ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸುಂದರ್ ಪಿಚೈ ಅವರು ಮೊದಲು ಕಂಪನಿಯ ಇಂಟರ್ ನೆಟ್ ವ್ಯವಹಾರವನ್ನು ಉನ್ನತಮಟ್ಟಕ್ಕೇರಿಸುವ ನಿಟ್ಟಿನಲ್ಲಿ ಪ್ರಾಡಕ್ಟ್ ಮತ್ತು ಇಂಜಿನಿಯರಿಂಗ್ ವಿಭಾಗದ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಿದ್ದರು.
ಗೂಗಲ್ ಕಂಪನಿಯ ಸ್ಥಾಪಕ ಲ್ಯಾರಿ ಪೇಜ್ ಅವರು ಸುಂದರ್ ಪಿಚೈ ಅವರನ್ನು ನೂತನ ಸಿಇಒ ಆಗಿ ನೇಮಕ ಮಾಡಲಾಗಿದೆ ಎಂದು ಪ್ರಕಟಿಸಿದ್ದಾರೆ. ಹೊಸ ಸಿಇಒ ನೇಮಕ ಮಾಡುವ ಜೊತೆಗೆ ಕಂಪನಿಯು ಇಂದು ಹೊಸ ಸಹ ಸಂಸ್ಥೆಯಾದ ‘ಆಲ್ಫಬೆಟ್’ ಕಂಪನಿಯನ್ನು ಆರಂಭಿಸಿದೆ.
ಸುಂದರ್ ಪಿಚೈ ಅವರ ಬಗ್ಗೆ ಕೆಲ ಮಾಹಿತಿ ಇಲ್ಲಿದೆ:-
* ಸುಂದರ್ ಪಿಚೈ ಅವರು ಭಾರತದ ತಮಿಳುನಾಡಿನ ಚೆನ್ನೈನಲ್ಲಿ 1972ರಲ್ಲಿ ಜನಿಸಿದರು. ಇಂದಿಗೂ ಭಾರತೀಯ ಪೌರತ್ವ ಉಳಿಸಿಕೊಂಡಿದ್ದಾರೆ.
* ಸುಂದರ್ ಪಿಚೈ ಅವರ ಪೂರ್ತಿ ಹೆಸರು ಪಿಚೈ ಸುಂದರಾಜನ್, ಜನಪ್ರಿಯ ಹೆಸರು ಸುಂದರ್ ಪಿಚೈ.
* 2004ರಲ್ಲಿ ಗೂಗಲ್ ಸೇರಿದ ಸುಂದರ್ ಅವರು ಮೊದಲಿಗೆ ಪ್ರಾಡೆಕ್ಟ್ ಹಾಗೂ ಇನ್ನೋವೇಷನ್ ಅಧಿಕಾರಿಯಾಗಿದ್ದರು.
* ಪೆನ್ನಿಸಿಲ್ವೆನಿಯಾದ ವಿಶ್ವವಿದ್ಯಾಲಯದಿಂದ ಸೈಬಲ್ ಸ್ಕಾಲರ್ ಎನಿಸಿಕೊಂಡಿದ್ದಾರೆ.
* ಖರಗ್ ಪುರದ ಐಐಟಿಯಿಂದ ಮೆಟರ್ಲರ್ಜಿ ವಿಷಯದಲ್ಲಿ ಪದವಿ ಪಡೆದುಕೊಂಡ ಪಿಚೈ ಅವರು ಆ ಬ್ಯಾಚಿನ ಬೆಳ್ಳಿ ಪದಕ ವಿಜೇತರಾಗಿದ್ದಾರೆ.
* ಅಮೆರಿಕದ ವಾರ್ಟನ್ ವಿಶ್ವವಿದ್ಯಾಲಯ ಹಾಗೂ ಸ್ಟಾನ್ ಫರ್ಡ್ ವಿಶ್ವವಿದ್ಯಾಲಯಿಂದ ಕ್ರಮವಾಗಿ ಎಂಬಿಎ ಹಾಗೂ ಎಂಎಸ್ ಪಡೆದುಕೊಂಡಿದ್ದಾರೆ.
