ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಅವರನ್ನು ಆಂಧ್ರಪ್ರದೇಶ ಸರ್ಕಾರ ಡೆಪ್ಯೂಟಿ ಕಲೆಕ್ಟರ್ ಆಗಿ ನೇಮಕ ಮಾಡಿತ್ತು. ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ಅಪಾಯಿಂಟ್ಮೆಂಟ್ ಲೆಟರ್ ಅನ್ನು ಸಿಂಧುಗೆ ಹಸ್ತಾಂತರಿಸಿದ್ದರು. 30 ದಿನಗಳೊಳಗೆ ಡೆಪ್ಯೂಟಿ ಕಲೆಕ್ಟರ್ ಆಗಿ ಅಧಿಕಾರ ಸ್ವೀಕರಿಸುವಂತೆ ಆಂಧ್ರ ಸರ್ಕಾರ ಸಿಂಧುಗೆ ಸೂಚಿಸಿತ್ತು. ಹಾಗೂ ಸಿಂಧು ಅವರನ್ನು ಗ್ರೂಪ್-1 ಹುದ್ದೆಗೆ ನೇಮಕ ಮಾಡಲು ರಾಜ್ಯ ಸಾರ್ವಜನಿಕ ಸೇವಾ ಕಾಯ್ದೆಯನ್ನು ಜಾರಿ ಮಾಡಲಾಗಿತ್ತು.
ಇದಕ್ಕೆ ಪ್ರತಿಕ್ರಯಿಸಿದ್ದ ಸಿಂಧುರವರು, ಡೆಪ್ಯೂಟಿ ಕಲೆಕ್ಟರ್ ಆಗಿ ನೇಮಕ ಮಾಡಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದರು ಹಾಗೂ ಬ್ಯಾಡ್ಮಿಂಟನ್ ಗೆ ತಮ್ಮ ಮೊದಲ ಆದ್ಯತೆ ಅಂತಾ ಹೇಳಿದ್ದರು. ಆಗ ಆಂಧ್ರ ಸಿಎಂ ಚಂದ್ರಬಾಬು ನಾಯ್ಡುರವರು ಸಿಂಧುಗೆ ಶುಭ ಹಾರೈಸಿ, ದೇಶಕ್ಕೆ ಮತ್ತಷ್ಟು ಪದಕಗಳನ್ನು ಗೆದ್ದು ತರಲಿ ಅಂತಾ ಹೇಳಿದ್ರು.
ಹೀಗಾಗಿ ಭಾರತದ ಖ್ಯಾತ ಶಟಲ್ ಬ್ಯಾಡ್ಮಿಂಟನ್ ಆಟಗಾರ್ತಿ, ಒಲಿಂಪಿಕ್ ಪದಕ ವಿಜೇತೆ, ಪಿ ವಿ ಸಿಂಧು ಆಂಧ್ರ ಪ್ರದೇಶ ಸರಕಾರದಲ್ಲಿ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಸಿಂಧು ಅವರಿಗೆ ಕಳೆದ ಜು.27ರಂದೇ ಜಿಲ್ಲಾಧಿಕಾರಿಯಾಗಿ ಅಧಿಕೃತ ನೇಮಕಾತಿ ಪತ್ರವನ್ನು ನೀಡಲಾಗಿತ್ತು. ಆದರೆ ಅವರು ನಿನ್ನೆ ಬುಧವಾರ ಔಪಚಾರಿಕವಾಗಿ ತಮ್ಮ ಅಧಿಕಾರ ವಹಿಸಿಕೊಂಡರು.
