ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಡ್ಯಾಡಿ, ನೀನು ನಿನ್ನ ಬಳಿ ಹಣ ಇಲ್ಲ ಅಂತ ಹೇಳ್ತೀಯ. ಆದ್ರೆ ನಮ್ಮ ಬಳಿ ಈ ಮನೆನಾದ್ರೂ ಇದೆ. ಪ್ಲೀಸ್ ಈ ಮನೆಯನ್ನ ಮಾರಿ ನನ್ನ ಚಿಕಿತ್ಸೆಗೆ ಹಣ್ಣ ಕಟ್ಟಿ ಡ್ಯಾಡಿ. ಇಲ್ಲ ಅಂದ್ರೆ ನಾನು ಹೆಚ್ಚು ದಿನ ಬದುಕಲ್ಲ ಅಂತ ಹೇಳಿದ್ದಾರೆ. ಪ್ಲೀಸ್ ಏನಾದ್ರೂ ಮಾಡಿ ನನ್ನ ಉಳಿಸ್ಕೋ ಡ್ಯಾಡಿ….. ಹೀಗಂತ 13 ವರ್ಷದ ಹೆಣ್ಣುಮಗಳೊಬ್ಬಳು ತನ್ನ ಕ್ಯಾನ್ಸರ್ ಚಿತ್ಸೆಗಾಗಿ ಹಣ ಕೊಡಿ ಅಂತ ಅಪ್ಪನನ್ನ ಬೇಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮತ್ತೊಂದು ವಿಪರ್ಯಾಸವೆಂದರೆ ಮೇ 14ರಂದು ಈ ಬಾಲಕಿ ಸಾವನ್ನಪ್ಪಿದ್ದಾಳೆ.
ಆಂಧ್ರಪ್ರದೇಶ ಮೂಲದ ಈ ಬಾಲಕಿಯ ಹೆಸರು ಸಾಯಿ ಶ್ರೀ. ಈಕೆಗೆ ಬೋನ್ ಮ್ಯಾರೋ ಕ್ಯಾನ್ಸರ್ ಇದೆ ಎಂದು 2016ರ ಆಗಸ್ಟ್ 27ರಂರಂದು ವೈದ್ಯರು ಹೇಳಿದ್ದರು. ಆದ್ರೆ ಚಿಕಿತ್ಸೆಗೆ ಬೇಕಾಗುವಷ್ಟು ಹಣ ಅಮ್ಮನ ಬಳಿ ಇಲ್ಲ. ಮನೆ ಮಾರಿ ಹಣ ಕೊಡಿ. ಅಮ್ಮನಿಗೆ ಹಣ ಕೊಡಲು ಇಷ್ಟವಿಲ್ಲ ಅಂದ್ರೆ ನೀವೇ ಬಂದು ಆಸ್ಪತ್ರೆಯಲ್ಲಿ ಹಣ ಕಟ್ಟಿ ಎಂದು ಸಾಯಿ ಶ್ರೀ ವಿಡಿಯೋ ಮೂಲಕ ತನ್ನ ತಂದೆಗೆ ಹಣ ನೀಡುವಂತೆ ಕೇಳಿದ್ದಳು.
ಸಾಯಿ ಶ್ರೀ ತಂದೆ ಮದಮ್ಶೆಟ್ಟಿ ಶಿವಕುಮಾರ್ ತನ್ನ ಪತ್ನಿ ಸುಮಾ ಶ್ರೀ ಮತ್ತು ಮಗಳಿಂದ 8 ವರ್ಷದ ಹಿಂದೆಯೇ ದೂರವಾಗಿದ್ರು. ವರದಿಯ ಪ್ರಕಾರ ಸಾಯಿ ಶ್ರೀ ತನ್ನ ತಾಯಿಯೊಂದಿಗೆ ವಿಜಯವಾಡದಲ್ಲಿ ನೆಲೆಸಿದ್ದು, ತಂದೆ ಬೆಂಗಳೂರಿನಲ್ಲಿದ್ದರು ಎನ್ನಲಾಗಿದೆ.
