ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕಿಮೊಥೆರಪಿ ಹಾಗು ರೇಡಿಯೇಶನ್ ಥೆರಪಿ ಮಾಡಿಸಿಕೊಂಡಲ್ಲಿ ಕೂದಲು ಉದುರುವಿಕೆ ಅಥವಾ ಅಲೋಪಿಶಿಯಾವು ಒಂದು ಪ್ರಧಾನ ಅಡ್ಡ ಪರಿಣಾಮವಾಗಿ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಕೂದಲು ಉದುರುವಿಕೆಯು ಭಾಗಶಃ ಕಾಣಿಸಿಕೊಳ್ಳಬಹುದು ಅಥವಾ ಮುಖ, ಕೈ, ತಲೆ, ಕಾಲು, ಕಂಕುಳು ಹಾಗು ಜನನಾಂಗದ ಭಾಗದ ಮೇಲಿರುವ ಕೂದಲುಗಳೆಲ್ಲಾ ಸಹ ಉದುರಲು ಆರಂಭಿಸಬಹುದು.
ಹಾಗೆಂದು ಕೂದಲು ಶಾಶ್ವತವಾಗಿ ಉದುರಿ ಹೋಗುತ್ತದೆ ಎಂದು ಭಾವಿಸಬೇಡಿ. ಇದು ಈ ಚಿಕಿತ್ಸೆಯನ್ನು ಪಡೆಯುವವರೆಗೆ ಮಾತ್ರ, ಚಿಕಿತ್ಸೆ ನಿಲ್ಲಿಸಿದ ಕೂಡಲೆ ಕೂದಲು ಬೆಳೆಯುವಿಕೆಯು ಮೊದಲಿನಂತಾಗುತ್ತದೆ. ಆದರೆ ಕೂದಲು ತೆಳ್ಳಗೆ ಇರುತ್ತದೆ ಅಷ್ಟೇ.
ಕೂದಲು ಉದುರುವಿಕೆಯು ಈ ಕೆಳಕಂಡ ಕಾರಣಗಳ ಸಲುವಾಗಿ ಕಾಣಿಸಿಕೊಳ್ಳಬಹುದು:
ಈ ಮೊದಲೇ ಹೇಳಿದಂತೆ, ಕೂದಲು ಉದುರುವಿಕೆಯು ಕ್ಯಾನ್ಸರ್ ಚಿಕಿತ್ಸೆಯ ಒಂದು ತಾತ್ಕಾಲಿಕ ಭಾಗವಾಗಿರುತ್ತದೆ.
ಕೂದಲು ಉದುರುವಿಕೆಗೆ ಮೊದಲೇ ಅದನ್ನು ಎದುರಿಸಲು ಸಿದ್ಧರಾಗಬೇಕಾಗುತ್ತದೆ. ಚಿಕಿತ್ಸೆ ನಡೆಯುವಾಗ ಮತ್ತು ನಡೆದ ಮೇಲೆ ಈ ಸಲಹೆಗಳನ್ನು ಅನುಸರಿಸಿ:-
a.ಚಿಕಿತ್ಸೆಗೆ ಮೊದಲು :-
ಕೂದಲನ್ನು ಸಣ್ಣಗೆ ಕತ್ತರಿಸಿಕೊಳ್ಳಿ: ಚಿಕಿತ್ಸೆ ಪಡೆಯುವ ಮೊದಲೇ ಕೂದಲನ್ನು ಸಣ್ಣಗೆ ಕತ್ತರಿಸಿಕೊಳ್ಳಿ. ಆಗ ಕೂದಲು ಉದುರುವುದು ಮತ್ತು ಬೆಳೆಯುವುದು ನಿಮ್ಮ ಅರಿವಿಗೆ ಬರುವುದು ಕಡಿಮೆಯಾಗುತ್ತದೆ. ಪುರುಷರು ತಮ್ಮ ತಲೆಯನ್ನು ಬೋಳಿಸಿಕೊಂಡು ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತಾರೆ. ಆದರೆ ಮಹಿಳೆಯರಿಗೆ ಇದು ಇಷ್ಟವಾಗದ ಸಲಹೆಯಾಗಿರುತ್ತದೆ.
ಕೋಲ್ಡ್ ಕ್ಯಾಪ್ ಥೆರಪಿ: ನಿಮಗೆ ಚಿಕಿತ್ಸೆ ನೀಡುವಾಗ ಕ್ಯಾಪ್ ಅಥವಾ ಕೋಲ್ಡ್ ಪ್ಯಾಕ್‌ಗಳನ್ನು ಧರಿಸಲು ಸಲಹೆ ಮಾಡಬಹುದು. ಕೂದಲು ಉದುರುವುದನ್ನು ತಪ್ಪಿಸಲು ಈ ತಂತ್ರವನ್ನು ಬಳಸಲಾಗುತ್ತದೆ. ಕೋಲ್ಡ್ ಪ್ಯಾಕ್ ತಲೆಯಲ್ಲಿನ ರಕ್ತನಾಳಗಳನ್ನು ಸಂಕುಚಿತಗೊಳಿಸುವ ಮೂಲಕ ಕಿಮೊಥೆರಪಿಯ ಔಷಧಿಗಳು ಕೂದಲಿನ ಬುಡಕ್ಕೆ ತಲುಪುವುದನ್ನು ತಡೆಯುತ್ತದೆ.
