inspirational

ಗೌತಮ ಬುದ್ಧನ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ವಿಚಾರಗಳಿವು..

274

ಗೌತಮ ಬುದ್ಧನೆಂದರೆ ಯಾರಿಗೆ ತಿಳಿದಿಲ್ಲ ಹೇಳಿ.ಬೌದ್ಧ ಧರ್ಮದ ಸಂಸ್ಥಾಪಕ, ದಾರ್ಶನಿಕ. ಈತ ಜನಿಸುವ ಮೊದಲೇ ಜ್ಯೋತಿಷ್ಯರು
ಶುದ್ಧೋದನನಿಗೆ ಜನಿಸುವ ಮಗುವು ಅತ್ಯಂತ ಪ್ರಸಿದ್ಧ ವ್ಯಕ್ತಿಯಾಗಿ, ಮಹಾಪುರುಷನಾಗಿ ಅಜರಾಮರನಾಗುತ್ತಾನೆ ಎಂದು ಭವಿಷ್ಯ ನುಡಿದಿದ್ದರಂತೆ. ಇದನ್ನು ತಿಳಿದುಕೊಂಡ ಶುದ್ದೋಧನನು ತನ್ನ ಮಗನು ಚಕ್ರವರ್ತಿ ಆಗಬೇಕೆಂದು ಬಯಸುತ್ತಾನೆ‌. ಯಾವ ದುಃಖ ನೋವುಗಳು ಈತನನ್ನು ಭಾಧಿಸದಿರಲಿ ಹಾಗೂ ಜಗತ್ತಿನ ಎಲ್ಲಾ ಕಷ್ಟ ಕಾರ್ಪಣ್ಯಗಳಿಂದ ಈತ ದೂರ ಇರಲಿ ಎಂದು ಪ್ರಯತ್ನಿಸುತ್ತಾನೆ ಹಾಗೂ ತನ್ನ ಮಗ ಇದಾವುದರ ವಿಚಾರಕ್ಕೆ ಸಿಲುಕಬಾರದೆಂದು ಯಾವುದೇ ಧಾರ್ಮಿಕ ಭೋಧನೆಯನ್ನು ಆತನಿಗೆ ಮಾಡುವುದಿಲ್ಲ. ಅಲ್ಲದೇ ಆತ ಯಾವುದೇ ಹೊರಗಿನ ಪ್ರಪಂಚಕ್ಕೆ ಮೋಹಿತನಾಗಬಾರದೆಂಬ ಭಯದಿಂದ ಶುದ್ಧೋದನನು ತನ್ನ ಮಗನಿಗಾಗಿ ಎಲ್ಲಾ ರೀತಿಯ ಸಕಲ ಸೌಕರ್ಯಗಳನ್ನು ಒಳಗೊಂಡ ವೈಭವದಿಂದ ಕೂಡಿದ ಮೂರು ಅರಮನೆಗಳನ್ನು ಕಟ್ಟಿಸುತ್ತಾನೆ. ಹೀಗಾಗಿ ಗೌತಮ ಬುದ್ಧನು ಹೊರಗಿನ ಜಗತ್ತಿನ ಅರಿವಿಲ್ಲದೆಯೇ ಅರಮನೆಯಲ್ಲಿ ಬಂಧನಕ್ಕೆ ಒಳಗಾದಂತೆ ಬದುಕುತ್ತಾನೆ.


