ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
 
            ವ್ಯಕ್ತಿಯೋರ್ವನ ತಪಾಸಣೆಯ ಸಮಯದಲ್ಲಿ, ಒಂದು ವೇಳೆ ಆತನಿಗೆ ಅಥವಾ ಆಕೆಗೆ ಕ್ಯಾನ್ಸರ್ ಇದೆ ಎಂದು ದೃಢಪಟ್ಟರೆ, ಅವರು ತಮ್ಮ ಭವಿಷ್ಯ ಜೀವನದ ಕುರಿತು ವೈರಾಗ್ಯ ಭಾವವನ್ನು ಹೊಂದುವಂತಾಗುತ್ತದೆ. ಅಂತಹ ಭೀಷಣ ರೋಗ ಈ ಕ್ಯಾನ್ಸರ್. ಆದಾಗ್ಯೂ, ಆಧುನಿಕ ವೈದ್ಯಕೀಯ ಕ್ಷೇತ್ರವು ಎಷ್ಟೊoದು ಮುಂದುವರೆದಿದೆ ಎಂದರೆ, ಒಂದು ವೇಳೆ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲಿಯೇ ಗುರುತಿಸಿದರೆ ಅದನ್ನು ಸಂಪೂರ್ಣವಾಗಿ ಗುಣಪಡಿಸಬಹುದಾಗಿದೆ.

ಧೂಮಪಾನ, ಮದ್ಯಪಾನಗಳಂತಹ ದುಶ್ಚಟಗಳೊoದಿಗೆ, ನಮ್ಮ ಆಹಾರಕ್ರಮವೂ ಕೂಡ ಅನೇಕ ಬಾರಿ ಕ್ಯಾನ್ಸರ್‌ಗೆ ಕಾರಣವಾಗಬಹುದು. ಆದ್ದರಿಂದ ಕ್ಯಾನ್ಸರ್ ಅನ್ನು ದೂರವಿರಿಸಲು ನೆರವಾಗುವ ಆಹಾರಕ್ರಮವು ಯಾವುದೆಂದು ತಿಳಿಯರಿ.
ಈರುಳ್ಳಿ ಮತ್ತು ಬೆಳ್ಳುಳ್ಳಿ:-
ಭಾರತೀಯ ಅಡುಗೆಗಳಲ್ಲಿ ಪ್ರಮುಖ ಪಾತ್ರವನ್ನು ಪಡೆದಿರುವಂತಹ ಈರುಳ್ಳಿ ಮತ್ತು ಬೆಳ್ಳುಳ್ಳಿಯಲ್ಲಿ ಔಷಧೀಯ ಗುಣಗಳು ಇದೆ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರವಾಗಿದೆ. ಹಲವಾರು ಶತಮಾನಗಳಿಂದಲೂ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಮನೆಮದ್ದಾಗಿ ಬಳಸಿಕೊಳ್ಳುತ್ತಾ ಇದ್ದಾರೆ. ಈರುಳ್ಳಿ ಮತ್ತು ಬೆಳ್ಳುಳ್ಳಿ ಕೆಲವರಿಗೆ ಇಷ್ಟವಾಗಲ್ಲ.

ಯಾಕೆಂದರೆ ಇದರ ಘಾಟು ವಾಸನೆ. ಅಲ್ಲಿಯುಮ್ಸ್ ಪ್ರಭೇದಕ್ಕೆ ಸೇರಿರುವಂತಹ ಈರುಳ್ಳಿ ಮತ್ತು ಬೆಳ್ಳುಳ್ಳಿಯಲ್ಲಿ ಕ್ಯಾನ್ಸರ್ ಅನ್ನು ತಡೆಯುವ ಗುಣಗಳು ಇವೆಯಂತೆ. ಇದರಲ್ಲಿ ಇರುವಂತಹ ಕೆಲವೊಂದು ನೈಸರ್ಗಿಕ ರಾಸಾಯನಿಕಗಳು ಕೆಲವು ಬಗೆಯ ಕ್ಯಾನ್ಸರ್‌ನ್ನು ತಡೆಯುತ್ತದೆ. ಈರುಳ್ಳಿ ಮತ್ತು ಬೆಳ್ಳುಳ್ಳಿಯಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್‌ಗಳು ಡಿಎನ್ ಎ ಕೋಶಗಳಿಗೆ ಹಾನಿಯುಂಟು ಮಾಡುವ ಫ್ರೀ ರ್ಯಾಡಿಕಲ್ ಅನ್ನು ತಡೆಯುತ್ತದೆ.
