ಹಾಲಲ್ಲ ಎಂಬ ಸತ್ಯದ ಅರಿವು ಇದ್ದರೂ ಎಲ್ಲರನ್ನು ನಂಬಿ ಎಲ್ಲರೂ ವಿಶ್ವಾಸಿಗರು ಎಂದು…
ಸ್ಯಾಂಡಲ್ ವುಡ್ ನಟ ಚಿರು ಅವರ ಪ್ರೀತಿಯ ಶ್ವಾನ ದ್ರೋಣ ಇದೀಗ ತನ್ನ ಯಜಮಾನನನ್ನು ಕಳೆದುಕೊಂಡು ದುಃಖದಲ್ಲಿದೆ. ಹೌದು. ದ್ರೋಣ, ಚಿರು ಅವರ ಮುದ್ದಿನ ಶ್ವಾನವಾಗಿದೆ. ಆದರೆ ಇದೀಗ ಚಿರು ಅವರು ಹೃದಯಾಘಾತಕ್ಕೆ ಒಳಗಾಗಿ ಚಿರನಿದ್ರೆಗೆ ಜಾರಿದ್ದು, ತನ್ನ ಯಜಮಾನನನ್ನ ನೋಡಲು ದ್ರೋಣ ಹಠ ಮಾಡುತ್ತಿದ್ದಾನೆ. ರೆಬೆಲ್ ಸ್ಟಾರ್ ಅಂಬರೀಶ್ ಕೊಟ್ಟಿರುವ ನಾಯಿಯೊಂದು ಚಿರು ಮನೆಯಲ್ಲಿದೆ. ಆ ಶ್ವಾನಂದರೆ ಅಂದ್ರೆ ಚಿರು ಸರ್ಜಾಗೆ ತುಂಬಾನೇ ಇಷ್ಟ. ಪ್ರಾಣಿಗಳನ್ನ ತುಂಬಾನೇ ಪ್ರೀತಿ ಮಾಡ್ತಾ ಇದ್ದ ಚಿರು, ಇತ್ತೀಚಿಗಷ್ಟೇ ದರ್ಶನ್‍ಗೆ…
ಸ್ವಂತ ಮನೆ ಹೊಂದಬೇಕೆನ್ನುವುದು ಪ್ರತಿಯೊಬ್ಬರ ಜೀವನದ ಕನಸಾಗಿರುತ್ತದೆ.ಆದರೆ ಆರ್ಥಿಕವಾಗಿ ಸಬಲರಲ್ಲದ ಅನೇಕ ಜನರ ಸ್ವಂತ ಮನೆ ಕನಸು, ಕನಸಾಗೆ ಉಳಿದುಬಿಡುತ್ತದೆ. ಹಾಗಾಗಿ ನಮ್ಮ ದೇಶದಲ್ಲಿ ಇಲ್ಲಿಯವರೆಗೂ ಸಾವಿರಾರು ಕುಟುಂಬಗಳು ಸ್ವಂತ ಮನೆಯಿಲ್ಲದೆ ಬೀದಿಯಲ್ಲಿವೆ. ಹೀಗಾಗಿ ಪ್ರತಿಯೊಬ್ಬರೂ ಮನೆಗಳನ್ನು ಹೊಂದಿರಬೇಕು ಎನ್ನುವುದು ಸರ್ಕಾರದ ಆಶಯವಾಗಿದ್ದು, 2022ರ ವೇಳೆಗೆ ಪ್ರತಿಯೊಬ್ಬರಿಗೂ ಮನೆ ಸಿಗುವಂತಾಗಬೇಕು ಎನ್ನುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ.
ದಶಕಗಳ ಕಾಲ ಕೋರ್ಟ್ ನಲ್ಲಿ ವಿವಾದಕ್ಕೆ ಕಾರಣವಾಗಿದ್ದ ಅಯೋಧ್ಯಾ ಭೂ ವಿವಾದ ಪ್ರಕರಣ ನಿನ್ನೆ ಸುಪ್ರೀಂ ಕೋರ್ಟ್ ನೀಡಿದ ತೀರ್ಮಾನದ ನಂತರ ಭೂ ವಿವಾದ ಕೊನೆಗೊಂಡಿದೆ. ಈ ಪ್ರಕರಣದ ಕುರಿತಾಗಿ ಅಂದರೆ ಅಯೋಧ್ಯೆಯಲ್ಲಿ ರಾಮಮಂದಿರ ಇತ್ತು ಎಂದು ಕೋರ್ಟ್ ನಲ್ಲಿ ವಾದ ಮಾಡಿ ಸಾಬೀತು ಪಡಿಸಿ ಇಗಿನ ಈ ತೀರ್ಪಿಗೆ ಪೂರಕವಾದ ವಾದ ಮಂಡನೆ ಮಾಡಿದ ಆ ವಕೀಲರು ಯಾರು ಎನ್ನುವುದನ್ನು ನಾವು ತಿಳಿಯಲೇಬೇಕು. ಅಯೋಧ್ಯಾ ಭೂ ವಿವಾದ ಪ್ರಕರಣ ಕುರಿತಾಗಿ ವಾದ ಮಂಡಿಸಿದ ವಕೀಲರ ಪ್ರಸ್ತುತ ವಯಸ್ಸು…
ಪ್ರಧಾನಿ ನರೇಂದ್ರ ಮೋದಿಗೆ ಗಂಡಾಂತರ ಕಾದಿದೆ ಎಂದು ಬ್ರಹ್ಮಾಂಡ ಗುರೂಜಿ ನರೇಂದ್ರ ಬಾಬು ಶರ್ಮ ಭವಿಷ್ಯ ನುಡಿದಿದ್ದಾರೆ.ಮಾಧ್ಯಮಗಳೊಂದಿಗೆ ಮಾತನಾಡಿದ ಗುರೂಜಿ, ಪ್ರಧಾನಿ ಈಗಾಗಲೇ ಎರಡು ದೊಡ್ಡ ಗಂಡಾಂತರಗಳಿಂದ ತಪ್ಪಿಸಿಕೊಂಡು ಸುರಕ್ಷಿತರಾಗಿದ್ದಾರೆ ಎಂದು ಹೇಳಿದ್ದಾರೆ.