* ಸದ್ಯ ಗೂಗಲ್ ನ ಆಪ್ಸ್, ಕ್ರೋಮ್ ಹಾಗೂ ಆಂಡ್ರಾಯ್ಡ್ ವಿಭಾಗದ ಉಪಾಧ್ಯಕ್ಷರಾಗಿದ್ದರು.
* ಗೂಗಲ್ ಡ್ರೈವ್, ಜೀಮೇಲ್ ಅಪ್ಲಿಕೇಷನ್, ಗೂಗಲ್ ವಿಡಿಯೋ ಕೊಡೆಕ್ ಎಲ್ಲದರ ಸೃಷ್ಟಿಗೆ ಬಹುತೇಕ ಸುಂದರ್ ಪಿಚೈ ಅವರೇ ಕಾರಣ.
* ಆದರೆ, ಪಿಚೈ ಅವರನ್ನು ಗೂಗಲ್ ನ ಕ್ರೋಮ್ ಆಪರೇಟಿಂಗ್ ಸಿಸ್ಟಮ್ ಹಾಗೂ ಆಂಡ್ರಾಯ್ಡ್ ಅಪ್ಲಿಕೇಷನ್ ನಿರ್ಮಾತೃವಾಗೇ ಗುರುತಿಸಲಾಗಿದೆ.
* ಟ್ವಿಟ್ಟರ್ ಸಂಸ್ಥೆ 2011ರಲ್ಲಿ ಪಿಚೈ ಅವರನ್ನು ತಮ್ಮ ಸಂಸ್ಥೆಗೆ ಸೇರಿಸಿಕೊಳ್ಳಲು ಯತ್ನಿಸಿತ್ತು. ಅದರೆ, ಗೂಗಲ್ ಅವರಿಗೆ 50 ಮಿಲಿಯನ್ ಡಾಲರ್ ಹೆಚ್ಚಿಗೆ ಮೊತ್ತ ನೀಡಿ ಗೂಗಲ್ ನಲ್ಲೇ ಉಳಿಸಿಕೊಂಡಿತ್ತು. ( ಒನ್ ಇಂಡಿಯಾ ಸುದ್ದಿ)
ಖಾಲಿ ಜೇಬಿನಲ್ಲಿ ಹುಟ್ಟಿದ ಗೂಗಲ್ ಸಿಇಒ ಸುಂದರ್ ಪಿಚೈ ಪ್ರೇಮ ಕಥೆ:-
ಅವರಿಬ್ಬರ ಪ್ರೀತಿ ಹುಟ್ಟಿಕೊಂಡಿದ್ದು ಕಾಲೇಜು ದಿನಗಳಲ್ಲಿ. ಆಕೆ ಹೆಸರು ಅಂಜಲಿ; ಆತನ ಹೆಸರು ಸುಂದರ್ ಪಿಚೈ; ಸದ್ಯ ಗೂಗಲ್ ಸಂಸ್ಥೆಯ ಸಿಇಒ. ಅವರ ಪ್ರತಿ ದಿನದ ಸಂಬಳವೇ 3.5 ಕೋಟಿ.
ಆದರೆ ಅಂಜಲಿ ಪ್ರೇಮದ ಬಲೆಯಲ್ಲಿ ಬಿದ್ದಾಗ ಪಿಚೈ ಜೇಬಿನಲ್ಲಿ ಏನೂ ಇರಲಿಲ್ಲ; ಖಾಲಿ ಜೇಬು. ಅವತ್ತಿಗೆ ಚೆನ್ನೈ ಅಪಾರ್ಟ್ಮೆಂಟ್ ಒಂದರಲ್ಲಿ ಪಿಚೈ ವಾಸವಾಗಿದ್ದರು. ಕಾರಿರಲಿಲ್ಲ, ಮನೆಯಲ್ಲೊಂದು ಟಿವಿಯೂ ಇರಲಿಲ್ಲ.