ಎಲೆಕೋಸು:-
ಪ್ರತಿದಿನ ಎಲೆಕೋಸನ್ನು ಆಹಾರ ಕ್ರಮದಲ್ಲಿ ಸೇರಿಸಿಕೊಂಡರೆ ಅದರಿಂದ ನಮ್ಮ ದೇಹವು ಹೆಚ್ಚಿನ ಪೋಷಕಾಂಶಗಳನ್ನು ಪಡೆದುಕೊಂಡು ಕ್ಯಾನ್ಸರ್ ಕಾಯಿಲೆಯಿಂದ ನಮ್ಮನ್ನು ಕಾಪಾಡುತ್ತದೆ. ಇದಕ್ಕೆಲ್ಲಾ ಕಾರಣ ಎಲೆಕೋಸಿನಲ್ಲಿ ಸಲ್ಫೋರಫನೆ ಎನ್ನುವ ಅಂಶವಿದ್ದು, ಇದು ಕ್ಯಾನ್ಸರ್‌ನಿಂದ ರಕ್ಷಿಸುತ್ತದೆ.

ಎಲೆಕೋಸಿನಲ್ಲಿ ಇರುವಂತಹ ಅತ್ಯಂತ ಶಕ್ತಿಶಾಲಿ ಆ್ಯಂಟಿಆಕ್ಸಿಡೆಂಟ್ ಗಳು ಕ್ಯಾನ್ಸರ್ ಕೋಶಗಳ ಬೆಳವಣಿಗೆಗೆ ಕಾರಣವಾಗುವಂತಹ ಫ್ರೀ ರ್ಯಾಡಿಕಲ್ ಗಳನ್ನು ನಿವಾರಣೆ ಮಾಡುತ್ತದೆ.
ಹಸಿರು ಬಟಾಣಿ:-
ಹಸಿರು ಬಟಾಣಿಗಳು ಕ್ಯಾನ್ಸರನ್ನು ನಿಯಂತ್ರಿಸಲು ಇರುವ ಅತ್ಯಂತ ಶಕ್ತಿಶಾಲಿ ತರಕಾರಿಗಳಾಗಿವೆ. ಅದರಲ್ಲೂ ಮುಖ್ಯವಾಗಿ ಜಠರದ ಕ್ಯಾನ್ಸರ್ ನಿವಾರಿಸಲು ಇವು ಸಹಾಯ ಮಾಡುತ್ತವೆ.

ಇದರಲ್ಲಿ ಪೊಟಾಶಿಯಂ, ಕಬ್ಬಿಣಾಂಶ ಮತ್ತು ವಿಟಮಿನ್‍ಗಳು ಯಥೇಚ್ಛವಾಗಿದ್ದು, ಜೀರ್ಣಾಂಗ ವ್ಯವಸ್ಥೆಯನ್ನು ಶುದ್ಧಗೊಳಿಸಲು ಇವು ನೆರವು ನೀಡುತ್ತವೆ.
ಬೀನ್ಸ್:-
ಬೀನ್ಸ್‌ಗಳಲ್ಲಿ ವಿಟಮಿನ್ ಬಿಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಇದು ಕ್ಯಾನ್ಸರ್ ನಿಯಂತ್ರಿಸಲು ಗಣನೀಯವಾದ ಕೊಡುಗೆಯನ್ನು ನೀಡುತ್ತದೆ.