ಆದರೆ ಬುದ್ಧನು ಯಾವುದೇ ಧಾರ್ಮಿಕವಾದ ಭೋಧನೆಗಳನ್ನು ಪಡೆದುಕೊಳ್ಳದಿದ್ದರೂ ಕೂಡ ಒಂದು ದಿನ ಜಗತ್ತೇ ಮೆಚ್ಚುವಂತಹ ಮಹಾಪುರುಷನಾಗುವ ಎಲ್ಲಾ ಲಕ್ಷಣಗಳನ್ನು ಹೊಂದಿರುತ್ತಾನೆ. ಅತ್ಯಂತ ಸರಳ ಜೀವನವನ್ನು ನಡೆಸಿದ ಈತ ನೇಪಾಳದ ಶಾಕ್ಯ ಕುಲದ ರಾಜ ಶುದ್ಧೋದನ ಹಾಗೂ ರಾಣಿ ಮಾಯಾದೇವಿಯ ಪುತ್ರನಾದರೂ ಕೂಡ ಅಲ್ಲಿಯ ಜನರಿಗೆ ಈ ವಿಚಾರದ ಬಗೆಗೆ ಮಾಹಿತಿ ಇರುವುದಿಲ್ಲ. ನೇಪಾಳದ ಲುಂಬಿನಿ ಗ್ರಾಮದಲ್ಲಿ ಜನಿಸಿದ ಗೌತಮನು ಯಶೋಧರೆಯನ್ನು ಮದುವೆಯಾಗಿ ರಾಹುಲ ಎಂಬ ಪುತ್ರನ ತಂದೆಯಾಗುತ್ತಾನೆ.

ಆಧ್ಯಾತ್ಮದತ್ತ ಒಲವು
ತಾನು ಒಬ್ಬ ಮಹಾ ಯೋಗಿಯಾಗಬೇಕು, ಜ್ಞಾನಿಯಾಗಬೇಕೆಂಬ ತುಡಿತ ಇದ್ದುದರಿಂದ ಗೌತಮ ಬುದ್ದನು ಈ ವೈಭೋಗದ ಜೀವನದಿಂದ ಮುಕ್ತಿ‌ ಪಡೆಯಲು ಹಾತೊರೆಯುತ್ತಾನೆ. ಅಲ್ಲದೇ ತಾನಿರುವ ಅರಮನೆಯ ಹೊರಗೆ ಏನಿದೆ ಎಂಬ ಕೌತುಕ‌ವೂ ತನ್ನಲ್ಲಿ ಹುಟ್ಟಿಕೊಳ್ಳಲಾರಂಭಿಸುತ್ತದೆ. ಹೀಗಿರುವಾಗ ಒಂದು ದಿನ ತನ್ನ 29 ನೇ ವಯಸ್ಸಿನಲ್ಲಿ ವಾಯುವಿಹಾರಕ್ಕಾಗಿ ಅರಮನೆಯಿಂದ ಹೊರಗಡೆ ಬಂದಾಗ ಅಲ್ಲಿ ನಾಲ್ಕು ವಿಚಾರಗಳನ್ನು ನೋಡಿ ಜೀವನದಲ್ಲಿ ತನಗರಿವಿಲ್ಲದೆಯೇ ಮೊದಲ ಬಾರಿಗೆ ಜಿಗುಪ್ಸೆಗೊಳ್ಳುತ್ತಾನೆ.ಅದೇನೆಂದರೆ ಓರ್ವ ಮುದುಕ, ರೋಗಿ, ಶವಯಾತ್ರೆ ಹಾಗೂ ಅಲೆದಾಡುವ ಓರ್ವ ತಪಸ್ವಿಯನ್ನು ಕಂಡು ದಿವ್ಯದರ್ಶನವಾಗುತ್ತದೆ. ಈ ನಾಲ್ಕು ವಿಚಾರಗಳನ್ನು ಕಂಡ ಕೂಡಲೇ ಗೌತಮನು ಕುತೂಹಲಕ್ಕೆ ಒಳಗಾಗುತ್ತಾನೆ.ನಂತರ ಅರಮನೆಗೆ ಹಿಂತಿರುಗಿ ನಿಜ ಜೀವನದ ಬಗೆಗೆ ತಿಳಿದುಕೊಳ್ಳಲು ಗುರುಗಳ ಹುಡುಕಾಟ ಮಾಡಲು ಬಹಳಷ್ಟು ಕಷ್ಟಪಡುತ್ತಾನೆ.ಆದರೆ ಯಾರೂ ಕೂಡ ಗೌತಮನಿಗೆ ಜೀವನದ ಬಗೆಗೆ ಸತ್ಯ ವಿಚಾರಗಳನ್ನು ತಿಳಿಸದೇ ಇದ್ದುದರಿಂದ ಬೇಸರಗೊಂಡ ಬುದ್ಧ ಸಂಸಾರ ಹಾಗೂ ಅರಮನೆಯನ್ನು ತ್ಯಾಗ ಮಾಡಿ ಜೀವನದ ಬಗೆಗೆ ತನಗಿರುವ ಪ್ರಶ್ನೆಗಳಿಗೆ ಉತ್ತರ ಹುಡುಕಲು ಒಂಟಿಯಾಗಿ ತೆರಳುತ್ತಾನೆ.

