ತಂತ್ರಜ್ಞಾನ

ಚಾಲಕನಿಲ್ಲದ ವಿಮಾನ!!!

740

ಚಾಲಕನಿಲ್ಲದ ಕಾರು, ಹಡಗು ತಯಾರಿಕೆಯ ಬಗ್ಗೆ ಕೇಳಿರುತ್ತೀರಿ. ಇದೀಗ ಪೈಲಟ್ ಗಳಿಲ್ಲದಿರುವ  ವಿಮಾನ ನೋಡುವ ಕಾಲ ಸಮೀಪಿಸಿದೆ.

ಕಂಪನಿ ಯಾವುದು ಗೊತ್ತಾ?

ಪೈಲಟ್ ಇಲ್ಲದ ವಿಮಾನ  ತಯಾರಿಸಲು ಬೋಯಿಂಗ್ ಕಂಪನಿ ಮುಂದೆ ಬಂದಿದೆ. ವಿಮಾನ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿರುವ ಬೋಯಿಂಗ್ ಕಂಪನಿ ಮುಂದಿನ ವರ್ಷದ ವೇಳೆಗೆ ಪೈಲಟ್ ಇಲ್ಲದ ವಿಮಾನ ನಿರ್ಮಾಣದ ಕನಸು ನನಸಾಗಿರುವ ಗುರಿ ಹೊಂದಿದೆ.

ಪೈಲಟ್ ಇಲ್ಲದ ವಿಮಾನ ತಯಾರಿಕೆಗೆ ಅಗತ್ಯವಿರುವ ತಂತ್ರಜ್ಞ್ಯಾನಗಳನ್ನು ಸಿದ್ದಪಡಿಸಲಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಈಗಾಗಲೇ ಪ್ಯಾಸೆಂಜರ್ ವಿಮಾನಗಳಲ್ಲಿರುತ್ತಿದ್ದ ಪೈಲಟ್ ಗಳ ಸಂಖ್ಯೆ ಮೂರರಿಂದ ಎರಡಕ್ಕೆ ಇಳಿಕೆಯಾಗಿದೆ.

ಈ ವರ್ಷದ ಬೇಸಿಗೆಯಲ್ಲಿ ಕಾಕ್ ಪಿಟ್ ನ ವ್ಯವಸ್ಥೆಗಳನ್ನೇ ಹೋಲುವ ಸಾದನದಲ್ಲಿ ಪರೀಕ್ಷೆ ನಡೆಸಲಿದ್ದು, ಯಶಸ್ವಿಯಾದಲ್ಲಿ ಮುಂದಿನ ವರ್ಷದ ವೇಳೆಗೆ ನಿಜವಾದ ವಿಮಾನದಲ್ಲಿ ಬಳಸಲು ನಿರ್ದರಿಸುವುದಾಗಿ ಬೋಯಿಂಗ್ ಸಂಸ್ಥೆಯ ಉಪಾದ್ಯಕ್ಷ ಮೈಕ್ ಸಿನ್ನೆಟ್ ಹೇಳಿದ್ದಾರೆ.

ಈ ವಿಮಾನಗಳಲ್ಲಿ ಆರ್ಟಿಪಿಶಿಯಲ್ ಇಂಟಲಿಜೆನ್ಸ್ ತಂತ್ರಜ್ಞ್ಯಾನವನ್ನು ಬಳಸಲಾಗುವುದು. ಇದು ವಿಮಾನ ಹಾರಾಟದ ವೇಳೆ ಪೈಲಟ್ ಗಳು ತೆಗೆದುಕೊಳ್ಳುವ ಕೆಲ ನಿರ್ದಾರಗಳನ್ನು ತೆಗೆದುಕೊಳ್ಳಲು ಶಕ್ತ್ಹವಾಗಿವೆಯೇ ಎಂಬ ಬಗೆಗೂ ಪರೀಕ್ಷೆಗಳು ನಡೆಯುತ್ತಿವೆ.

ವಿಮಾನಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ದಿನೇದಿನೆ ಏರಿಕೆಯಾಗುತ್ತಿದೆ. ಇದರ ಪರಿಣಾಮವಾಗಿ ವಿಮಾನಗಳ ಸಂಖ್ಯೆ ಮತ್ತು ಅದರ ಪೈಲಟ್ ಗಳ ಸಂಖ್ಯೆಯು ಏರಿಕೆಯಾಗಬೇಕು.

ಈಗಿನ ಪ್ರಮಾಣಗಳನ್ನು ಗಮನಿಸಿದರೆ ಮುಂದಿನ 20 ವರ್ಷಗಳಲ್ಲಿ 15 ಲಕ್ಷ ಪೈಲಟ್ ಗಳ ಅಗತ್ಯಬೀಳಲಿದೆ. ಆದರೆ ಇಷ್ಟೊಂದು ಪ್ರಮಾಣದಲ್ಲಿ ಪೈಲಟ್ ಗಳ ನಿಯೋಜನೆ ವಿಮಾನಯಾನ ಸಂಸ್ಥೆಗಳಿಗೆ ಹೆಚ್ಚಿನ ಹೊರೆಯಾಗಲಿದೆ. ಹೀಗಾಗಿಯೇ ಬೋಯಿಂಗ್ ಸಂಸ್ಥೆ ಇಂತಹದ್ದೊಂದು ತಂತ್ರಜ್ಞ್ಯಾನ ಅಭಿವೃದ್ಧಿಪಡಿಸಿ, ಪೈಲಟ್ ಇಲ್ಲದ ವಿಮಾನ ಸಿದ್ದತೆ ನಡೆಸಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