ಶಿವ ಕುಮಾರ್ ಮತ್ತು ಸುಮಾ ದೂರವಾಗುವುದಕ್ಕೂ ಮುನ್ನ ಮಗಳಾದ ಸಾಯಿ ಶ್ರೀ ಹೆಸರಲ್ಲಿ ಒಂದು ಫ್ಲಾಟ್ ಖರೀದಿಸಿದ್ರು. ಮನೆ ಮಾರಿ ಮಗಳ ಕ್ಯಾನ್ಸರ್ ಚಿಕಿತ್ಸೆಗೆ ಹಣ ಹೊಂದಿಸಲು ಮುಂದಾದಾಗ ಗಂಡ ಶಿವ ಕುಮಾರ್, ತೆಲುಗು ದೇಶಂ ಪಾರ್ಟಿಯ ಶಾಸಕ ಬೋಂಡಾ ಉಮಾಮಹೇಶ್ವರ್ ರಾವ್ ಅವರ ನೆರವಿನಿಂದ ಮನೆ ಮಾರಾಟ ಮಾಡದಂತೆ ತಡೆದಿದ್ದರು ಎಂದು ಸುಮಾ ಆರೋಪಿಸಿದ್ದಾರೆ.
ಶಾಸಕರ ಬೆಂಬಲ ಇದ್ದ ಕಾರಣ ಶಿವ ಕುಮಾರ್ ಕಳಿದಿದ್ದ ಗೂಂಡಾಗಳ ವಿರುದ್ಧ ದೂರು ದಾಖಲಿಸಿಕೊಳ್ಳಲು ಆಂಧ್ರಪ್ರದೇಶದ ಪೊಲೀಸರು ನಿರಾಕರಿಸಿದ್ರು ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
ಈ ಬಗ್ಗೆ ಹೇಳಿಕೆ ನೀಡಿರೋ ಬಾಲಾಲ ಹಕ್ಕುಳ ಸಂಗಂನ ಅಧ್ಯಕ್ಷರಾದ ಅಚ್ಯುತ್ ರಾವ್, ನಾವು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನವ ಹಕ್ಕುಗಳ ಆಯೋಗದಲ್ಲಿ ಅರ್ಜಿ ಸಲ್ಲಿಸಿದ್ದು, ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇವೆ ಎಂದಿದ್ದಾರೆ.
ಹಣ ನೀಡಲು ಶಕ್ತರಾಗಿದ್ದರೂ ತಂದೆ ಮಗಳ ಚಿಕಿತ್ಸೆಗೆ ಹಣ ನೀಡಿಲ್ಲವೆಂಬುದನ್ನು ಮನಗಂಡ ರಾಜ್ಯ ಮಾನವ ಹಕ್ಕುಗಳ ಆಯೋಗ, ಈ ಬಗ್ಗೆ ವಿಸ್ತøತ ವರದಿ ಸಲ್ಲಿಸುವಂತೆ ನಗರ ಪೊಲೀಸ್ ಆಯುಕ್ತರಿಗೆ ಆದೇಶಿಸಿದೆ.
ಈ ವಿಡಿಯೋ ಸದ್ಯ ದೇಶದಾದ್ಯಂತ ವೈರಲ್ ಆಗಿದ್ದು, ತಂದೆಯ ವರ್ತನೆಗೆ ಖಂಡನೆ ವ್ಯಕ್ತವಾಗಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಹರ ಹರ ಮಹಾದೇವ’ ಧಾರಾವಾಹಿ ಜನವರಿ 13ರಂದು ರಾತ್ರಿ 7.30ಕ್ಕೆ ಕೊನೆಯ ಸಂಚಿಕೆಯೊಂದಿಗೆ ಮುಕ್ತಾಯವಾಗಿದೆ. ಈ ದಾರವಾಹಿ ಇದುವರೆಗೂ 416 ಕಂತುಗಳ ಪ್ರಸಾರ ಆಗಿದೆ.