ಪಿ ವಿ ಸಿಂಧುರವರ ಬಾಲ್ಯದ ಬಗ್ಗೆ ತಿಳಿಯೋಣ:-
ಪಿ.ವಿ ಸಿಂಧುರವರು, 5 ಜುಲೈ 1995ರಂದು ಹೈದರಾಬಾದ್ನoಲ್ಲಿ ಜನಿಸಿದರು. ತಂದೆ ಪಿ.ವಿ. ರಮಣ ಮತ್ತು ತಾಯಿ ಪಿ. ವಿಜಯ. ಸಿಂಧುವಿನ ತಂದೆ-ತಾಯಿ ಇಬ್ಬರೂ ಸಹ ಮಾಜಿ ವಾಲಿಬಾಲ್ ಆಟಗಾರರಾಗಿರುವುದೊಂದು ವಿಶೇಷ. ಭಾರತ ಸರ್ಕಾರವು ಕೊಡಮಾಡುವ ಪ್ರತಿಷ್ಠಿತ ಅರ್ಜುನ ಪ್ರಶಸ್ತಿಗೆ ಪಿ.ರಮಣರು 2000 ನೆಯ ಇಸವಿಯಲ್ಲಿ ಭಾಜನರಾಗಿದ್ದಾರೆ. ತಂದೆ ವೃತ್ತಿಪರ ವಾಲಿಬಾಲ್ ಆಟಗಾರರಾಗಿದ್ದರೂ ಸಹ ಸಿಂಧು ಮಾತ್ರ ಬ್ಯಾಡ್ಮಿಂಟನ್ ನಡೆಗೆ ಆಕರ್ಷಿತರಾದರು.ಅದಕ್ಕೆ ಕಾರಣ, 2001 ರ ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ ಆಗಿದ್ದ ಪುಲ್ಲೇಲ ಗೋಪಿಚಂದ್‍ರ ಯಶಸ್ಸು ಮತ್ತು ಅವರಿಂದ ಪಡೆದ ಸ್ಫೂರ್ತಿ. ತನ್ನ ಎಂಟನೆಯ ವಯಸ್ಸಿನಲ್ಲೇ ಸಿಂಧು ಬ್ಯಾಡ್ಮಿಂಟನ್ ಆಡಲು ಪ್ರಾರಂಭಿಸಿದ್ದರು, ಇದೂ ಸಹ ಅವರನ್ನು ಬ್ಯಾಡ್ಮಿಂಟನ್ ಕಡೆಗೆ ಸೆಳೆಯಲು ಕಾರಣವಾಯಿತು.
ಪಿ.ವಿ ಸಿಂಧುರವರ ಬ್ಯಾಡ್ಮಿಂಟನ್ ಸಾಧನೆ:-
ಪಿ.ವಿ ಸಿಂಧುರವರು ಅಂತರರಾಷ್ಟ್ರೀಯ ಖ್ಯಾತಿಯ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ. ಹೈದರಾಬಾದ್ ನ ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ತರಬೇತಿ ಪಡೆಯುವ ಇವರು, ಭಾರತೀಯ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುತ್ತಿರುವ ಸ್ವಸಹಾಯ ಸಂಸ್ಥೆಯಾದ ಒಲಿಂಪಿಕ್ ಗೋಲ್ಡ್ ಕ್ವೆಸ್ಟ್ ನ ಭಾಗವಾಗಿದ್ದಾರೆ. 10 ಆಗಸ್ಟ್ 2012 ರಂದು ಇವರು ಚೀನಾ ದಲ್ಲಿ ಜರುಗಿದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ (ಪ್ರಕಾಶ್ ಪಡುಕೋಣೆ 1983 ರಲ್ಲಿ ಕಂಚು ಗೆದ್ದಿದ್ದಾರೆ. ಅನಂತರ ಭಾರತದ ಮೊದಲ ಸಿಂಗಲ್ಸ್ ಪದಕ) ನ ಸಿಂಗಲ್ಸ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ. ಸೆಪ್ಟೆಂಬರ್ 21,2012 ರಂದು ಬಿಡುಗಡೆ ಮಾಡಲಾದ ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ ಶ್ರೇಯಾಂಕಗಳಲ್ಲಿ ಮೊದಲ 20ರೊಳಗಿನ ಶ್ರೇಣಿಯಲ್ಲಿದ್ದರು. ಬಿಡಬ್ಲ್ಯೂಎಫ್ ಜೂನಿಯರ್ ಶ್ರೇಯಾಂಕಗಳಲ್ಲಿ 3 ನೇ ಸ್ಥಾನದಲ್ಲಿದ್ದಾರೆ.
ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕಾರ:-
ಭೂ ಆಡಳಿತೆಯ ಮುಖ್ಯ ಆಯುಕ್ತರಾಗಿರುವ ಅನಿಲ್ ಚಂದ್ರ ಪುನೇತ ಅವರಿಗೆ ಪಿ ವಿ ಸಿಂಧು ತಮ್ಮ ನೇಮಕಾತಿ ಪತ್ರವನ್ನು ಸಲ್ಲಿಸಿ ಗ್ರೂಪ್ 1 ಸರಕಾರಿ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡು ಸರಕಾರಿ ಆಡಳಿತೆಯಲ್ಲಿನ ತಮ್ಮ ಜೀವನದ ಹೊಸ ಪಾತ್ರವನ್ನು ಆರಂಭಿಸಿದರು.
ಸಿಂಧು ಅವರ ತನ್ನ ಹೆತ್ತವರೊಡಗೂಡಿ ಸರಕಾರದ ಭೂ ಆಡಳಿತೆಯ ಮುಖ್ಯ ಆಯುಕ್ತರ ಕಚೇರಿಗೆ ತೆರಳಿ ಗೊಲ್ಲಪುಡಿಯಲ್ಲಿನ ಸರಕಾರಿ ಸಚಿವಾಲಯದಲ್ಲಿ ಅಧಿಕಾರ ಗ್ರಹಣ ಮಾಡಿದರು.
ಸಿಂಧು ಎರಡು ಬಾರಿಯ ಕಂಚಿನ ಪದಕ ವಿಜೇತೆಯಾಗಿದ್ದಾರೆ.
ಸ್ನೇಹಿತರೆ ನಮ್ಮ ಪ್ರಕಾರ ಯಾವುದೇ ಕ್ರೀಡೆಯಲ್ಲಿ ಯಾರೇ ಆಗಲಿ, ನಮ್ಮ ದೇಶಕ್ಕೆ ಪದಕ ತಂದು ಕೊಡುವಲ್ಲಿ ಸಫಲ ರಾಗಿದ್ದಲ್ಲಿ, ಅಂತಹ ಕ್ರೀಡಾ ಪಟುಗಳಿಗೆ ಅದೇ ಕ್ರೀಡೆಯಲ್ಲಿ ಮುಂದುವರಿಯಲು, ಅವರಿಗೆ ಆರ್ಥಿಕವಾಗಲಿ, ಅಥವಾ ಬೇರೆ ಯಾವುದೇ ರೀತಿಯಿಂದಾಗಲಿ, ಸರಕಾರಗಳು ಪ್ರೋತ್ಸಾಹ ಕೊಡಬೇಕು ಮತ್ತು ಅವರನ್ನು ಬೆಳೆಸಬೇಕು.
ಅದು ಬಿಟ್ಟು ಸರಕಾರಗಳು ತಮ್ಮ ತೋರಿಕೆಗಾಗಿ ಅಧಿಕಾರದ ಗದ್ದುಗೆಯನ್ನು ಕೊಟ್ಟರೆ, ಈ ಅಧಿಕಾರದ ಮಾಯೆ ಕ್ರೀಡೆಯಲ್ಲಿ ಮುಂದುವರಿಯಲು ಅವಕಾಶ ಮಾಡಿಕೊಡುತ್ತದಯೇ? ಹಾಗೂ ಇನ್ನಷ್ಟು ಮತ್ತಷ್ಟು ಪದಕಗಳು ನಮ್ಮ ದೇಶಕ್ಕೆ ಬರಲು ಸಾಧ್ಯವೇ? ನಾವು ನಮ್ಮ ದೇಶದ ಹೆಸರನ್ನು ಸಾಗರದಾಚೆ ಕೊಂಡಯ್ಯುವಂತ, ಉತ್ತಮ ಕ್ರೀಡಾಪಟುವನ್ನು ಕಳೆದುಕೊಂಡಂತೆ ಆಗುವುದಿಲ್ಲವೇ? ಇದಕ್ಕೆ ನಿಮ್ಮ ಅಭಿಪ್ರಾಯವನ್ನು ನಿಮ್ಮ ಕಾಮೆಂಟ್ ಮೂಲಕ ತಿಳಿಸಿ…
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮಧ್ಯಪ್ರದೇಶದ ಛತ್ತಾರ್ ಪುರ ನೌಗಾಂವ್ ಬ್ಲಾಕ್ ನ ಗರೋಲಿ ಚೌಕಿಯ ಬಾಲಕೃಷ್ಣ ಚೌಬೆ (55) ಎಂಬಾತ ಕಳೆದ ಮೂರು ವರ್ಷಗಳಿಂದ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದನು. ಈತ ಕೊಲೆ ಮತ್ತು ದರೋಡೆ ಕೇಸಿನಲ್ಲಿ ಗುರುತಿಸಿಕೊಂಡ ಬಳಿಕ ತನ್ನ ಗ್ರಾಮದಿಂದ ತಲೆಮರೆಸಿಕೊಂಡಿದ್ದನು. ಅದರಲ್ಲೂ ಕೊಲೆ ಪ್ರಕರಣದ ಬಳಿಕ ಬಾಲಕೃಷ್ಣ ಉತ್ತರಪ್ರದೇಶಕ್ಕೆ ಹಾರಿದ್ದನು. ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಮಾಧವಿ ಅಗ್ನಿಹೋತ್ರಿ ಅವರು ಮದುವೆ ಮಾತುಕತೆಗೆಂದು ಕರೆದು ಆರೋಪಿಯನ್ನು ಬಂಧಿಸಿದ್ದು, ಎಲ್ಲರ ಪ್ರಶಂಸೆಗೆ ಕಾರಣರಾಗಿದ್ದಾರೆ. ಆರೋಪಿಯನ್ನು ಹಿಡಿಯಲು ಪೊಲೀಸರು ಹಲವು ಬಾರಿ ಪ್ರಯತ್ನಿಸಿದರೂ…
ಜಿಯೋ ಕಂಪನಿ; ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಕ್ರಾಂತಿಗೆ ಕಾರಣವಾಗಿದ್ದ ರಿಲಯನ್ಸ್ ಜಿಯೋ ಇದೀಗ ಇತರೆ ನೆಟ್ವರ್ಕ್ ಕರೆಗಳಿಗೆ ಪ್ರತಿ ನಿಮಿಷಕ್ಕೆ 6 ಪೈಸೆ ಚಾರ್ಜ್ ಮಾಡಲಿದೆ ಎಂದು ತಿಳಿಸಿದ್ದಾರೆ . ಈ ಹೊಸ ನಿಯಮವು ಇವತ್ತಿನಿಂದಲೇ ಜಾರಿಗೆ ಬರಲಿದೆ ಎಂದು ಹೇಳಿದ್ದಾರೆ. ಅಂದರೆ ಇನ್ಮುಂದೆ ಜಿಯೋ ಟು ಏರ್ಟೆಲ್ ಅಥವಾ ವೊಡಾಫೋನ್ ಸೇರಿದಂತೆ ಇನ್ನಿತರ ನೆಟ್ವರ್ಕ್ಗಳಿಗೆ ಕರೆ ಮಾಡಿದರೆ ಶುಲ್ಕ ಅನ್ವಯವಾಗಲಿದೆ. ಇದರ ಹೊರತಾಗಿ ಡೇಟಾ ಸೌಲಭ್ಯವನ್ನು ಉಚಿತವಾಗಿ ನೀಡುವುದಾಗಿ ಜಿಯೋ ಕಂಪೆನಿ ಹೇಳಿಕೊಂಡಿದೆ. ಇತರೆ ಜಿಯೋ…
ನಿಮಗೆಲ್ಲರಿಗೂ ಗೊತ್ತಿರಬಹುದು, ಹಿಂದಿನ ಕಾಲದ ಮದುವೆಯ ನಿಯಮಗಳು ಸಂಪ್ರದಾಯಗಳು ಹೇಗಿತ್ತು ಎಂಬುದು. ಮದುವೆಯಾಗುವ ನವ ಜೋಡಿಗಳಲ್ಲಿ ವಧುಗಿಂತ ವರನು ದೊಡ್ಡವನಾಗಿರಬೇಕು, ಇಲ್ಲವಾದಲ್ಲಿ ಮದುವೆಗೆ ಒಪ್ಪಿಗೆಯನ್ನು ಕೊಡುತ್ತಲೇ ಇರುತ್ತಿರಲಿಲ್ಲ. ಆದರೆ ಈಗ ಕಾಲ ಬದಲಾಗಿದೆ, ದಿನಗಳು ಉರುಳಿದಂತೆ ಸಂಪ್ರದಾಯಗಳು ಬದಲಾಗುತ್ತಿವೆ. ಜಾತಿ, ಧರ್ಮ, ವಯಸ್ಸು ಇವ್ಯಾವುದನ್ನು ಲೆಕ್ಕಿಸದೆ ತಾನು ಪ್ರೀತಿಸಿದ ವ್ಯಕ್ತಿಯನ್ನು ವಿವಾಹವಾಗಿ ಸುಖಕರ ಜೀವನ ನಡೆಸುತ್ತಿರುತ್ತಾರೆ. ಒಂದು ಕಡೆಯಿಂದ ಯೋಚಿಸುವುದಾದರೆ ಈ ನಿರ್ಧಾರ ಸರಿ ಅನಿಸುತ್ತದೆ ಅಲ್ಲವೇ? ಅಂತೆಯೇ ನಮ್ಮ ದಕ್ಷಿಣ ಭಾರತದ ಆಲ್ಮೋಸ್ಟ್ ಟಾಪ್ ನಟಿಯರು…
ದಿಪಾವಳಿ ಯಾಕೆ 21 ದಿನಗಳ ನಂತರ ಆಚರಿಸಲಾಗುತ್ತದೆ?