ಆಧ್ಯಾತ್ಮಕ್ಕಾಗಿ

 ನಾಲ್ಕು ವಿಚಾರಗಳನ್ನು ಕಂಡ ನಂತರ ಬುದ್ಧನಿಗೆ ಜೀವನದ ಸತ್ಯತೆಯನ್ನು ತಿಳಿದುಕೊಳ್ಳುವ ಕುತೂಹಲ ಆತನ ಮನಸ್ಸನ್ನು ಬೆಂಬಿಡದೆ ಕಾಡಲಾರಂಭಿಸುತ್ತದೆ.ಹೀಗಾಗಿ ಜೀವನದ ಬಗೆಗೆ ಸಾಕ್ಷಾತ್ಕಾರ ಮಾಡಲು ತಾನು ಸನ್ಯಾಸಿಯಾಗುವ ವಿಚಾರವನ್ನು ತನ್ನ ತಂದೆ ಶುದ್ಧೋದನ ಹಾಗೂ ಮಡದಿ ಯಶೋಧರೆಗೆ ತಿಳಿಸಿ ಮನ‌ ಒಲಿಸಲು ಪ್ರಯತ್ನಿಸುತ್ತಾನೆ.ಅಲ್ಲದೇ ಆತನ ಮಗ ರಾಹುಲನು ಕೂಡ ತನ್ನ ಏಳನೇಯ ವಯಸ್ಸಿಗೆ ಸನ್ಯಾಸಿಯಾಗಲು ತಂದೆಯೊಂದಿಗೆ ತೆರಳುತ್ತಾನೆ.

ಸತ್ಯ ಶೋಧಕ್ಕಾಗಿ ಪ್ರಪಂಚ ಪರ್ಯಟನೆ
ಜೀವನದ ಸತ್ಯತೆಯನ್ನು ತಿಳಿಯುವುದಕ್ಕಾಗಿ ಬುದ್ಧನು ತನ್ನ ಎಂಭತ್ತು ವರ್ಷದವರೆಗೆ ಪ್ರಪಂಚ ಪರ್ಯಟನೆ ಮಾಡುತ್ತಾನೆ. ಅಲ್ಲದೇ ಪರ್ಯಟನೆಯ ಜೊತೆಜೊತೆಗೆ ಸತ್ಯ ದರ್ಶನದ ಬಗೆಗೆ ಜನರಿಗೆ ಭೋಧನೆಗಳನ್ನು ನಿರಂತರವಾಗಿ ಮಾಡುತ್ತಾನೆ ಹಾಗೂ ಬಡವ ಹಾಗೂ ದುರ್ಬಲರ ಸೇವೆಯನ್ನು ಮಾಡುತ್ತಾನೆ.ವಿಮೋಚನೆಗಾಗಿ ಕೆಲಸ ಕಾರ್ಯಗಳನ್ನು ಮಾಡಬೇಕು ಹಾಗೂ ಈ ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ ಹಾಗಾಗಿ ನಾವು ಪರರಿಗೆ ಹಾಗೂ ಮಾನವೀಯತೆಗೆ ಬೆಲೆ ಕೊಡಬೇಕು ಎಂಬುವುದು ಗೌತಮ ಬುದ್ಧನು ಭೋಧಿಸಿದ ಮುಖ್ಯ ತತ್ವಗಳು.