ಉತ್ತಮ ಆರೋಗ್ಯಕ್ಕೆ ಉತ್ತಮ ಆಹಾರಪದ್ಧತಿ, ಜೀವನಶೈಲಿ ಅಳವಡಿಸಿಕೊಳ್ಳಬೇಕು. ಆಧುನಿಕ ಜೀವನಶೈಲಿಯಲ್ಲಿ ಕಡಿಮೆ ದೇಹದಂಡನೆ ಹಾಗೂ ತಪ್ಪಾದ ಆಹಾರಪದ್ಧತಿಯಿಂದ ಅನೇಕ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ಇದರಲ್ಲಿ ಪ್ರಮುಖವಾದುದು ಹೊಟ್ಟೆಯ ಬೊಜ್ಜು. ಇದಕ್ಕೆ ಎರಡು ರೀತಿಯ ಕಾರಣಗಳನ್ನು ಕಾಣಬಹುದು. ಸಬ್ಕ್ಯುಟೆನಿಯಸ್ ಫ್ಯಾಟ್ – ಇದು ಸಾಮಾನ್ಯವಾಗಿ ಕೈ-ಕಾಲುಗಳ ಮೇಲ್ಭಾಗದಲ್ಲಿರುವ ಕೊಬ್ಬಿನಂಶ. ಇದು ಹೊಟ್ಟೆಯ ಚರ್ಮದ ಒಳಭಾಗದಲ್ಲಿ ಬಂದಲ್ಲಿ ಅಷ್ಟೆಲ್ಲ ತೊಂದರೆ ಆಗುವುದಿಲ್ಲ. ಶೇ. 80ರಷ್ಟು ಜನರಲ್ಲಿ ಇದಕ್ಕಿಂತ ಜಾಸ್ತಿ ಹೊಟ್ಟೆಯ ಬೊಜ್ಜಿಗೆ ಮುಖ್ಯ ಕಾರಣ ವಿಸರಲ್ ಫ್ಯಾಟ್. ಇದು ಹೊಟ್ಟೆಯ…
ಶನಿ ಭಗವಾನನ ‘ಕೆಟ್ಟ ಪ್ರಭಾವ’ದಿಂದ, ಪರಿಣಾಮಗಳಿಂದ ಪಾರಾಗಲು ಭಗವಾನ್ ಹನುಮಂತನ ಪ್ರಾರ್ಥನೆಯೊಂದೇ ಸರ್ವ ಔಷಧಿ.
ಹೌದು ರಾಗಿ ತಿಂದವ ಯೋಗಿ ಎನ್ನುವ ಮಾತಿನಂತೆ ರಾಗಿ ನಮ್ಮ ಪುರಾತನ ಆಹಾರ ಧಾನ್ಯಗಳಲ್ಲಿ ಒಂದಾಗಿದೆ ಅತಿ ಹೆಚ್ಚು ಪೋಷಕಾಂಶಗಳನ್ನು ಒಳಗೊಂಡಿರುವ ಇದನ್ನು ಸೇವಿಸಿದರೆ ನಮ್ಮ ದೇಹವು ಸದಾಕಾಲ ಸಮೃದ್ಧತೆಯಿಂದ ಕೂಡಿರುತ್ತದೆ ರಾಗಿಯಲ್ಲಿ ಹಲವಾರು ವಿಧದ ರೆಸಿಪಿಗಳನ್ನು ತಯಾರಿಸುವುದು ಉಂಟು ಆ ಪ್ರದೇಶದ ಅನುಕೂಲಕ್ಕೆ ತಕ್ಕಂತೆ ಕೆಲವರು ರಾಗಿಮುದ್ದೆ ರಾಗಿರೊಟ್ಟಿ ರಾಗಿ ಗಂಜಿಯನ್ನು ಸಾಮಾನ್ಯವಾಗಿ ಸೇವನೆ ಮಾಡುತ್ತಾರೆ ಇನ್ನೂ ನೀವು ರಾಗಿ ಗಂಜಿಯನ್ನು ಬೆಳಗಿನ ಸಮಯದಲ್ಲಿ ಸೇವಿಸುವುದರಿಂದ ನಿಮ್ಮ ದೇಹದಲ್ಲಿ ಏನೆಲ್ಲ ಬದಲಾವಣೆ ಆಗುತ್ತದೆ ಎಂಬುದು ನಿಮಗೆ…
ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಅವರು ಇಂದು 39ನೇ ವಸಂತಕ್ಕೆ ಕಾಲಿಟ್ಟಿದ್ದು, ಅವರ ಹುಟ್ಟುಹಬ್ಬಕ್ಕೆ ‘ಗೀತಾ’ ಚಿತ್ರದ ಟೀಸರ್ ಬಿಡುಗಡೆ ಆಗಿದೆ.ಗಣೇಶ್ ಅವರು ಈ ವರ್ಷ ತಮ್ಮ ಹುಟ್ಟುಹಬ್ಬವನ್ನು ಆಚರಿಸುತ್ತಿಲ್ಲ. ಈ ಬಗ್ಗೆ ಅವರು ತಮ್ಮ ಟ್ವಿಟ್ಟರಿನಲ್ಲಿ ಸ್ಪಷ್ಟನೆ ಕೂಡ ನೀಡಿದ್ದರು. ಇಂದು ಗಣೇಶ್ ಅವರ ಹುಟ್ಟುಹಬ್ಬದ ಪ್ರಯುಕ್ತವಾಗಿ ಅವರು ಅಭಿನಯದ ‘ಗೀತಾ’ ಚಿತ್ರದ ಟೀಸರ್ ರಿಲೀಸ್ ಆಗಿದೆ. ಗೀತಾ ಚಿತ್ರದ ಟೀಸರ್ ನಲ್ಲಿ ಗಣೇಶ್ ಕನ್ನಡ ಭಾಷೆಗಾಗಿ ಹೋರಾಟ ನಡೆಸಿದ್ದಾರೆ. ಅಲ್ಲದೆ ಗಣೇಶ್ ‘ಕರ್ನಾಟಕದಲ್ಲಿ ಕನ್ನಡಿಗನೇ…
ರಕ್ಷಿತ್ ಶೆಟ್ಟಿ ನಟಿಸಿದ್ದ ಕನ್ನಡದ ಕಿರಿಕ್ ಪಾರ್ಟಿ ಚಿತ್ರ ಕನ್ನಡದಲ್ಲಿ ಒಂದು ಹೊಸ ಟ್ರೆಂಡ್ ನ್ನೇ ಉಟ್ಟು ಹಾಕಿತ್ತು. ಕೋಟಿ ಕೋಟಿ ಹಣವನ್ನು ಗಳಿಸಿತ್ತು. ಇದಲ್ಲದೆ ಪರಭಾಷೆಯ ಚಿತ್ರಗಳಿಗೆ ಸಹ ರಿಮೇಕ್ ಆಗುತ್ತಿದೆ. ಈ ಚಿತ್ರದಲ್ಲಿ ನಟಿಸಿದ್ದ ಹಲವಾರು ನಟ ನಟಿಯರ ಬದುಕಿನ ದಾರಿಯನ್ನೇ ಬದಲಾಯಿಸಿದ ಚಿತ್ರ ಇದು. ಈ ಚಿತ್ರದ ಯಶಸ್ಸಿನ ಜೋಡಿ ರಕ್ಷಿತ್ ಶೆಟ್ಟಿ ಮತ್ತು ರಷ್ಮಿಕಾ ಮಂದಣ್ಣ. ಈ ಚಿತ್ರದಲ್ಲಿನ ಇವರ ಅಭಿನಯವನ್ನು ಮೆಚ್ಚಿ ಪರಭಾಷೆ ಚಿತ್ರಗಳಿಂದ ಕಾಲ್ ಶೀಟ್ ಬಂದು ಅಲ್ಲಿಯೂ…