ಇದು ನಿಜನ? ರಾಮ ರಾವಣನ್ನು ವಿಜಯ ದಶಮಿ ಯಂದು ಕೊಂದು ಶ್ರೀಲಂಕಾ ದಿಂದ ಅಯೋಧ್ಯೆಗೆ ತೆರಳಲು 21 ದಿನ ಅಂದು ದಿಪಾವಳಿ
ಕಿಮೊಥೆರಪಿ ಹಾಗು ರೇಡಿಯೇಶನ್ ಥೆರಪಿ ಮಾಡಿಸಿಕೊಂಡಲ್ಲಿ ಕೂದಲು ಉದುರುವಿಕೆ ಅಥವಾ ಅಲೋಪಿಶಿಯಾವು ಒಂದು ಪ್ರಧಾನ ಅಡ್ಡ ಪರಿಣಾಮವಾಗಿ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಕೂದಲು ಉದುರುವಿಕೆಯು ಭಾಗಶಃ ಕಾಣಿಸಿಕೊಳ್ಳಬಹುದು ಅಥವಾ ಮುಖ, ಕೈ, ತಲೆ, ಕಾಲು, ಕಂಕುಳು ಹಾಗು ಜನನಾಂಗದ ಭಾಗದ ಮೇಲಿರುವ ಕೂದಲುಗಳೆಲ್ಲಾ ಸಹ ಉದುರಲು ಆರಂಭಿಸಬಹುದು.
ಚೀನಾ ವಿರುದ್ಧದ ಜನಸಾಮಾನ್ಯರ ಆಕ್ರೋಶ ವಿಭಿನ್ನ ರೀತಿಯಲ್ಲಿ ವ್ಯಕ್ತವಾಗುತ್ತಿದ್ದು, ದಿನೇ ದಿನೇ ಹೆಚ್ಚಾಗುತ್ತಿದೆ. ಪ್ರಸ್ತುತ ಚೀನಾದ ಆ್ಯಪ್‌ಗಳು, ಚೀನಾ ಮೂಲದ ಕಂಪನಿ ಒಡೆತನ ಹೊಂದಿರುವ ಮತ್ತು ಚೀನಾ ಮೂಲದ ಡೆವಲಪರ್‌ಗಳು ಅಭಿವೃಧಿಪಡಿಸಿರುವ ಆ್ಯಪ್ ವಿರುದ್ಧ ಜನರು ಸಿಡಿದೆದ್ದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಚೀನಾ ಆ್ಯಪ್ ಬ್ಯಾನ್ ಮಾಡಿ ಎನ್ನುವ ಸಂದೇಶ ವ್ಯಾಪಕವಾಗಿ ಹರಿದಾಡಿದೆ. ಅದರ ಜತೆಗೆ ರಿಮೋವ್ ಚೀನಾ ಆ್ಯಪ್ಸ್ ಎನ್ನುವ ಆ್ಯಪ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಟ್ರೆಂಡ್ ಸೃಷ್ಟಿಸಿದೆ. ಈ ಆ್ಯಪ್ ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ಇರುವ ಚೀನಾ ಮೂಲದ ಆ್ಯಪ್‌ಗಳನ್ನು…