ಬುದ್ಧನು ಇಹ ಲೋಕವನ್ನು ತ್ಯಜಿಸುವಾಗ ಎಂಭತ್ತು ವರುಷಗಳಾಗಿದ್ದರೂ ಕೂಡ ಯಾವುದೇ ದಣಿವಿಲ್ಲದೇ ಸತ್ಯ ದರ್ಶನಕ್ಕಾಗಿ ನಿರಂತವಾದ ಪ್ರಪಂಚ ಪರ್ಯಟನೆ ಮಾಡುತ್ತಾನೆ. ಅಲ್ಲದೇ ಕೊನೆಗೆ ತನ್ನ ಅನುಯಾಯಿಗಳಿಗೆ ಈ ಜಗತ್ತಿನಲ್ಲಿ ಯಾವುದೂ ಶಾಶ್ವತ ಅಲ್ಲ.ಹಾಗಾಗಿ ನಿಮ್ಮ ವಿಮೋಚನೆಗಾಗಿ‌ ಮಾತ್ರ ಕೆಲಸ ಮಾಡಿ ಎಂಬ ಕೊನೆಯ ನುಡಿಗಳನ್ನು ನೀಡಿ ಲೋಕದಲ್ಲಿ ಅಜರಾಮರನಾಗುತ್ತಾನೆ.

Published by : MAYOON N

About the author / 

DRM

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ತರಕಾರಿ ವ್ಯಾಪಾರಿಯಾ ಮುನ್ನೆಚ್ಚರಿಕೆಯಿಂದ ತಪ್ಪಿದ ಭಾರಿ ದುರಂತ….!

    ಈ ತರಕಾರಿ ವ್ಯಾಪಾರಿಯ ಸಮಯೋಚಿತ ನಿರ್ಧಾರದಿಂದ ಆಗಬಹುದಾದ ಭಾರೀ ಅನಾಹುತ ತಪ್ಪಿದೆ. ಕಂಜೂರ್ ಮಾರ್ಗ್ ಮತ್ತು ಭಂದೂಪ್ ರೈಲು ನಿಲ್ದಾಣಗಳ ನಡುವೆ ಸುಮಾರು ಒಂದೂವರೆ ಅಡಿಗಳಷ್ಟು ರೈಲು ಹಳಿ ಕಾಣಿಸದಿರುವುದನ್ನು ಈ ವ್ಯಾಪಾರಿ ಗಮನಿಸಿದ್ದಾರೆ. ಅದೇ ವೇಳೆಗೆ ರೈಲೊಂದು ಬರುತ್ತಿರುವುದನ್ನೂ ನೋಡಿದ್ದಾರೆ. ರೈಲು ಇಲ್ಲಿಗೆ ಬಂದರೆ ಭಾರೀ ಅನಾಹುತ ಸಂಭವಿಸುವುದು ಗ್ಯಾರಂಟಿ ಎಂಬುದನ್ನು ಅರಿತ ಆತ ತಡ ಮಾಡದೇ ತನ್ನ ಕೈಲಿದ್ದ ಛತ್ರಿಯನ್ನು ಓಪನ್ ಮಾಡಿ ರೈಲು ಹಳಿಗಳ ಮಧ್ಯೆ ನಿಂತು ರೈಲು ನಿಲ್ಲಿಸುವಂತೆ ಸೂಚಿಸಿದ್ದಾರೆ. ಇದನ್ನು…