ಇವುಗಳು ಕಾರ್ಸಿನೊಜೆನ್‍ಗಳನ್ನು ನಿವಾರಿಸುವ ಲುಲುಟೇನ್ ಮತ್ತು ವೈಯೊಲಕ್ಸಂಥಿನ್ ಮತ್ತು ಬೀಟಾ-ಕೆರೊಟಿನ್‍ಗಳು ಅಧಿಕ ಪ್ರಮಾಣದಲ್ಲಿರುತ್ತವೆ.
ಪಾಲಕ್ ಸೊಪ್ಪು:-
ಪಾಲಕ್ ಸೊಪ್ಪು ಸಹ ಪ್ರಪಂಚದಲ್ಲಿರುವ ಅತ್ಯಂತ ಆರೋಗ್ಯಕಾರಿ ಆಹಾರ ಪದಾರ್ಥಗಳಲ್ಲಿ ಒಂದಾಗಿದೆ. ಅದರಲ್ಲೂ ಇದು ಕ್ಯಾನ್ಸರನ್ನು ನಿಯಂತ್ರಿಸುವ ಆಹಾರ ಪದಾರ್ಥವಾಗಿರುವುದು ಸಹ ಇದರ ಹೆಚ್ಚುಗಾರಿಕೆ.

ಸ್ಪೈನಚ್‍ನಲ್ಲಿ ಪೊಟಾಶಿಯಂ, ಸತು, ವಿಟಮಿನ್ ಕೆ, ಇ, ಮತ್ತು ಎ ಗಳು ಅಧಿಕ ಪ್ರಮಾಣದಲ್ಲಿರುತ್ತವೆ.
ಬೀಟ್‍ರೂಟ್‍ಗಳು:-
ಬೀಟ್‍ರೂಟ್‍ಗಳು ರಕ್ತ ಪರಿಚಲನೆಯನ್ನು ಮತ್ತು ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ಸುಸ್ಥಿತಿಯಲ್ಲಿಡಲು ನೆರವಾಗುತ್ತವೆ. ಇವುಗಳು ರಕ್ತದೊತ್ತಡವನ್ನು ನಿವಾರಿಸುವ ಅಂಶಗಳನ್ನು ಸಹ ಹೊಂದಿರುತ್ತವೆ.

ತರಕಾರಿ ಮತ್ತು ಹಣ್ಣನ್ನು ಹೆಚ್ಚು ಹೆಚ್ಚು ಸೇವಿಸಿರಿ:-
ತಾಜಾ ತರಕಾರಿ ಮತ್ತು ಹಣ್ಣುಗಳನ್ನು ನಿಮ್ಮ ದಿನನಿತ್ಯದ ಆಹಾರದ ಕ್ರಮದಲ್ಲಿ ಸೇರಿಸಿಕೊಳ್ಳುವುದರ ಮೂಲಕ ನಿಮ್ಮ ಶರೀರಕ್ಕೆ ಅವಶ್ಯಕವಾಗಿರುವ ಪೋಷಕಾಂಶಗಳು ಮತ್ತು ವಿಟಮಿನ್ ಗಳನ್ನು ಒದಗಿಸಬಹುದು. ಈ ಪೋಷಕಾಂಶಗಳು ಮತ್ತು ವಿಟಮಿನ್‌ಗಳು , ನಿಮ್ಮ ರೋಗನಿರೋಧಕ ಮಟ್ಟವನ್ನು ಹೆಚ್ಚಿಸುವುದು ಮಾತ್ರವಲ್ಲದೇ, ಸೋಂಕುಗಳು ಮತ್ತು ಕ್ಯಾನ್ಸರ್ ನ ವಿರುದ್ಧ ಕಾದಾಡಲೂ ಕೂಡ ಸಹಕಾರಿಯಾಗಿವೆ. ಅಲ್ಲದೇ, ಇವು ಜಂಕ್ ಮತ್ತು ಕೊಬ್ಬುಯುಕ್ತ ಆಹಾರಗಳ ಬಗೆಗಿನ ನಿಮಗಿರುವ ಹಸಿವನ್ನು ತನ್ನಿಂತಾನಾಗಿಯೇ ಕಡಿಮೆ ಮಾಡುತ್ತವೆ
