ಕ್ರೀಡೆ, ಸಿನಿಮಾ

ಕೊಹ್ಲಿ ಅನುಷ್ಕಾರನ್ನು ಅಡ್ಡ ಹೆಸರಿನಿಂದ ಕರೀತಾರಂತೆ …! ತಿಳಿಯಲು ಈ ಲೇಖನವನ್ನು ಓದಿ..

380

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾರವರ ಪ್ರೇಮ ಕಥೆ ಹಾಗುಅವರ ಸ್ನೇಹವನ್ನು ವಿವರಿಸಿದ್ದಾರೆ.

ದೀಪಾಳಿಯ ಪ್ರಯುಕ್ತ ಖಾಸಗಿ ವಾಹಿನಿಯೊಂದು ಏರ್ಪಡಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿರಾಟ್ ಕೊಹ್ಲಿ ತಮ್ಮ ಗೆಳತಿ ಅನುಶ್ಕಾ ಶರ್ಮಾ ಅವರ ಅಡ್ಡ ಹೆಸರನ್ನ ರಿವೀಲ್ ಮಾಡಿದ್ದಾರೆ.

ಕೊಹ್ಲಿ ಅನುಷ್ಕಾ ಅವರನ್ನ `ನುಷ್ಕಿ’ ಎಂದು ಕರೆಯುತ್ತಾರಂತೆ. ವಾಹಿನಿಯು ಕಾರ್ಯಕ್ರಮದ ಪ್ರೋಮೋ ಬಿಡುಗಡೆ ಮಾಡಿದ್ದು, ಇದರಲ್ಲಿ ಅಮೀರ್ ಖಾನ್ ಜೊತೆ ಭಾಗವಹಿಸಿದ್ದ ಕೊಹ್ಲಿ ಮಾತುಕತೆಯ ವೇಳೆ ನುಷ್ಕಿ ಬಹಳ ಪ್ರಮಾಣಿಕಳು ಎಂದು ಹೇಳಿದ್ದಾರೆ.

ಅಲ್ಲದೆ ನಾನು ಪ್ರೀತಿಯಲ್ಲಿ ಒಮ್ಮೆ ಮಾತ್ರ ಬಿದ್ದಿದ್ದೇನೆ ಎಂದು ಅಮೀರ್ ಖಾನ್‍ರ ಮಾತಿಗೆ ಉತ್ತರಿಸಿದ್ದಾರೆ. ಕೊಹ್ಲಿ ಹಾಗೂ ಅನುಷ್ಕ 2013ರಿಂದಲೂ ರಿಲೇಷನ್‍ಶಿಪ್‍ನಲ್ಲಿದ್ದಾರೆ ಎಂದು ಸುದ್ದಿಯಾಗುತ್ತಲೇ ಬಂದಿದೆ. ಆದ್ರೆ ಈ ಜೋಡಿ ಮಾತ್ರ ಈ ಬಗ್ಗೆ ಬಹಿರಂಗವಾಗಿ ಮಾಧ್ಯಮಗಳ ಮುಂದೆ ಹೇಳಿಕೊಂಡಿಲ್ಲ. ಕ್ರಿಕೆಟ್ ಮತ್ತು ಬಾಲಿವುಡ್ ನಂಟಿನ ಜನಪ್ರಿಯ ಜೋಡಿ ಎಂದೇ ಕರೆಸಿಕೊಂಡಿದೆ.

ಈ ಶೋ ನಲ್ಲಿ ಭಾಗವಹಿಸಿದ್ದ ಪತ್ರಕರ್ತ ಸಮೀರ್ ಅಲ್ಲಾ ಎಂಬ ವ್ಯಕ್ತಿ ಟ್ವಿಟ್ಟರ್‍ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದರು. ಕಾರ್ಯಕ್ರಮದ ವೇಳೆ ಅಮೀರ್ ಅನುಷ್ಕಾರಲ್ಲಿ ಇಷ್ಟವಾದ ಗುಣ ಮತ್ತು ಇಷ್ಟವಿಲ್ಲದ ಗುಣ ಯಾವುದು ಎಂಬ ಪ್ರಶ್ನೆಗೆ ಉತ್ತರಿಸಿದ ಕೊಹ್ಲಿ, `ನುಷ್ಕಿ ಬಹಳ ಪ್ರಮಾಣಿಕಳು’ ಈ ಗುಣ ನನಗೆ ಇಷ್ಟ ಎಂದಿದ್ದಾರೆ. ಹಾಗೂ ಇಷ್ಟವಿಲ್ಲದ ಗುಣ ಯಾವುದು ಎಂಬ ಪ್ರಶ್ನೆಗೆ ಅನುಷ್ಕಾ ಯಾವಾಗ್ಲೂ 5-7 ನಿಮಿಷ ತಡವಾಗಿ ಆಗಮಿಸುತ್ತಾರೆ ಎಂದು ಕೊಹ್ಲಿ ಹೇಳಿದ್ದಾರೆ.

ಇತ್ತೀಚೆಗೆ ಅನುಷ್ಕಾ ಕ್ಲೋತಿಂಗ್ ಬ್ರ್ಯಾಂಡ್‍ವೊಂದನ್ನ ಆರಂಭಿಸಿದ್ದು ‘ನುಶ್’ ಎಂದು ಹೆಸರಿಟ್ಟಿದ್ದಾರೆ.

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ನಟಿ ತಮ್ಮ ನಡುವಿನ ಪ್ರೇಮದ ವಿಚಾರಗಳನ್ನು ಬಹಿರಂಗವಾಗಿ ಎಲ್ಲೂ ಹಂಚಿಕೊಂಡಿದ್ದಿಲ್ಲ.

ಅದೊಂದು ದಿನ ತಾವು ಅನುಷ್ಕಾ ಶರ್ಮಾ ಮುಂದೆ ಕುಳಿತು ಕಣ್ಣೀರು ಹಾಕಿದ್ದನ್ನು ಅವರು ನೆನಪಿಸಿಕೊಂಡಿದ್ದಾರೆ.

ಅಂದಹಾಗೆ, ಅದು ದುಃಖದ ಕಣ್ಣೀರಲ್ಲ, ಆನಂದಬಾಷ್ಪ. 2015ರಲ್ಲಿ ಭಾರತ ತಂಡ, ಆಸ್ಟ್ರೇಲಿಯಾ ಕ್ರಿಕೆಟ್ ಪ್ರವಾಸದಲ್ಲಿದ್ದಾಗ ನಡೆದ ಘಟನೆಯಿದು. ಆಗ, ನಡೆಯುತ್ತಿದ್ದ ಟೆಸ್ಟ್ ಸರಣಿಯ ಮಧ್ಯದಲ್ಲೇ ಅಂದಿನ ಟೆಸ್ಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ತಮ್ಮ ನಾಯಕತ್ವವನ್ನು ತೊರೆದರು. ಆಗ, ವಿರಾಟ್ ಕೊಹ್ಲಿಯವರನ್ನು ನಾಯಕರನ್ನಾಗಿ ಬಿಸಿಸಿಐ ನೇಮಿಸಿತು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