b.ಚಿಕಿತ್ಸೆ ಅವಧಿಯಲ್ಲಿ:-
c.ಚಿಕಿತ್ಸೆಯ ನಂತರ :-
ನಿಮ್ಮ ಸ್ವಾಭಾವಿಕ ಕೂದಲನ್ನು ಮೃದುವಾಗಿ ತೊಳೆಯಿರಿ, ಬಾಚಿರಿ ಅಥವಾ ಕಲರ್ ಮಾಡಿ. ಏಕೆಂದರೆ ಈ ಕೂದಲುಗಳು ತುಂಬಾ ಸೂಕ್ಷ್ಮವಾಗಿ ವರ್ತಿಸುತ್ತವೆ:
ಆತುರಪಡಬೇಡಿ, ನೀವು ಕೂದಲು ಬೆಳೆಯುವುದನ್ನು ನೋಡಲು ಕಾತರದಿಂದ ಇರಬಹುದು. ಆದರೆ ಅದಕ್ಕೂ ಸ್ವಲ್ಪ ಸಮಯ ಬೇಕಾಗುತ್ತದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಚಳಿಗಾಲ ಬಂತೆಂದರೆ ಏನನ್ನಾದರೂ ತಿನ್ನುತ್ತಲೇ ಇರಬೇಕು ಎನಿಸದೇ ಇರದು. ಕಾಳು, ಹಣ್ಣುಗಳು, ತುಪ್ಪದಂತಹ ಪದಾರ್ಥಗಳು ದೇಹದ ಉಷ್ಣಗಳನ್ನು ಹೆಚ್ಚಿಸುವಲ್ಲಿ ಸಹಕಾರಿ, ಹಾಗಾಗಿ ಈ ಬಗೆ ಆಹಾರ ಪದಾರ್ಥಗಳನ್ನು ಹೆಚ್ಚು ಹೆಚ್ಚು ಸೇವಿಸಬೇಕು. ಇದರಿಂದ ದೇಹದ ಉಷ್ಣತೆ ಕಾಪಾಡುವುದರ ಜತೆಗೆ ಕಾಯಿಲೆ ಬೀಳದಿರಲು ಇದೊಂದು ಒಳ್ಳೆಯ ಉಪಾಯವೂ ಹೌದು. ಶೇಂಗಾ ಮತ್ತು ದ್ವಿದಳ ಧಾನ್ಯಗಳು, ಬಾದಾಮಿ ಮತ್ತು ಗೋಡಂಬಿ ಮತ್ತು ಇವುಗಳಿಂದ ತಯಾರಿಸಿದ ಪದಾರ್ಥಗಳು ಉತ್ತಮ. ಅಲ್ಲದೆ ಇವು ದೇಹದೊಳಗಿನ ಕೊಲೆಸ್ಟ್ರಾಲ್ನ್ನು ಹೆಚ್ಚಿಸುವುದಿಲ್ಲ. ಗೋಡಂಬಿ ಸೇವನೆಯಿಂದ ದೇಹದೊಳಗೆ ಕೊಲೆಸ್ಟ್ರಾಲ್…
ದೇವರ ಮೇಲಿನ ನಂಬಿಕೆಯಿಂದ ಒಂದಷ್ಟು ಲಾಭಗಳು ಇರುವುದು ನಿಜ.