  • ಸುದ್ದಿ

    ಶ್ರೀಗಳು ಸಾಯುವ ಮುನ್ನ ಕೇಳಿದ ಕೊನೆಯ ಆಸೆ ಏನು ಗೊತ್ತಾ..?ಈ ಕಣ್ಣೀರಿನ ಸುದ್ದಿ ನೋಡಿ…

    ತ್ರೀವಿಧ ದಾಸೋಹದ ಮೂಲಕ ಸಾಮಾಜಿಕ ಕಳಕಳಿ ಮೆರೆದಿದ್ದ ಸಿದ್ದಗಂಗಾ ಶ್ರೀಗಳು ಶಿವೈಕ್ಯದಲ್ಲಿಯೂ ಮಾನವೀಯತೆ ಮೆರೆದಿದ್ದಾರೆ. ಪರಮಪೂಜ್ಯ ಶ್ರೀ ಸಿದ್ದಗಂಗಾ ಶ್ರೀಗಳು ಶಿವೈಕ್ಯರಾದ ಕಾರಣ ಇಡೀ ನಡೇ ಕಣ್ಣೀರಿನಲ್ಲಿ ಮುಳುಗಿದೆ.. ಬಡವರ ಬಂಧು.. ಜಾತಿ ಧರ್ಮ ಮತ ಬೇದ ಮಾಡದೇ ಕಾಯಕ ಯೋಗಿ ಪವಾಡ ಪುರುಷ ಶಿವಯೋಗಿ.. ಸಿದ್ದ ಪುರುಷ ಮಹಾಸ್ವಾಮಿಗಳು ಇಂದು ಬೆಳಿಗ್ಗೆ 11.44 ರಲ್ಲಿ ಭಕ್ತ ಕೋಟಿ ಸಾಗರವನ್ನು ಅಗಲಿದ್ದಾರೆ.. ಶಿವಕುಮಾರ ಸ್ವಾಮೀಜಿಗಳಿಗೆ ಮಕ್ಕಳೆಂದರೇ ಜಾಸ್ತಿ ಮಮತೆ. ಬದುಕಿನ ಹೆಚ್ಚಿನ ಕ್ಷಣಗಳನ್ನು ಶ್ರೀಗಳು ಮಕ್ಕಳ ಜೊತೆ…

  • ಜ್ಯೋತಿಷ್ಯ

    ದಿನ ಭವಿಷ್ಯ ಮಂಗಳವಾರ, ಈ ದಿನದ ನಿಮ್ಮ ರಾಶಿ ಭವಿಷ್ಯದ ಜೊತೆಗೆ, ನಿಮ್ಮ ಅದೃಷ್ಟದ ಸಂಖ್ಯೆ ತಿಳಿಯಿರಿ….

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಅರ್ಚಕರು ಮಾಂತ್ರಿಕರು 9663218892,  ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು  ಉತ್ತರ ತಿಳಿಯಲು ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು)9663218892 call/ whatsapp/ mail raghavendrastrology@gmail.com ಮೇಷ ರಾಶಿ ಇಂದು ಪ್ರೇಮನಿವೇದನೆ…

  • ಸಿನಿಮಾ

    ಪಡ್ಡೆ ಹುಡುಗರ ನಿದ್ದೆ ಕದ್ದಿರೋ, ಕಣ್ ಸನ್ನೆ ನೋಟದ ಈ ಹುಡುಗಿಯ ಕತೆ ಏನು ಗೊತ್ತಾ..?ತಿಳಿಯಲು ಮುಂದೆ ನೋಡಿ…

    ಒಂದೇ ಒಂದು ವಿಡಿಯೋ ಕ್ಲಿಪ್‌ ನಿಂದ ಇಡೀ ದೇಶದಲ್ಲಿ ಸುದ್ದಿಯಾದ ಪ್ರಿಯಾ ಪ್ರಕಾಶ್ ವಾರಿಯರ್ ಕಣ್ ನೋಟ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

  • ಸುದ್ದಿ

    ನಿಜಕ್ಕೂ ಅಚ್ಚರಿ ಗೋಡೆಯಲ್ಲಿ ಉದ್ಭವವಾದ ದೇವಿ..! ಅಷ್ಟಕ್ಕೂ ಅಚ್ಚರಿ ನಡೆದಿದ್ದು ಎಲ್ಲಿ ಗೊತ್ತಾ?

