ಮನರಂಜನೆ

ಚಂದನ್‌ ಶೆಟ್ಟಿ ಬಿಗ್‌ಬಾಸ್‌ ಫೈನಲ್ ಕನ್ಫೆಶನ್ ರೂಮ್‌ನಲ್ಲಿ ಬಿಕ್ಕಿ ಬಿಕ್ಕಿ ಆಳುತ್ತಿದ್ದು ಯಾಕೆ ಗೊತ್ತಾ..?ತಿಳಿಯಲು ಈ ಲೇಖನ ಓದಿ..

211

ಸದ್ಯ ಮನೆಯಲ್ಲಿ ಕೇವಲ ಐದು ಜನ ಸ್ಪರ್ಧಿಗಳು ಉಳಿದುಕೊಂಡಿದ್ದು, ಎಲ್ಲರೂ ಕೂಡ ಗೆಲುವಿನ ಸಮೀಪದಲ್ಲಿದ್ದಾರೆ. ಚಂದನ್ ಶೆಟ್ಟಿ ಮನೆಯಲ್ಲಿರೋ ಸ್ಟ್ರಾಂಗ್ ಕಂಟೆಸ್ಟೆಂಟ್‌ಗಳ ಪೈಕಿ ಒಬ್ಬರಾಗಿದ್ದಾರೆ.

ಮನೆಯಿಂದ ಹೊರ ಬಂದ ಎಲ್ಲ ಸ್ಪರ್ಧಿಗಳೂ ಸಹ ಚಂದನ್ ಫೈನಲ್‌ನಲ್ಲಿ ಉಳಿದುಕೊಳ್ಳುವ ಸ್ಪರ್ಧಿ ಅಂತ ಹೇಳಿದ್ದರು. ಅದೇ ರೀತಿ ಆಗಿದೆ ಕೂಡ.. ಸದ್ಯ ಚಂದನ್ ಶೆಟ್ಟಿ ಫೈನಲ್ ಪ್ರವೇಶಿಸಿದ್ದಾರೆ. ಜೊತೆಗೆ ಈತನ ಆಟವೂ ಉತ್ತಮವಾಗಿದೆ.

ಕನ್ನಡದ ಬಿಗ್‌ಬಾಸ್‌ ಫೈನಲ್ ಹಂತಕ್ಕೆ ತಲುಪಿದೆ. ಇಂತಹ ಬಿಗ್ ಬಾಸ್ ಸೀಸನ್ 5ನಲ್ಲಿ ಚಂದನ್ ಶೆಟ್ಟಿ ಕೂಡ ಭಾವುಕರಾಗಿ ಕಣ್ಣೀರು ಹಾಕಿದ್ದು ಕಡಿಮೆ ಎನ್ನಬಹುದು. ಎಂತಹ ಸಂದರ್ಭದಲ್ಲಿಯೂ ಅವರು ಗಟ್ಟಿ ಮನಸ್ಸಿನಿಂದಲೇ ಇರುತ್ತಾರೆ. ಏನೇ ತೊಂದರೆ, ನೋವು ಎದುರಾದ್ರೂ ಕೂಡ ನಗುಮೊಗದಲ್ಲಿಯೇ ಅವುಗಳನ್ನು ಸ್ವಾಗತಿಸುತ್ತಾರೆ.

ಆದರೆ, ನಿನ್ನೆ ಮಾತ್ರ ಅವರು ಭಾವುಕರಾಗಿ ಕಣ್ಣೀರು ಹಾಕಿದ್ರು. ನಿನ್ನೆ ಚಂದನ್ ಶೆಟ್ಟಿ ಅವರ ಕಣ್ಣಲ್ಲಿ ನೀರು ಬಂದಿತ್ತು. ಬಿಗ್‌ಬಾಸ್‌ ಮನೆಯಲ್ಲಿ ಇದೇ ಮೊದಲ ಬಾರಿಗೆ ಅವರ ಮುಖದಲ್ಲಿ ದುಃಖ ಕಾಣಿಸಿಕೊಂಡಿತ್ತು. ಕನ್ಫೆಶನ್ ರೂಮ್‌ನಲ್ಲಿ ಕುಳಿತು ತುಂಬ ದುಃಖಿಯಾಗಿ ಮಾತನಾಡಿದ್ರು.

ಬಿಗ್‌ಬಾಸ್ ಕೇವಲ ಒಂದು ಶೋ ಮಾತ್ರವಲ್ಲ, ಇದು ಜೀವನವನ್ನು ಕಲಿಸುವ ಪಾಠ. ವ್ಯಕ್ತಿತ್ವವನ್ನು ರೂಪಿಸುವ ಗುರುಕುಲ. ಮನುಷ್ಯನಿಗೆ ಕೇವಲ ದುಡ್ಡು ಮಹತ್ವವಲ್ಲ. ಅದರ ಜತೆಗೆ ಪ್ರೀತಿ ವಿಶ್ವಾಸವು ಮಹತ್ವ. ಈ ಎಲ್ಲವನ್ನು ನೀಡಿದ್ದು ಬಿಗ್‌ಬಾಸ್‌. ಬಿಗ್‌ಬಾಸ್‌ ಬರೋ ಮುಂಚೆ ನಾನು ತೆರೆಮರೆ ಕಾಯಿಯಂತೆ ಇದ್ದೆ. ಆದರೆ, ಇಲ್ಲಿ ಬಂದ ಮೇಲೆ ನಾನು ಯಾರು ಅಂತಾ ಜನರಿಗೆ ಗೊತ್ತಾಗಿದೆ. ಕನ್ನಡದ ಜನತೆ ಪ್ರೀತಿಯಿಂದ ವೋಟ್ ಮಾಡಿ ಇಲ್ಲಿವರೆಗೆ ತಂದಿದ್ದಾರೆ. ದೇವರಿಗೆ ಕೈ ಮುಗಿಯುವಷ್ಟೇ ನಾನು ಆ ಜನರಿಗೆ ಕೈ ಮುಗಿಯತ್ತೇನೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