ಬೆಂಗಳೂರಿನಲ್ಲಿ ಜಿಮ್ ಗೆ ಬರುವವರಿಗೆ ಹಾನಿಕಾರಕ ಔಷಧ ಕೊಡುತ್ತಿದ್ದ ಜಿಮ್ ಟ್ರೈನರ್ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಚಾಮರಾಜಪೇಟೆಯ 4 ನೇ ಮುಖ್ಯರಸ್ತೆಯಲ್ಲಿರುವ ಜಿಮ್ ನಲ್ಲಿ ಫಿಟ್ನೆಸ್ ಗಾಗಿ ಬರುತ್ತಿದ್ದವರಿಗೆ ದೇಹ ಹುರಿಗೊಳಿಸಲು ಮತ್ತು ತೆಳ್ಳಗಾಗಲು ಜಿಮ್ ಟ್ರೈನರ್ ನಿಷೇಧಿತ ಔಷಧ ಕೊಡುತ್ತಿದ್ದ. ನಿಷೇಧಿತ ಡ್ರಗ್ಸ್ ಗಳನ್ನು ಬೇರೆ ಕಡೆಯಿಂದ ತರಿಸಿ ಕೊಡುತ್ತಿದ್ದ. ಜಿಮ್ ಗೆ ಬರುತ್ತಿದ್ದ ಕೆಲವರಿಗೆ ಈ ನಿಷೇಧಿತ ಔಷಧ ಸೇವಿಸಿದ್ದರಿಂದ ಆರೋಗ್ಯದ ಸಮಸ್ಯೆ ಎದುರಾಗಿದೆ. ಕೆಲವರಿಗೆ ಪುರುಷತ್ವ ಕಡಿಮೆಯಾಗಿದೆ ಎನ್ನಲಾಗಿದೆ. ಆರೋಗ್ಯ ಸಮಸ್ಯೆ ಕಾಣಿಸಿಕೊಂಡವರಿಗೆ…
ಕನ್ನಡ ಕಿರುತೆರೆಯ ಇತಿಹಾಸದಲ್ಲಿ, ಇತಿಹಾಸವನ್ನೇ ಸೃಷ್ಟಿಸಿದ್ದ, ಸುರ್ವಣ ವಾಹಿನಿಯ ಬಹುದೊಡ್ಡ ರಿಯಾಲಿಟಿ ಶೋ ‘ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು’ ಮತ್ತೆ ಬರ್ತಿದೆ.ಈ ಕಾರ್ಯಕ್ರಮ ಮೊದಲ ಬಾರಿಗೆ, 2008ರಲ್ಲಿ ಬಿಗ್ ಬಾಸ್ ಕಿಚ್ಚ ಸುದೀಪ್ ನೇತೃತ್ವದಲ್ಲಿ ಮೂಡಿ ಬಂದಿತ್ತು. ಸುರ್ವಣ ವಾಹಿನಿಯ ಬಹುನಿರೀಕ್ಷಿತ ರಿಯಾಲಿಟಿ ಶೋ
ಊಟಕ್ಕೆ ಬೆಳ್ಳಿ ತಟ್ಟೆ ಹಾಗೂ ನೀರು ಕುಡಿಯಲು ಬೆಳ್ಳಿ ಲೋಟ ಬಳಸಿದರೆ ಅದು ಶ್ರೀಮಂತರ ಶೋಕಿ ಎಂದು ಕೆಲವರು ಭಾವಿಸುತ್ತಾರೆ. ಆದರೆ, ಹಳೆ ಕಾಲದವರು ಬೆಳ್ಳಿ ಪೂಜಾ ಸಾಮಗ್ರಿಗಳು, ಮಕ್ಕಳಿಗೆ ಊಟ ಹಾಕಲು ಬೆಳ್ಳಿ ಬಟ್ಟಲು, ಮನೆಗೆ ಬಂದವರಿಗೆ ನೀರು ಕುಡಿಯಲು ಬೆಳ್ಳಿ ಲೋಟ…. ಹೀಗೆ ಸಾಧ್ಯವಾದಷ್ಟು ಬೆಳ್ಳಿ ಪಾತ್ರೆಗಳನ್ನೇ ಬಳಸುತ್ತಿದ್ದರು. ಅದನ್ನು ಎಲ್ಲರೂ ಬಳಸಲಿ ಎಂದೇ ಬೆಳ್ಳಿಗೆ ಪವಿತ್ರ ಲೋಹ ಎಂಬ ಹಣೆಪಟ್ಟಿ ಕಟ್ಟಿದರು. ಇದಕ್ಕೆ ಕಾರಣ ಬೆಳ್ಳಿ ದುಬಾರಿ ಎಂಬುದಲ್ಲ. ಬದಲಿಗೆ, ಬೆಳ್ಳಿಯಲ್ಲಿರುವ ಆರೋಗ್ಯವರ್ಧಕ…
ಚಂದನವನದಲ್ಲಿ ಸ್ಟಾರ್ ನಟರ ಹೈ ಬಜೆಟ್ ಚಿತ್ರಗಳು ಒಂದರ ಮುಂದೆ ಒಂದು ಬಿಡುಗಡೆಯಾಗುತ್ತಿವೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಭಾರತ ಮಾತ್ರವಲ್ಲದೆ ವಿದೇಶಗಳಲ್ಲಿ ಕೂಡ ಪಂಚ ಭಾಷೆಗಳಲ್ಲಿ ಬಿಡುಗಡೆ ಆಗಿ ಕನ್ನಡ ಚಿತ್ರರಂಗದಲ್ಲಿ ಹೊಸದೊಂದು ಇತಿಹಾಸವನ್ನೇ ಸೃಷ್ಟಿ ಮಾಡಿತ್ತು. ಇದೇ ತಿಂಗಳ ಫೆಬ್ರುವರಿ ೧೧ರಂದು ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ಚಿತ್ರ ನಟಸಾರ್ವಭೌಮ ತೆರೆಗೆ ಅಪ್ಪಳಿಸಲಿದ್ದು ಚಿತ್ರ ರಸಿಕರು ಈ ಚಿತ್ರವನ್ನು ಕಣ್ತುಂಬಿ ಕೊಳ್ಳಲು ತುದಿ ಗಾಲಲ್ಲಿ ನಿಂತಿದ್ದಾರೆ….