ಅಲ್ಲಿಂದ ಐಐಟಿ ಖರಗ್ ಪುರದಲ್ಲಿ ಎಂಜಿನಿಯರಿಂಗ್ ಅಭ್ಯಾಸ ಮಾಡಲು ಇಬ್ಬರೂ ತೆರಳಿದರು. ಅಲ್ಲಿ ಡೇಟಿಂಗ್ ಆರಂಭಿಸಿದರು. ಜೇಬಿನಲ್ಲಿ ಕಾಸಿಲ್ಲದಿದ್ದರೇನಂತೆ ಹೃದಯ ಶ್ರೀಮಂತವಾಗಿತ್ತು. ಪಿಚೈ ಅಂಜಲಿ ಮುಂದೆ ಮದುವೆ ಪ್ರಸ್ತಾಪ ಇಟ್ಟರು. ಅಂಜಲಿಯೂ ಅಷ್ಟೆ ಅತ್ತಿತ್ತ ನೋಡದೆ ಮದುವೆಗೆ ಒಪ್ಪಿಗೆ ನೀಡಿಯೇ ಬಟ್ಟರು. ಅಂಜಲಿಗೆ ಪಿಚೈ ಬಡತನದ ಬಗ್ಗೆ ಗೊತ್ತಿರಲಿಲ್ಲವೆಂದಲ್ಲ. ಸುಂದರ್ ಮನೆಯ ಎಲ್ಲಾ ಪರಿಸ್ಥಿತಿಯೂ ಅಂಜಲಿಗೆ ಗೊತ್ತಿತ್ತು. ಹೀಗಿದ್ದೂ ಮದುವೆಗೆ ಒಪ್ಪಿಕೊಂಡರು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ರಾಜ್ಯದಲ್ಲಿ ಸಂಕಷ್ಟದ ಪರಿಸ್ಥಿತಿ ಇದ್ದಾಗಲೇ ಸಚಿವ ಡಿಕೆ ಶಿವಕುಮಾರ್ ಅವರು ವಿದೇಶಕ್ಕೆ ಹೊರಟಿದ್ದು, ಇದೀಗ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಹೌದು. ಏನೇ ಸಮಸ್ಯೆ ಇದ್ದರೂ ನಾನೀದ್ದೇನೆ ಎಂದು ಹೇಳುತ್ತಾ, ಸರ್ಕಾರದ ಹಿತ ಕಾಯಲು ನಿಂತಿದ್ದ ಟ್ರಬಲ್ ಶೂಟರ್ ಸಂಕಷ್ಟದ ಸಮಯದಲ್ಲೇ ಕೈ ಕೊಟ್ರಾ ಅನ್ನೋ ಅನುಮಾನವೊಂದು ಮೂಡಿದೆ. ರಾಜ್ಯ ಸಮ್ಮಿಶ್ರ ಸರ್ಕಾರದ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಇನ್ನು 7 ದಿನಗಳ ಕಾಲ ನಾಟ್ ರೀಚೆಬಲ್ನಲ್ಲಿ ಇರಲಿದ್ದಾರೆ. ಭಾನುವಾರ ರಾತ್ರಿ ದೆಹಲಿಯಿಂದ ಕುಟುಂಬ ಸಮೇತ ಆಸ್ಟ್ರೇಲಿಯಾ…
100 ವರ್ಷ ವಯಸ್ಸಿನ ವೃದ್ಧ ತಾಯಿಯ ಪಿಂಚಣಿ ಹಣಕ್ಕಾಗಿ ಮಗಳು ಮಂಚದ ಸಮೇತ ಆಕೆಯನ್ನು ಬ್ಯಾಂಕಿಗೆ ಕರೆತಂದ ಘಟನೆಯೊಂದು ನಡೆದಿದೆ. ಮಗಳು ತನ್ನ ತಾಯಿಯನ್ನು ಮಂಚದ ಸಮೇತ ಕರೆದೊಯ್ಯುವುದನ್ನು ಸ್ಥಳೀಯರು ವಿಡಿಯೋ ಮಾಡಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಪಿಂಚಣಿ ಹಣವನ್ನು ಡ್ರಾ ಮಾಡಲು ಆಕೆಯೇ ಬರಬೇಕು ಎಂದು ಬ್ಯಾಂಕ್ ಸಿಬ್ಬಂದಿ ಸೂಚನೆ ನೀಡಿದ್ದಾರೆ. ಆದರೆ ತಾಯಿಗೆ ಎದ್ದು ನಡೆಯಲು ಸಾಧ್ಯವಿಲ್ಲ. ಹೀಗಾಗಿ ಅವರು ಬ್ಯಾಂಕಿಗೆ ಬರಲು ಆಗುತ್ತಿಲ್ಲ ಎಂದು ಹೇಳಿದರೂ ಸಿಬ್ಬಂದಿ…
Kotilingeshwara temple is situated in Kammasandra village in Kolar district , Karnataka. In the temple premises more than million of lingas were installed since 1980.
ಜೀವನದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ತಾನೂ ತುಂಬಾ ಎತ್ತರಕ್ಕೆ ಬೆಳೆಯಬೇಕು,ಎಲ್ಲರಂಚೆನ್ನಾಗಿ ಬದುಕಬೇಕು, ತಾವು ಶ್ರೀಮಂತರಾಗಬೇಕು ಎಂಬ ಆಸೆಯಿಂದ, ಎಲ್ಲರೂ ಕಷ್ಟಪಟ್ಟು ದುಡಿಯುತ್ತಾರೆ, ಆದ್ರೆ ತಾವು ಎಷ್ಟು ದುಡಿದ್ರೂ ಕೆಲವರಿಗೆ ಮುಂದೆ ಬರಲು ಸಾಧ್ಯವಾಗುವುದಿಲ್ಲ.ಇದಕ್ಕೆ ಹಲವಾರು ಕಾರಣಗಳಿವೆ.
ಈ ಸರ್ಕಾರದಲ್ಲಿ ನಾನು ಆರೋಗ್ಯ ಮಂತ್ರಿಯಾಗಿ ಕೆಲಸ ಮಾಡುತ್ತಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡೋಕ್ಕೆ ನಿಮಗೆ ಆಗಲ್ಲ ಎಂದ್ರೆ ಇಲ್ಲಿಂದ ತೊಲಗಿ ಎಂದು ಕೊಡಗು ಜಿಲ್ಲೆಯ ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಸರ್ಕಾರಿ ವೈದ್ಯರಿಗೆ ಆರೋಗ್ಯ ಸಚಿವ ಬಿ.ಶ್ರೀರಾಮುಲು ಖಡಕ್ ಎಚ್ಚರಿಕೆ ನೀಡಿದ್ದಾರೆ. ರಾತ್ರಿ ವೇಳೆಯಲ್ಲಿ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ಆಗಮಿಸಿ, ಆಸ್ಪತ್ರೆಯ ಸ್ಥಿತಿಗತಿಗಳ ಬಗ್ಗೆ ಪರಿಶೀಲನೆ ಹಾಗೂ ವಾಸ್ತವ್ಯ ಹೂಡಲು ಭೇಟಿ ನೀಡಿದ ಆರೋಗ್ಯ ಮಂತ್ರಿ ಶ್ರೀರಾಮುಲುರವರು, ಆಸ್ಪತ್ರೆಯ ಒಳಗೆ ಪರಿಶೀಲನೆ ನಡೆಸಿ ಆಸ್ಪತ್ರೆಯಲ್ಲಿ ಇದ್ದಂತಹ ರೋಗಿಗಳನ್ನು…
ಈಗಿನ ಸೋಶಿಯಲ್ ಮಿಡಿಯಾಗಳಾದ ಫೇಸ್ಬುಕ್,ಟ್ವಿಟ್ಟರ್, ಹಾಗೂ ಯೂ ಟೂಬ್’ಗಳಲ್ಲಿ ರಾತ್ರೋ ರಾತ್ರಿ ಫೇಮಸ್ ಆದವರಿದ್ದಾರೆ. ಅವರು ಹೇಗಿದ್ದಾರೆ ಅನ್ನುವುದು ಮುಖ್ಯ ಅಲ್ಲ. ಅವರಲ್ಲಿ ಏನು ಟ್ಯಾಲೆಂಟ್ ಇದೆ ಅನ್ನುವುದು ಮುಖ್ಯ. ಅಂತಹ ಟ್ಯಾಲೆಂಟ್ ಇದ್ದವರು ಸೋಶಿಯಲ್ ಮಿಡಿಯಾಗಳಿಂದ ಸೂಪರ್ ಸ್ಟಾರ್ ಆಗಬಹುದು.