ಸುದ್ದಿ

ಗರ್ಭಿಣಿಯರೇ ಉಷಾರ್…! 3 ಗಂಟೆಗಳವರೆಗೂ ಸಂಭವಿಸಲಿದೆ ಚಂದ್ರಗ್ರಹಣ…..

153

ಜುಲೈ 16 ರ ಮಧ್ಯರಾತ್ರಿ ಚಂದ್ರ ಗ್ರಹಣ ಸಂಭವಿಸಲಿದೆ. ಸತತ ಮೂರು ಗಂಟೆಗಳ ಕಾಲ ಗ್ರಹಣವಿರಲಿದೆ. ಗ್ರಹಣ ಅನೇಕ ರಾಶಿಗಳ ಹಾಗೂ ನಕ್ಷತ್ರದ ಮೇಲೆ ಪ್ರಭಾವ ಬೀರ್ತಿದೆ. ಗ್ರಹಣ ದೋಷದಿಂದ ತಪ್ಪಿಸಿಕೊಳ್ಳಲು ಜನರು ಜಪ, ದಾನಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ.

ಗ್ರಹಣ ಕಾಲದಲ್ಲಿ ಗರ್ಭಿಣಿಯರು ವಿಶೇಷ ಎಚ್ಚರಿಕೆ ವಹಿಸಬೇಕಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಣ ಕಾಲದಲ್ಲಿ ಗರ್ಭಿಣಿಯರು ಯಾವುದೇ ಚೂಪಾದ ವಸ್ತುಗಳನ್ನು ಮುಟ್ಟಬಾರದು. ಸೂಜಿ, ಚಾಕುವಿನಂತಹ ವಸ್ತುಗಳಿಂದ ದೂರವಿರಬೇಕು.

ಗ್ರಹಣ ಕಾಲದಲ್ಲಿ ಅಪ್ಪಿತಪ್ಪಿಯೂ ಮನೆಯಿಂದ ಹೊರಗೆ ಬರಬೇಡಿ. ಗ್ರಹಣ ಸಂದರ್ಭದಲ್ಲಿ ಗರ್ಭಿಣಿಯರು ಸುರಕ್ಷತೆ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ಕಿರಣ ತಾಗದಂತೆ ನೋಡಿಕೊಳ್ಳಬೇಕು. ಗ್ರಹಣ ಹೊಟ್ಟೆಯಲ್ಲಿರುವ ಮಗುವಿನ ಮೇಲೆ ಪ್ರಭಾವ ಬೀರುತ್ತದೆ.

ಗ್ರಹಣದ ವೇಳೆ ಗರ್ಭಿಣಿಯರು ತೆಂಗಿನ ಕಾಯಿಯನ್ನು ಜೊತೆಗಿಟ್ಟುಕೊಳ್ಳಬೇಕು. ತೆಂಗಿನಕಾಯಿ ಗರ್ಭಿಣಿ ಬಳಿಯಿದ್ರೆ ಗ್ರಹಣದ ಕಪ್ಪು ಛಾಯೆ ಮಗುವಿನ ಮೇಲೆ ಪ್ರಭಾವ ಬೀರುವುದಿಲ್ಲ.ಸಾಮಾನ್ಯ ದಿನಕ್ಕಿಂತ ಗ್ರಹಣದ ವೇಳೆ ದೇವರ ಆರಾಧನೆ ಮಾಡಬೇಕು. ಮಂತ್ರವನ್ನು ಪಠಿಸಬೇಕು.ಗ್ರಹಣದ ನಂತ್ರ ಗರ್ಭವತಿಯರು ಕೂಡ ಸ್ನಾನ ಮಾಡುವುದು ಒಳ್ಳೆಯದು. ಸ್ನಾನ ಸಾಧ್ಯವಾಗದೆ ಹೋದಲ್ಲಿ ಗಂಗಾಜಲವನ್ನು ಮೈಮೇಲೆ ಹಾಕಿಕೊಂಡು ಶುದ್ಧ ಮಾಡಿಕೊಳ್ಳಿ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