    ಧಾರವಾಡ ಜಿಲ್ಲೆಯ ಹೊಸ ಯಲ್ಲಾಪುರದ ರೈತ ಯಲ್ಲನಗೌಡ ಪಾಟೀಲ ಮನೆಯಲ್ಲಿ ದೀಪಾವಳಿ ಪಾಡ್ಯದ ದಿನದಂದು ದೇವಿಯ ಮೂರ್ತಿಯು ಪತ್ತೆಯಾಗಿದೆ. ಜನ ಮರಳೋ ಜಾತ್ರೆ ಮರಳೋ ಎನ್ನುವ ಹಾಗೆ, ಗೋಡೆಯಲ್ಲಿ ಉದ್ಭವವಾಗಿದೆ ಎನ್ನಲಾದ ದೇವಿಯನ್ನು ನೋಡಲು ಇಡೀ ಊರಿಗೆ ಊರೇ ಸೇರುತ್ತಿದೆ. ಧಾರವಾಡ ನಗರದ ಹೊಸ ಯಲ್ಲಾಪುರದ ದುಂಡಿ ಓಣಿಯಲ್ಲಿರುವ ಯಲ್ಲನ್ನಗೌಡ ಪಾಟೀಲ ಅವರ ಮನೆಯಲ್ಲಿ ದೇವಿ ಉದ್ಭವವಾಗಿದ್ದಾಳೆ ಎಂಬ ಸುದ್ದಿ ಹರಿದಾಡಿದ್ದು, ಈ ದೃಶ್ಯವನ್ನು ನೋಡಲು ಭಕ್ತ ಸಮೂಹವೇ ಹರಿದುಬರುತ್ತಿದೆ. ಯಲ್ಲನ್ನಗೌಡ ದಂಪತಿ ದೇವಿಯ ಆರಾಧಕರಾಗಿದ್ದು, ದೀಪಾವಳಿ…

  • ಸುದ್ದಿ

    ಕೊನೆಗೂ ಬಯಲಾಯ್ತು ಪ್ರಸಾದದಲ್ಲಿ ವಿಷ ಬೇರೆಸಿದ್ದ ಪಾಪಿಗಳ ಬೆಚ್ಚಿ ಬೀಳಿಸುವ ಸತ್ಯ..!

    ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಸುಳ್ವಾಡಿ ಗ್ರಾಮದಲ್ಲಿ ವಿಷ ಮಿಶ್ರಿತ ಪ್ರಸಾದ ಸೇವಿಸಿ ಸಾವನ್ನಪ್ಪಿದವರ ಸಂಖ್ಯೆ 15 ಕ್ಕೆ ಏರಿದೆ. ಇನ್ನೂ ಹಲವಾರು ಮಂದಿ ಮೈಸೂರಿನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮಧ್ಯೆ ಪ್ರಸಾದಕ್ಕೆ ವಿಷ ಬೆರೆಸಿದವರು ಯಾರು ಎಂಬುದರ ಕುರಿತು ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಮಹತ್ವದ ಮಾಹಿತಿ ದೊರೆತಿದೆ ಎನ್ನಲಾಗಿದೆ. ಸಾಲೂರು ಮಠದ ಸ್ವಾಮಿಗಳ ನಡುವಿನ ಒಳಜಗಳದ ಕಾರಣಕ್ಕೆ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಕಿರಿಯ ಸ್ವಾಮೀಜಿ ಮಹಾದೇವಸ್ವಾಮಿ ಚಿತಾವಣೆ ಮೇರೆಗೆ ದೊಡ್ಡಯ್ಯ ಎಂಬಾತ…