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಜಗತ್ತಿನ ದೇವರುಗಳಿಗಿಂತ ಭಾರತೀಯ ದೇವರ ಸನ್ನಿಧಿಯಲ್ಲಿ ಕೋಟಿ ಕೋಟಿ ರೂಪಾಯಿ ಅಡಗಿ ಕುಳಿತಿದೆ. ದೇವರ ಖಜಾನೆಯಲ್ಲಿ ಲೆಕ್ಕವಿಲ್ಲದಷ್ಟು ಬಂಗಾರ ಬೇಕಾ ಬಿಟ್ಟಿಯಾಗಿ ಬಿದ್ದಿದೆ. ನೀವು ನಂಬ್ತೀರೋ ಬಿಡ್ತೀರೋ ಗೊತ್ತಿಲ್ಲ.. ಒಟ್ಟು ಸುಮಾರು 54 ಬಿಲಿಯನ್ ರೂಪಾಯಿಗಳಷ್ಟು ಮೌಲ್ಯವುಳ್ಳ ಬಂಗಾರ ದೇವರ ಪಾದಕ್ಕೆ ಸೇರಿದೆ ಎಂದರೆ ಇದು ನಿಜಕ್ಕೂ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತಹ ಸಂಗತಿ.
ಪ್ರವಾಸೋದ್ಯಮ ಇಲಾಖೆಯೂ 40 ಪ್ರಮುಖ ಪ್ರವಾಸಿ ವರ್ತುಲ ಕೇಂದ್ರಗಳನ್ನು ಗುರುತಿಸಲಾಗಿದೆ ಎಂದು ಪ್ರವಾಸೋದ್ಯಮ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ ರವಿ ಅವರು ಗುರುವಾರ ಹೇಳಿದರು. ವಿಕಾಸಸೌಧದಲ್ಲಿಂದು ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಪ್ರವಾಸೋದ್ಯಮಕ್ಕೆ ವಿಫಲ ಅವಕಾಶವಿದೆ, ಪ್ರಧಾನ ಮಂತ್ರಿಗಳು ದೇಶವನ್ನು ಟೂರಿಸ್ಟ್ ಹಬ್ ಮಾಡಲು ಉಲ್ಲೇಖ ಮಾಡಿದ್ದಾರೆ ಹೀಗಾಗಿ ದೇಶದ್ಯಂತ ಪ್ರಮುಖವಾಗಿ 17 ಸ್ಥಳಗಳನ್ನು ಗುರುತಿಸಿದ್ದಾರೆ ಅದರಲ್ಲಿ ಕರ್ನಾಟಕದ ಹಂಪಿ ಕೂಡ ಸೇರಿದೆ ಎಂದು ಅವರು ಮಾಹಿತಿ ನೀಡಿದರು. ಇದೇ ವಿಷಯಕ್ಕೆ…
ರಾಜಧಾನಿ ಬೆಂಗಳೂರು ಸ್ಮಾರ್ಟ್ ಸಿಟಿಯಾಗಿ ಬೆಳೆಯುತ್ತಿದ್ದರೆ ಮತ್ತೊಂದೆಡೆ ಸ್ಮಾರ್ಟ್ ಖದೀಮರು ಹೆಚ್ಚಾಗಿದ್ದಾರೆ. ಕೋಟಿ ಕೋಟಿ ಲೂಟಿಯ ಐಎಂಎ ಪ್ರಕರಣ ಮಾಸುವ ಮುನ್ನವೇ ರಾಜಧಾನಿ ಬೆಚ್ಚಿಬೀಳುವಂತ ಘಟನೆ ಇದಾಗಿದೆ. ಬೆಂಗಳೂರು ಹೊರವಲಯ ನೆಲಮಂಗಲ ಪಟ್ಟಣದ ಐಸಿಐಸಿಐ ಬ್ಯಾಂಕಿಗೆ 1 ಕೋಟಿ 90 ಲಕ್ಷ ಹಣ ತುಂಬಲು ಬಂದಾಗ ಆರೋಪಿಗಳು ನೆಲಮಂಗಲ ಪೊಲೀಸರ ಅತಿಥಿಗಳಾಗಿದ್ದಾರೆ. ಆನ್ ಲೈನ್‌ನಲ್ಲಿ ಅಕೌಂಟ್‌ಗೆ ಸಂಬಂಧಪಟ್ಟ ಮೊಬೈಲ್ ನಂಬರ್ ಚೇಂಜ್ ಮಾಡಿ ಬರೋಬ್ಬರಿ 3ಕೋಟಿ ಹಣವನ್ನು ಡ್ರಾ ಮಾಡಿದ್ದ ಆರೋಪಿಗಳು, ಆ ಹಣವನ್ನು ಬ್ಯಾಂಕ್‌ನಲ್ಲಿ ಜಮೆ…
ಈಗ ಎಲ್ಲದಕ್ಕೂ ಒಂದೇ ಕಾರ್ಡ್ – ಅದುವೇ ಆಧಾರ್ ಕಾರ್ಡ್.ಸರ್ಕಾರ ಎಲ್ಲ ವ್ಯವಹಾರ ಮತ್ತು ಸೌಲಭ್ಯಗಳಿಗೆ ಆಧಾರ್ ಕಾರ್ಡ್ ಕಡ್ಡಾಯ ಮಾಡುತ್ತಿರುವ ಸಂಗತಿ ನಮಗೆಲ್ಲ ತಿಳಿದಿದೆ. 12 ಅಂಕೆಗಳ ಆಧಾರ್ ನಂಬರ್ ಪ್ರತಿಯೊಬ್ಬ ಭಾರತೀಯನ ಗುರುತು ಹಾಗೂ ಹೆಮ್ಮೆಯ ಸಂಖ್ಯೆಯಾಗಿ ಮಾರ್ಪಟ್ಟಿದೆ
ಮಂಡ್ಯ ಅಂದ್ರೆ ಇಂಡಿಯಾ, ಇಂಡಿಯಾ ಅಂದ್ರೆ ಮಂಡ್ಯ ಅಂತಾ ಕರೆಸಿಕೊಳ್ಳುವ ಮಂಡ್ಯ ಜಿಲ್ಲೆಯ ಜನ ಬೆಚ್ಚಿಬೀಳುವಂತಹ ಸುದ್ದಿ ಇದು. ಕೃಷಿ ಪ್ರಧಾನ ಮಂಡ್ಯ ಜಿಲ್ಲೆಯಲ್ಲಿ ಒಂದೆಡೆ ಬರಗಾಲ. ಮತ್ತೊಂದೆಡೆ ನಾಲೆಗಳಲ್ಲಿ ಕಾಣಿಸದ ನೀರು. ಮಗದೊಂದು ಕಡೆ ರಾಜಕೀಯದ ಅಬ್ಬರ. ಇದರ ನಡುವೆ ಮದ್ಯದ ಹೊಳೆಯೇ ಜೋರಾಗಿ ಅಬ್ಬರಿಸುವಂತೆ ರಭಸವಾಗಿ ಹರಿಯುತ್ತಿದೆ. ಇದೆಲ್ಲದಕ್ಕಿಂತ ಹೆಚ್ಚಾಗಿ ಹದಿಹರೆಯದ ಹುಡುಗರು ಎಣ್ಣೆ ಮಬ್ಬಲ್ಲಿ ಸುತ್ತಾಡೋದು. ಇದನ್ನೆಲ್ಲ ನಿಲ್ಲಿಸಬೇಕಿದ್ದ ನಾಯಕರುಗಳೆಲ್ಲ ಇಂಥಹ ಹದಿಹರಿಯದ ಹುಡುಗರಿಗೆ ಮತ್ತಷ್ಟು ಎಣ್ಣೆ ಸುರಿದು ಅವರನ್ನೆಲ್ಲ ಕುಡುಕರನ್ನಾಗಿ ಮಾಡುತ್ತಿದ್ದಾರೆ….
ಇಂದು ಬುಧವಾರ 07/02/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…